ಮೊದಲ ಸಿನಿಮಾದಲ್ಲೇ ಗಮನ ಸೆಳೆದ ಪ್ರೇರಣಾ ಗೌಡ!
– ” ಡೇರ್ ಡೆವಿಲ್ ಮುಸ್ತಫಾ” ಸಿನಿಮಾದ ರಮಾಮಣಿ
– ತೇಜಸ್ವಿ ಕಥೆಗೆ ತೇಜಸ್ವಿ ಊರಿನ ಹುಡುಗಿಯೇ ನಾಯಕಿ
– ಪ್ರೇರಣಾ ತೀರ್ಥಹಳ್ಳಿಯ ಮೊಮ್ಮಗಳು!
NAMMUR EXPRESS NEWS
ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ಕ್ರಿಯಾಶೀಲತೆ ಮತ್ತು ಅತ್ಯುತ್ತಮ ಕಥೆಯ ಮೂಲಕ ಜನರ ಗಮನ ಸೆಳೆದಿರುವ ” ಡೇರ್ ಡೆವಿಲ್ ಮುಸ್ತಫಾ” ಸಿನಿಮಾದ ಮೂಲಕ ಎಂಟ್ರಿಯಾದ ನಟಿ ಪ್ರೇರಣಾ ಗೌಡ ಇದೀಗ ತಮ್ಮ ಕಲೆ ಮೂಲಕ ಗಮನ ಸೆಳೆದಿದ್ದಾರೆ. ರಮಾಮಣಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬರು ಯುವನಟಿ ಸಿಕ್ಕಿದ್ದಾರೆ. ಈಕೆ ತೀರ್ಥಹಳ್ಳಿ ಮೂಲದ ಅಕೌಂಟೆಂಟ್ ರಮ್ಯ ರಾಣಿ ಹಾಗೂ ಇಂಜಿನಿಯರ್ ಶಿವಪ್ಪ ಇವರ ಪುತ್ರಿ. ಶಿವಪ್ಪ ವೃತ್ತಿಯಲ್ಲಿ ಇಂಜಿನಿಯರ್.
ಪ್ರೇರಣಾ ಗೌಡ ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯನ್ನು ಶೇಕಡ 96 ಫಲಿತಾಂಶದೊಂದಿಗೆ ಪೂರ್ಣಗೊಳಿಸಿದ್ದು ವೈದ್ಯಳಾಗುವ ಕನಸನ್ನು ಕೂಡ ಹೊಂದಿದ್ದಾರೆ.
ಈಕೆ ಡೇರ್ ಡೆವಿಲ್ ಮುಸ್ತಫಾದ ಸಿನಿಮಾದಲ್ಲಿ ರಮಾಮಣಿ ಪಾತ್ರದ ಮೂಲಕ ಈಗಾಗಲೇ ಸ್ಯಾಂಡಲ್ವುಡ್ ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಈಕೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಸಮೀಪದ ಗಡಿಕಲ್ ದಿವಂಗತ ನಾಗಪ್ಪ ಗೌಡ ಹಾಗೂ ಸರೋಜಮ್ಮ ಇವರ ಮೊಮ್ಮಗಳು. ರಮ್ಯಾ ರಾಣಿಯವರ ಪುತ್ರಿ. ಇನ್ನು ಪ್ರೇರಣಾ ತಂದೆ 10 ವರ್ಷ ಅಮೇರಿಕಾದಲ್ಲಿ ಇಂಜಿನಿಯರ ಆಗಿ ಕೆಲಸ ಮಾಡಿ ಭಾರತಕ್ಕೆ ಆಗಮಿಸಿ ತಮ್ಮದೇ ಕಂಪನಿ ಹಾಗೂ ಶಾಲೆ ಆರಂಭಿಸಿದ್ದಾರೆ. ರಮ್ಯಾರಾಣಿ ಚಾರ್ಟೆಡ್ ಅಕೌಂಟೆಂಟ್. ಈಕೆ ಕಲಾಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಕರೋನಾ ವೇಳೆಯಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ಅತ್ಯುತ್ತಮ ನಟನೆಯ ಮೂಲಕ ಪ್ರೇರಣಗೌಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023