ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
– ಸ್ನಾನಕ್ಕೆ ಇಳಿದಾಗ ನೆರೆಯಲ್ಲಿ ಕೊಚ್ಚಿ ಹೋಗಿದ್ದ ಅಜ್ಜಿ
– ಚಿರತೆ ಹಿಡಿದು ಬೈಕಿಗೆ ಕಟ್ಟಿಕೊಂಡು ಹೋದ ಶೂರ!
– ಎಸ್ಪಿ ಕಚೇರಿಯಲ್ಲೇ ಮಹಿಳೆ ಆತ್ಮಹತ್ಯೆಗೆ ಯತ್ನ
NAMMUR EXPRESS NEWS
ನದಿಯಲ್ಲಿ ಕೊಚ್ಚಿ ಹೋಗಿ ಬದುಕುಳಿದ 78ರ ವೃದ್ದೆಯ ಜೀವ ಉಳಿಸಿಕೊಳ್ಳುವ ಸಾಹಸ ಇದೀಗ ಭಾರೀ ಸುದ್ದಿ ಮಾಡಿದೆ.
ವೃದ್ಧೆಯೊಬ್ಬರು ನದಿಯಲ್ಲಿ ಕೊಚ್ಚಿ ಹೋದರು ರಾತ್ರಿಯಿಡೀ ನೀರಿನಲ್ಲೇ ಜೀವ ಕೈಯಲ್ಲಿ ಹಿಡಿದು ನಿಂತು ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿರುವ ಘಟನೆ ಕೇರಳದಲ್ಲಿ ನಡೆದಿದೆ.
ಪುನೂರು ನದಿಗೆ, ಅನಕ್ಕಯಂ ನಿವಾಸಿಯಾಗಿರುವ ಕಮಲಾಕ್ಷಿ (78) ಅವರು ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆ ನದಿಯಲ್ಲಿ ನೀರಿನ ರಭಸಕ್ಕೆ ವೃದ್ಧೆ ಕಮಲಾಕ್ಷಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಕಮಲಾಕ್ಷಿ ಅವರು ನೀರಿನ ರಭಸದ ನಡುವೆ ಗಿಡಗಳ ಗೆಲ್ಲುಗಳನ್ನು ಹಿಡಿದು ನಿಂತಿದ್ದಾರೆ. ಕಮಲಾಕ್ಷಿ ಅವರ ಕತ್ತಿನವರೆಗೆ ನೀರು ಇದ್ದರೂ , ಅವರು ರಾತ್ರಿಯಿಡೀ ನೀರಿನಲ್ಲೇ ಜೀವ ಕೈಯಲ್ಲಿ ಹಿಡಿದು ನಿಂತಿದ್ದಾರೆ. ಬಳಿಕ ಮರದ ಕೋಲಿನ ಸಹಾಯ ಪಡೆದು ನದಿಯಲ್ಲಿದ್ದ ಬಂಡೆಯ ಮೇಲೆ ಆಶ್ರಯವನ್ನು ಪಡೆದಿದ್ದಾರೆ. ಬಳಿಕ ಸ್ಥಳೀಯರು ಹಾಗೂ ನರಿಕ್ಕುಣಿ ಅಗ್ನಿಶಾಮಕ ರಕ್ಷಣಾ ತಂಡದವರು ಪತ್ತೆ ಮಾಡಿ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.
ಚಿರತೆ ಹಿಡಿದು ಬೈಕಿಗೆ ಕಟ್ಟಿಕೊಂಡು ಹೋದ ಶೂರ!
ಚಿರತೆಯೊಂದನ್ನು ತಾನೇ ಸೆರೆ ಹಿಡಿದು, ತನ್ನದೇ ಬೈಕಿನಲ್ಲಿ ಕಟ್ಟಿ ಸಾಗಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೋರ್ವರು ತಮ್ಮ ಹೊಲದಲ್ಲಿ ದೈನಂದಿನ ಕೆಲಸದಲ್ಲಿ ತೊಡಗಿರುವಾಗ ಚಿರತೆಯೊಂದು ಕಣ್ಣಿಗೆ ಬಿದ್ದಿದೆ. ಹೊಲದಲ್ಲಿ ಕಣ್ಣಿಗೆ ಬಿದ್ದ ಚಿರತೆಯನ್ನು ತಾನೇ ಸೆರೆ ಹಿಡಿದು, ತನ್ನದೇ ಬೈಕಿನಲ್ಲಿ ಕಟ್ಟಿ ಸಾಗಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸಾಹಸಿ ಯುವಕನ್ನು ಗ್ರಾಮದ ವೇಣುಗೋಪಾಲ ಉರುಫ್ ಮುತ್ತು ಎಂದು ತಿಳಿದು ಬಂದಿದೆ.
ಅರಸೀಕೆರೆ ತಾಲೂಕಿನ ಬಾಗೀವಾಳು ಗ್ರಾಮದ ವೇಣುಗೋಪಾಲ ಉರುಫ್ ಮುತ್ತು ಎಂಬವರು ಶುಕ್ರವಾರ ಬೆಳಗ್ಗೆ ತಮ್ಮ ಜಮೀನಿಗೆ ದಿನ ನಿತ್ಯದಂತೆ ಹೋಗಿದ್ದಾರೆ. ಆ ವೇಳೆ ಜಮೀನಿನಲ್ಲಿ ಚಿರತೆ ಕಾಣಿಸಿ ಕೊಂಡಿತ್ತು. ಯುವಕ ವೇಣುಗೋಪಾಲ ಹೆದರದೆ ಹರಸಾಹಸಪಟ್ಟು ಚಿರತೆಯನ್ನು ಹಿಡಿದು ಅದರ ಕಾಲು ಗಳನ್ನು ಕಟ್ಟಿಹಾಕಿದರು.ಯುವಕ ಹಿಡಿದದ್ದು ಮರಿ ಚಿರತೆಯಾದರಿಂದ ಅಸ್ವಸ್ಥವಾಗಿದೆ. ಕೂಡಲೆ ವೇಣುಗೋಪಾಲ್ ಮರಿ ಚಿರತೆಯನ್ನು ತಮ್ಮ ಬೈಕಿನ ಹಿಂಬದಿಗೆ ಕಟ್ಟಿಕೊಂಡು, ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.ಬಾಗೀವಾಳು ಗ್ರಾಮದ ಯುವಕನ ಸಾಹಸಕ್ಕೆ ವೇಣುಗೋಪಾಲ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಎಸ್ಪಿ ಕಚೇರಿಯಲ್ಲೇ ಮಹಿಳೆ ಆತ್ಮಹತ್ಯೆಗೆ ಯತ್ನ
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲೇ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯೊಬ್ಬರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಿ, ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಿವಕೊಳೆನೂರು ಗ್ರಾಮದ ವೇದಾವತಿ ಎಂದು ತಿಳಿದುಬಂದಿದೆ. ಈ ಮಹಿಳೆ ಸಾಗುವಳಿ ಮಾಡುತ್ತಿದ್ದ 5 ಎಕರೆ ಜಮೀನು ವಿಚಾರವಾಗಿ ಸಂಬಂಧಿಯಾದ ಪೊಲೀಸ್ ಕಾನ್ಸ್ಟೇಬಲ್ ನಡುವೆ ಜಗಳ ನಡೆಯುತ್ತಿತ್ತು. ಪೊಲೀಸ್ ಪ್ರಭಾವ ಬಳಸಿ ನಮಗೆ ಬಿತ್ತನೆ ಮಾಡಲು ಬಿಡುತ್ತಿಲ್ಲ ಎಂದು ಎಸ್ಪಿ ಬಳಿ ದೂರು ನೀಡಲು ಹೋಗಿದ್ದವೇಳೆ ಈ ಘಟನೆ ನಡೆದಿದೆ.
ಇನ್ನೂ ಎಸ್ಪಿ ಅವರನ್ನು ಭೇಟಿ ಮಾಡುವ ಮುನ್ನವೇ ಕಚೇರಿ ಆವರಣದಲ್ಲಿ ಏಕಾಏಕಿಯಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ 112 ವಾಹನವನ್ನು ಕರೆಯಿಸಿ ಅದರಲ್ಲಿ ಸಿಬ್ಬಂದಿಯೊಂದಿಗೆ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.
ಇದನ್ನೂ ಓದಿ : ಗೃಹ ಲಕ್ಷ್ಮೀ ಯೋಜನೆಗೆ ಜು.16ಕ್ಕೆ ಚಾಲನೆ!
HOW TO APPLY : NEET-UG COUNSELLING 2023