ವಿಶ್ವ ಕುಂದಾಪ್ರ ಕನ್ನಡ ದಿನದ ರಂಗು!
– ಕುಂದಾಪ್ರ ಕನ್ನಡ, ಭಾಶಿ ಅಲ್ದ ಬದ್ಕ್
– ಕುಂದಾಪುರ ಸೇರಿ ಎಲ್ಲೆಡೆ ಕುಂದಾಪ್ರ ದಿನ ಆಚರಣೆ
– ಜು.23ಕ್ಕೆ ಬೆಂಗಳೂರಿನಲ್ಲಿ ಕುಂದಾಪುರದವರ ಸಮಾಗಮ
NAMMUR EXPRESS NEWS
ಭಾರತ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಂತೆ ಸಂಸ್ಕೃತಿ ಪದ್ಧತಿಯಿಂದ ಹಿಡಿದು ಭಾಷೆಯವರೆಗೆ ತುಂಬಾ ಭಿನ್ನವಿದೆ. ವೈವಿಧ್ಯಮಯವಿದೆ.
ಈಗ ಹೇಳ ಹೊರಟಿರೋ ಸ್ಟೋರಿ ನಮ್ಮೂರ್ ಕುಂದಾಪುರದ್ದು…!
ಕರಾವಳಿಯ ಒಂದು ಪುಟ್ಟ ತಾಲ್ಲೂಕು ಕುಂದಾಪುರ. ಅಲ್ಲಿನ ಕನ್ನಡ ಮಂಗಳೂರು ಕನ್ನಡಕ್ಕೆ ಹೋಲಿಸಿದರೆ ತುಂಬಾ ಭಿನ್ನವಾಗಿದೆ. ಕುಂದಾಪುರ ತಾಲೂಕಿನ ಶೇ.85ರಷ್ಟು ಮಂದಿ ಕುಂದಾಪುರ ಕನ್ನಡ ಭಾಷೆಯನ್ನೇ ಬಳಸುತ್ತಾರೆ.
ಕುಂದಾಪುರ ಕನ್ನಡ ಒಂದು ಉಪ ಭಾಷೆ ಆಗಿದ್ದು ಸೊಗಸಾದ ಕನ್ನಡವನ್ನು ಉಳಿಸಿ ವಿಶ್ವಕ್ಕೆ ಕುಂದಾಪುರ ಕನ್ನಡದ ಸೋಗಸನ್ನು ಸಾರುವ ಉದ್ದೇಶದಿಂದ “ಕುಂದಾಪುರ ಕನ್ನಡ ದಿನ”ವನ್ನು ಆಚರಿಸಲಾಗುತ್ತದೆ.
ತಮ್ಮ ಆಡು ಭಾಷೆಯನ್ನಾಗಿ ಬಳಸುವ ಭಾಷೆ ಕುಂದಾಪುರಿಗರ ಬದುಕಿನ ಭಾಷೆಯೂ ಹೌದು ಎಂಬುದನ್ನು ವಿಶ್ವಕ್ಕೆ ಸಾರಬೇಕು ಎಂಬ ಸದುದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಮುನ್ನುಡಿ ಬರೆಯಲಾಗಿದೆ.
ಕುಂದಾಪುರದಲ್ಲಿ ಮೀನುಗಾರಿಕೆ, ಸಣ್ಣ ಉದ್ಯಮಗಳು ಇಲ್ಲಿನ ಬೆನ್ನೆಲುಬು. ಟೂರಿಸಂ ಈಗ ನಿಧಾನಕ್ಕೆ ಬೆಳೆಯುತ್ತಿದೆ.
ರಾಜಧಾನಿಯಲ್ಲೂ ಕುಂದಾಪ್ರ ಕನ್ನಡ ಹಬ್ಬದ ರಂಗು!
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ಕುಂದಾಪುರ ಕನ್ನಡ ಹಬ್ಬ ಸಂಭ್ರಮದಿಂದ ನಡೆಯಿತು. ಟೀಮ್ ಕುಂದಾಪುರಿಯನ್ಸ್ ವತಿಯಿಂದ ಮಾತಿನ್ ಹಬ್ಬ ಕಾರ್ಯಕ್ರಮ ಆಯೋಜಿಸಲಾಯಿತು.
ಬದುಕು ಕಟ್ಟಕೊಳ್ಳುವ ಸಲುವಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಯಾದ ಕುಂದಾಪುರ ಭಾಗದವರೇ ಸೇರಿ ಕಟ್ಟಿದ ತಂಡವೇ ಟೀಂ ಕುಂದಾಪುರಿಯನ್ಸ್ ಈಗಾಗಲೇ ಹತ್ತು-ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಹಾನಗರಿಯಲ್ಲಿ ಮನೆಮಾತಾದ ತಂಡ, ಕುಂದಾಪುರದ ಹಬ್ಬದ ಮೂಲಕ ಮತ್ತೊಮ್ಮೆ ತನ್ನ ಸಾಧನೆಯನ್ನು ತೋರಿಸಿಕೊಟ್ಟಿದೆ
ಕಾರ್ಯಕ್ರಮದಲ್ಲಿ ಕುಂದಾಪುರ ಕನ್ನಡ ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ದೀಪಕ್ ಶೆಟ್ಟಿ, ನಟ ಕವೀಶ್ ಶೆಟ್ಟಿ, ಶೆಫ್ ಟಾಕ್ ಚೇರ್ ಮ್ಯಾನ್ ಗೋವಿಂದ್ ಪೂಜಾರಿ, ಅಜಿತ್ ಶೆಟ್ಟಿ ಉಳ್ಳೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ಕ್ವಿಜ್, ಕಠಿಣ ಪದಗಳ ಅರ್ಥ ಹೇಳುವ ಸ್ಪರ್ಧೆ ಸೇರಿದಂತೆ ಹಲವು ಆಟೋಟ ಸ್ಪರ್ಧೆಗಳು ಬಂದವರ ಗಮನ ಸೆಳೆಯಿತು. ಕುಂದಾಪುರ ಶೈಲಿಯ ಗಂಜಿ- ಉಪ್ಪಿನೋಡಿ ಬಂದವರ ಹೊಟ್ಟೆ ತಣಿಸಿತು.
ಜು.23ಕ್ಕೆ ಬೆಂಗಳೂರಲ್ಲಿ ಅದ್ದೂರಿ ಕಾರ್ಯಕ್ರಮ
ಕೋಟಾದ ಜನ ಸೇವಾ ಟ್ರಸ್ಟ್ ವಸಂತ ಗಿಳಿಯಾರ್, ಕುಂದಾಪುರ ಕನ್ನಡ ಪ್ರತಿಷ್ಠಾನದ ರಾಘವೇಂದ್ರ ಕಾಂಚನ್ ಸೇರಿ ಕುಂದಾಪುರದ ಸಾವಿರಾರು ಮಂದಿ ಈ ಕುಂದಾಪುರವನ್ನು ಕಟ್ಟಿದ್ದಾರೆ. ಸಾಂಸ್ಕೃತಿಕವಾಗಿ ಬೆಳೆಸಿದ್ದಾರೆ.
ಜು.23ಕ್ಕೆ ಬೆಂಗಳೂರಿನ ಬಂಟರ ಸಂಘದಲ್ಲಿ ನಡೆಯಲಿರುವ ಅದ್ಧೂರಿ ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸರ್ವರನ್ನೂ ಸ್ವಾಗತಿಸಿಲಾಗಿದೆ.
ಹೊಯ್ ನಮ್ದು ಕುಂದಾಪುರ ಮಾರ್ರೆ!
ಕುಂದಾಪುರ ಕಡಲ ಕಿನಾರೆಯ ಸಮೀಪವಿರುವ ಉಡುಪಿ ಜಿಲ್ಲೆಯ ಒಂದು ತಾಲೂಕು. ಇಲ್ಲಿಯ ಜನರ ಆಚಾರ, ವಿಚಾರ, ಸಂಸ್ಕೃತಿ ಎಲ್ಲವೂ ಡಿಫ್ರೆಂಟ್. ಜತೆಗೆ ಭಾಷೆ ಬಗೆಗಿನ ಪ್ರೇಮ, ನಮ್ಮವರು ತಮ್ಮವರು ಎಂಬ ವಿಶ್ವಾಸ ಎಲ್ಲವೂ ಒಂದು ತೂಕ ಹೆಚ್ಚು. ಕುಂದಾಪುರ ಮೂಲದವರು ಹೋಟೆಲ್ ಉದ್ಯಮದಲ್ಲಿ ಅತೀ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇನ್ನು ಕ್ರಿಯಾಶೀಲ ಉದ್ಯಮ ಕ್ಷೇತ್ರದಲ್ಲಿ ಇವರೇ ಟಾಪ್. ಬೈಂದೂರು, ಬ್ರಹ್ಮಾವದಲ್ಲೂ ಈ ಭಾಷೆ ಮಾತನಾಡುವವರೆ ಹೆಚ್ಚು.ಪಂಜುರ್ಲಿ, ನಾಗಾರಾಧನೆ ಇಲ್ಲಿ ಹೆಚ್ಚು ಕಾಣುತ್ತದೆ. ಕುಂದಾಪುರದ ವಾಜಿಪೇಯಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ತಮ್ಮ ಸರಳತೆ, ಪ್ರಾಮಾಣಿಕತೆಯಿಂದ 5 ಬಾರಿ ಶಾಸಕರಾದವರು. ಈಗ ಕಿರಣ್ ಕುಮಾರ್ ಕೊಡ್ಗಿ ಶಾಸಕರಾಗಿದ್ದಾರೆ.
ಕುಂದಾಪುರದವ್ರು ಟ್ಯಾಲೆಂಟ್!
ಕುಂದಾಪುರ ತಾಲೂಕಿನವರು ತಲೆಗಾರರು ಎಂಬ ಮಾತು ಎಲ್ಲೂ ಕೇಳಿ ಬರುತ್ತದೆ. ಅತೀ ಹೆಚ್ಚು ಜಾಣ್ಮೆ ಕ್ಷೇತ್ರದಲ್ಲಿ ಇವರದೊಂದು ಕೈ ಇದೆ. ಸಿನಿಮಾ ಕ್ಷೇತ್ರದಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲೂ ಇವರ ಸೇವೆ ಇದೆ.
ಹೋಟೆಲ್, ಬೇಕರಿ ಇವರ ನೆಚ್ಚಿನ ಉದ್ಯಮ. ಇತ್ತೀಚಿನ ಯುವ ಜನತೆ ತಂತ್ರಜ್ಞಾನ, ಕ್ರಿಯೇಟಿವಿಟಿ ಕ್ಷೇತ್ರದಲ್ಲಿ ಹೆಚ್ಚು ಕುಂದಾಪುರದವರಿದ್ದಾರೆ. ಲೋಗೋ, ಡಿಸೈನ್, ಪೋಸ್ಟರ್ ಕ್ಷೇತ್ರದಲ್ಲಿ ಸಂಗೀತ, ಸಿನಿಮಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಮುಂಬೈ ಗುಜರಾತ್, ವಿದೇಶಗಳಲ್ಲಿ ಉದ್ಯೋಗ, ಉದ್ಯಮದಲ್ಲಿದ್ದಾರೆ. ಕೊಡಿ, ತ್ರಾಸಿ, ಮರವಂತೆ, ಬೈಂದೂರಿನ ಸೋಮೇಶ್ವರ, ಆನೆಗುಡ್ಡೆ, ಕೊಲ್ಲೂರು, ಮಂದಾರ್ತಿ, ಬಾರ್ಕುರು ಸೇರಿ ನೂರಾರು ಪ್ರವಾಸಿ ತಾಣವನ್ನು ಕುಂದಾಪುರ ಹೊಂದಿದೆ.
ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್
HOW TO APPLY : NEET-UG COUNSELLING 2023