ಮಗನಿಗಾಗಿ ಜೀವವನ್ನೇ ಬಲಿ ಕೊಟ್ಟ ತಾಯಿ!
– ಮಗನ ಓದಿಗಾಗಿ ಬಸ್ ಅಡಿ ಸಿಲುಕಿ ಪ್ರಾಣ ಬಿಟ್ಟ ತಾಯಿ!
– ಮೃತಪಟ್ಟ ಯಜಮಾನಿಗಾಗಿ ಕಾದು ಕುಳಿತ ನಾಯಿ!
– ಮಂತ್ರವಾದಿ ಮಾತು ಕೇಳಿ ಬಾಲಕಿ ಹೃದಯ ತೆಗೆದರು!
– ಉಡುಪಿಯಲ್ಲಿ ದೋಣಿ ಮುಳುಗಡೆ: ಐವರು ಪಾರು!
NAMMUR EXPRESS NEWS
ಸೇಲಂ: ಮಗನ ವಿದ್ಯಾಭ್ಯಾಸಕ್ಕಾಗಿ ಬಸ್ ಅಡಿಗೆ ಬಿದ್ದು ತಾಯಿ ಮೃತಪಟ್ಟ ದುರಂತಮಯ ಘಟನೆ ತಮಿಳುನಾಡಿನ ಸೇಲಂ ಅಲ್ಲಿ ಇತ್ತೀಚಿಗೆ ನಡೆದಿದ್ದು ಈ ಘಟನೆ ಈಗ ದೇಶದಲ್ಲಿ ಸದ್ದು ಮಾಡಿದೆ. ತನ್ನ ಮಗನ ಕಾಲೇಜು ಹಣ ಕಟ್ಟಲು ಸಾಧ್ಯವಾಗದ ಕಾರಣ ತಾನೂ ಮೃತಪಟ್ಟರೆ ಪರಿಹಾರದ ಹಣದಲ್ಲಿ ಮಗ ಓದಲಿ ಎಂದು ರಸ್ತೆಯಲ್ಲಿ ನಡೆದು ಹೋಗುವಂತೆ ನಾಟಕ ಮಾಡಿ ಅಲ್ಲೇ ಬಸ್ ಅಡಿ ಸಿಲುಕಿ ಸಾವನ್ನು ಕಂಡಿದ್ದಳು. ಮೊದಲು ಈ ಸಾವು ಆಕಸ್ಮಿಕ ಎನ್ನಲಾಗಿತ್ತು. ತಾಯಿಯೊಬ್ಬಳ ಈ ನಿರ್ಧಾರ ಇಡೀ ವಿಶ್ವದ ಮನ ಕಲುಕಿದೆ. ತನ್ನ ಮಗನ ಶಾಲಾ ಶುಲ್ಕ 45 ಸಾವಿರ ತುಂಬಲು ಸಾಧ್ಯ ಆಗಿಲ್ಲ ಎಂದು 45 ವರ್ಷದ ಪಾಪತಿ ಮೃತಪಟ್ಟಿದ್ದಾಳೆ.
ಯಜಮಾನಿಗಾಗಿ ಕಾದು ಕುಳಿತ ನಾಯಿ!
ಆಂಧ್ರ ಪ್ರದೇಶ ಗೋದಾವರಿ ನದಿಗೆ ಹಾರಿ ಮೃತಪಟ್ಟ ಕಾಂಚನ ಎಂಬ ಮಹಿಳೆಯ ಚಪ್ಪಲಿ ಬಳಿ ತಾನು ಸಾಕಿದ್ದ ನಾಯಿ ಕಾದು ಕುಳಿತಿದ್ದ ದೃಶ್ಯ ಈಗ ವೈರಲ್ ಆಗಿದೆ. ನಾಯಿ ನಿಯತ್ತು ಇದು ಎಂಬುದನ್ನು ಇದು ಮತ್ತೆ ಹೇಳಿದಂತಿದೆ.
ಮಂತ್ರವಾದಿ ಮಾತು ಕೇಳಿ ಬಾಲಕಿ ಹೃದಯ ತೆಗೆದರು!
9 ವರ್ಷದ ಬಾಲಕಿಯೊಬ್ಬಳ ಹೃದಯವನ್ನು ಬಗೆದು ಹೊರತೆಗೆದ ಆಘಾತಕಾರಿ ಘಟನೆ ಪಂಜಾಬ್ನ ಅಮೃತಸರ ಸಮೀಪದ ಮುಧಾಲ್ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿ ಸುಖಮನ್ದೀಪ್ ಕೌರ್ (9) ಎಂದು ವರದಿಯಾಗಿದೆ.ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹಿಳೆ ಜಸ್ಟೀರ್ ಕೌರ್, ಆಕೆಯ ಪತಿ ದರ್ ಸಿಂಗ್, ಮಗ ಮತ್ತು ಸೊಸೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಎಣ್ಣೆ ಹೊಡೆಯಲು ತಂದೆ-ತಾಯಿ ಕೊಂದು ಮಗ!
ಬೆಂಗಳೂರಿನಲ್ಲಿ ತಂದೆ-ತಾಯಿಯನ್ನು ಮಗನೇ ಕೊಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಟರಾಯನಪುರದಲ್ಲಿ ಭಾಸ್ಕರ್ (63) ಹಾಗೂ ಪತ್ನಿ ಶಾಂತಾ (60) ಅವರನ್ನು ತಲೆಗೆ ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದಾನೆ ಎನ್ನಲಾದ ಮಗ ಶರತ್ (26) ಪರಾರಿಯಾಗಿದ್ದಾನೆ. ಮಂಗಳೂರಿನ ಭಾಸ್ಕರ್-ಶಾಂತಾ, ಹಲವು ವರ್ಷಗಳಿಂದ ಬ್ಯಾಟರಾಯನಪುರದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಎರಡನೇ ಮಗ ಶರತ್, ತಂದೆ-ತಾಯಿಯನ್ನು ಕೊಲೆ ಮಾಡಿದ್ದು ಮೊದಲ ಮಗ ಸಜಿತ್, ಕೊಲೆ ಬಗ್ಗೆ ದೂರು ನೀಡಿದ್ದಾರೆ. ಕೆಲಸವಿಲ್ಲದೇ ಮನೆಯಲ್ಲಿದ್ದ ಶರತ್, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆಗಾಗ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದ. ತಂದೆ-ತಾಯಿಯ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದ ಶರತ್, ಮನೆಯ ಬಾಗಿಲು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಮಂಗಳವಾರ ಬೆಳಿಗ್ಗೆ ತಂದೆ-ತಾಯಿಗೆ ಮೊದಲ ಮಗ ಸಚಿತ್ ಕರೆ ಮಾಡಿದ್ದರು. ಆದರೆ, ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಕೊಲೆ ಸಂಗತಿ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು
ನಾಡ ದೋಣಿ ಮುಳುಗಡೆ: ಐವರು ಪಾರು!
ಮಂಗಳೂರಿನಿಂದ ಮಲ್ಪೆ ಹೋಗುವಾಗ ಘಟನೆ ನಡೆದಿದ್ದು ನಾಡ ದೋಣಿ ಮುಳುಗಿದ್ದು, ಐದು ಮಂದಿ ಬಚಾವ್ ಆಗಿದ್ದಾರೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023