ಟಾಯ್ಲೆಟ್ ಗುಂಡಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ!
– ಚಪ್ಪಲಿ ಕದ್ದೋಯ್ದಿದ್ದಕ್ಕೆ ದೂರು ಕೊಟ್ಟ!.. ಆಮೇಲ್ ಏನಾಯ್ತು…?
– ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಬಾಲಕಿ!
NAMMUR EXPRESS NEWS
ಮಂಗಳೂರು: ಮನೆಯ ಹಿಂದಿನ ಟಾಯ್ಲೆಟ್ ಗುಂಡಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಗುಂಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇನ್ನು ಮಹಿಳೆ ನಾಗಮ್ಮ ಕಳೆದ 4 ತಿಂಗಳ ಹಿಂದೆ ಕಲ್ಲಾಪಿನಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಅನುಮಾನಕ್ಕೆ ಕಾರಣವಾಗಿದ್ದು ಕೊಲೆಯೋ ಆತ್ಮಹತ್ಯೆಯೋ ತಿಳಿದು ಬರಬೇಕಿದೆ.
ಚಪ್ಪಲಿ ಕದ್ದೋಯ್ದಿದ್ದಕ್ಕೆ ದೂರು ಕೊಟ್ಟ!
ವ್ಯಕ್ತಿಯೊಬ್ಬ ತನ್ನ ಚಪ್ಪಲಿ ಕಳವುಗೈದಿದ್ದಾರೆ ಎಂದು ಪೊಲೀಸರ ತುರ್ತು ಸ್ಪಂದನಾ ನಂಬರಾದ 112 ಕರೆ ಮಾಡಿ ಪೊಲೀಸರು ಬಳಿ ದೂರನ್ನು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ಮಂಗಳೂರು ಪೊಲೀಸರು ನೇರವಾಗಿ ಮಂಗಳೂರು ನಗರದ ಬಾಲಂಭಟ್ ಹಾಲ್ಗೆ ದೌಡಾಯಿಸಿದ್ದಾರೆ. ಹಾಲ್ಗೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು ತದನಂತರ ಅಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು ಮಾರ್ಕೆಟಿನಿಂದ ಸಾಮಾಗ್ರಿ ಹಾಕಲು ಬಂದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿ ತೆರಳಿದ ದೃಶ್ಯ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಬಂದು ದೂರು ನೀಡುವಂತೆ ಪೊಲೀಸರು ಸೂಚಿಸಿದ್ದು ಆದರೆ ಆತ ವ್ಯಕ್ತಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕ ವಿಷಯಕ್ಕೂ ತಕ್ಷಣ ಸ್ಪಂದಿಸಿದ ಪೊಲೀಸರನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಬಾಲಕಿ!
ಬಾಲಕಿಯೊಬ್ಬಳು 90 ಅಡಿಗಳಷ್ಟು ಎತ್ತರದ ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯ ಚಿತ್ರಕೋಟೆ ಜಲಪಾತಕ್ಕೆ ಜಿಗಿದ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ತಂದೆ-ತಾಯಿಗಳು ಬೈದಿದ್ದಕ್ಕೆ ಅವಳು ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಸುದೈವಶಾತ್ ಬಾಲಕಿ ನೀರಿನಲ್ಲಿ ತೇಲುತ್ತಿದ್ದರಿಂದ ಬದುಕುಳಿದಿದ್ದಾಳೆ. ಸ್ಥಳದಲ್ಲಿದ್ದ ಪ್ರವಾಸಿಗರು ಮತ್ತು ಸ್ಥಳೀಯರು ಜಿಗಿಯದಂತೆ ಅವಳನ್ನು ತಡೆದಿದ್ದರು ಮತ್ತು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮನವೊಲಿಸಲು ಪ್ರಯತ್ನಿಸಿದರು, ಆದರೆ ಅವರು ಅವರ ಮನವಿಯನ್ನು ನಿರ್ಲಕ್ಷಿಸಿ ಸುಮಾರು 90 ಅಡಿಗಳಷ್ಟು ಎತ್ತರದಿಂದ ಜಿಗಿದಿದ್ದಾಳೆ ಎಂದು ವರದಿ ತಿಳಿಸಿದೆ. ಸ್ಥಳದಲ್ಲಿದ್ದವರು ಬಾಲಕಿ ನೀರಿಗೆ ಹಾರುವುದನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!
HOW TO APPLY : NEET-UG COUNSELLING 2023