ಕೊಳಚೆ ನಗರ ಆಗ್ತಿದೆಯಾ ಕಾರ್ಕಳ!?
– ಒಳ ಚರಂಡಿ ಸಮಸ್ಯೆಗೆ ಪರಿಹಾರ ಇಲ್ವಾ?
– ವಾಹನ ಸವಾರರು, ಜನತೆಯ ಪೀಕಲಾಟ
NAMMUR EXPRESS NEWS
ಕಾರ್ಕಳ: ( Karkala ) ನೆಲದೊಳಗೆ ಒಳ ಚರಂಡಿ ನೀರು ಸೋರಿಕೆಯಾಗಿ ಕಾರ್ಕಳದಲ್ಲಿ ಸಮಸ್ಯೆ ಸೃಷ್ಟಿ ಆಗಿದೆ.
ಕಾರ್ಕಳದ ಬಂಡಿ ಮಠ ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಒಳಚರಂಡಿ ಚೇಂಬರ್ ನಲ್ಲಿ ಮೇಲಿನ ನೀರು ಸೋರಿಕೆಯಾಗಿ ಸಮಸ್ಯೆ ಸೃಷ್ಟಿಸಿದೆ. ಇಲ್ಲಿ ಕೊಳಚೆ ನೀರು ಸೋರಿಕೆ ಕಂಡು ಹೊರ ಚಿಮ್ಮಿ ಹರಿಯುತ್ತಿರುವುದಲ್ಲದೆ ಅವೆಲ್ಲ ರಸ್ತೆ ಮೇಲೆಯೇ ಹರಿದು ಪರಿಸರ ಮಲಿನಗೊಂಡಿರುವುದಲ್ಲದೆ ಪರಿಸರ ಗಬ್ಬೆದ್ದು ನಾರುತ್ತಿದೆ. ಪುರಸಭೆ ವ್ಯಾಪ್ತಿಯ 3 ಮಾರ್ಗದಿಂದ ಬಂಡಿಮಠ ತನಕ ಯುಜಿಡಿ ಕೊಳವೆ ಮಾರ್ಗ ಎಲ್ಲೋ ಒಂದು ಕಡೆ ಬಂದ್ ಆಗಿ, ಮ್ಯಾನ್ ಹೋಲ್ ಗಳ ಮೂಲಕ ಕೊಳಚೆ ನೀರು ರಸ್ತೆ ಮೇಲೆ ಉಕ್ಕಿ ಹರಿಯುತ್ತಿರುವುದು ಮಳೆಗಾಲದಲ್ಲಿ ಸರ್ವೇಸಾಮಾನ್ಯವಾಗಿದೆ.
ಕಾರ್ಕಳ ನಗರದ ಪ್ರಮುಖ ರಸ್ತೆಗಳ ಒಳಚರಂಡಿ ಚೇಂಬರ್ ಗಳು ಸೋರಿಕೆ ಕಂಡಿದ್ದು ಪುರಸಭೆ ಸಿಬ್ಬಂದಿ ಆಗಾಗ ಸಕಿಂಗ್ ಯಂತ್ರದ ಮೂಲಕ ಸೋರಿಕೆ ತಡೆಯುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇದರ ಮಧ್ಯೆ ಬಂಡಿಮಠ ಬಸ್ ನಿಲ್ದಾಣ ಮುಂಭಾಗದ ಹೆದ್ದಾರಿಯಲ್ಲಿ ಎರಡು ಕಡೆ ಒಳಚರಂಡಿ ಚೇಂಬರ್ ನಿಂದ ನೀರು ಸೋರಿಕೆಯಾಗುತ್ತಿದೆ. ಕೊಳಚೆ ನೀರು ರಸ್ತೆ ಮೇಲೆ ಹರಿದು ಪರಿಸರ ಗಬ್ಬೆದ್ದು ನಾರುತಿದೆ. ಹೆದ್ದಾರಿಯಲ್ಲಿ ಸಹಸ್ರಾರು ವಾಹನಗಳು ನಿತ್ಯ ಓಡಾಟ ನಡೆಸುತ್ತಿವೆ. ಅವಾಗೆಲ್ಲ ಕೊಳಚೆ ನೀರಿನ ಮೇಲೆಯೇ ಅವುಗಳು ಸಾಗುತ್ತಿವೆ. ಈ ಜಾಗದಲ್ಲಿ ವಾಹನಗಳು ಒಂದನ್ನೊಂದು ಓವರ್ ಟೆಕ್ ಮಾಡುವಾಗ ಆಟೋರಿಕ್ಷಾ ದ್ವಿಚಕ್ರ ವಾಹನಗಳ ಸವಾರರ ಮೇಲೆ ಮೇಲಿನ ನೀರು ಎರಚಲ್ಪಟ್ಟು ಸಮಸ್ಯೆ ಸೃಷ್ಟಿಯಾಗುತ್ತಿದೆ. ಮೇಲಿನ ನೀರು ಮಳೆ ನೀರಿನ ಜೊತೆ ಸೇರಿ ಹರಿದು ಅಲ್ಲೇ ಪಕ್ಕದಲ್ಲಿ ಸಂಗ್ರಹ ಗೊಳ್ಳುತ್ತಿದೆ. ಇಲ್ಲಿ ಆಟೋರಿಕ್ಷ ನಿಲ್ದಾಣ,ಅಂಗಡಿಗಳು ಇದ್ದು ಅಲ್ಲಿದ್ದವರೆಲ್ಲ ಮೂಗು ಮುಚ್ಚಿಕೊಂಡು ದಿನ ಕಳೆಯುವ ಸ್ಥಿತಿ ಇದೆ.
ಬಸ್ ನಿಲ್ದಾಣದ ಸಮೀಪವೇ ಈ ಸಮಸ್ಯೆ ತಲೆದೂರಿದ್ದು ಮೇಲಿನ ನೀರು ಸಂಗ್ರಹವಾಗುವ ಜಾಗದಲ್ಲೇ ಬಸ್ ಗಾಗಿ ಕಾದು ನಿಲ್ಲುವ ಪ್ರಯಾಣಿಕರು ಕೊಳಚೆ ನೀರಿನಾ ದುರ್ವಾಸನೆ ತಡೆಯಲು ಸಾಧ್ಯವಿಲ್ಲ ಮೂಗಿಗೆ ಬೆರಳು ಹಿಡಿದುಕೊಂಡೆ ನಿಂತಿರುವ ದೃಶ್ಯಗಳು ಮಾಮೂಲಿಯಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023