ಲೋನ್ ಆ್ಯಪ್ ಸಾಲ ಕಟ್ಟದ್ದಕ್ಕೆ ಪೋಟೋ ಅಶ್ಲೀಲಗೊಳಿಸಿ ವೈರಲ್!
– ಸರ್ಕಾರ ಆಪ್ ರದ್ದುಗೊಳಿಸಿದರೂ ನಿಲ್ಲಲಿಲ್ಲ ಆಪ್ ವಂಚನೆ
– ಪಡುಬಿದ್ರಿ: ಸೆಕ್ಯೂರಿಟಿ ಗಾರ್ಡ್ ಬಾವಿಗೆ ಹಾರಿ ಸಾವು
– ಪಿಎಂ ಕಿಸಾನ್ ಸನ್ಮಾನ್ ಹಣ ಬಿಡುಗಡೆ
NAMMUR EXPRESS NEWS
ಮಂಗಳೂರು: ಸರ್ಕಾರ ಲೋನ್ ಆಪ್ ರದ್ದುಗೊಳಿಸಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಲೋನ್ ಆಪ್ ಜನರ ಜೀವ ಹಿಂಡುತ್ತಿವೆ. ಇತ್ತೀಚಿಗೆ ತಾನೇ ಬೆಂಗಳೂರಲ್ಲಿ ಓರ್ವ ವಿದ್ಯಾರ್ಥಿ ಲೋನ್ ಆಪ್ ಕಿರುಕುಳಕ್ಕೆ ಬೇಸತ್ತು ಜೀವ ಕಳೆದುಕೊಂಡ ಘಟನೆ ಮಾಸುವ ಮುನ್ನ ಸಾಲ ಮರು ಪಾವತಿಸಿದರೂ ಫೋಟೋ ಅಶ್ಲೀಲಗೊಳಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.
ಲೋನ್ ಆಪ್ ಮೂಲಕ 4,200 ರೂ. ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾದರು, ತಾನು ಲೋನ್ ಆಪ್ ಮೂಲಕ 3500 ರೂ. ಸಾಲಕ್ಕೆ ಅರ್ಜಿ ಹಾಕಿದ ಬಳಿಕ ತನ್ನ ಬ್ಯಾಂಕ್ ಖಾತೆಗೆ 2800 ರೂ. ಸಾಲ ಜಮೆಯಾಗಿದೆ. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಾಗಿದುದ್ದರಿಂದ ಜು.19ರಂದು 1400 ರೂ. ಮರುಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಜು.26ರಂದು ಆಪ್ ನವರು ಕಳುಹಿಸಿರುವ ಯುಪಿಐ ಐಡಿಗೆ ಹಂತಹಂತವಾಗಿ ೪೨೦೦ ರೂ. ಪಾವತಿಯನ್ನು ಹಂತ ಹಂತವಾಗಿ ಪಾವತಿ ಮಾಡಿರುತ್ತೇನೆ.
ಇದಾದ ಬಳಿಕ ಅಪರಿಚಿತ ವ್ಯಕ್ತಿಯು ತನ್ನ ಕಾಂಟಾಕ್ಟ್ ಲೀಸ್ಟ್ನಲ್ಲಿರುವ ತಂದೆಯ, ಸಂಬಂಧಿಕರ ಹಾಗೂ ಕಾಲೇಜಿನ ಅಧ್ಯಾಪಕರ ವಾಟ್ಸಪ್ ನಂಬರ್ಗಳಿಗೆ ತನ್ನ ಮತ್ತು ಇತರರ ಭಾವಚಿತ್ರವನ್ನು ಅಶ್ಲೀಲಗೊಳಿಸಿ ಲೋನ್ ಪಾವತಿ ಮಾಡಿರುವುದಿಲ್ಲವೆಂದು ಸಂದೇಶ ರವಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಾಲಾ ಸೆಕ್ಯೂರಿಟಿ ಗಾರ್ಡ್ಬಾವಿಗೆ ಹಾರಿ ಆತ್ಮಹತ್ಯೆ!
ಪಡುಬಿದ್ರಿಯ ಅದಮಾರು ವಿದ್ಯಾಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಾಹಿಸುತ್ತಿದ್ದ ವ್ಯಕ್ತಿ ಇಂದು ಮುಂಜಾನೆ ಕುಂಜೂರಿನ ಮನೆಯೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಎರ್ಮಾಳು ಬಡಾ ದೇವಸ್ಥಾನ ಬಳಿಯ ನಿವಾಸಿ ನವೀನ್ ಬಂಗೇರ (53). ಅವಿವಾಹಿತರಾಗಿದ್ದ ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು ಕಳೆದ ಸುಮಾರು ಮೂರು ವರ್ಷಗಳಿಂದ ಅದಮಾರು ವಿದ್ಯಾಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾತ್ರಿ ಹೊತ್ತಲ್ಲಿ ಕರ್ತವ್ಯದಲ್ಲಿದ್ದರು.
ಪಿಎಂ ಕಿಸಾನ್ ಹಣ ಬಿಡುಗಡೆ
ಪಿಎಂ ಕಿಸಾನ್ ಸಮ್ಯಾನ್ ನಿಧಿ ಯೋಜನೆಯ 14ನೇ ಕಂತಿನ ಹಣ ಗುರುವಾರ ಬಿಡುಗಡೆಯಾಗಿದೆ. ಸರಕಾರ 8.5 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ತಲಾ 2,000 ರೂನಂತೆ ಒಟ್ಟು 17,000 ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರವಾಗಿ ಖಾತೆಗೆ ಕಳುಹಿಸಿದೆ. ಗುರುವಾರ ಬಿಡುಗಡೆಯಾದ ಹಣವನು ಸೇರಿಸಿದರೆ, ಈ ತನಕ ಪಿಎಂ ಕಿಸಾನ್ ಸಮ್ಹಾನ್ ನಿಧಿ ಯೋಜನೆಯಡಿ 2.60 ಲಕ್ಷ ಕೋಟಿ ರೂ.ಗಳನ್ನು ಫಲಾನ ಭವಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಹಣ 2000 ರೂ. ಜಮೆ ಆಗಿದೆಯೇ ಎಂದು ಚೆಕ್ ಮಾಡಿ, ಬ್ಯಾಂಕ್ಗೆ ತೆರಳಿ ನಿಮ್ಮ ಪಾಸ್ ಬುಕ್ಎಂಟ್ರಿ ಮಾಡಿಸುವ ಮೂಲಕ ಪಿಎಂ ಕಿಸಾನ್ ಹಣ ಬಂದಿದೆಯೇ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಿ, ನೀವು ಫಲಾನುಭವಿ ಆಗಿದ್ದರೂ ಖಾತೆಗೆ ಹಣ ಜಮೆ ಆಗಿಲ್ಲ ದಿದ್ದರೆ, ನೀವು ಕೆವೈಸಿ ಮಾಡಿಸಬೇಕಾಗುತ್ತದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023