ಕದ್ದ ಬೈಕ್ ಕೊಡಿಸಿದ ಕಲ್ಕುಡ ದೇವರು?!
– ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದ ಪವಾಡ ಘಟನೆ
– ಸರ್ಕಾರಿ ಬಸ್ಸಲ್ಲಿ ಕಿರುಕುಳ: ಒಬ್ಬನ ಬಂಧನ
NAMMUR EXPRESS NEWS
ಸುಳ್ಯ( ದಕ್ಷಿಣ ಕನ್ನಡ): ಇತ್ತೀಚಿಗೆ ದೈವ ಪವಾಡಗಳು ಹೆಚ್ಚಾಗಿ ವರದಿ ಆಗುತ್ತಿವೆ. ಕರಾವಳಿಯಲ್ಲಿ ಕೊರಗಜ್ಜ ಬಾಲಕಿಯೊಬ್ಬಳನ್ನು ರಕ್ಷಿಸಿದ ಘಟನೆ ಭಾರೀ ಸುದ್ದಿ ನಡುವೆ ಕಳವಾಗಿದ್ದ ಬೈಕ್ ಕಳಕೊಂಡವರು ಕಲ್ಕುಡ ದೇವರಲ್ಲಿ ಹರಕೆ ಹೇಳಲು ಹೋಗುತ್ತಿದ್ದಾಗ ಆತನ ಕೈಗೆ ಕಳ್ಳ ಸಿಕ್ಕಿಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ. ಬೈಕನ್ನು ಕದ್ದು ಮರುದಿನ ಅದೇ ಬೈಕಿನಲ್ಲಿ ತೆರಳುತ್ತಿದ್ದ ಕಳ್ಳ ಹರಕೆ ಹೇಳಲು ಹೋಗುತ್ತಿದ್ದ ಬೈಕ್ ಮಾಲಿಕನಿಗೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಕಳ್ಳನನ್ನು ಮೈಸೂರಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿ ನಿರಂಜನ್ ಎಂದು ಗುರುತಿಸಲಾಗಿದೆ. ಉಬರಡ್ಕದ ಕಾರ್ತಿಕ್ ಸುಳ್ಯಕೋಡಿ ಎಂಬವರು ಪುತ್ತೂರಿನಲ್ಲಿ ಕ್ಯಾಂಪ್ಸ್ ಉದ್ಯೋಗಿಯಾಗಿದ್ದು, ಜು.25ರಂದು ಸಂಜೆ ತನ್ನ ಬೈಕ್ನ್ನು ಸುಳ್ಯ ಸರಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ರಾತ್ರಿ ಪಾಳಿಯ ಕೆಲಸಕ್ಕೆ ಬಸ್ ನಲ್ಲಿ ಪುತ್ತೂರಿಗೆ ತೆರಳಿದ್ದರು. ಮರುದಿನ ಬಂದಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕೆಂಪು ಜಾಕೆಟ್ ಮತ್ತು ಖಾಕಿ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ನಕಲಿ ಕೀ ಬಳಸಿ ಬೈಕ್ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬಂದಿತ್ತು.
ಜು.27ರಂದು ಬೆಳಗ್ಗೆ ಕಾರ್ತಿಕ್ ಅವರು ತನ್ನ ಕುಟುಂಬಸ್ಥರ ಜೊತೆ ಕಾರಿನಲ್ಲಿ ಸುಳ್ಯದ ಕಡೆ ಬಂದು ಬೈಕ್ ಕಳವಾದ ಬಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಹರಕೆ ಹೇಳಿಕೊಳ್ಳಲು ಹೋರಟಾಗ ಕೆಂಪು ಜಾಕೆಟ್, ಖಾಕಿ ಪ್ಯಾಂಟ್ ಧರಿಸಿದ್ದ ವ್ಯಕ್ತಿ ಬೈಕ್ನಲ್ಲಿ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಹೋಗುವುದು ಕಂಡುಬಂದಿದೆ. ಕೂಡಲೇ ಇದು ತನ್ನದೇ ಬೈಕ್ ಎಂಬುದನ್ನು ಗುರುತು ಹಿಡಿದ ಕಾರ್ತಿಕ್ ತನ್ನ ಸಹೋದರ ಮತ್ತು ಗೆಳೆಯರಿಗೆ ವಿಷಯ ತಿಳಿಸಿ ಅದರಂತೆ ಅರಂತೋಡಿನಲ್ಲಿ ಸ್ಥಳೀಯರು ಬೈಕನ್ನು ಅಡ್ಡಗಟ್ಟಿ ವಿಚಾರಿಸಲು ಮುಂದಾದಾಗ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಿದ್ದಾನೆ. ಈ ಬಗ್ಗೆ ಕಲ್ಲುಗುಂಡಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿ ಬೈಕ್ನಲ್ಲಿ ಹಿಂಬಾಲಿಸಿ ಕಲ್ಲುಗುಂಡಿ ಹೊರ ಠಾಣೆ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ತಕ್ಷಣ ಬ್ಯಾರಿಕೇಡ್ಗಳನ್ನು ರಸ್ತೆಗೆ ಅಡ್ಡವಿರಿಸಿ ಬೈಕ್ ಕಳ್ಳನನ್ನು ಹಿಡಿದು ವಿಚಾರಿಸಿದ್ದಾರೆ. ಆ ವೇಳೆ ಆತ ಮೈಸೂರಿನ ಮೆಡಿಕಲ್ ವಿದ್ಯಾರ್ಥಿ ನಿರಂಜನ್ ಎಂದು ತಿಳಿದುಬಂದಿದೆ. ಬೈಕ್ ಕದ್ದು ಕಾಸರಗೋಡಿನಲ್ಲಿದ್ದ ತನ್ನ ಅಜ್ಜಿಯ ಮನೆಗೆ ಹೋಗಿ ಅಲ್ಲಿಂದ ಮರುದಿನ ಮೈಸೂರಿಗೆ ಹೋಗಲೆಂದು ಹಿಂತಿರುಗುವ ವೇಳೆ ಸಿಕ್ಕಿ ಬಿದ್ದಿದ್ದಾನೆ.ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಬಸ್ಸಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಓರ್ವ ಅರೆಸ್ಟ್
ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಬಸ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಯುವಕನೋರ್ವ ಅಸಭ್ಯವಾಗಿ ನಡೆದುಕೊಂಡ ಘಟನೆ ಮಡಂತ್ಯಾರು ಸಮೀಪ ನಡೆದಿದೆ. ಬಂಧಿತ ಆರೋಪಿಯನ್ನು ಇಂದಬೆಟ್ಟು ನಿವಾಸಿ ಕಬೀರ್ ಎನ್ನಲಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ಯುವತಿ ತನ್ನೂರಿಗೆ ಮಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ನಲ್ಲಿ ತೆರಳುವ ವೇಳೆ ಜ್ಯೋತಿ ಬಳಿ ಕಬೀರ್ ಯುವತಿಯ ಪಕ್ಕ ಕುಳಿತಿದ್ದು, ಮಡಂತ್ಯಾರಿನಿಂದ ಸ್ವಲ್ಪ ಹಿಂದಕ್ಕೆ ತಲುಪಿದಾಗ ಆತನು ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ತಕ್ಷಣ ಪ್ರತೀರೋಧಿಸಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತರಿಗೆ ಮಾಹಿತಿ ನೀಡಿದ್ದರು. ಅವರು ಯುವತಿ ಪೋಷಕರಿಗೆ ಮಾಹಿತಿ ನೀಡಿ ಉಜಿರೆಯ ಬಳಿ ಬಸ್ ಬಂದಾಗ ಆರೋಪಿತನನ್ನು ಬಸ್ ಚಾಲಕ ಮತ್ತು ನಿರ್ವಾಹಕರ ಸಹಾಯ ಪಡೆದು ಪೊಲೀಸರಿಗೊಪ್ಪಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023