ಸೆಲ್ಫಿ ಹುಚ್ಚಿಗೆ ಮತ್ತೊಬ್ಬ ಬಲಿ!?
– ಫೋಟೋ ತೆಗೆಯುವ ವೇಳೆ ನೀರಿಗೆ ಬಿದ್ದ ಪ್ರವಾಸಿಗ ನಾಪತ್ತೆ
– ಕೊಡಗಿನ ಹಾರಂಗಿ ಜಲಾಶಯದ ಸೇತುವೆ ಬಳಿ ಘಟನೆ
NAMMUR EXPRESS NEWS
ಕುಶಾಲನಗರ: ಇತ್ತೀಚಿಗೆ ಕೊಲ್ಲೂರು ಸಮೀಪದ ಅರಿಶಿಣ ಗುಂಡಿ ಫಾಲ್ಸ್ ಅಲ್ಲಿ ಸೆಲ್ಫಿ ತೆಗೆಯಲು ಹೋಗಿ ಓರ್ವ ಮೃತಪಟ್ಟ ಘಟನೆ ನಡುವೆ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ಗುರುವಾರ ಸಂಜೆ ಓರ್ವ ಹಾಗೆಯೇ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾನೆ. ಸೆಲ್ಸಿ ತೆಗೆದುಕೊಳ್ಳುತ್ತಿದ್ದ ಬೆಂಗಳೂರಿನ ವಿದ್ಯಾರಣ್ಯಪುರಂ ಸಂದೀಪ (46) ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಟ್ಯಾಟೊ ಕಲಾವಿದರಾಗಿದ್ದು, ಸಾಕುನಾಯಿಗಳ ಮಾರಾಟವನ್ನೂ ಮಾಡುತ್ತಿದ್ದ ಸಂದೀಪ ಅವರು, ಮೂವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು ಎನ್ನಲಾಗಿದೆ.
ಪ್ರವಾಸಿಗರೇ ಜೀವ ದೊಡ್ಡದು!
ಪ್ರವಾಸಿಗರೇ ಎಚ್ಚರ ಒಂದು ಕ್ಷಣದ ಖುಷಿಗಾಗಿ ಜೀವ, ಜೀವನ ಕಳೆದುಕೊಳ್ಳಬೇಡಿ. ಅಪಾಯದ ಜಾಗದಲ್ಲಿ ಜಾಗೃತರಾಗಿರಿ.
ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು
HOW TO APPLY : NEET-UG COUNSELLING 2023