ದೇವರ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದವ ಅರೆಸ್ಟ್!
– ಖರ್ಚಿಗೆ ಹಣ ಕೊಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ
– ಕಾಪುವಿನಲ್ಲಿ ತ್ರಿವಳಿ ತಲಾಖ್ ಹೇಳಿ ಹೆಂಡತಿ ಬಿಟ್ಟ!
NAMMUR EXPRESS MANGALORE
ಮಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಬಿಕರ್ನಕಟ್ಟೆಯ ಹಿಲ್ಡ್ ನಿವಾಸಿ ಸಲ್ಮಾನ್ (22) ಬಂಧಿತ ಆರೋಪಿ. ಸೆನ್ ಪೊಲೀಸ್ ಠಾಣೆಯಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಬಗ್ಗೆ ದೂರು ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 7ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು: ಡಿಪ್ಲೊಮಾ ವಿದ್ಯಾರ್ಥಿ ನೇಣಿಗೆ ಶರಣು.!
ಖರ್ಚಿಗೆ ಹಣ ಕೊಡಅಲ್ಲ ಎಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಕುತ್ತಾರ್ ಸುಭಾಷನಗರದ ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬವರ 17 ವರ್ಷ ವಯಸ್ಸಿನ ಸುಶಾಂತ್ ಎನ್ನಲಾಗಿದೆ. ಈತ ಪ್ರಥಮ ಪಿಯುಸಿಯನ್ನು ಕಪಿತಾನಿಯೋದಲ್ಲಿ ಮುಗಿಸಿದ್ದ ಮಗ ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಮಾಡುವ ಆಸಕ್ತಿ ವಹಿಸಿದ್ದರಿಂದ ಪೋಷಕರು ಸೇರಿಸಿದ್ದರು. ಬುಧವಾರ 500 ರೂ ಹಣ ಕೊಟ್ಟು ಕಾಲೇಜಿಗೆ ಮಗನನ್ನು ಕಳುಹಿಸಿದ್ದರು. ಗುರುವಾರ ಸಹ ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ 500 ರೂ. ಕೊಡುವಂತೆ ಕೇಳಿದಾಗ ಪೋಷಕರು ಕೊಟ್ಟಿಲ್ಲ. ಇದರಿಂದ ಕೋಪಗೊಂಡು ಮನೆಯಲ್ಲೇ ಉಳಿದುಕೊಂಡ ಮಗ ತಂದೆ ಮನೆ ಹೊರಗಡೆ ಹಾಗೂ ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಕಾಪುವಿನಲ್ಲಿ ತ್ರಿವಳಿ ತಲಾಖ್ ಹೇಳಿ ಹೆಂಡತಿ ಬಿಟ್ಟ!
ತ್ರಿವಳಿ ತಲಾಖ್ ನಿಷೇಧಿಸಲ್ಪಟ್ಟಿದ್ದರೂ ಕಾಪುವಿನ ವ್ಯಕ್ತಿಯೊಬ್ಬ ಮೂರು ಸಲ ತಲಾಖ್ ಹೇಳಿ ಹೆಂಡತಿಯನ್ನು ಬಿಟ್ಟಿರುವ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಪು ಮಲ್ಲಾರು ಕೋಟೆಯ ಮೊಹಮ್ಮದ್ ಸಾದಿಕ್ ಎಂಬಾತ ಪತ್ನಿ ಅಸ್ಮಾಬಾನುಗೆ (37) ನಿರಂತರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ 2006ರಲ್ಲಿ ಮದುವೆಯಾದಂದಿನಿಂದಲೇ ಹಿಂಸೆ ನೀಡಲು ತೊಡಗಿದ್ದ. ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದಾಗಲೂ ಫೋನ್ ಮಾಡಿ ಮಾನಸಿಕ ಕಿರುಕುಳ ಕೊಡುತ್ತಿದ್ದ ಹೆಂಡತಿಯನ್ನು ತವರು ಮನೆಗೆ ಹೋಗಲು ಬಿಡುತ್ತಿರಲಿಲ್ಲ, ವಿದೇಶದ ಉದ್ಯೋಗ ಹೋದ ಬಳಿಕ ವಾಪಸು ಬಂದ ಸಾದಿಕ್ ಪತ್ನಿಯ 22 ಪವನ್ ಚಿನ್ನ ಅಡವಿಟ್ಟು ವ್ಯಾಪಾರ ಪ್ರಾರಂಭಿಸಿದ್ದ ಅದನ್ನು ವಾಪಸು ಕೇಳಿದಾಗ ತಲಾಖ್ ನೀಡುವುದಾಗಿ ಬೆದರಿಸುತ್ತಿದ್ದ ಬುಧವಾರ ರಾತ್ರಿ ಇದೇ ರಿತಿ ಕಿರುಕುಳ ನೀಡಿ ನಾನು ಬೇರೆ ಮದುವೆಯಾಗುತ್ತೇನೆ, ನೀನು ಮನೆಬಿಟ್ಟು ಹೋಗು ಎಂದು ಹೇಳಿ ಮೂರು ಸಲ ತಲಾಖ್ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು
HOW TO APPLY : NEET-UG COUNSELLING 2023