ಸಮುದ್ರದಲ್ಲಿ ತಡ ರಾತ್ರಿ ಮುಳುಗಿ ಯುವತಿ ಸಾವು!
– ಮಲ್ಪೆ ಸಮುದ್ರದಲ್ಲಿ ನಡೆದ ಘಟನೆ: ಇನ್ನೊಬ್ಬಳ ರಕ್ಷಣೆ
– ಅಪ್ರಾಪ್ತ ಬಾಲಕಿ ಅತ್ಯಾಚಾರ: 10 ವರ್ಷ ಜೈಲು!
– ಉಡುಪಿ: ಮೀನು ಹಿಡಿಯಲು ತೆರಳಿದ್ದ ದೋಣಿ ಪಲ್ಟಿ!
– ಕಾರ್ಕಳ: ಪೆಟ್ರೋಲ್ ಬಂಕ್ ಅಲ್ಲಿ ಕಳ್ಳತನ
– ಮಂಗಳೂರು: ಕರ್ಕಶ ಹಾರ್ನ್ ಬಸ್ ವಿರುದ್ಧ ಕೇಸ್
NAMMUR EXPRESS NEWS
ಉಡುಪಿ: ತಡರಾತ್ರಿ ಸಮುದ್ರದಲ್ಲಿ ಮುಳುಗಿ ಬಾಲಕಿ ಮೃತಪಟ್ಟಿದ್ದಾಳೆ.
ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪೈಕಿ ಒಬ್ಬಳು ಮಲ್ಪೆ ಬೀಚ್ನಲ್ಲಿ ನೀರು ಪಾಲಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಮಾನ್ಯಾ (16)ಎಂದು ಗುರುತಿಸಲಾಗಿದೆ.
ಇನ್ನೋರ್ವ ಯುವತಿಯನ್ನು ಆಪತ್ಯಾಂಧವ ಈಶ್ವರ ಮಲ್ಪೆ ಅವರು ರಕ್ಷಿಸಿದ್ದಾರೆ ರಕ್ಷಿಸಿದ ಯುವತಿಯನ್ನು ಯಶಸ್ವಿನಿ(16) ಎಂದು ಗುರುತಿಸಲಾಗಿದ್ದು, ಆಕೆಯನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು. ಮಾಹಿತಿ ಸಿಕ್ಕಿ ಧಾವಿಸಿದ ಈಶ್ವರ ಮಲ್ಪೆ ಓರ್ವ ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾನ್ಯಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾಳೆ. ಯುವತಿಯರು ಆತ್ಮಹತ್ಯೆಗೆ ಪ್ರಯತ್ನಸಿದ್ದಾರೆಯೇ ಅಥವಾ ಆಕಸ್ಮಿಕವಾಗಿ ನೀರು ಪಾಲಾಗಿದ್ದಾರೆಯೇ ಎನ್ನುವುದ ತಿಳಿದುಬಂದಿಲ್ಲ. ತಡರಾತ್ರಿ ಏಕೆ ಬಂದಿದ್ದರು ಎಂಬ ಬಗ್ಗೆ ಈಗ ಅನುಮಾನ ವ್ಯಕ್ತವಾಗುತ್ತಿದೆ.
ಅಪ್ರಾಪ್ತ ಬಾಲಕಿ ಅತ್ಯಾಚಾರ: 10 ವರ್ಷ ಜೈಲು!
ಕೋಟ: ಉಡುಪಿಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು ಆರೋಪಿಗೆ 10ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಕೋಟದ ನಿವಾಸಿ ವಿಗ್ನೇಶ್ ನಾಯ್ಕ(30) ಶಿಕ್ಷೆಗೆ ಗುರಿಯಾದ ಆರೋಪಿ. ಈತ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ 17 ಹರೆಯದ ನೊಂದ ಬಾಲಕಿಯ ಮನೆಗೆ ಬಾವಿ ಕೆಲಸಕ್ಕೆ ಬಂದಿದ್ದು, ಈ ವೇಳೆ ನೊಂದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಬಾಲಕಿಗೆ ಫೋನ್ ಮೂಲಕ ಸಂದೇಶ ಕಳುಹಿಸಿ ಪ್ರೀತಿ ಮಾಡುವಂತೆ ಒತ್ತಾಯಿಸಿ ಹಿಂಬಾಲಿಸುತ್ತಿದ್ದನು. 2018ರ ಡಿಸೆಂಬರ್ನಲ್ಲಿ ಶಾಲೆ ಬಿಟ್ಟು ಮನೆಗೆ ಒಬ್ಬಳೇ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಆರೋಪಿ ದಾರಿ ಮಧ್ಯೆ ಸರಕಾರಿ ಕಾಡಿಗೆ ಎಳೆದು ಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದನು. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ತಾಯಿ, ತಮ್ಮನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಅದರಂತೆ ನೊಂದ ಬಾಲಕಿ ಈ ವಿಚಾರವನ್ನು ಯಾರ ಬಳಿ ಕೂಡ ಹೇಳಿರಲಿಲ್ಲ. ಬಳಿಕ ತನ್ನ ಶಾಲೆಯಲ್ಲಿ 1098 ಮಕ್ಕಳ ಸಹಾಯವಾಣಿಯ ನಂಬರ್ ತಿಳಿದು ಕೊಂಡು ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು.
ಮೀನು ಹಿಡಿಯಲು ತೆರಳಿದ್ದ ದೋಣಿ ಪಲ್ಟಿ!
ಮರವಂತೆ: ಸಮುದ್ರದಲ್ಲಿ ಮೀನುಗಾರಿಕೆಗೆ ನಡೆಸಲು ತೆರಳಿದ್ದ ವೇಳೆ ದೋಣಿಯೊಂದು ಪಲ್ಟಿಯಾಗಿ ಒಂಭತ್ತು ಮಂದಿ ಮೀನುಗಾರರ ಮುಳುಗುತ್ತಿರುವ ಸಂದರ್ಭದಲ್ಲಿ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದ್ದು ಈ ಸಂದರ್ಭದಲ್ಲಿ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಅರಬ್ಬಿ ಸಮುದ್ರಕ್ಕೆ ಉಪ್ಪುಂದ ತಾರಾಪತಿಯಿಂದ ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿತ್ತು. 5 ನಾಟಿಕಲ್ ಮೈಲುಗಳ ದೂರದಲ್ಲಿ ದೋಣಿ ಪಲ್ಟಿಯಾಗಿದ್ದು, ಸಮೀಪದ ದೋಣಿಗಳಿಗೆ ಮಾಹಿತಿ ರವಾನೆ ಹಿನ್ನೆಲೆಯಲ್ಲಿ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಬಳಿಕ ದೋಣಿಯನ್ನು ಮರವಂತೆ ಬಂದರಿಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಕಳ: ಪೆಟ್ರೋಲ್ ಬಂಕಲ್ಲಿ ಕಳ್ಳತನ
ಕಾರ್ಕಳ ತಾಲೂಕು ನಿಟ್ಟೆ ಲೇಮಿನ ಕ್ರಾಸ್ ಬಳಿ ಇರುವ ಅನ್ಯ ಪೆಟ್ರೋಲ್ ಪಂಪ್ ನಲ್ಲಿ ಆಗಸ್ಟ್ 4ರಂದು ರಾತ್ರಿ ಕಳ್ಳತನ ನಡೆದಿದೆ. ಪೆಟ್ರೋಲ್ ಬಂಕ್ ಬಾಗಿಲನ್ನು ಮುರಿದು 5000ರೂ ನಗದು, 3000ರೂ ಮೌಲ್ಯದ ಡಿ,ವಿ,ಆರ್ ಮತ್ತು 15,000 ರೂ ಮೌಲ್ಯದ ಕಂಪ್ಯೂಟರ್ ಮದರ್ ಬೋರ್ಡ್ ಕಳವು ಮಾಡಿಕೊಂಡು ಹೋಗಿದ್ದಾರೆ.
ಬಸ್ಗಳಲ್ಲಿ ಕರ್ಕಶ ಹಾರ್ನ್: 24 ಪ್ರಕರಣ ದಾಖಲು
ಮಂಗಳೂರು: ವಾಹನಗಳಿಗೆ ನಿಯಮ ಮೀರಿ ಕರ್ಕಶ ಹಾರ್ನ್ ಅಳವಡಿಸುತ್ತಿದ್ದು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆಗೆ ನಡೆಸಿದ್ದು ಒಟ್ಟಾರೆ 24 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
2 ಗಂಟೆಗಳ ಕಾಲ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 24 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಖಾಸಗಿ ಬಸ್ಗಳಲ್ಲಿ ಕರ್ಕಶ ಹಾರ್ನ್ ಬಳಕೆ ಮತ್ತು ಬಸ್ನೊಳಗೆ ಧ್ವನಿವರ್ಧಕಗಳನ್ನು ಬಳಸುವುದರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ಮಂಗಳೂರು ನಗರ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆಗಿಳಿದಿದ್ದರು. ಇಂತಹ ವಿಶೇಷ ಕಾರ್ಯಾಚರಣೆ ಮತ್ತಷ್ಟು ಮುಂದುವರಿಸಲಾಗುವುದು’ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023