ಮೈಸೂರು: ಮಾಜಿ ಸಚಿವ ವಿಶ್ವನಾಥ್ ಪುತ್ರನಿಗೆ ವಂಚನೆ!
– ಬ್ಯಾಂಕ್ ಖಾತೆಯಿಂದ 1.99 ಲಕ್ಷ ರೂ. ದೋಚಿದ ಸೈಬರ್ ಕಳ್ಳರು
NAMMUR EXPRESS NEWS
ಮೈಸೂರು: ಆನ್ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಣ ವಂಚಿಸಲು ಸೈಬರ್ ಖದೀಮರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ನಡುವೆ ಎಂಎಲ್ಸಿ ವಿಶ್ವನಾಥ್ ಪುತ್ರನಿಗೆ 1.99 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ. ನಕಲಿ ಬ್ಯಾಂಕ್ ಕಸ್ಟಮರ್ ಕೇರ್ಗೆ ಕಾಲ್ ಮಾಡಿದ್ದರಿಂದ ಅಡಗೂರು ಎಚ್.ವಿಶ್ವನಾಥ್ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ ಅವರ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿ ದೊಡ್ಡ ಮೊತ್ತದ ಹಣವನ್ನು ಎಗರಿಸಿದ್ದಾರೆ.
ಬೆಂಗಳೂರಿನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಅಮಿತ್ ದೇವರಹಟ್ಟಿ ಮುಂದಾಗಿದ್ದಾರೆ. ಹಣ ಬಾರದೆ ಇದ್ದರೂ ಬ್ಯಾಂಕ್ನಿಂದ ಡೆಬಿಟೆಡ್ ಎಂದು ಮೆಸೇಜ್ ಬಂದಿದೆ. ಇದನ್ನು ಕಂಡು ಗೂಗಲ್ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ಕಸ್ಟಮರ್ ಕೇರ್ ನಂಬರ್ ನಕಲಿ ಎಂದು ಗೊತ್ತಿಲ್ಲದೆ ಕಾಲ್ ಮಾಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ. ಖಾತೆಯಿಂದ 1.99 ಲಕ್ಷ ರೂ.ಗಳನ್ನು ಸೈಬರ್ ಕಳ್ಳರು ಲಪಟಾಯಿಸಿದ್ದಾರೆ. ಈ ಸಂಬಂಧ ಮೈಸೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023