ಸಿಐಡಿಗೆ ಉಡುಪಿ ಕಾಲೇಜಿನ ವೀಡಿಯೋ ಕೇಸ್!
– ಉಡುಪಿಗೆ ಬರಲಿದೆ ತನಿಖಾ ತಂಡ: ಏನಾಗುತ್ತೆ ಪ್ರಕರಣ
– ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಅಗತ್ಯ ಇತ್ತೇ?
– ಮಂಗಳೂರಲ್ಲಿ 170 ಮಂದಿ ಡಿ ಎಲ್ ರದ್ದು
NAMMUR EXPRESS NEWS
ಉಡುಪಿ: ಉಡುಪಿ ಖಾಸಗಿ ಕಾಲೇಜಿನ ವೀಡಿಯೋ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರವಾಗಿದ್ದು ಇದೀಗ ಸಿಐಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಉಡುಪಿಯ ಖಾಸಗಿ ಕಾಲೇಜುವೊಂದರ ವಿಡಿಯೋ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಜುಲೈ 18 ರಂದು ನಡೆದಿದ್ದ ವಿಡಿಯೋ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಎಬಿವಿಪಿ ಬಿಜೆಪಿ ಸೇರಿದಂತೆ ಅನೇಕ ಸಂಘಟನೆಗಳು ಈ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದು ಕರಾವಳಿ ಶಾಸಕರ ನಿಯೋಗ ಕೂಡ ರಾಜ್ಯಪಾಲರ ಭೇಟಿ ಮಾಡಿ ಪ್ರಕರಣದ ತನಿಖೆ ಎಸ್ಐಟಿಗೆ ಮಾಡಬೇಕುಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಿತ್ತು.
ಸಿಐಡಿ ತಂಡ ಮಂಗಳವಾರ ಉಡುಪಿಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಪ್ರಕರಣ ಹಲವು ಆಯಾಮದಲ್ಲಿ ತನಿಖೆ ಆಗಲಿದೆ ಎನ್ನಲಾಗಿದೆ. ಉಡುಪಿ ಜಿಲ್ಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಅಗತ್ಯ ಇತ್ತೇ?
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿಯೇ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ರಾಜ್ಯ ಸರಕಾರ ಮಾಡುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ರಾಜ್ಯದಾದ್ಯಂತ ಈ ಪ್ರಕರಣದ ಬಗ್ಗೆ ತೀವ್ರ ಜನಾಕ್ರೋಶ, ಪ್ರತಿಭಟನೆಗೆ ಮಣಿದ ಸರಕಾರ ಈ ಹಿಂದೆ ತನಿಖಾಧಿಕಾರಿಯನ್ನು ಬದಲಾಯಿಸಿದ ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿ ಪ್ರಕರಣದ ಸಂತ್ರಸ್ಥ ಹಾಗೂ ಆರೋಪಿ ವಿದ್ಯಾರ್ಥಿನಿಯರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ಪಡೆಯುವ ಮೂಲಕ ಹಲವು ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು. ಮಾತ್ರವಲ್ಲದೇ ಆರೋಪಿ ವಿದ್ಯಾರ್ಥಿನಿಯ ತಂದೆ ನಿಷೇಧಿತ ಪಿಎಫ್ ಐ ಸಂಘಟನೆಯ ಸಕ್ರಿಯ ಸದಸ್ಯ ಎಂಬ ಮಾಹಿತಿಗಳು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಜಿಲ್ಲಾ ಪೊಲೀಸರ ತನಿಖೆ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ರಾಜ್ಯ ಸರಕಾರದ ನಡೆ ಮತ್ತೊಮ್ಮೆ ಗೊಂದಲ ಸೃಷ್ಟಿಸಿದೆ.
ಪ್ರಕರಣದ ಆರಂಭದ ದಿನದಿಂದಲೂ ಪೊಲೀಸ್ ಇಲಾಖೆಗೆ ಪ್ರತಿ ಹಂತದಲ್ಲೂ ಪ್ರಭಾವ ಬೀರುವ ಯತ್ನ ಮಾಡಿದ್ದ ಸರಕಾರ ಇದೀಗ ಆರೋಪಿಗಳನ್ನು ರಕ್ಷಿಸುವ ಸಲುವಾಗಿಯೇ ಸಿಐಡಿಗೆ ವರ್ಗಾಯಿಸಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಮಂಗಳೂರಲ್ಲಿ 170 ಮಂದಿ ಡಿ ಎಲ್ ರದ್ದು
ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಈಗ ಡಿ ಎಲ್ ರದ್ದು ಶಿಕ್ಷೆ ಆಗಲಿದೆ. ಸುಮಾರು 170 ಮಂದಿಯ ಡಿಎಲ್ ರದ್ದು ಮಾಡಲಾಗಿದೆ. 24 ಅಪಘಾತ ಪ್ರಕರಣಗಳು, 12 ಅತಿಯಾದ ವೇಗದ ಪ್ರಕರಣಗಳು, 11 ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ವಿಚಾರ, 95 ಹೆಲ್ಮಟ್ ಇಲ್ಲದೆ ಬೈಕ್ ಸವಾರಿ ನಡೆಸಿದ ಪ್ರಕರಣಗಳು, 13 ಸೀಟ್ ಬೆಲ್ಟ್ ಧರಿಸದೇ ಚಾಲನೆ, 7 ರೆಡ್ ಸಿಗ್ನಲ್ ಜಂಪ್, 5 ಚಾಲನೆ ಸಂದರ್ಭ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಲ್ ರದ್ದುಗೊಳಿಸಲಾಗಿದೆ. ಇನ್ನು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ 371 ವಾಹನಗಳ ವಿರುದ್ಧ ಕೇಸ್ ದಾಖಲಾಗಿದೆ. ಕರ್ಕಶ ಹಾರ್ನ್ ಬಳಕೆ 31, ಟಿಂಟ್ ಬಳಕೆ 23 ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023