ಪ್ರತಿ ಪಕ್ಷಗಳಿಗೆ ನನ್ನ ಮೇಲೆ ಅನುಮಾನ ಜಾಸ್ತಿ : ಯು. ಟಿ. ಖಾದರ್
– ಸಿಂದಗಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹೇಳಿಕೆ
– ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಿಂದ ವಿಧಾನ ಸಭಾಧ್ಯಕ್ಷ ಯು. ಟಿ.ಕೆ ಗೆ ಸನ್ಮಾನ
– ಸಿಂದಗಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹೇಳಿಕೆ
– ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಿಂದ ವಿಧಾನ ಸಭಾಧ್ಯಕ್ಷ ಯು. ಟಿ.ಕೆ ಗೆ ಸನ್ಮಾನ
NAMMUR EXPRESS SINDAGI : ನಾನು ಪ್ರತಿ ಪಕ್ಷಗಳ ಮಿತ್ರ ವಿಧಾನ ಸಭೆಯಲ್ಲಿ ಎರಡೂ ಪಕ್ಷಗಳಿಗೆ ಸಮಾನ ಅವಕಾಶ ಕೊಟ್ಟು ನನ್ನ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಿರುವೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಂದ ಹೆಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿ ಪಕ್ಷಗಳು ಆಡಳಿತ ಪಕ್ಷದ ಮೇಲೆ ವಿರೋಧ ಮಾಡುವದರ ಜೊತೆಗೆ ನನ್ನ ಮೇಲೆಯೂ ಆರೋಪ ಹೋರಿಸುತ್ತಾರೆ. ನನ್ನ ಮೇಲೆ ಪ್ರತಿ ಪಕ್ಷಗಳಿಗೆ ಅನುಮಾನ ಜಾಸ್ತಿ ಎಂದು ಹೇಳಿದರು.
ಸಂವಿಧಾನ ಗಟ್ಟಿಯಾದರೆ ಭಾರತ ಗಟ್ಟಿಯಾಗುತ್ತದೆ. ನಮ್ಮ ದೇಶ ವಿದೇಶಗಳಿಗಿಂತ ಭಿನ್ನ ನಮ್ಮಲ್ಲಿ ಸಂವಿಧಾನವು ವಾಸ್ತವತೆಯ ಆಶಯವಾಗಿದೆ. ಸಹೋದರತ್ವದ ಮುಖೇನ ಸಂವಿಧಾನದ ಉಳಿಸಬೇಕಾಗಿದೆ. ನಮ್ಮಲ್ಲಿರುವ ಭಾತೃತ್ವದ ಮೂಲಕ ಭಾರತ ಕನಸನ್ನು ನನಸು ಮಾಡಿ ವಿಶ್ವಕ್ಕೆ ಮಾದರಿ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ನಾವುಗಳು ಕಾರ್ಯ ನಿರ್ವಹಿಸಬೇಕಿದೆ ಎಂದರು. ಶಾಸಕ, ತಾಶಿಪ್ರ ಮಂಡಳಿ ಅಧ್ಯಕ್ಷ ಅಶೋಕ ಮನಗೂಳಿ ಮಾತನಾಡಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಹೆಲ್ತ್ಕೇರ್ ಎಕ್ಸಲೆನ್ಸ್-೨೦೨೩ರ ಗೌರವಕ್ಕೆ ಪಾತ್ರರಾದ ವೈದ್ಯ ಡಾ.ಶಾಂತವೀರ ಮನಗೂಳಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಇದ್ದರು.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023