ಚಿತ್ರಕವಿ ಕವಿರಾಜ್ ಅವರಿಗೆ ಜನ್ಮ ದಿನ!
– 2000 ಹಾಡು ಬರೆದ ಕನ್ನಡ ಸಿನಿಮಾ ರಂಗದ ಮೇರು ಪ್ರತಿಭೆ
– ತೀರ್ಥಹಳ್ಳಿಯ ಹೆಮ್ಮೆಯ ಕಲಾವಿದನಿಗೆ ಶುಭಾಶಯಗಳು
NAMMUR EXPRESS NEWS
ಬೆಂಗಳೂರು/ತೀರ್ಥಹಳ್ಳಿ: ಕನ್ನಡ ಸಿನಿಮಾ ಗೀತ ರಚನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸಾಹಿತಿಗಳಲ್ಲಿ ಕವಿರಾಜ್ ಅವರ ಹೆಸರು ಟಾಪ್. ತಮ್ಮ ಇಂಪಾದ ಸಾಹಿತ್ಯದ ಮೂಲಕ ಕನ್ನಡಿಗರ ಹೃದಯ ಗೆದ್ದ ಚಿತ್ರ ಸಾಹಿತಿ. ತೀರ್ಥಹಳ್ಳಿ ಮೂಲದ ಕವಿರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಜತೆಗೆ ಸಿನಿಮಾ ಇಂಡಸ್ಟ್ರಿಗೆ ಬಂದ ಕವಿರಾಜ್ ಯುವ ಜನತೆಯ ಮನಸ್ಸು ಮುಟ್ಟುವಂತಹ ಹಾಡುಗಳನ್ನು ಬರೆಯುವುದರಲ್ಲಿ ಮೊದಲಿಗರು. ಹಾಡುಗಳನ್ನು ಬರೆಯುವುದರ ಜೊತೆಯಲ್ಲಿ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಕವಿರಾಜ್ ಬಹುಬೇಡಿಕೆಯ ಚಿತ್ರ ಸಾಹಿತಿ.
ಸಿನಿಮಾಕ್ಕೂ ಸೈ… ಸಮಾಜ ಸೇವೆಗೂ ಸೈ!
ಕನ್ನಡ ಸಿನಿಮಾಗಳಿಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಬರೆದು ಕನ್ನಡ ಸಿನಿಮಾದ ಪ್ರಸಿದ್ಧ ಚಿತ್ರ ಸಾಹಿತಿಯಾಗಿರುವ ಬುಲ್ ಬುಲ್ ಚಿತ್ರದ ನಿರ್ಮಾಪಕರು, ದರ್ಶನ್ ಅವರ ಆಪ್ತ ಬಳಗದಲೊಬ್ಬರು, ನಿರ್ದೇಶಕರಾಗಿ ಕೂಡ ಕೆಲಸ ಮಾಡಿದಂತವರು, ತೀರ್ಥಹಳ್ಳಿಯ ಹೆಮ್ಮೆ, ಉಸಿರು ಎಂಬ ಸಂಸ್ಥೆ ಮೂಲಕ ಅದೆಷ್ಟೋ ಜನರಿಗೆ ಉಸಿರುಕೊಟ್ಟವರು, ಸ್ನೇಹ ಜೀವಿ ಕವಿರಾಜ್.
ಕನ್ನಡ ಪ್ರೇಮಕ್ಕೆ ಕಂಕಣ!
ಕನ್ನಡ ಭಾಷೆ ಎಲ್ಲರ ಬಾಯಲ್ಲೂ ಬರಬೇಕು ಎಂದು ಪ್ರತಿ ನಿತ್ಯ ಹೋರಾಟ ಮಾಡುತ್ತಾರೆ. ಅದಕ್ಕಗಿಯೇ ಸಮಯ ಮೀಸಲಿಟ್ಟು ‘ಕಂಕಣ’ ಎನ್ನುವ ತಂಡ ಕಟ್ಟಿಕೊಂಡು ಬೆಂಗಳೂರಿನ ಮಾಲ್ ಗಳಲ್ಲಿ ಐಟಿ ಬಿಟಿ ಕಂಪನಿಗಳ ಮುಂದೆ ನಿಂತು ವಿಭಿನ್ನ ರೀತಿಯಲ್ಲಿ ಭಾಷೆಯ ಮೇಲಿರುವ ತಮ್ಮ ಅಭಿಮಾನ ಹಾಗೂ ಗೌರವವನ್ನು ವ್ಯಕ್ತಪಡಿಸುತ್ತಾರೆ. ಸಿನಿಮಾ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಕವಿರಾಜ್ ಕನ್ನಡ ಚಿತ್ರರಂಗದ ಗೀತೆ ರಚನೆಕಾರರಲ್ಲೊಬ್ಬರು. 2003ರಲ್ಲಿ ಪ್ರೇಮ್ ನಿರ್ದೇಶನದ ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರದ ‘ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ’ ಗೀತೆಯು ಕವಿರಾಜ್ ಅವರ ಮೊದಲ ಚಿತ್ರಗೀತೆ. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ತಮ್ಮ ಸಾಹಿತ್ಯದ ಪಯಣದ ಜತೆ ಸಿನಿಮಾ ರಂಗದಲ್ಲಿ ನೂರಾರು ಪ್ರಶಸ್ತಿ ಗಳಿಸಿದ್ದಾರೆ. ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ.
ಹ್ಯಾಪಿ ಬರ್ತ್ಡೇ ಕವಿರಾಜ್…
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023