– ಕಾರ್ಕಳ: ಹಣ ದೋಚಿದ ನಕಲಿ ಸ್ವಾಮಿಗಳು!
– ಕಾರು ಬೈಕ್ ಡಿಕ್ಕಿ: ಪೊಲೀಸ್ ಗೆ ಗಾಯ
– ವರಂಗ: ಮರಕ್ಕೆ ಗುದ್ದಿದ ಸ್ಕೂಟಿ: ಸ್ಥಳದಲ್ಲೇ ಸಾವು
– ತಲೆಮರೆಸಿಕೊಂಡ ಆರೋಪಿಯ ಬಂಧನ
– ಕರಾವಳಿಯಲ್ಲಿ ಮತ್ತೊಮ್ಮೆ ಎನ್ಐಎ ದಾಳಿ!
– ಹೃದಯಾಘಾತವಾಗಿ ವಿದ್ಯಾರ್ಥಿನಿ ನಿಧನ
– ನಲ್ಲೂರಿನಲ್ಲಿ ದೇವಿ ವಿಗ್ರಹ ಪತ್ತೆ
NAMMUR EXPRESS NEWS
ದಾರಿ ಕೇಳುವ ನೆಪದಲ್ಲಿ ಸ್ವಾಮೀಜಿ ವೇಷಧಾರಿಗಳು ಹಣ ದೋಚಿದ ಘಟನೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಭಾನುವಾರ ನಡೆದಿದೆ. ಕೆ.ಎಸ್ ದಿನೇಶ್ ಆಚಾರ್ಯ ಎಂಬವರು ಆ.13ರ ಬೆಳಿಗ್ಗೆ ಬೈಲೂರು ಪೇಟೆಯಲ್ಲಿದ್ದ ಸಂದರ್ಭ ಇಂಡಿಕಾ ಕಾರಿನಲ್ಲಿ ಬಂದ ಇಬ್ಬರು ಸ್ವಾಮೀಜಿ ವೇಷಧಾರಿಗಳು ಸುಬ್ರಹ್ಮಣ್ಯ ಕಡೆಗೆ ದಾರಿ ಯಾವುದೆಂದು ಕೇಳಿದ್ದರು. ತಕ್ಷಣವೇ ಸ್ವಾಮೀಜಿಗಳೆಂಬ ಭಾವನೆಯಲ್ಲಿ ಸುಬ್ರಹ್ಮಣ್ಯ ಕಡೆಗೆ ದಾರಿ ತೋರಿಸಲು ಅವರ ಬಳಿ ದಿನೇಶ್ ತೆರಳಿದ್ದು, ಈ ವೇಳೆ ಸ್ವಾಮೀಜಿ ವೇಷಧಾರಿಗಳು ದಿನೇಶರ ತಲೆಗೆ ಕೈಯಿಟ್ಟು ಕೈಯಲ್ಲಿ ರುದ್ರಾಕ್ಷಿ ಮಣಿಕೊಟ್ಟು ಅದರ ಸುವಾಸನೆ ಪಡೆಯಲು ತಿಳಿಸಿದರು, ಅವರು ಹೇಳಿದಂತೆ ಮಾಡಿದ ದಿನೇಶ್ ಬಳಿಕ ಮಂಪರಿಗೆ ಒಳಗಾಗಿ ತನ್ನಲ್ಲಿದ್ದ ರೂ. 5 ಸಾವಿರವನ್ನೂ ಆ ಅಸಾಮಿ ಸ್ವಾಮೀಜಿಗಳಿಗೆ ನೀಡಿರುತ್ತಾರೆ. ಒಂದೈದು ನಿಮಿಷದ ಬಳಿಕ ವಾಸ್ತವ ವಿಚಾರ ದಿನೇಶ್ ಅವರ ಅರಿವಿಗೆ ಬಂದಾಗ ಕಳ್ಳ ಸ್ವಾಮೀಜಿಗಳು ಅಲ್ಲಿಂದ ಕಾರು ಸಹಿತ ಪರಾರಿಯಾಗಿರುತ್ತಾರೆ. ಇಬ್ಬರು ಸ್ವಾಮೀಜಿ ವೇಷಧಾರಿಗಳೊಂದಿಗೆ ಓರ್ವ ಕಾರು ಚಾಲಕ ಇದ್ದ ಎಂದು ಹೇಳಲಾಗಿದೆ.
ಹಿರ್ಗಾನದಲ್ಲಿ ಬೈಕ್ ಕಾರು ಡಿಕ್ಕಿ – ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ಗೆ ಗಾಯ :
ಕಾರ್ಕಳ ಪಟ್ಟಣ ಸಮೀಪದ ಹಿರ್ಗಾನದಲ್ಲಿ ಬೈಕ್ ಹಾಗೂ ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರ ಹೆಬ್ರಿ ಠಾಣೆಯ ಪೊಲೀಸ್ ಮನೋಜ್ ಗಾಯಗೊಂಡಿರುತ್ತಾರೆ. ಹೊಸ್ಕಾರಿನ ಕಾರ್ಯಕ್ರಮದ ಬಂದೋಬಸ್ತಿಗಾಗಿ ಪೊಲೀಸರು ಹೆಬ್ರಿಯಿಂದ ಬೈಕ್ ನಲ್ಲಿ ಬರುತ್ತಿದ್ದಂತೆ ಹೀರ್ಗಾನ ಎಂಬಲ್ಲಿ ಕಾರಿಗೆ ಡಿಕ್ಕಿಯಾಗಿದೆ. ಗಾಯಾಳು ಮನೋಜ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಕ್ಕೆ ಗುದ್ದಿದ ಸ್ಕೂಟಿ – ಸವಾರ ಸ್ಥಳದಲ್ಲೇ ಸಾವು
ಸ್ಕೂಟಿಯೊಂದು ಮರಕ್ಕೆ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ವರಂಗ ಪೇಟೆಯಲ್ಲಿ ಭಾನುವಾರ ಸಂಭವಿಸಿದೆ. ಸೂರಿಮಣ್ಣು ಪ್ರಭಾಚಂದ್ರ ಆಚಾರ್ಯ (50) ಎಂಬವರೇ ದಾರುಣವಾಗಿ ಮೃತಪಟ್ಟ ವ್ಯಕ್ತಿ. ಪ್ರಭಾಚಂದ್ರ ಅವರು ಮುನಿಯಾಲಿನಿಂದ ಸೂರಿಮಣ್ಣು ಕಡೆಗೆ ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಅವಿವಾಹಿತರಾಗಿರುವ ಮೃತರು ಓರ್ವ ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ!
ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುದು ಗ್ರಾಮದ ಕುಮ್ಮೆಲು ನಿವಾಸಿ ಕೃಷ್ಣ(೪೧) ಬಂಧಿತ ಆರೋಪಿ. ಕಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ ಈತ ಅ ಬಳಿಕ ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನನ್ನು ಪೊಲೀಸ್ ನಿರೀಕ್ಷಕ ಎಚ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿಗಳಾದ ಗಣೇಶ್ ಪ್ರಸಾದ್, ರಾಧಾಕೃಷ್ಣನ್, ಯೋಗೇಶ್ ಡಿ.ಎಲ್, ಹಾಗೂ ವಿಜಯ್ ರವರು ಮಾಹಿತಿ ಸಂಗ್ರಹಿಸಿ ಬಡಗ ಮಿಜಾರು ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು.
ಕರಾವಳಿಯಲ್ಲಿ ಮತ್ತೊಮ್ಮೆ ಎನ್ಐಎ ದಾಳಿ
ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಸಂಬಂಧಿಸಿದ ವ್ಯಕ್ತಿಗಳ ಮನೆ ಹಾಗೂ ಇನ್ನಿತರ ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಿ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದೆ. ಐದು ರಜ್ಯಗಳಲ್ಲಿ ನಡೆದ ಎನ್ಐಎ ಕಾರ್ಯಾಚರಣೆ ಅಂಗವಾಗಿ ದಕ್ಷಿಣ ಕನ್ನಡದಲ್ಲೂ ದಾಳಿ ನಡೆಸಲಾಗಿತ್ತು. ಬಂಟ್ವಾಳದ ನಂದಾವರ ಸಮೀಪ ಬೋಗೋಡಿಯಲ್ಲಿ ಉಬ್ರಾಹಿಂ ಮತ್ತು ಕುಂಪನಮಜಲು ಎಂಬಲ್ಲಿ ಮುಷ್ಕಾಕ್ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇದಲ್ಲದೆ ಉಲ್ಲಾಳ ಸೇರಿ ಇನ್ನೂ ಮೂರು ಕಡೆ
ಶೋಧ ಕಾರ್ಯಾಚರಣೆ ಕೈಗೊಂಡಿದೆ. ಜನರಲ್ಲಿ ಕೋಮು ಭಾವನೆಗಳನ್ನು ಹುಟ್ಟುಹಾಕುವ ಮೂಲಕ ಶಾಂತಿ ಕದಡುವ ಮತ್ತು ದೇಶವನ್ನು ಅಸ್ಥಿರಗೊಳಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಿತೂರಿಯನ್ನು ವಿಫಲಗೊಳಿಸುವ ಸಲುವಾಗಿ ಎನ್ಐಎ ಐದು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಪಶ್ಚಿಮ ಬಂಗಾಳ ಮತ್ತು ಬಿಹಾರದ 14 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಹಲವಾರು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ದಾಳಿ ನಡೆದಿದೆ.
ಹೃದಯಾಘಾತವಾಗಿ ವಿದ್ಯಾರ್ಥಿನಿ ನಿಧನ
ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತವಾಗಿ ಕಾರ್ಯಕ್ರಮ ಕಳೆದ ದಿನ(ಆ.13) ನಡೆದಿದೆ. ಬೆಳ್ತಂಗಡಿ ತಾಲೂಕಿನ ನರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ಸರೋಜ ದಂಪತಿಗಳ ಮಗಳು ಸುಮಾ(19) ಮೃತ ಯುವತಿ ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ(19) ಮೃತ ಯುವತಿ ಈಕೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಆ.9ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ. ಬಳಿಕ ಆ.13 ರಂದು ಅನಾರೋಗ್ಯ ಹೆಚ್ಚಾದ ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಬಿಪಿಯಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ.
ನಲ್ಲೂರಿನಲ್ಲಿ ದೇವಿಯ ವಿಗ್ರಹ ಪತ್ತೆ!
ಕಾರ್ಕಳದ ನಲ್ಲೂರು ಕ್ರಾಸ್ನ ರಸ್ತೆ ಬದಿಯಲ್ಲಿ ದೇವಿಯ ವಿಗ್ರಹವೊಂದು ಆ. 14 ರಂದು ಬೆಳಿಗ್ಗೆ ಪತ್ತೆಯಾಗಿದೆ. ಶಿವ ಘಾಮಿಣಿ ದೇವಿಯ ವಿಗ್ರಹ ಎನ್ನಲಾಗುತಿದ್ದು, ಈ ಕಲ್ಲಿನ ಮೂರ್ತಿ ಸುಮಾರು 2.5 ಇಂಚು ಉದ್ದವಿದೆ. ಸ್ಥಳೀಯ ಶಿಲ್ಪಿಗಳ ಪ್ರಕಾರ ಈ ವಿಗ್ರಹವು ತಮಿಳುನಾಡಿನ ಶಿಲ್ಪ ಶೈಲಿಯಲ್ಲಿದೆ. ಸುಮಾರು 60-70 ವರ್ಷಗಳ ಹಿಂದೆ ಕೆತ್ತಲ್ಪಟ್ಟಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಿಗ್ರಹ ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ, ಗಂಧದ ಲೇಪನವಿದ್ದು, ನಿತ್ಯ ಪೂಜಿಸಲ್ಪಡುತ್ತಿದ್ದ ವಿಗ್ರಹ ಎನ್ನಲಾಗುತ್ತಿದೆ.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023