ಬಿಯರ್ ಕುಡಿಯೋರಿಗೆ ಶಾಕಿಂಗ್ ಸುದ್ದಿ!
– 25 ಕೋಟಿ ಮೌಲ್ಯದ ಮದ್ಯ ವಶ: ಬಿಯರ್ನಲ್ಲಿ ಅಪಾಯಕಾರಿ ಅಂಶ
– ರಾಜ್ಯದ ಹಲವೆಡೆ ಮದ್ಯದ ಬಾಕ್ಸ್ ಸೀಜ್
NAMMUR EXPRESS NEWS
ಮೈಸೂರು: ನಂಜನಗೂಡಿನಲ್ಲಿರುವ ಕಂಪನಿ ತಯಾರಿಸಿದ್ದ ಬಿಯರ್ನಲ್ಲಿ ಸೆಡಿಮೆಂಟ್ ಎಂಬ ವಿಶಕಾರಕ ಅಂಶ ಕಂಡುಬಂದಿದೆ. ಕಂಪನಿಯ ಹಾಗೂ ಅಲ್ಟಾಲ್ಯಾಗರ್ ಈ ಅಂಶ ಗೋಚರಿಸಿದೆ. ಪ್ರಸಿದ್ದ ಬಿಯರ್ ಬ್ರಾಂಡ್ ವೊಂದರಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ. ಹೀಗಾಗಿ, 25 ಕೋಟಿ ರೂಪಾಯಿ ಮೌಲ್ಯದ 78,678 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿರುವ ಮೈಸೂರು ಅಬಕಾರಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯ ಉಪ ಆಯುಕ್ತ ಎ.ರವಿಶಂಕರ್ ಪ್ರತಿಕ್ರಿಯಿಸಿ,“ಕಂಪನಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ಹೌಸ್ ಕೆಮಿಸ್ಟ್ ಅವರು ಕೊಟ್ಟಿರುವ ವರದಿಯಲ್ಲಿ ಈ ಬಿಯರ್ ಅನ್ನು ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಬಂದಿರುವ ವರದಿ ಆದರಿಸಿ ಕ್ರಮ
ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.
ಮಾಹಿತಿ ತಿಳಿದ ಕೂಡಲೇ ಬಿಯರ್ ಮಾದರಿಯನ್ನು ಕೆಮಿಕಲ್ ಲ್ಯಾಬ್ಗೆ ಕಳುಹಿಸಲಾಗಿತ್ತು. ಈ ಕುರಿತು (2-08-2023ರಂದು) ಕೆಮಿಕಲ್ ವರದಿ ಬಂದಿದ್ದು ‘ಅನ್ಫಿಟ್ ಫಾರ್ ಹ್ಯುಮನ್ ಕನ್ಸಂಪ್ಪನ್’ ಎಂದು ತಿಳಿಸಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಅಷ್ಟೊತ್ತಿಗೆ ಎಲ್ಲ ಬಾಕ್ಸ್ಗಳನ್ನೂ ತಡೆಹಿಡಿಯಲಾಗಿದೆ. ಕೆಲವು ಡಿಪೋದಿಂದ ಅಂಗಡಿಗಳಿಗೂ ವಿತರಣೆಯಾಗಿತ್ತು. ರಿಟೈಲ್ನಲ್ಲೂ ಮಾರಾಟವಾಗದಂತೆ ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಕಂಪನಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಎಣ್ಣೆ ಕೊಡಿಯೋರ್ ಎಚ್ಚರ!
ಇತ್ತೀಚಿಗೆ ಅನೇಕ ಮದ್ಯದ ಬಾಟಲಿಗಳಲ್ಲಿ ಕೆಮಿಕಲ್ ಪತ್ತೆಯಾಗುತ್ತಿದೆ. ಅಲ್ಲದೆ ಮದ್ಯದ ಅಕ್ರಮ, ದಂಧೆ ಎಲ್ಲಿಲ್ಲದೇ ಸಾಗುತ್ತಿದೆ. ಹೀಗಾಗಿ ಎಣ್ಣೆ ಕುಡಿಯೋರು ಎಚ್ಚರ ವಹಿಸಬೇಕಿದೆ.