ಹೊಸ ವರ್ಷಕ್ಕೆ ಹಾಸನ ಏರ್ ಪೋರ್ಟ್ ಟೇಕಾಫ್!
– ವಿಮಾನ ನಿಲ್ದಾಣ ಕಾಮಗಾರಿಗೆ ವೇಗ
– ಡಿಸೆಂಬರ್ನಿಂದ ವಿಮಾನ ಹಾರಾಟ ಆರಂಭ?
NAMMUR EXPRESS NEWS
ಹಾಸನ: ಹಾಸನ ನಗರದ ಹೊರವಲಯದ ಬೂವನಹಳ್ಳಿಯಲ್ಲಿ 200 ಕೋಟಿ ರೂ.ಗೂ ಅಧಿಕ ವೆಚ್ಚದ ವಿಮಾನ ನಿಲ್ದಾಣ ಕಾಮಗಾರಿ 2023ರ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ವಿಮಾನ ಹಾರಾಟ ಪ್ರಾರಂಭವಾಗುವ ಸಾಧ್ಯತೆ ಇದೆ.
ಈಗಾಗಲೇ ಕಾಮಗಾರಿಗೆ ವೇಗ ಸಿಕ್ಕಿದ್ದು ಹೊಸ ವರ್ಷಕ್ಕೆ ಆರಂಭ ಆಗಲಿದೆ ಎಂದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಬೂವನಹಳ್ಳಿಯಲ್ಲಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಆದಷ್ಟು ಬೇಗ ವಿಮಾನ ನಿಲ್ದಾಣ ಸೇವೆಗೆ ಸಿಗಲಿದೆ ಎಂದರು.
ಹಾಸನದಿಂದ 6 ಕಿಮಿ ದೂರದಲ್ಲಿರುವ ಈ ವಿಮಾನ ನಿಲ್ದಾಣ ಉಡಾನ್ ಯೋಜನೆಯಡಿ 175 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ರಾಜ್ಯದಲ್ಲಿ ಶಿವಮೊಗ್ಗ, ಕಲಬುರಗಿ, ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿವೆ. ಇದೀಗ ಹಾಸನದಲ್ಲೂ ವಿಮಾನ ನಿಲ್ದಾಣ ಆರಂಭ ಆಗಿರುವುದು ಈ ಭಾಗದ ಜನತೆಗೆ ಅನುಕೂಲ ಆಗಲಿದೆ.