ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?
– ತಪ್ಪಿದ ದುರಂತ: ದೇವರು ದೊಡ್ಡವನು!
– ವಿನಾಯಕ ಚಿತ್ರಮಂದಿರ ದಿಢೀರ್ ಕುಸಿತ
– 20ಕ್ಕೂ ಹೆಚ್ಚು ಮಂದಿ ಅಪಾಯದಿಂದ ಪಾರು
– ಸಿನಿಮಾ ಗಳಿಕೆ ಇಲ್ಲ…ನಷ್ಟದ ಮೇಲೆ ನಷ್ಟ
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ವಿನಾಯಕ ಥಿಯೇಟರ್ ಮುಂಭಾಗ ಕುಸಿದಿದ್ದು 20ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾಗಿ 8ಕ್ಕೂ ಹೆಚ್ಚು ಬೈಕ್ ಹಾನಿಯಾದ ಘಟನೆ ಮಂಗಳವಾರ ತಡ ರಾತ್ರಿ 10 ಗಂಟೆ ವೇಳೆಗೆ ನಡೆದಿದ್ದು, ಈ ವೇಳೆ ಜೈಲರ್ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಒಂದು ವೇಳೆ ಟಿಕೆಟ್ ತೆಗೆಯುವ ಸಮಯ ಆಗಿದ್ದರೆ ದುರಂತ ನಡೆದೇ ಬಿಡುತ್ತಿತ್ತು. ಆದರೆ ದೇವರು ದೊಡ್ಡವನು.. ಎಲ್ಲವೂ ತಪ್ಪಿದೆ. ಚಿತ್ರಮಂದಿರದ ಮುಂಭಾಗದ ಕಟ್ಟಡ ಕುಸಿದು ಅಲ್ಲಿ ನಿಲುಗಡೆ ಮಾಡಿದ ಬೈಕುಗಳ ಮೇಲೆ ಬಿದ್ದು ಕಟ್ಟಡದ ಅಡಿ ಬೈಕ್ ಸಿಲುಕಿವೆ. ಅದೃಷ್ಟವಶಾದ್ ಆ ಸಂದರ್ಭದಲ್ಲಿ ಯಾರು ಇಲ್ಲದ ಕಾರಣ ದುರಂತ ತಪ್ಪಿದೆ.
ತೀರ್ಥಹಳ್ಳಿಯ ಪ್ರಸಿದ್ಧ ಸ್ಥಳ ಇದಾಗಿದ್ದು, ವಿನಾಯಕ ಚಿತ್ರಮಂದಿರದಲ್ಲಿ ಜೈಲರ್ ಚಲನಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಆಗಮಿಸಿದ್ದಾರೆ.
ನೋಡಲು ಜನವೋ ಜನ!
ಸುದ್ದಿ ತಿಳಿಯುತ್ತಿದ್ದಂತೆ ಜನ ಗುಂಪು ಗುಂಪಾಗಿ ಸೇರಿದ್ದಾರೆ. ಎಲ್ಲರೂ ಗಾಬರಿಯಿಂದ ಆಗಮಿಸಿದ್ದಾರೆ. ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.
ನಷ್ಟದ ಹಾದಿಯಲ್ಲಿ ಕಾಂತಾರಾ ಕೈ ಹಿಡಿದಿತ್ತು!
ತೀರ್ಥಹಳ್ಳಿಯ ಎರಡು ಚಿತ್ರಮಂದಿರಗಳು ಅಷ್ಟೇನೂ ಲಾಭದಾಯಕವಾಗಿ ನಡೆಯುತ್ತಿಲ್ಲ. ಒಂದು ಕಡೆ ಒಳ್ಳೆ ಸಿನಿಮಾ ಕೊರತೆ, ಪೈರಸಿ ಹಾವಳಿ, ಸಿನಿಪ್ರಿಯರ ಸಂಖ್ಯೆ ಕಡಿಮೆ. ಈ ಹಿನ್ನೆಲೆ ಇತ್ತೀಚಿಗೆ ಚಾರ್ಲಿ, ಕಾಂತಾರಾ, ವಿಕ್ರಂತ ರೋಣ ಸಿನಿಮಾ ಸ್ವಲ್ಪ ಭರವಸೆ ಮೂಡಿಸಿದ್ದವು. ಒಂದು ಕಲಾ ಸೇವೆ ಕಾರಣಕ್ಕೆ ಚಿತ್ರಮಂದಿರ ನಡೆಯುತ್ತಿತ್ತು.