ಕಾರ್ಕಳ: ಯಕ್ಷಗಾನ ಶಿಕ್ಷಣಕ್ಕಾಗಿಯೇ ಕಳೆದ 10 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಕಾರ್ಕಳದ ಯಕ್ಷಕಲಾರಂಗದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ಶಿಕ್ಷಣ ಪಡೆಯಲು ಆಸಕ್ತ ಶಾಲಾ ಕಾಲೇಜುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023-24 ನೇ ಸಾಲಿನಲ್ಲಿ ಯಕ್ಷಗಾನ ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲು ಶಾಲಾ ಕಾಲೇಜುಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 1650 ವಿದ್ಯಾರ್ಥಿಗಳಿಗೆ ಉಚಿತವಾಗಿ ಬೇರೆ ಬೇರೆ ನಾಟ್ಯ ಗುರುಗಳಿಂದ ಯಕ್ಷ ಶಿಕ್ಷಣ ನೀಡಿ ವರ್ಷಾಂತ್ಯದಲ್ಲಿ ಕಿಶೋರ ಯಕ್ಷೋತ್ಸವ ನಡೆಸಿಕೊಂಡು ಬರುತ್ತಿದೆ. ಆಸಕ್ತ ಶಾಲಾ ಮುಖ್ಯಸ್ಥರು ದಿನಾಂಕ 25-06-23ರ ಒಳಗೆ ಈ ವಿಳಾಸಕ್ಕೆ ಅರ್ಜಿಗಳನ್ನು ಕಳುಹಿಸಿ ಕೊಡುವಂತೆ ವಿನಂತಿಸಲಾಗಿದೆ.
Author: Nammur Express admin
ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರು? ರಾಜ್ಯ ನೂತನ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ ಮಾಡಿದೆ. ಬೆಂಗಳೂರು ನಗರ- ಡಿಕೆ ಶಿವಕುಮಾರ್ ತುಮಕೂರು- ಡಾ. ಜಿ ಪರಮೇಶ್ವರ್ ಗದಗ- ಹೆಚ್.ಕೆ ಪಾಟೀಲ್ ಬೆಂಗಳೂರು ಗ್ರಾ.- ಕೆ.ಹೆಚ್ ಮುನಿಯಪ್ಪ ರಾಮನಗರ- ರಾಮಲಿಂಗಾರೆಡ್ಡಿ ಚಿಕ್ಕಮಗಳೂರು- ಕೆ.ಜೆ ಜಾರ್ಜ್ ವಿಜಯಪುರ- ಎಂ.ಬಿ ಪಾಟೀಲ್ ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್ ಮೈಸೂರು- ಹೆಚ್.ಸಿ ಮಹದೇವಪ್ಪ ಬೆಳಗಾವಿ- ಸತೀಶ್ ಜಾರಕಿಹೊಳಿ ಕಲಬುರ್ಗಿ- ಪ್ರಿಯಾಂಕಾ ಖರ್ಗೆ ಹಾವೇರಿ- ಶಿವಾನಂದ ಪಾಟೀಲ್ ವಿಜಯನಗರ- ಜಮೀರ್ ಅಹ್ಮದ್ ಖಾನ್ ಯಾದಗಿರಿ- ಶರಬಸಪ್ಪ ದರ್ಶನಾಪುರ್ ಬೀದರ್- ಈಶ್ವರ್ ಖಂಡ್ರೆ ಮಂಡ್ಯ- ಚೆಲುವರಾಯಸ್ವಾಮಿ ದಾವಣಗೆರೆ- ಎಸ್.ಎಸ್ ಮಲ್ಲಿಕಾರ್ಜುನ್ ಧಾರವಾಡ- ಸಂತೋಷ್ ಲಾಡ್ ರಾಯಚೂರು- ಶರಣಪ್ರಕಾಶ್ ಪಾಟೀಲ್ ಬಾಗಲಕೋಟೆ- ಆರ್.ಬಿ ತಿಮ್ಮಾಪುರ್ ಚಾಮರಾಜನಗರ- ಕೆ.ವೆಂಕಟೇಶ್ ಕೊಪ್ಪಳ- ಶಿವರಾಜ್ ತಂಗಡಗಿ ಚಿತ್ರದುರ್ಗ- ಡಿ.ಸುಧಾಕರ್ ಬಳ್ಳಾರಿ- ಬಿ. ನಾಗೇಂದ್ರ ಹಾಸನ- ಕೆ.ಎನ್ ರಾಜಣ್ಣ ಕೋಲಾರ- ಬೈರತಿ ಸುರೇಶ್ ಉಡುಪಿ- ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ಕನ್ನಡ- ಮಂಕಾಳ ವೈದ್ಯ…
ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ಬೆಂಗಳೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 58 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಕಾಲಮಿತಿಯ ಒಳಗೆ ಕ್ರಮ ಕೈಗೊಳ್ಳಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದ್ದರು ಪ್ರತಿಭಾವಂತ ಶಿಕ್ಷಕರು ಇಲಾಖೆಯ ಶಕ್ತಿ. ಖಾಲಿ ಇರುವ ಹುದ್ದೆಗಳಿಗೆ ನೇಮಕ ಅತಿಥಿ ಶಿಕ್ಷರನ್ನು ನೇಮಿಸಿಕೊಂಡರು ಅದು ತಾತ್ಕಾಲಿಕ ಪರಿಹಾರವಷ್ಟೆ, ಅದಕ್ಕಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಾಗುವುದು ಎಂದರು. ಹಿಂದೆ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿದ್ದ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆ ಆದ 13,351 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು. ಕೆಲವರು ಮತ್ತೆ ಕೋರ್ಟ್ ಮೊರೆ ಹೋಗಿದ್ದು ಸ್ಥಳ ನಿಯೋಜನೆ ಆದೇಶ ನೀಡಲು ವಿಳಂಬವಾಗಿದೆ. ಕಾನೂನು ನೆರವು ಪಡೆದು ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು. ಪಠ್ಯ ಮಕ್ಕಳ ಹಿತಾಸಕ್ತಿಗೆ ತೀರ್ಮಾನ ಪಠ್ಯ ಮಕ್ಕಳ ಹಿತಾಸಕ್ತಿಗೆ…
ಅನಾರೋಗ್ಯ ಕಾರಣ ಮನನೊಂದು ಆತ್ಮಹತ್ಯೆ ಮಂಗಳೂರು; ದ.ಕ.ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಬಾಲಕೃಷ್ಣ (58) ಎಂಬವರು ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮಾಲಾಡಿ ಕೋರ್ಟ್ ಬಳಿಯ ರಾಘವೇಂದ್ರ ನಿಲಯ ಎಂಬಲ್ಲಿ ವಾಸಿಸುತ್ತಿದ್ದ ಅವರು ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿದ್ದರು.ಬಳಿಕ ಅಪರ ಜಿಲ್ಲಾಧಿಕಾರಿಯ ಕಾರಿನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹೃದಯ ಹಾಗೂ ಕರುಳಿನ ಸಮಸ್ಯೆಯಿಂದ ಬಾಲಕೃಷ್ಣ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಅವರು ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಗುರುವಾರ ತನ್ನ ಮನೆಯ ಮಹಡಿಗೆ ಹೋದವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಅವರ ಪುತ್ರ ಚೇತನ್ ನೀಡಿದ ದೂರಿನಂತೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
51 ಸಾವಿರಕ್ಕೆ ಮಾರಾಟ: ಈಗ ಎಲ್ಲೂ ದಾಸ್ತಾನಿಲ್ಲ ಪ್ರತಿ ಕ್ವಿಂಟಲ್ ಗೆ 2-3 ಸಾವಿರ ರೂ.ಏರಿಕೆ ಶಿವಮೊಗ್ಗ: ಚುನಾವಣೆ ವೇಳೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಕೆಂಪಡಕೆ ಧಾರಣೆ ಇದೀಗ ಚೇತರಿಸಿಕೊಳ್ಳುತ್ತಿದ್ದು ಜೂನ್ ಆರಂಭದಲ್ಲಿಯೇ ಎಲ್ಲಾ ಬಗೆಯ ಅಡಕೆ ಪ್ರತಿ ಕ್ವಿಂಟಲ್ ಗೆ 2-3 ಸಾವಿರ ರೂ.ಏರಿಕೆಯಾಗಿದೆ. ಮಲೆನಾಡ ಬಹುತೇಕ ಬೆಳೆಗಾರರ ಬಳಿ ಕೆಂಪಡಿಕೆ ಇಲ್ಲ. ದೊಡ್ಡ ಬೆಳೆಗಾರರು ಮಾತ್ರ ಕಾದು ನೋಡುವ ತಂತ್ರದಲ್ಲಿ ಅಡಕೆ ದಾಸ್ತನಿರಿಸಿದ್ದು, ಅಂಥವರಿಗೆ ಮಾತ್ರ ಈ ಧಾರಣೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನೆಷ್ಟು ಚೇತರಿಕೆ ಆಗಬಹುದೆಂಬ ನಿರೀಕ್ಷೆ ಬೆಳೆಗಾರರದ್ದಾಗಿದೆ. ಬಹುತೇಕ ಅಡಕೆ ಮಾರುಕಟ್ಟೆ ಉತ್ತರ ಭಾರತದ ಕಂಪನಿಗಳನ್ನೇ ಅವಲಂಬಿತವಾಗಿದೆ. ಮಾರ್ಚ್ ನಲ್ಲಿ ಆರ್ಥಿಕ ವರ್ಷ ಕೊನೆಗೊಳ್ಳುವುದರಿಂದ ಧಾರಣೆ ಕಡಿಮೆ ಇತ್ತು. ಏಪ್ರಿಲ್ ನಲ್ಲಿ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆ ಚುನಾವಣೆ ಸಂಹಿತೆ ಜಾರಿಯಾಗಿದ್ದರಿಂದಾಗಿ ಇದು ಅಡಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಚುನಾವಣಾ ಆಯೋಗ ಹಣಕಾಸು ವಹಿವಾಟಿನ ಮೇಲೆ ನಿಗಾ ಇಟ್ಟಿದ್ದರಿಂದಾಗಿ ಗುಜರಾತ್, ಉತ್ತರ…
ಆಘಾತಕಾರಿ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ ಗುಡುಗು ಮಿಂಚು ಬಂದು ಅನಾಹುತ: ಸ್ವಾಮೀಜಿ ಹೇಳಿದ್ದೇನು? ಕೋಲಾರ: ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು, ಬರಲಿದೆ. ಎರಡು ಮೂರು ರಾಷ್ಟ್ರಗಳು ನೀರಲ್ಲಿ ಮುಳುಗಲಿವೆ. ಎಲ್ಲೋ ನಡೆದ ಬಾಂಬ್ ದಾಳಿಯಿಂದ ನಮಗೆ ಸಾಕಷ್ಟು ಅನಾಹುತವಾಗಲಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ. ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಗಿಡ, ಮರ, ದೈವದ, ಆರಾಧ್ಯದ ಸಂಕೇತ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೇ ಸಿಕ್ಕಿದೆ. ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆಧ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ. ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ…
ಶೀಘ್ರ ಗೌರವಧನ ಹೆಚ್ಚಳ ಮಾಡಲು ಸರ್ಕಾರದ ಹೆಜ್ಜೆ ಗೃಹ ಲಕ್ಷ್ಮಿಗೆ ಜು.1 ರಿಂದ 15 ರವರೆಗೆ ಅರ್ಜಿ ಪಡೆಯುವ ಪ್ರಕ್ರಿಯೆ ಬೆಳಗಾವಿ: ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ ಕುರಿತು ಚರ್ಚೆ ನಡೆಸಿ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳನ್ನು ಈಡೇರಿಸಲಿದೆ.ಅಲ್ಲಿಯವರೆಗೆ ಸ್ವಲ್ಪ ತಾಳ್ಮೆ ಬೇಕು ಎಂದು ಹೇಳಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಕರೆಯಲು ಅಧಿಕಾರಿಗಳ ಜೊತೆಗೆ ಚರ್ಚನಡೆಸಿದ್ದೇವೆ.ಜು.1 ರಿಂದ 15 ರವರೆಗೆ ಅರ್ಜಿ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಫಲಾನುಭವಿಗಳ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಜೋಡಣೆ ಮಾಡುವುದು, ಕುಟುಂಬದ ಮುಖ್ಯಸ್ಥೆಯನ್ನು ಖಚಿತಪಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
669 ಕೋಟಿ ಸಹಾಯಧನ ಬಾಕಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಬೇಕಾಗಿದ್ದ ಹಣ ರೈತರ ಹಣ ನೀಡಲು ಸರ್ಕಾರಕ್ಕೆ ಪತ್ರ ಬೆಂಗಳೂರು: ಹಾಲು ಪೂರೈಸಿರುವ ರೈತರಿಗೆ 669.59 ಕೋಟಿ ಪ್ರೋತ್ಸಾಹಧನ ಪಾವತಿಯನ್ನು ಕರ್ನಾಟಕ ಹಾಲು ಮಹಾಮಂಡಳಿ ಬಾಕಿ ಇರಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬುಧವಾರ ಪತ್ರ ಬರೆದಿರುವ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಟ್ಟು 669.59 ಕೋಟಿ ಪ್ರೋತ್ಸಾಹಧನ ರೈತರಿಗೆ ಪಾವತಿಯಾಗದೆ, ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ತಕ್ಷಣವೇ ಈ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಹಾಲು ಪೂರೈಸುತ್ತಿರುವ ಪ್ರತಿ ರೈತರಿಗೆ 5,000ದಿಂದ 30,000ದವರೆಗೂ ಪ್ರೋತ್ಸಾಹಧನ ಬಾಕಿ ಇದೆ. ಕೃಷಿ ಚಟುವಟಿಕೆಗಳು ಆರಂಭವಾಗುತ್ತಿವೆ. ಮಕ್ಕಳಿಗೆ ಶಾಲಾ, ಕಾಲೇಜುಗಳೂ ಆರಂಭವಾಗಿವೆ. ಈ ಸಂದರ್ಭದಲ್ಲಿ ರೈತ ಕುಟುಂಬಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಇದೆ. ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು…
ಮಂಗಳೂರು: ಮನೆಯನ್ನು ಖರೀದಿಸಿ ಅದರ ಗೃಹಪ್ರವೇಶ ನಡೆದ ಕೇವಲ ಐದೇ ದಿನಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣಾದ ಘಟನೆಯು ಉಳ್ಳಾಲದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಸಂಭವಿಸಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಅಶ್ವಿನಿ ಬಂಗೇರ ಮೂಲತಃ ಫರಂಗಿಪೇಟೆಯ ನಿವಾಸಿ. ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತಾ ಎಂಬವರಿಂದ ಅಶ್ವಿನಿ ಈ ಮನೆಯನ್ನು ಖರೀದಿ ಮಾಡಿದ್ದರು. ಜೂನ್ ಮೂರರಂದು ಮನೆಯ ಗೃಹಪ್ರವೇಶ ಕಾರ್ಯ ನಡೆದಿತ್ತು. ಈ ಮನೆಯನ್ನು ಅಶ್ವಿನಿ ಬ್ಯಾಂಕ್‌ನಲ್ಲಿ ಸಾಲ ಮಾಡಿ ಖರೀದಿ ಮಾಡಿದ್ದಳು ಎನ್ನಲಾಗಿದೆ. ಈ ಮನೆಯಲ್ಲಿ ಅಶ್ವಿನಿ ತಾಯಿ ದೇವಕಿ ಹಾಗೂ ದೊಡ್ಡಮ್ಮನ ಮಕ್ಕಳು ವಾಸವಿದ್ದರು. ಬುಧವಾರ ರಾತ್ರಿ ಮನೆಯ ಕೋಣೆಯಲ್ಲಿಯೇ ಅಶ್ವಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರಿಗೆ 24 ಪುಟಗಳ ಡೆತ್ ನೋಟ್ ಸಿಕ್ಕಿದೆ. ಡೆತ್‌ನೋಟ್‌ನಲ್ಲಿ ಅಶ್ವಿನಿ ಬ್ಯಾಂಕ್ ಸಿಬ್ಬಂದಿ ನೀಡುತ್ತಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ. ಎನ್ನಲಾಗಿದೆ. ತಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದೆ. ಆದರೆ ಸಾಲ ತೀರಿಸುವ ವಿಚಾರವಾಗಿ ಬ್ಯಾಂಕ್‌ನಿಂದ…
ಬೆಂಗಳೂರು: ಬಾಲಕಿಯರ ಶಾಲಾ ಸಮವಸ್ತ್ರವನ್ನು ಸ್ಕರ್ಟ್‌ನಿಂದ ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ರಾಜ್ಯ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಕಲಬುರಗಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸ್ಕರ್ಟ್ ಧರಿಸುವ ಹುಡುಗಿಯರು ಎದುರಿಸುತ್ತಿರುವ ಅನಾನುಕೂಲತೆಗಳ ಕುರಿತು ಆಯೋಗಕ್ಕೆ ಪತ್ರ ಬರೆದ ನಂತರ ಶಿಫಾರಸು ಮಾಡಲಾಗಿದೆ. ಮೇ 15ರಂದು ಬರೆದ ಪತ್ರದಲ್ಲಿ ಹುಡುಗಿಯರು ನಾಚಿಕೆ ಸ್ವಭಾವದರಾಗಿದ್ದು ಪ್ರಯಾಣಿಸುವಾಗ, ಜನನಿಬಿಡ ಪ್ರದೇಶಗಳಲ್ಲಿ ತಿರುಗಾಡುವಾಗ, ಸೈಕ್ಲಿಂಗ್ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಸ್ಕರ್ಟ್ ಧರಿಸುವುದು ಅಡಚಣೆಯಾಗಿದೆ. ಇನ್ನು ಪತ್ರದಲ್ಲಿ ಲೈಂಗಿಕ ಕಿರುಕುಳದ ವರದಿಗಳಿವೆ ಎಂದು ಸೇರಿಸಲಾಗಿದೆ. ಹುಡುಗಿಯರು ಸಾಮಾನ್ಯವಾಗಿ ಸ್ಕರ್ಟ್‌ಗಳನ್ನು ಧರಿಸುವುದರಿಂದ ಮುಜುಗರ ವ್ಯಕ್ತಪಡಿಸುತ್ತಾರೆ ಎಂದು ಉಲ್ಲೇಖಿಸಿ, ಅವರ ಸಮವಸ್ತ್ರವನ್ನು ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಸೂಚಿಸಿದೆ. ಮೇ 17ರಂದು ಕೆಎಸ್‌ಪಿಸಿಆರ್‌ಸಿ ಅಧ್ಯಕ್ಷರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯ…