Author: Nammur Express Admin

ಮಲೆನಾಡತ್ತ ನಕ್ಸಲರ ಹೆಜ್ಜೆ! – ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು? – ಕರಾವಳಿಯಿಂದ ಮಲೆನಾಡ ಕಡೆ ನಕ್ಸಲರ ಪಯಣ?: ಎಲ್ಲೆಡೆ ಅಲರ್ಟ್ – ಸಿಕ್ಕಿಬೀಳುವರೋ….? ಶರಣಾಗತಿಯಾಗುವರೋ…? NAMMUR EXPRESS NEWS ಉಡುಪಿ/ ಶಿವಮೊಗ್ಗ/ ಚಿಕ್ಕಮಗಳೂರು: ನಕ್ಸಲ್‌ ನಾಯಕ ವಿಕ್ರಂ ಗೌಡ ಸಾವಿನ ಬಳಿಕ ಈಗ ಉಳಿದ ನಕ್ಸಲರ ಮೇಲೆ ಪೊಲೀಸ್ ಇಲಾಖೆ ಕಣ್ಣು ಇಟ್ಟಿದೆ. ಈಗಾಗಲೇ ಹೆಬ್ರಿಯಲ್ಲಿ ನಡೆದ ನಕ್ಸಲ್ ಎನ್ಕೌಂಟರ್ ಅಲ್ಲಿ ವಿಕ್ರಂ ಗೌಡ ಬಲಿಯಾಗಿದ್ದಾನೆ. ಇನ್ನಿಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದೀಗ ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆ ಉಳಿದಿರುವುದು ಎಂಟು ಮಂದಿ ನಕ್ಸಲರು ಮಾತ್ರ, ಅವರಲ್ಲಿ ಏಳು ಜನ ಈಗ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದ್ದಾರೆ ಎಂದು ಮೂಲಗಳು ಹೇಳುತ್ತವೆ. ಇದೀಗ ಮಲೆನಾಡ ಕಡೆ ನಕ್ಸಲರು ಪಯಣ ಬೆಳೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಎಲ್ಲೆಡೆ ಅಲರ್ಟ್ ಆಗಿದ್ದಾರೆ. ಕೇರಳದ ನಕ್ಸಲ್‌ ನಾಯಕ ಸಂಜೊಯ್‌ ದೀಪಕ್‌, ಮೊಹಿಯುದ್ದೀನ್‌ ಸೇರಿ ಬಹುತೇಕರ ಬಂಧನವಾಗಿದೆ. ಅಲ್ಲಿ ಉಳಿದಿರುವುದು ಸಂತೋಷ್‌ ಮಾತ್ರ. ರಾಷ್ಟ್ರ ಮಟ್ಟದ…

Read More

ಕರ್ನಾಟಕ ಟಾಪ್ ನ್ಯೂಸ್ * ಲೋಕಾಯುಕ್ತ: 25 ಕಡೆ ಶೋಧ: ಅಧಿಕಾರಿಗಳಿಗೆ ಢವ ಢವ! * ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ರದ್ದು? * – ಬಿಪಿಎಲ್ ಕಾರ್ಡ್ ರದ್ದಾದರೂ ‘ಗೃಹಲಕ್ಷ್ಮಿ ಹಣ ಬರುತ್ತೆ NAMMUR EXPRESS NEWS ಬೆಂಗಳೂರು : ಭ್ರಷ್ಟಾಚಾರ, ಹೆಚ್ಚುವರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನ. 21ರಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು 25ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ಹೆಚ್ಚುವರಿ ಆಸ್ತಿ ಗಳಿಕೆಯ ದೂರುಗಳ ಹಿನ್ನೆಲೆಯಲ್ಲಿ ಹತ್ತು ಹಲವು ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಭ್ರಷ್ಟಾಚಾರ, ಆಕ್ರಮ ಆಸ್ತಿ ಗಳಿಸಿರುವ ಆರೋಪ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ಹಲವಡೆ ದಾಳಿ ನಡೆಸಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದ ಬಾಕಿ ವಿವರಗಳು ತಿಳಿದುಬರಬೇಕಿದೆ. ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್!! ಬೆಂಗಳೂರು: ರಾಜ್ಯ ಸರ್ಕಾರದಿಂದ…

Read More

ಕರಾವಳಿ ಟಾಪ್ ನ್ಯೂಸ್ – ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ – ಉಡುಪಿ: 10 ತಿಂಗಳಲ್ಲಿ 228 ಕಳವು ಕೇಸ್‌   – ಮಂಗಳೂರು: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ? NAMMUR EXPRESS NEWS ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್‌ ಗ್ರಾಮದ ಕಾಂಪಾಡಿ ಬಳಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬಾಲಕ ಸ್ಕೂಟರ್‌ನಲ್ಲಿ ಬಂದು ಆಕೆಯ ದೇಹ ಸ್ಪರ್ಶಸಿ ಮಾನಭಂಗಕ್ಕೆ ಯತ್ನಿಸಿದ್ದ. ಈ ಸಂದರ್ಭ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಯುವತಿ ಕೆಥೋಲಿಕ್‌ ಸಭಾದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದು, ಕೆಥೋಲಿಕ್‌ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್‌ ಡಿ’ಸೋಜಾ ಪಾನೀರು, ಅಮ್ಮೆಂಬಳ ಚರ್ಚ್‌ ಪಾಲನ ಸಮಿತಿ ಉಪಾಧ್ಯಕ್ಷ ರೋಬರ್ಟ್‌ ಮತ್ತು ಕೆಥೋಲಿಕ್‌ ಸಭಾದ ಮುಖಂಡರು ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಆರೋಪಿಯನ್ನು ಕೊಣಾಜೆ ಪೋಲೀಸರ ವಶಕ್ಕೆ ನೀಡಿದ್ದು, ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ವಿಶ್ವ ಸಂಸ್ಥೆ ವರದಿ ಅಡಿಕೆ ಬೆಲೆಗೆ ಎಫೆಕ್ಟ್ ಆಗಿಲ್ಲ! – ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ – ಮಲೆನಾಡಲ್ಲೂ ಅಡಿಕೆ ಬೆಲೆ ನಿಧಾನಕ್ಕೆ ಏರಿಕೆ NAMMUR EXPRESS NEWS ಮಂಗಳೂರು/ಶಿವಮೊಗ್ಗ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂಗಸಂಸ್ಥೆ ಇಂಟರ್‌ನ್ಯಾಶನಲ್‌ ಏಜೆನ್ಸಿ ಫಾರ್‌ ರಿಸರ್ಚ್‌ ಆ್ಯಂಡ್‌ ಕ್ಯಾನ್ಸರ್‌ (ಐಎಆರ್‌ಸಿ) 2024ರ ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ಹೇಳಲಾಗಿದ್ದು ಆದರೆ ಈ ವಿಚಾರ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಡಿಕೆ ಬೇಡಿಕೆ ಸೃಷ್ಟಿಯಾಗಿ ಧಾರಣೆ ಏರಿಕೆ ಕಾಣುತ್ತಿದೆ. ಕರಾವಳಿ, ಮಧ್ಯ ಕರ್ನಾಟಕ, ಮಲೆನಾಡು ಅಡಿಕೆ ದರ ಏರಿಕೆಯಾಗುತ್ತಿದೆ. ಆದರೆ ಈ ಬಾರಿ ಮಳೆ, ರೋಗದಿಂದ ಅಡಿಕೆ ಕಡಿಮೆ ಆಗಿದೆ. ಚಾಲಿ ಅಡಿಕೆ ದರ ಏರಿಕೆ! ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್‌ ಚೋಲ್‌ಗೆ ಮಾರುಕಟ್ಟೆಯಲ್ಲಿ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಯರ ಅನುಗ್ರಹದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ದಿನವು ಸಾಮಾನ್ಯವಾಗಿರುತ್ತದೆ. ದೀರ್ಘಕಾಲದ ಕಾಯಿಲೆಯಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಆದರೆ ಕೆಲವರು ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರವಾಸವನ್ನು ಯೋಜಿಸಿ. ಇದು ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬಲಪಡಿಸುತ್ತದೆ. ಇಂದು ಭೂಮಿ ಅಥವಾ ವಾಹನ ಖರೀದಿಗೆ ಶುಭ ದಿನವಾಗಿದೆ. ** ವೃಷಭ ರಾಶಿ : ಇಂದು ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಇಂದು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅನೇಕ…

Read More

ಶೃಂಗೇರಿ: ಬೇಗಾರು ಸೊಸೈಟಿಗೆ ಜಿಲ್ಲೆಯ ಉತ್ತಮ ಸೊಸೈಟಿ ಪ್ರಶಸ್ತಿ * ಚಿಕ್ಕಮಗಳೂರಿನಲ್ಲಿ ನಡೆದ 71 ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ * ಶೃಂಗೇರಿ ತಾಲೂಕಿನ ಬೇಗಾರಿನಲ್ಲಿರುವ ಸಹಕಾರಿ ಸಂಘ NAMMUR EXPRESS NEWS ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಶೃಂಗೇರಿ ತಾಲೂಕಿನ ಬೇಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಯ್ಕೆಯಾಗಿದೆ. ಚಿಕ್ಕಮಗಳೂರಿನ ಒಕ್ಕಲಿಗರ ಭವನದಲ್ಲಿ ನಡೆದ 71 ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹಕಾರ ಸಂಘದ ಪರವಾಗಿ ಸಂಘದ ನಿರ್ದೇಶಕರಾದ ರವಿಚಂದ್ರನ್ ಅಕ್ಷಲ್‌ಕೊಡಿಗೆ ಮತ್ತು ಕಾರ್ಯದರ್ಶಿಗಳಾದ ರಾಜೇಂದ್ರ ಅವರು ಪ್ರಶಸ್ತಿ ಸ್ವೀಕರಿಸಿದರು. ಸಂಘದ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿದೆ.

Read More

ಕರ್ನಾಟಕ ಟಾಪ್ ನ್ಯೂಸ್ ಉಡುಪಿ: ಹುಟ್ಟೂರು ಹೆಬ್ರಿಯಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಅಂತ್ಯ ಸಂಸ್ಕಾರ – ಬೆಂಗಳೂರು :ಇನ್ಮುಂದೆ ರೈಲ್ವೆ ಪ್ರಯಾಣಿಕರು ಟಿಕೆಟ್ ಗಾಗಿ ಕಾಯಬೇಕಿಲ್ಲ! – ದೆಹಲಿ: ಮಿತಿಮೀರಿದ ವಾಯುಮಾಲಿನ್ಯ,ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್! – ಬೆಂಗಳೂರು : ದಾಳಿಂಬೆ ಬೆಲೆ ದಿಢೀರ್‌ ಕುಸಿತ! – ಬೆಂಗಳೂರು : ಹಾಡಹಗಲೇ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರುವ ಘಟನೆ! NAMMUR EXPRESS NEWS ಉಡುಪಿ: ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ನಕ್ಸಲ್‌ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ಬುಧವಾರ ನೆರವೇರಿಸಿದರು. ಕೂಡ್ಲುವಿನಲ್ಲಿ ವಿಕ್ರಂಗೆ ಸೇರಿದ್ದ ಜಾಗದಲ್ಲಿ ನಡೆದ ಅಂತ್ಯಸಂಸ್ಕಾರ ಸಮಯದಲ್ಲಿ ಸಮೀಪದ ಬಂಧುಗಳು, ಪೊಲೀಸರು, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಪೀತಬೈಲ್‌ನಲ್ಲಿ ಸೋಮವಾರ ರಾತ್ರಿ ನಕ್ಸಲರು ಮತ್ತು ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಅಲಿಯಾಸ್‌ ಶ್ರೀಕಾಂತ್‌ (46) ಹತ್ಯೆಯಾಗಿದ್ದ. ಹೆಬ್ರಿ…

Read More

ನ್ಯಾಷನಲ್ ಸಂಸ್ಥೆಯ ಮತ್ತೊಂದು ಉದ್ಯಮಕ್ಕೆ ಸಜ್ಜು – ನ್ಯಾಷನಲ್ ಸಿಲ್ವರ್ & ವಾಚಸ್ ನ.25ರಂದು ಶುಭಾರಂಭ – ತೀರ್ಥಹಳ್ಳಿಯಲ್ಲಿಯೇ ಮೊದಲ ಬಾರಿಗೆ ಬೆಳ್ಳಿ ಆಭರಣ, ಮಲ್ಟಿ ಬ್ರಾಂಡ್ ವಾಚಸ್ ಶೋ ರೂಂ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ನ್ಯಾಷನಲ್ ಸಮೂಹ ಸಂಸ್ಥೆಯ ಹೊಸದೊಂದು ಉದ್ಯಮ ನ್ಯಾಷನಲ್ ಸಿಲ್ವರ್ & ವಾಚಸ್ ನ.25ಕ್ಕೆ ಶುಭಾರಂಭಗೊಳ್ಳಲಿದೆ. ತೀರ್ಥಹಳ್ಳಿ ಪಟ್ಟಣದ ಆಜಾದ್ ರಸ್ತೆಯ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ಪಕ್ಕದ ವಿಶಾಲ ಮೂರಂತಸ್ಥಿನ ಕಟ್ಟಡದಲ್ಲಿ ಇದೇ ನವಂಬರ್ 25ರಂದು ಶುಭಾರಂಭಗೊಳ್ಳಲಿದೆ. ನ್ಯಾಷನಲ್ ಗ್ರೂಪ್‌ ಸಂಸ್ಥಾಪಕರಾದ ಹಾಜಿ ಶೇಖ್ ಅಹಮದ್ ಅವರು ಉದ್ಯಮವನ್ನು ಉದ್ಘಾಟಿಸುವರು. ನ.25ರ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿರುವ ಸರಳ ಸಮಾರಂಭಕ್ಕೆ ಸರ್ವರನ್ನೂ ನ್ಯಾಷನಲ್ ಸಂಸ್ಥೆ ಆತ್ಮೀಯವಾಗಿ ಸ್ವಾಗತಿಸಿದೆ. ಬೆಳ್ಳಿ ವಸ್ತುಗಳ ಬೃಹತ್ ಮಳಿಗೆ ಬೆಳ್ಳಿ ಆಭರಣಗಳು, ಸಿಲ್ವರ್ ಪ್ರಾಡಕ್ಟ್ಸ್, ಸಿಲ್ವರ್ ಐಡಲ್ಸ್, ಪೂಜಾ ಸಾಮಗ್ರಿಗಳು, ಬೆಳ್ಳಿ ಪಾತ್ರೆಗಳು, ಉಡುಗೊರೆಗಳು ಸೇರಿ ಎಲ್ಲಾ ಬೆಳ್ಳಿ ವಸ್ತುಗಳು ಇಲ್ಲಿ ಸಿಗಲಿವೆ. ಎಲ್ಲಾ ಬ್ಯಾಂಡ್‌ಗಳ…

Read More

ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿಯಿಂದ ಆಹೋರಾತ್ರಿ ಧರಣಿ * ನಮ್ಮ ಭೂಮಿ – ನಮ್ಮ ಹಕ್ಕು ಹೆಸರಿನಲ್ಲಿ ಧರಣಿ * ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಿಂದ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ NAMMUR EXPRESS NEWS ಚಿಕ್ಕಮಗಳೂರು: ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ರೈತರ ಜಮೀನಿನ ದಾಖಲೆಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಿಸಿ ರೈತರ ಜಮೀನನನ್ನು ವಕ್ಫ್ ಬೋರ್ಡ್ ಜಾಗ ಎಂದು ಹೇಳಲಾಗುತ್ತಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಆಜಾದ್ ಪಾರ್ಕ್‌ನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಅಹೋರಾತ್ರಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ದಿ.21:11:2024 ರ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ನಮ್ಮ ಭೂಮಿ – ನಮ್ಮ ಹಕ್ಕು ಎಂಬ ಆಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗುವ ನಿರೀಕ್ಷೆಯಿದೆ. ಈ ಮೂಲಕ ಪ್ರಸ್ತುತ ಬೆಳವಣಿಗೆಯನ್ನು ಕಂಡಿಸಿ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆಗೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಎಲ್ಲಾ ತಯಾರಿ ನಡೆಸಿದೆ.

Read More

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಮಹಾರಥೋತ್ಸವ! * ಪೂಜಾ ಸೇವೆ, ಉತ್ಸವಾದಿಗಳ ವಿವರ ಹೇಗಿದೆ? * ಸೇವೆಗಳ ವಿವರ ಹೇಗಿದೆ? NAMMUR EXPRESS NEWS ಇತಿಹಾಸ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಚಂಪಾಷಷ್ಠಿ ಹಿನ್ನೆಲೆಯಲ್ಲಿ ನವೆಂಬರ್ 27ರಿಂದ ಡಿ.12ರವರೆಗೆ ವಿವಿಧ ಪೂಜಾ ಸೇವೆಗಳು, ಜಾತ್ರಾ ಉತ್ಸವಾದಿಗಳು ನಡೆಯಲಿದೆ. ಭಗವತ್ಸಂಕಲ್ಪ ಪ್ರಕಾರ ನಡೆಯುವ ಮಹೋತ್ಸವಗಳಿಗೆ ಭಕ್ತರು ಆಗಮಿಸಿ, ಶ್ರೀ ದೇವರ ಮೂಲ ಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ, ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದೆ. ನ. 27-2024 ರಿಂದ ನ.30-2024ಗೂ ಹಸಿರು ಕಾಣಿಕೆಗಳನ್ನು ವರೆಗೂ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಿದೆ. ಡಿಸೆಂಬರ್ ಮಹಾರಥೋತ್ಸವ ಸಾಮಾನ್ಯವಾಗಿ 7ರಂದು ದೇವರ ಮಹಾರಥೋತ್ಸವ ನಡೆಯಲಿದೆ. ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ದೇಗುಲಗಳಲ್ಲೆಲ್ಲ ವಿಶೇಷ ಪೂಜೆಗಳು ನಡೆಯುತ್ತವೆ. ಅಷ್ಟೇ ಅಲ್ಲ, ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ, ಹಾಲೆರೆದು ಅಭಿಷೇಕ ಹಾಗೂ ಪಾಯಸದ ನೈವೇದ್ಯ ಅರ್ಪಿಸಲಾಗುತ್ತದೆ.…

Read More