ಅಡಿಕೆ ದರ ಎಷ್ಟಿದೆ? – ಅಡಿಕೆ ಬೆಲೆ ಹೆಚ್ಚಳವೋ? ಕಡಿಮೆಯೋ? NAMMUR EXPRESS NEWS ಶಿವಮೊಗ್ಗ ಮಾರುಕಟ್ಟೆ ಗೊರಬಲು 17500 31319 ಬೆಟ್ಟೆ 43009 56760 ರಾಶಿ 37869 50019 ಸರಕು 48199 87500 ನ್ಯೂ ವೆರೈಟಿ 40069 49899
Author: Nammur Express Admin
ಟಾಪ್ 3 ನ್ಯೂಸ್ ಮಲ್ನಾಡ್ – ಮಲೆನಾಡ ಮಡಿಲು ಶಿವಮೊಗ್ಗದಲ್ಲಿ ಕಂಬಳ! – ರಿಪ್ಪನಪೇಟೆ ಬಳಿ ಬಸ್ ಅಪಘಾತ: ಅಪಾಯದಿಂದ ಪಾರು – ಆಸ್ತಿ ವಿಚಾರಕ್ಕೆ ಚಿಕ್ಕಪ್ಪನಿಂದಲೇ ಚಾಕು ಇರಿತ: ಶಿವಮೊಗ್ಗದಲ್ಲಿ ಘಟನೆ NAMMUR EXPRESS NEWS ಶಿವಮೊಗ್ಗ: ಕರಾವಳಿಯ ಸಂಪ್ರದಾಯಿಕ ಕ್ರೀಡೆ ಕಂಬಳದ ರಂಗು ಶುರುವಾಗಲಿದೆ. ಮೊದಲ ಬಾರಿಗೆ ಮಲೆನಾಡ ಮಡಿಲು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ. ನವೆಂಬರ್ 17 ಪಿಲಿಕುಳದಲ್ಲಿ, ನವೆಂಬರ್ 23 ಕೊಡಂಗೆಯಲ್ಲಿ, ನವೆಂಬರ್ 30 ಕಕ್ಕೆಪದವು, ಡಿಸೆಂಬರ್ 07 ಹೊಕ್ಕಾಡಿ, ಡಿಸೆಂಬರ್ 14 ಬಾರಾಡಿ, ಡಿಸೆಂಬರ್ 22 ಮೂಲ್ಕಿ, ಡಿಸೆಂಬರ್ 28 ಮಂಗಳೂರು, ಡಿಸೆಂಬರ್ 29 ಬಳ್ಳಮಂಜ, ಜನವರಿ 04 ಮಿಯಾರು, ಜನವರಿ 11, 2025ರಂದು ನರಿಂಗಾನ, ಜನವರಿ 18 ಅಡ್ಡೆ, ಜನವರಿ 25 ಮೂಡುಬಿದಿರೆ, ಫೆಬ್ರವರಿ 01 ಐಕಳ, ಫೆಬ್ರವರಿ 08 ಜಪ್ಪು, ಫೆಬ್ರವರಿ 15 ತಿರುವೈಲುಗುತ್ತು, ಫೆಬ್ರವರಿ 22 ಕಟಪಾಡಿ, ಮಾರ್ಚ್ 01 ಪುತ್ತೂರು, ಮಾರ್ಚ್ 08 ಬಂಟ್ವಾಳ, ಮಾರ್ಚ್ 15 ಬಂಗಾಡಿ,…
ಕರ್ನಾಟಕ ಟಾಪ್ 3 ನ್ಯೂಸ್ – ಲೋಕಾಯುಕ್ತ ದಾಳಿ: ಬೆಡ್ ರೂಂ ಕೆಳಗೆ ಬಚ್ಚಿಟ್ಟಿದ್ದ ಹಣದ ಗಂಟು! – ಉಗ್ರರ ಜಾಡು ಹಿಡಿದು ಕರ್ನಾಟಕ ಸೇರಿ ದೇಶಾದ್ಯಂತ ಎನ್.ಐ.ಎ ದಾಳಿ – ಮಹಿಳೆಯಿಂದ ಕಾನೂನು ಅನುಮತಿ ಇಲ್ಲದೆ ಅಕ್ರಮ ಚೀಟಿ ದಂಧೆ NAMMUR EXPRESS NEWS ದೆಹಲಿ: ಬೆಳಗಾವಿ, ಹಾವೇರಿ, ದಾವಣಗೆರೆ, ಕಲಬುರ್ಗಿ, ರಾಮನಗರ, ಮೈಸೂರು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ವಿವಿಧ ಇಲಾಖೆಗಳ 9 ಅಧಿಕಾರಿಗಳ ಮನೆ, ಕಛೇರಿ ಮತ್ತು ಸಂಬಂಧಿತ ಮನೆಗಳ ಮೇಲೆ ನ. 12ರಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ 9 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಛೇರಿಗಳಿಗೆ ಬೆಳಿಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಪಂಚಾಯತ್ ಇಂಜಿನಿಯರಿಂಗ್ ಸಹಾಯಕ ಇಂಜಿನಿಯರ್ ಕಾಶಿನಾಥ್ ಭಜಂತ್ರಿ ಲಕ್ಷ ಲಕ್ಷ ಹಣವನ್ನು ತನ್ನ ಬೆಡ್ ರೂಂ ನಲ್ಲಿ ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದ ಹಣವನ್ನು ಗಂಟು ಕಟ್ಟಿ ಮನೆಯಿಂದ…
ಮಾಮ್ ಕೋಸ್ ಸಂಸ್ಥೆ ವಿರುದ್ಧ ಆರೋಪ ರಾಜಕೀಯ ಪ್ರೇರಿತ! – ರೈತರ ಹಿತರಕ್ಷಣೆಗೆ ಸದಾ ಶ್ರಮಿಸುವ ಮಾಮ್ ಕೋಸ್ ಸಂಸ್ಥೆ – ಆರೋಪ ಸುಳ್ಳು: ಉಪಾಧ್ಯಕ್ಷ ಮಹೇಶ್ ಹೆಚ್.ಎಸ್. ಹುಲ್ಕುಳಿ NAMMUR EXPRESS NEWS ತೀರ್ಥಹಳ್ಳಿ: ಮಾಮ್ ಕೋಸ್ ಸಂಸ್ಥೆಯ ಮೇಲೆ ಮಾಡಿರುವ ಆರೋಪ ಸುಳ್ಳು ಎಂದು ಮ್ಯಾಮ್ ಕೋಸ್ ಆಡಳಿತ ಸ್ಪಷ್ಟನೆ ನೀಡಿದೆ. ಮಾಮ್ ಕೋಸ್ ಅಡಿಕೆಯಲ್ಲಿ ಕಲಬೆರಕೆ’, ‘ರೈತರಿಗೆ ಮಾಮ್ ಕೋಸ್‌ನಲ್ಲಿ ನಿರಂತರ ಮೋಸ’, ‘ಮಾಮ್ ಕೋಸ್‌ನಿಂದ ಅನ್ಯಾಯವಾಗಿದೆ’, ಇತ್ಯಾದಿ ಶಿರೋನಾಮೆ ಅಡಿಯಲ್ಲಿ ಮಾಮ್ ಕೋಸ್ ಕುರಿತು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ನ. 11ರಂದು ‘ಮಾಮ್ ಕೋಸ್ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಕಚೇರಿ ತೀರ್ಥಹಳ್ಳಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಉಪಾಧ್ಯಕ್ಷರಾದ ಮಹೇಶ್ ಹೆಚ್.ಎಸ್. ಹುಲ್ಕುಳಿ ಪ್ರತ್ಯುತ್ತರ ನೀಡಿದರು.ಉದಯಕುಮಾರ್ ಎಂಬುವರು ಮಾಮ್ ಕೋಸ್ ಸಂಸ್ಥೆಯು ರೈತ ವಿರೋಧಿಯಾಗಿದ್ದು, ಅಡಿಕೆಗೆ ಉತ್ತಮ ಧಾರಣೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ…
ದೇವಂಗಿ- ಬಸವಾನಿ ರಸ್ತೆ ಕುಸಿತ: ಅಪಾಯಕ್ಕೆ ಹೊಣೆ ಯಾರು? – ಈಗಾಗಲೇ ಮೂರು ವಾಹನಗಳು ಗುಂಡಿಗೆ ಬಿದ್ದು ಅಪಘಾತ – ಆಡಳಿತದ ವಿರುದ್ಧ ಸ್ಥಳೀಯರು, ಗ್ರಾಮ ಪಂಚಾಯತ್ ಸದಸ್ಯರ ಆಕ್ರೋಶ NAMMUR EXPRESS NEWS ತೀರ್ಥಹಳ್ಳಿ: ದೇವಂಗಿ ಸಮೀಪದ ಮಳೂರಿನ ಸಮೀಪ ರಸ್ತೆ ಕುಸಿದಿದ್ದು ಕೂಡಲೇ ಲೋಕೋಪಯೋಗಿ ಇಲಾಖೆ ಗಮನಿಸಿ ಸರಿ ಪಡಿಸಬೇಕು ಎಂದು ಹಾರೋಗೊಳಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಸದಸ್ಯರಾದ ಪ್ರಸನ್ನ ಅಂದಗೆರೆ ಅಗ್ರಹಿಸಿದ್ದಾರೆ. ಈಗಾಗಲೇ 3 ವಾಹನಗಳು ಈ ಗುಂಡಿಗೆ ಬಿದಿದ್ದು ಕಳೆದ ಬಾರಿ ಟ್ರ್ಯಾಕ್ಟರ್ ಡ್ರೈವರ್ ಪಲ್ಟಿ ಹೊಡೆದು ಡ್ರೈವರ್ ಅಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇತ್ತೀಚಿಗೆ ರಾತ್ರಿ ಪಿಕಪ್ ಒಂದು ಇದೇ ಹೊಂಡಕ್ಕೆ ಬಿದ್ದು ಭಾರಿ ಅನಾಹುತ ತಪ್ಪಿದೆ. ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಲೋಕೋಪಯೋಗಿ ಇಲಾಖೆ, ಸಂಬಂಧಪಟ್ಟ ಇಲಾಖೆ, ಗುತ್ತಿಗೆದಾರರು ಈ ರಸ್ತೆ ಮುಚ್ಚಬೇಕು. ಇಲ್ಲ ತಡೆಗೋಡೆಯನ್ನು ಹಾಕಬೇಕು. ಅನಾಹುತ ತಪ್ಪಿಸಬೇಕು ಎಂದು ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.
ಮಲ್ನಾಡ್ ಟಾಪ್ ನ್ಯೂಸ್ – ಭದ್ರಾವತಿಯಲ್ಲಿ ಕಡವೆ ಮಾಂಸದ ಜೊತೆ ಸಿಕ್ಕಿಬಿದ್ದ ಆರೋಪಿ! – ಹುಲಿಕಲ್: ಹಿಟ್ ಅಂಡ್ ರನ್ ಗೆ ಬಲಿಯಾದ ಸ್ವಾವಲಂಬಿ ಮೀನಜ್ಜ! – ಶಿವಮೊಗ್ಗ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ! – ಶಿವಮೊಗ್ಗ: ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಮಹಿಳೆ ನಾಪತ್ತೆ! NAMMUR EXPRESS NEWS ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಡವೆ ಬೇಟೆಯಾಡಿದ ಆರೋಪಿಯನ್ನು ಬಂಧಿಸಿದ್ದಾರೆ. ನ.11ರಂದು ಭದ್ರಾವತಿ ವಲಯದ ಕೂಡ್ಲಿಗೆರೆ ಶಾಖೆಯ ಹೊಸೂರು ಗ್ರಾಮದ ದಾನವಾಡಿ ಕಿರು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಭದ್ರಾವತಿ ಹಾಗೂ ಚನ್ನಗಿರಿ ವಿಭಾಗದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಯನ್ನು ಬಂಧಿಸಿರುವ ಅರಣ್ಯ ಸಿಬ್ಬಂದಿ, ಕಡವೆಯ ಮಾಂಸವನ್ನು ಜಪ್ತು ಮಾಡಿದ್ದಾರೆ.. * ಹುಲಿಕಲ್: ಹಿಟ್ ಅಂಡ್ ರನ್ ಗೆ ಬಲಿಯಾದ ಸ್ವಾವಲಂಬಿ ಮೀನಜ್ಜ! ಹುಲಿಕಲ್: ಹುಲಿಕಲ್ ನಿವಾಸಿ…
ಶೃಂಗೇರಿ ಭಾಗದಲ್ಲಿ ಶಂಕಿತ ನಕ್ಸಲರು!? * ಹಲವರನ್ನು ವಶಕ್ಕೆ ಪಡೆದು ವಿಚಾರಣೆ: * ಕೆರೆಕಟ್ಟೆ, ಕುದುರೆಮುಖ, ತನಿಕೋಡು ಚೆಕ್ ಪೋಸ್ಟ್ ಭಾಗದಲ್ಲಿ ಕೂಂಬಿಂಗ್ NAMMUR EXPRESS NEWS ಚಿಕ್ಕಮಗಳೂರು: ಶಂಕಿತ ನಕ್ಸಲರು ಇದೀಗ ಶೃಂಗೇರಿ ಭಾಗದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಅನುಮಾನ ಮೂಡಿದೆ. ಕಳೆದ ಕೆಲವು ದಿನಗಳ ಹಿಂದೆ ಕಾರ್ಕಳ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಜೊತೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೀಗ ಶೃಂಗೇರಿ ತಾಲೂಕು ನೆಮ್ಮಾರ್ ಸಮೀಪದ ಬುಕ್ಕಡಿಬೈಲಿನಲ್ಲಿ ಇಬ್ಬರು ನಕ್ಸಲ್ ಅನುಕಂಪಿತ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ನೇತೃತ್ವದಲ್ಲಿ ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಸಂಬಂಧ ಕೊಪ್ಪ ತಾಲೂಕಿನ ಯಡಗುಂದಿ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಈ ಜನರಿಂದ ಎಎನ್‌ಎಫ್ ಮತ್ತು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ, ಕೆರೆಕಟ್ಟೆ,…
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಕೊನೆ ಹಂತದ ಮ್ಯಾಜಿಕ್! – ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ – ಬುಧವಾರ 3 ಕ್ಷೇತ್ರಗಳಲ್ಲಿ ಮತದಾನ: ನ.23ಕ್ಕೆ ಫಲಿತಾಂಶ NAMMUR EXPRESS NEWS ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದೆ. ಮಂಗಳವಾರದಿಂದ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದ್ದು, ಬುಧವಾರ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಮತ್ತು ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳ ನಾಯಕರು ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅಬ್ಬರ ಪ್ರಚಾರ ನಡೆಸಿ ಮತದಾರರನ್ನು ಸೆಳೆಯಲು ಯತ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಆರ್. ಅಶೋಕ್, ಸೇರಿದಂತೆ ಘಟಾನುಘಟಿ ನಾಯಕರು ಸೋಮವಾರ ಬೆಳಗ್ಗೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿರುವ…
ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ – ಕಡಿಮೆ ಬೆಲೆಯ 2 ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ – ಗ್ರಾಹಕರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡಲು ಆರಂಭಿಸಿದರಿಂದ ಇದೀಗ ರಿಲಯನ್ಸ್ ಜಿಯೋ ಕಡಿಮೆ ಬೆಲೆಯ ಪ್ಲಾನ್ NAMMUR EXPRESS NEWS ಮುಂಬೈ: ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರಿ ಭಾರತದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದ್ದು, ಹಳ್ಳಿ ಹಳ್ಳಿಗೂ ಸೇವೆಯನ್ನು ತಲುಪಿಸುವಲ್ಲಿ ಕೆಲಸ ಮಾಡುತ್ತಿದೆ. ರಿಲಯನ್ಸ್ ಜಿಯೋ ಭಾರತದ ಅತಿ ದೊಡ್ಡ ಖಾಸಗಿ ಟೆಲಿಕಾಂ ಕಂಪನಿಯಾಗಿದ್ದು, ಇದನ್ನು ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ನೋಡಿಕೊಳ್ಳುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ರಿಲಯನ್ಸ್ ಜಿಯೋ ತನ್ನದೇ ಆದ ಮೈಲಿಗಲ್ಲು ಸ್ಥಾಪನೆ ಮಾಡಿರುವ ಸಂಸ್ಥೆ, ಟ್ಯಾರಿಫ್ ಬೆಲೆ ಏರಿಕೆ ನಂತರ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ರಿಲಯನ್ಸ್ ಜಿಯೋ ನಂತರ ಇನ್ನುಳಿದ ಖಾಸಗಿ ಕಂಪನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಹ ಟ್ಯಾರಿಫ್ ಹೆಚ್ಚಿಸಿಕೊಂಡಿದ್ದವು. ಆದ್ರೆ…
ಕರಾವಳಿ ಟಾಪ್ ನ್ಯೂಸ್ – ಪಕ್ಷಿಕೆರೆಯಲ್ಲಿ ನಡೆದ ಕೊಲೆ: ಕಾರ್ತಿಕ್ ತಾಯಿ, ಅಕ್ಕ ಅರೆಸ್ಟ್! – ಮೂಡಬಿದ್ರೆ ನ್ಯಾಯಾಲಯದಲ್ಲಿ ಹೈಡ್ರಾಮ – ಮಂಗಳೂರು: ನವಜಾತ ಶಿಶು ಸಾವು: ಆಸ್ಪತ್ರೆ 4ನೇ ಮಹಡಿಯಿಂದ ಬಿದ್ದು ಸಾವು NAMMUR EXPRESS NEWS ಮಂಗಳೂರು: ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಬಾಣಂತಿ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾರ್ಕಳ ನಿವಾಸಿ ರಂಜಿತಾ (28) ಆತ್ಮಹತ್ಯೆ ಮಾಡಿಕೊಂಡ ಬಾಣಂತಿ. ರಂಜಿತಾ ಹೆರಿಗೆಗೆಂದು ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 30ರಂದು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೆರಿಗೆಯಾಗಿತ್ತು. ಎನ್ ಐಸಿಯುಗೆ ದಾಖಲಾಗಿದ್ದ ಶಿಶು ನ.3ರಂದು ಮೃತಪಟ್ಟಿದ್ದು, ಬಾಣಂತಿ ರಂಜಿತಾ ಗುಣಮುಖರಾಗಿದ್ದರು. ನ. 11ರಂದು ಡಿಸ್ಚಾರ್ಜ್ ಗೆಂದು ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ದರಾಗಿ ಬಂದಿದ್ದರು. ಆದರೆ ರಂಜಿತಾ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ. ಪಕ್ಷಿಕೆರೆಯಲ್ಲಿ ನಡೆದ ಕೊಲೆ…