ಈ ದಿನದ ರಾಶಿ ಭವಿಷ್ಯ ಹೇಗಿದೆ? – ವಿಷ್ಣುವಿನ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ, ಆದರೆ ನೀವು ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದ ಯಾವುದೇ ಸದಸ್ಯರ ಮಾತುಗಳಿಂದ ನಿಮಗೆ ನೋವಾಗಬಹುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ಇಂದು ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ** ವೃಷಭ ರಾಶಿ : ಇಂದು ಅಧಿಕ ಖರ್ಚುಗಳಿಂದ ಮನಸ್ಸು ಚಿಂತೆಗೀಡಾಗುತ್ತದೆ. ಸ್ತ್ರೀಯರು ತಮ್ಮ ಸಂಬಂಧಿಕರಿಂದ ತೊಂದರೆಗಳನ್ನು ಎದುರಿಸಬಹುದು. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಣಯ ಭೋಜನವನ್ನು ಯೋಜಿಸಬಹುದು.…
Author: Nammur Express Admin
ಮೇಗರವಳ್ಳಿಯಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಹೋರಾಟ! – ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ: ಅಧಿಕಾರಿಗಳಿಗೆ ಎಚ್ಚರಿಕೆ – ಅರೇಹಳ್ಳಿ ಗ್ರಾಮ ಸದಸ್ಯ ಸಿದ್ದಾರ್ಥ್ ವಿರುದ್ಧ ದೂರು ಪ್ರಕರಣ ಖಂಡನೆ NAMMUR EXPRESS NEWS ತೀರ್ಥಹಳ್ಳಿ: ಸಾರ್ವಜನಿಕ ರಸ್ತೆ ಕಾಮಗಾರಿ ಸಂಬಂಧಪಟ್ಟ ಹಾಗೆ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ಕೇಸು ದಾಖಲಿಸಿದ ಪ್ರಕರಣ ಖಂಡಿಸಿ ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಮುಂದೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಮೇಗರವಳ್ಳಿ ಆರ್ ಎಫ್ ಓ ಕೆಲವು ಹಿತಾಸಕ್ತಿಗಳ ಕೈ ಗೊಂಬೆಯಂತೆ ವರ್ತಿಸಿ ಸಾರ್ವಜನಿಕರ ಅರ್ಜಿಯ ಮೇರೆಗೆ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ರಸ್ತೆ ದುರಸ್ತಿಗೆ ಹಣ ಮಂಜೂರು ಮಾಡಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಸಿದ್ದಾರ್ಥ್ ಅವರ ಮೇಲೆ ಅರಣ್ಯ ಇಲಾಖೆಯ ಪ್ರಕರಣ ದಾಖಲಿಸಿ ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನು ಇಂಥ ದುರ್ವರ್ತನೆ ಬಿಡಬೇಕು ಎಂದು ಜ್ಞಾನೇಂದ್ರ ಎಚ್ಚರಿಸಿದರು. ತೀರ್ಥಹಳ್ಳಿ…
50ನೇ ವರ್ಷದ ಕಟೀಲು ಕನಕ ಸಂಭ್ರಮಕ್ಕೆ ಸಜ್ಜು! – ನ.16, 17ರಂದು ಪಾವಂಜೆಯ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ಯಕ್ರಮ – ಸರ್ವರಿಗೂ ಸ್ವಾಗತಿಸಿದ ಸೀತಾರಾಮ್ ಕುಮಾರ್ ಕಟೀಲ್ NAMMUR EXPRESS NEWS ಉಡುಪಿ: 50ನೇ ವರ್ಷದ ಕಟೀಲು ಕನಕ ಸಂಭ್ರಮ ನಡೆಯಲಿದ್ದು ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ಪಾವಂಜೆ 16-11-2024ನೇ ಶನಿವಾರ ನಡೆಯುತ್ತದೆ. ಉದ್ಘಾಟನಾ ಸಮಾರಂಭ, ಗೌರವರ್ಪಣೆ, ಸನ್ಮಾನ ಸಮಾರಂಭ ಕೂಡ ನೆರವೇರಲಿದೆ. ಬೆಳಿಗ್ಗೆ 11.00 ರಿಂದ ರಕ್ಷಿತ್ ಪಡ್ರೆ ಶಿಷ್ಯರಿಂದ, ನಿತ್ಯವೇಷ, ಸ್ತ್ರೀವೇಷ, ಪರಂಪರೆ ಬಾಲ ಪ್ರತಿಭೆ ಕು। ದಿಯಾ ಡಿ.ಆಚಾರ್ಯ ಮಂಚಕಲ್ ಇವರಿಂದ ನೃತ್ಯವೈಭವ ಮಯೂರ ಪ್ರತಿಷ್ಠಾನ ತಂಡದವರಿಂದ ಬಯಲಾಟ,ಪಾದ ಪ್ರತಿಕ್ಷಾ ಸುಧೀರ್ ಉಳ್ಳೂರು & ರಕ್ಷಿತ್ ಪಡ್ರೆ ಇವರಿಂದ ನೃತ್ಯ ವೈಭವ ಸಂಜೆ 6.30 ರಿಂದ ಯಕ್ಷ ಯುವ ಗಿರ್ಕಿ ಪ್ರವೀಣರಿಂದ ಯಕ್ಷಗಾನ ಬಯಲಾಟ ಮಕರಾಕ್ಷ ಕಾಳಗ ನ. 16 ರಂದು ನೆರವೇರುತ್ತದೆ. 17-11-2024ನೇ ಆದಿತ್ಯವಾರ ಬೆಳಿಗ್ಗೆ 10.00ಕ್ಕೆ ಸಮಾರೋಪ ಸಮಾರಂಭ, ಗೌರವರ್ಪಣೆ, ಸನ್ಮಾನ ಸಮಾರಂಭ…
ರಾಜ್ಯದ ಓದುಗರ ಮನ ಗೆದ್ದ ದೀಪಾವಳಿ ವಿಶೇಷ ಸಂಚಿಕೆ – ರಾಜ್ಯದ 100ಕ್ಕೂ ಹೆಚ್ಚು ಪ್ರತಿಭೆಗಳ ಸಾಧನೆ ಅನಾವರಣ – ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾದ ವಿಶೇಷ ಕಲ್ಪನೆ – ಮನೆ ಮನೆಗೆ ತಲುಪುತ್ತಿದೆ 156 ಪುಟಗಳ ಪುರವಣಿ ಕರ್ನಾಟಕದ ಮಾಧ್ಯಮ ಲೋಕದಲ್ಲಿ ತನ್ನ ಸೃಜನಶೀಲ, ಕ್ರಿಯಾಶೀಲ ಬರವಣಿಗೆಯ ಮೂಲಕವೇ ಓದುಗರ ಮನದ ಕದ ತಟ್ಟಿ, ಸುದೀರ್ಘ 9 ವರ್ಷ ಪೂರೈಸಿದ ನಮ್ಮೂರ್ ಎಕ್ಸ್ಪ್ರೆಸ್ ಇದೀಗ ದಶಕದ ಮಾಧ್ಯಮ ಪಯಣದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಕಳೆದ 9 ವರ್ಷದ ಮಾಧ್ಯಮ ಜರ್ನಿಯಲ್ಲಿ ಸಾವಿರಾರು ಜನರ ದನಿಯಾಗಿದ್ದು, ರಾಜ್ಯದ ಮೂಲೆ ಮೂಲೆಯಲ್ಲಿ ತನ್ನದೇ ಓದುಗರ ವಲಯವನ್ನು ಸೃಷ್ಟಿಸಿಕೊಂಡಿದೆ. ಸುದ್ದಿಯ ಭ್ರಮೆಗೆ ಬೀಳದೆ ಪಾಸಿಟಿವ್ ಸಮಾಜ ಕಟ್ಟಲು ಯಾವ ಸುದ್ದಿ ಬೇಕೋ ಅದನ್ನು ಮಾತ್ರ ನೀಡುತ್ತಿದ್ದೇವೆ. ಕ್ರಿಯಾಶೀಲ ಮನಸುಗಳು ಕಟ್ಟಿದ ಸಂಸ್ಥೆ ರಾಜ್ಯದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯುಳ್ಳ, ಒಂದಷ್ಟು ಕ್ರಿಯಾಶೀಲ ಮನಸುಗಳು ಕಟ್ಟಿದ ಸಂಸ್ಥೆ ಇದಾಗಿದ್ದು, ಇದೀಗ ಅನೇಕ ಯುವ…
ತೀರ್ಥಹಳ್ಳಿಯ ಹಿರಿಯ ನಾಯಕ ಹೆಚ್.ಬಿ.ಮಾರ್ತಾಂಡ ಇನ್ನಿಲ್ಲ – ಆರಗ ಗ್ರಾಪಂ, ಮಲ್ನಾಡ್ ಕ್ಲಬ್, ಶಿಮೂಲ್ ಅಧ್ಯಕ್ಷರಾಗಿ ಸೇವೆ – ನ. 11ಕ್ಕೆ ಅಂತ್ಯ ಸಂಸ್ಕಾರ: ಗಣ್ಯರ ಸಂತಾಪ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಒಕ್ಕಲಿಗ ಸಮಾಜದ ಹಿರಿಯರು, ಶಿಮುಲ್ ಮಾಜಿ ಅಧ್ಯಕ್ಷರು ಆಗಿದ್ದ ಹೆಚ್ ಬಿ ಮಾರ್ತಾಂಡ(65) ನಿಧನ ನಿಧನರಾಗಿದ್ದಾರೆ. ಪಾರ್ಶ್ವ ವಾಯು ಅರೋಗ್ಯ ಸಮಸ್ಯೆ ಭಾದೆಯಿಂದ ಬಳಲುತ್ತಿದ್ದ ಅವರು, ತೀರ್ಥಹಳ್ಳಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆರಗ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಪಾರ್ಶ್ವ ವಾಯು ಸಮಸ್ಯೆ ಭಾದಿಸುತ್ತಿತ್ತು. ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂದು ವರ್ಗವನ್ನ ಆಗಲಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಶಾಸಕರಾದ ಆರಗ ಜ್ಞಾನೇಂದ್ರ, ನಾಯಕರಾದ ಕಿಮ್ಮನೆ ರತ್ನಾಕರ್, ಸಹಕಾರ ನಾಯಕ ಡಾ. ಆರ್.ಎಂ.ಮಂಜುನಾಥ ಗೌಡ, ರಾಜ್ಯ ಒಕ್ಕಲಿಗ…
ನರ್ಸಿಂಗ್ ಕಾಲೇಜುಗಳಿಗೆ ದಾಖಲಾಗಲು ಸುವರ್ಣಾವಕಾಶ – ಈಗ ಅತೀ ಹೆಚ್ಚು ಬೇಡಿಕೆ ಇರುವ ನರ್ಸಿಂಗ್ ಕೋರ್ಸ್ – ಬಿ. ಎಸ್ಸಿ, ಜಿ.ಎನ್.ಎಂ ನರ್ಸಿಂಗ್ ಕೋರ್ಸ್ ಪ್ರವೇಶ ಪ್ರವೇಶಕ್ಕೆ ದಿನಾಂಕ ಮುಂದೂಡಿಕೆ NAMMUR EXPRESS NEWS 2024ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿದ್ದು, ನರ್ಸಿಂಗ್ ಕಾಲೇಜುಗಳಲ್ಲಿ PCBSc ಮತ್ತು GNM ಕೋರ್ಸುಗಳಿಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಇನ್ನೂ ಕೆಲವೊಮ್ಮೆ ಹಲವು ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯಿಂದಾಗಿ ಅತ್ಯುತ್ತಮ ಕೋರ್ಸ್ ಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ಅವಕಾಶಗಳು ಮತ್ತು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ PCBSc ಮತ್ತು GNM ಕೋರ್ಸುಗಳಿಗೆ ದಾಖಲಾಗಲು ಬಯಸುವವರು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು. ಅಡ್ಮಿಶನ್ ದಿನಾಂಕ ಮುಂದೂಡಿಕೆ ಆಗಿದ್ದು ನರ್ಸಿಂಗ್ ಕೋರ್ಸ್ ಗೆ ಸೇರಲು ಆಸಕ್ತಿ ಇರುವವರು ಸದುಪಯೋಗ ಪಡೆದುಕೊಳ್ಳಲು ಉತ್ತಮ ಅವಕಾಶ… Admission is open 2024 ಲಭ್ಯ ಕೋರ್ಸ್ ಗಳು BSc nursing ಮತ್ತು GNM For admission enquiries Plz contact 8310079905 7483185632
ಕರಾವಳಿ ಟಾಪ್ ನ್ಯೂಸ್ – ಬಂಟ್ವಾಳ: ರಾತ್ರಿ ವೇಳೆ ಪ್ರೇಯಸಿಗಾಗಿ ಬಂದ ಹುಡುಗನ ಮೇಲೆ ಹಲ್ಲೆ! – ಮಂಗಳೂರು: 2 ವರ್ಷದ ಮಗು ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ! – ಕಾರ್ಕಳ: ಪರಶುರಾಮ ಮೂರ್ತಿ ವಿವಾದ, ಕೃಷ್ಣ ನಾಯ್ಕ 7 ದಿನ ಪೊಲೀಸ್ ಕಸ್ಟಡಿಗೆ! NAMMUR EXPRESS NEWS ಬಂಟ್ವಾಳ: ರಾತ್ರಿ ವೇಳೆ ಪ್ರೇಯಸಿಯನ್ನು ನೋಡಲು ಬಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳದ ಸಜೀಪನಡು ಗ್ರಾಮದ ಕಂಚಿನಡ್ಕಹದವು ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕ ಮಹಮ್ಮದ್ ಮುಸ್ತಾಹ(21)ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸ್ತಾಫನ ಸಂಬಂಧಿ ಹುಡುಗಿಯೊಬ್ಬಳು ಸಜೀಪನಡು ಗ್ರಾಮದ ಕಂಚಿನಡ್ಕ ಹದವಿನಲ್ಲಿರುವ ಮನೆಗೆ ಬರಲು ಹೇಳಿದ್ದಳು. ಅದರಂತೆ ಆತ ಸಜೀವನಡು ಕಂಚಿನಡ್ಕ ಹದವು ಎಂಬಲ್ಲಿಗೆ ಬಂದಾಗ ಮುಸ್ತಾಫನ ಬಗ್ಗೆ ಅನುಮಾನಗೊಂಡು ಗುಂಪು ಸೇರಿ ಆತನನ್ನು ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಲಾಗಿದೆ. ಈ ಘಟನೆ ಸಂಬಂಧ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.…
ಕರಾವಳಿ ಟಾಪ್ ನ್ಯೂಸ್ – ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪಡೆದಿದ್ದ ಬಾಲಕಿ ಪೂರ್ವಿ ಇನ್ನಿಲ್ಲ! – ಉಡುಪಿ: ಕಾರಿಗೆ ಗುದ್ದಿದ ಪಿಕಪ್ ವಾಹನ: ಕಾರು ಜಖಂ – ಬ್ರಹ್ಮಾವರ: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ – ಮೂಡುಬಿದರೆ: ಓವರ್ ಟೇಕ್ ಮಾಡಿ ಬಸ್ಸು ಅಪಘಾತ: ಧರ್ಮದೇಟು NAMMUR EXPRESS NEWS ಪಣಂಬೂರು: ಮಂಗಳೂರು ದ್ವಾರಕ ನಗರ ಕೊಟ್ಟಾರ ನಿವಾಸಿಗಳಾದ ಪುಷ್ಪರಾಜ್ ಎಸ್. ಕುಂದರ್ ವೈಶಾಲಿ ಎಲ್. ಬೆಂಗ್ರೆ ಅವರ ಪುತ್ರಿ, ಲಿಮ್ಕಾ ಬುಕ್ ದಾಖಲೆಯ ಪೂರ್ವಿ (7) ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. 2019ರಲ್ಲಿ 1 ನಿಮಿಷದಲ್ಲಿ ದಾಖಲೆಯ ರೈಮ್ಸ್ ಆಟವಾಡಿ ಇಂಡಿಯನ್ ಬುಕ್ ಆಫ್ ರೆಕಾಡ್ಸ್‌ನಲ್ಲಿ ಹೆಸರು ಮಾಡಿದ್ದಳು. ಸಣ್ಣ ಪ್ರಾಯದಲ್ಲೇ ಚುರುಕಿನಿಂದ ಕೂಡಿದ್ದ ಪೂರ್ವಿ ಫುಟ್‌ಬಾಲ್, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದಳು. ವಿವಿಧ ಸಂಘ ಸಂಸ್ಥೆಯಿಂದ ಸಮ್ಮಾನ ಪಡೆದುಕೊಂಡಿದ್ದಳು. ಗ್ರೀನ್ ವುಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಕಲಿಯುತ್ತಿದ್ದ ಪೂರ್ವಿ ಅನಾರೋಗ್ಯಕ್ಕೀಡಾದಾಗ ಮಂಗಳೂರಿಗೆ ಬಂದು ಖಾಸಗಿ…
ಬೀದಿ ನಾಯಿ ಜೊತೆ ಅಸಭ್ಯ ವರ್ತನೆ: ಬಿತ್ತು ಕೇಸ್! – ಬೀದಿ ನಾಯಿಯನ್ನೂ ಬಿಡದ ಕಾಮುಕ! – ಲೈಂಗಿಕ ಕ್ರಿಯೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ NAMMUR EXPRESS NEWS ಚಿಕ್ಕಮಗಳೂರು: ಯುವಕನೊಬ್ಬ ಬೀದಿ ನಾಯಿ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಲೈಂಗಿಕ ಕ್ರಿಯೆಗೆ ಯತ್ನಿಸಿದ ಆರೋಪ ಕೇಳಿಬಂದಿದ್ದು ಆತನ ವಿರುದ್ಧ ಚಿಕ್ಕಮಗಳೂರಿನ ಕೊಪ್ಪದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೀದಿ ನಾಯಿಗಳ ಜೊತೆ ಯುವಕ ಅಸಭ್ಯವಾಗಿ ವರ್ತಿಸುತ್ತಿರುವುದು ಸಿಸಿ ಕ್ಯಾಮರಾ ದೃಶ್ಯದಲ್ಲಿ ಕಂಡುಬಂದಿದೆ. ಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಸ್ವಯಂಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ನೀಡಿದ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 9ರಂದು ಕೃತ್ಯದ ಬಗ್ಗೆ ವಿಡಿಯೋ ಬೆಳಕಿಗೆ ಬಂದಿದ್ದು, ಸಿಸಿಟಿವಿ ದೃಶ್ಯದ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸ್ ಕಾನ್ಸ್ಟೇಬಲ್ದೂರು ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಮಾಹಿತಿಯ ಪ್ರಕಾರ, ವ್ಯಕ್ತಿಯೊಬ್ಬ…
ಶಿಗ್ಗಾಂವಿ ಉಪ ಚುನಾವಣೆ: ಆರಗ ಪ್ರಚಾರ – ಭರತ್ ಬೊಮ್ಮಾಯಿ ಪರ ಮತ ಯಾಚನೆ – ಕುಕ್ಕೆ, ನವೀನ್, ಮಧುರಾಜ್ ಸೇರಿ ಅನೇಕರ ಪ್ರಚಾರ NAMMUR EXPRESS NEWS ತೀರ್ಥಹಳ್ಳಿ/ ಶಿಗ್ಗಾಂವಿ: ಹಾವೇರಿ ಜಿಲ್ಲೆ ಶಿಗ್ಗಾಂವಿ ಉಪ ಚುನಾವಣೆ ನ.13ರಂದು ನಡೆಯಲಿದೆ. ಶಿಗ್ಗಾಂವಿ ಕ್ಷೇತ್ರದ ಅಡವಿ ಸೋಮಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕರು ಆದ ಆರಗ ಜ್ಞಾನೇಂದ್ರ ಮತ ಯಾಚನೆ ಮಾಡಿದ್ದಾರೆ. ಸಂಜೆಯವರೆಗೆ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಮತಯಾಚನೆ ಮಾಡಿದರು. ಶಾಸಕರೊಂದಿಗೆ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ರಿಪ್ಪನ್ಪೇಟೆ ಆರ್ ಟಿ ಗೋಪಾಲ ಭಂಡಾರಿ ಕೂಡ ಶಿಗ್ಗಾಂವಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ, ತೀರ್ಥಹಳ್ಳಿ ನಾಯಕರು ಹಾಜರ್ ತೀರ್ಥಹಳ್ಳಿ ತಾಲೂಕಿನ ಬಿಜೆಪಿ ನಾಯಕರಾದ ಹೆದ್ದೂರು ನವೀನ್, ಕುಕ್ಕೆ ಪ್ರಶಾಂತ್, ಮಧುರಾಜ್ ಹೆಗ್ಡೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು.