ಆಗುಂಬೆ ಎ. ವಿ. ಎಂ. ಪ್ರೌಢಶಾಲೆ ಸಮಿತ್ ರಾಷ್ಟ್ರ ಮಟ್ಟಕ್ಕೆ! – ರಾಜ್ಯ ಮಟ್ಟ ಜಾವಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನದ ಸಾಧನೆ – ತೀರ್ಥಹಳ್ಳಿ ತಾಲ್ಲೂಕಿಗೆ ಕೀರ್ತಿ ತಂದ ಸಮಿತ್: ಅಭಿನಂದನೆಗಳು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಗುಂಬೆಯ ಅನ್ನಪೂರ್ಣ ವಿದ್ಯಾಮಂದಿರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸಮಿತ್ ಕೋಲಾರದಲ್ಲಿ ನಡೆದ 2024-25ನೇ ಸಾಲಿನ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ಜಾವಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ತೀರ್ಥಹಳ್ಳಿ ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿರುವ ಈ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ -ಶಿಕ್ಷಕೇತರ ವರ್ಗ, ದೈಹಿಕ ಶಿಕ್ಷಣ ಶಿಕ್ಷಕ ವಿನಾಯಕ ಡಿ ಎಸ್, ಪೋಷಕ ವರ್ಗದವರು ಹಾಗೂ ಗ್ರಾಮಸ್ಥರು ಹಾರ್ದಿಕವಾಗಿ ಅಭಿನಂದಿಸಿ, ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಶುಭ ಹಾರೈಸಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟವು ನವೆಂಬರ್ ತಿಂಗಳಿನಲ್ಲಿ ಉತ್ತರ ಪ್ರದೇಶದ…
Author: Nammur Express Admin
ವಾಹನ ಸವಾರರ ಡಿಎಲ್, ಆರ್‌ಸಿ ಕಾರ್ಡ್‌ಗೆ ಇನ್ಮುಂದೆ ಕ್ಯೂಆರ್ ಕೋಡ್ – ಜನವರಿಯಿಂದ ಹೊಸ ಸ್ಮಾರ್ಟ್ ಕಾರ್ಡ್ – ಎಲ್ಲ ಆರ್‌ಟಿಒಗಳಲ್ಲೂ ಸೌಲಭ್ಯ? ಅನುಕೂಲವೇನು? NAMMUR EXPRESS NEWS ಬೆಂಗಳೂರು: ಡೈವಿಂಗ್ ಲೈಸೆನ್ಸ್ (ಡಿಎಲ್) ಹಾಗೂ ವಾಹನ ನೋಂದಣಿ (ಆರ್‌ಸಿ) ಕಾರ್ಡ್‌ಗಳನ್ನು ಇನ್ನಷ್ಟು ಹೈಟೆಕ್ ಹಾಗೂ ಗುಣ ಮಟ್ಟದ ರೂಪದಲ್ಲಿ ಕೊಡಲು ಸಾರಿಗೆ ಇಲಾಖೆ ಯೋಜನೆ ಸಿದ್ಧಪಡಿಸಿದೆ. ಕ್ಯೂಆರ್ ಕೋಡ್ ಮತ್ತು ಚಿಪ್ ಆಧಾರಿತ ಕಾರ್ಡ್‌ಗಳು ವಿತರಣೆಯಾಗಲಿದ್ದು, 2025ರ ಜನವರಿ ಅಥವಾ ಫೆಬ್ರವರಿಯಿಂದ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆ ಅನುಷ್ಠಾನ ಪ್ರಕ್ರಿಯೆ ಆರಂಭವಾಗಲಿದೆ. ಪ್ರಸ್ತುತ ಕೊಡುತ್ತಿರುವ ಆರ್‌ಸಿ ಹಾಗೂ ಡಿಎಲ್‌ಗಳು ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್‌ಗಳಾಗಿವೆ. ಹೊಸ ಯೋಜನೆಯಲ್ಲಿ ಪಾಲಿ ಕಾರ್ಡ್ ಗಳನ್ನು ಕಾರ್ಬನೇಟ್ (ಪಿ ಸಿ ಸಿ ) ವಿತರಣೆ ಮಾಡಲಾಗುತ್ತದೆ. ಇವು ಬ್ಯಾಂಕ್‌ಗಳು ವಿತರಿಸುವ ಎ ಟಿ ಎಂ ಕಾರ್ಡ್‌ಗಳ ಮಾದರಿಯಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಕಾರ್ಡ್‌ಗಳಾಗಿರುತ್ತವೆ. ಮೊದಲಿನ ಕಾರ್ಡ್‌ಗಳಲ್ಲಿ ಹಳೆಯದಾಗುತ್ತಿದ್ದಂತೆ ಕಾರ್ಡ್ ಮೇಲಿರುವ ಅಕ್ಷರಗಳು ಅಳಿಸಿ…
ಟಾಪ್ ನ್ಯೂಸ್ ಮಲ್ನಾಡ್ – ಚಿಕ್ಕಮಗಳೂರು: ಕಾಡಾನೆಗಳಿಂದ ನಿಷೇಧಾಜ್ಞೆ! – 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ – ಶಿವಮೊಗ್ಗ: ಡಿಜಿಟಲ್ ಜಾಲದಲ್ಲಿ ಯುವತಿಗೆ 4 ಲಕ್ಷ ರೂ. ವಂಚನೆ – ಶಿಕಾರಿಪುರ: ಪತಿಯೇ ಪತ್ನಿಯನ್ನು ಟವೆಲಿನಿಂದ ಕುತ್ತಿಗೆ ಬಿಗಿದು ಹತ್ಯೆ – ಸೊರಬ : ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ – ತೀರ್ಥಹಳ್ಳಿ : ಸಾಗುವಾನಿ ನಾಟ ಸಾಗಣೆ: ವಶ NAMMUR EXPRESS NEWS ತೀರ್ಥಹಳ್ಳಿ: ತಾಲೂಕಿನ ಮಂಡಗದ್ದೆಯಲ್ಲಿ ರಾತ್ರಿ ಸಾಗುವಾನಿ ನಾಟವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿರುವ ವಾಹನವನ್ನು ವಶಪಡಿಸಿಕೊಂಡಿರುವ ಮಂಡಗದ್ದೆ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಳೆದ ರಾತ್ರಿ ಮಂಡಗದ್ದೆ ಅರಣ್ಯದಲ್ಲಿ ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಮಹೇಂದ್ರ ಗೂಡ್ಸ್ ವಾಹನವನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಡಿ ಆರ್ ಎಫ್ ಸುಹಾಸ್ ಮತ್ತು ದುರ್ಗಪ್ಪ, ಮಹದೇವ ಕಣ್ಣೂರು, ಡ್ರೈವರ್ ನವೀನ್ ಮುಂತಾದವರು ಇದ್ದರು ಎಂದು ತಿಳಿದು ಬಂದಿದೆ. – ಚಿಕ್ಕಮಗಳೂರು: 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ…
ಮಂಗಳೂರು ಪಿಲಿಕುಳ ಕಂಬಳ ಮತ್ತೆ ಮುಂದಕ್ಕೆ?! – ಸ್ಥಳೀಯ ಚುನಾವಣೆಯ ಕಾರಣ ಮುಂದೂಡಿಕೆ? – ನ.17 ಪೂರ್ವಭಾವಿ ಕುದಿ ಕಂಬಳ ಬಗ್ಗೆ ಚಿಂತನೆ NAMMUR EXPRESS NEWS ಮಂಗಳೂರು: ಜಿಲ್ಲಾಡಳಿತ ವತಿಯಿಂದ ಆಯೋಜಿಸಲು ಉದ್ದೇಶಿಸಲಾಗಿರುವ ಬಹು ನಿರೀಕ್ಷಿತ ಪಿಲಿಕುಳ “ನೇತ್ರಾವತಿ- ಫಲ್ಗುಣಿ’ ಜೋಡುಕರೆ ಕಂಬಳ ಮೂಡುಶೆಡ್ಡೆ ಪಂಚಾಯತ್ ಚುನಾವಣೆ ಕಾರಣಕ್ಕೆ ಮುಂದೂಡಿಕೆಯಾಗುವ ಬಹುತೇಕ ಸಾಧ್ಯತೆಯಿದೆ. ಹತ್ತು ವರ್ಷಗಳ ಬಳಿಕ ಇದೀಗ ನ.17 ಮತ್ತು 18ರಂದು ಪಿಲಿಕುಳದ ಜೋಡುಕರೆಯಲ್ಲಿ ಕಂಬಳ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.ಈ ನಡುವೆ ಪಿಲಿಕುಳ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ನ.23ರಂದು ಚುನಾವಣೆ ನಡೆಯಲಿದ್ದು, ಇದರಿಂದಾಗಿ ಕಂಬಳ ಆಯೋಜಿಸಿದರೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.ಆದ್ದರಿಂದ ಈ ಬಗ್ಗೆ ನ.11ರಂದು ಜಿಲ್ಲಾಡಳಿತ, ಕಂಬಳ ಸಮಿತಿಯವರ ಸಭೆ ನಡೆಯಲಿದ್ದು, ಇದರಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ. ಒಂದು ವೇಳೆ ಕಂಬಳ ಮುಂದೂಡಿಕೆಯಾದರೆ ನ.17ರಂದು ಪೂರ್ವಭಾವಿ ಕುದಿ ಕಂಬಳ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಕಂಬಳದ ಮುಂದಿನ…
ಯುಗದ ಕವಿ ಜಗದ ಕವಿ ಕುವೆಂಪು ಪುಣ್ಯಸ್ಮರಣೆ – 20ನೇ ಶತಮಾನ ಕಂಡ ಅಪ್ರತಿಮ ಕವಿ – ಕುವೆಂಪು ಅವರು ನಮ್ಮನ್ನು ಅಗಲಿ 30 ವರ್ಷ NAMMUR EXPRESS NEWS ಕುವೆಂಪು ಅವರು ಇಪ್ಪತ್ತನೆಯ ಶತಮಾನ ಕಂಡ ಅದ್ಭುತ ಕವಿಗಳಲ್ಲಿ ಒಬ್ಬರು. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ಕುವೆಂಪು ಅವರ ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904ರಲ್ಲಿ ಜನಿಸಿದರು. ವಿಶ್ವಕ್ಕೆ ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಮೊದಲನೆಯ ಜ್ಞಾನಪೀಠ ಪ್ರಶಸ್ತಿಯನ್ನೂ, ಎರಡನೆಯ ರಾಷ್ಟ್ರಕವಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ತಮ್ಮ ಸಾಹಿತ್ಯ, ವಿಚಾರಧಾರೆ ಮೂಲಕ ನಾಡಿನ ಹೆಸರು ಬೆಳಗಿಸಿದವರು. ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿರುವ ಕುವೆಂಪು ಅವರು ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ. ಅಲ್ಲೇ ಇರುವ…
ಈಗ ತೆಂಗಿನಕಾಯಿಗೆ ಬೆಲೆ ಏರಿಕೆ! – ತೆಂಗಿನಕಾಯಿಗೆ ಭರ್ಜರಿ ಬೇಡಿಕೆ ಆರಂಭ: 50 ರೂ. ನತ್ತ ಕಾಯಿ – ಎಳೆನೀರಿಗೆ ಹೆಚ್ಚಿದ ಡಿಮ್ಯಾಂಡ್: ಕಾಯಿಗೆ ಬೇಡಿಕೆ ಹೆಚ್ಚಳ – ರೋಗ ಹೆಚ್ಚಳ, ಇಳುವರಿ ಕಡಿಮೆ ಎಫೆಕ್ಟ್ NAMMUR EXPRESS NEWS ಬೆಂಗಳೂರು: ತೆಂಗಿನ ಕಾಯಿ ಬೆಲೆ ಈಗ ಏರುತ್ತಿದ್ದು ರೈತರು ಸಂತಸದಲ್ಲಿದ್ದಾರೆ. ಆದರೆ ಒಂದು ಕಡೆ ಕಾಂಡ ರಸ ಸೇರಿದಂತೆ ಅನೇಕ ರೋಗಗಳು ಕೂಡ ಬಾಧಿಸುತ್ತಿವೆ. ಏರಿಳಿತ ಕಾಣುತ್ತಿದ್ದ ತೆಂಗಿನ ಧಾರಣೆ ಮತ್ತೆ ಚೇತರಿಕೆಯ ಹಾದಿ ಹಿಡಿದಿದ್ದು, ಒಂದು ವಾರಗಳ ಹಿಂದೆ ಪ್ರತೀ ಕಿಲೋಗೆ 43 ರೂ. ಇದ್ದ ದರ ಇದೀಗ 45 ರಿಂದ 48 ರೂ.ವರೆಗೆ ಖಾಸಗಿ ಮಾರುಕಟ್ಟೆಗಳಲ್ಲಿ ಖರೀದಿಯಾಗುತ್ತಿದೆ. ಕರಾವಳಿ ಭಾಗದಲ್ಲಿ ದರ ಹೆಚ್ಚಾಗಿದೆ. ತೆಂಗಿನಕಾಯಿಗೆ ಭರ್ಜರಿ ಬೇಡಿಕೆ ಹೊರ ಮಾರುಕಟ್ಟೆಗಳಲ್ಲಿ ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಿದ್ದು, ಇದರ ಪರಿಣಾಮ ಬೆಲೆ ಕೂಡ ಏರಿಕೆಯಾಗುತ್ತಿದೆ. ಎಳೆ ನೀರಿಗಾಗಿ ಕೊಯ್ಲು: ತೆಂಗಿನ ಕಾಯಿ ಇಲ್ಲ ಇತ್ತೀಚಿನ ಕೆಲ ವರ್ಷಗಳಿಂದ ಎಳನೀರಿಗೆ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಎರಡನೇ ಕಾರ್ತಿಕ ಸೋಮವಾರ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ತಾಳ್ಮೆ ಕಡಿಮೆಯಾಗುತ್ತದೆ, ಸ್ವಯಂ ನಿಯಂತ್ರಣದಲ್ಲಿದ್ದರೆ ಒಳಿತು. ಮಾತಿನ ಪ್ರಭಾವ ಹೆಚ್ಚಾಗುತ್ತದೆ, ನೀವು ಕೆಲವು ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಬಹುದು. ನಿಮ್ಮ ಜೀವನಶೈಲಿಯಲ್ಲಿ ನೀವು ಅಹಿತಕರವಾಗಿರುತ್ತೀರಿ ಮತ್ತು ಸಿಹಿ ಆಹಾರದ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ಆಸ್ತಿಯಿಂದ ಆದಾಯ ಹೆಚ್ಚಾಗಬಹುದು, ಉದ್ಯೋಗದಲ್ಲಿ ಬದಲಾವಣೆ ಸಾಧ್ಯ. ಇಂದು ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ** ವೃಷಭ ರಾಶಿ : ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಆಸ್ತಿ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಸಂಗಾತಿಯ ಆರೋಗ್ಯ ಹದಗೆಡಬಹುದು ಮತ್ತು ವೈದ್ಯಕೀಯ…
ನಿಖಿಲ್ ಕುಮಾರಸ್ವಾಮಿಗೆ ನೇಗಿಲು ನೀಡಿ ಶುಭ ಹಾರೈಕೆ – ಚನ್ನಪಟ್ಟಣದ ಚಕ್ಕೆರೆಯಲ್ಲಿ ಪ್ರಚಾರ ಸಭೆಯಲ್ಲಿ ಭೇಟಿ – ಯುವ ಘಟಕದ ಅಧ್ಯಕ್ಷ ರಾಘವೇಂದ್ರ ಗೌಡ ನೇತೃತ್ವದಲ್ಲಿ ಉಡುಗೊರೆ NAMMUR EXPRESS NEWS ತೀರ್ಥಹಳ್ಳಿ: ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದ ಚಕ್ಕೆರೆಯಲ್ಲಿ ಪ್ರಚಾರ ಸಭೆಯಲ್ಲಿ ತೀರ್ಥಹಳ್ಳಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ಗೌಡ ನೇತೃತ್ವದಲ್ಲಿ ರೈತರ ಪ್ರತೀಕವಾದ ನೇಗಿಲು ಉಡುಗೊರೆ ನೀಡಿ ಶುಭ ಹಾರೈಸಲಾಯಿತು. ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಹೆಚ್ ಡಿ ದೇವೇಗೌಡರ ಮುಖಾಂತರ ನಿಖಿಲ್ ಕುಮಾರಸ್ವಾಮಿ ಅವರಿಗೆ ರೈತರ ಗುರುತಾದ ಹಸಿರು ಶಾಲನ್ನು ಹೊದಿಸಿ ಹೊಲ ಉಳುವ ನೇಗಿಲನ್ನ ಉಡುಗೊರೆಯಾಗಿ ನೀಡುವ ಮೂಲಕ ತೀರ್ಥಹಳ್ಳಿ ಜನತಾದಳ ಪಕ್ಷದ ವತಿಯಿಂದ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ಶುಭಹಾರೈಸಿ ಪ್ರಚಾರದಲ್ಲಿ ಪಾಲ್ಗೊಳ್ಳಲಾಯಿತು. ರಾಘವೇಂದ್ರ ಗೌಡ ತಲಬಿ ಸೇರಿ ಹಲವರು ಇದ್ದರು.
ಕರಾವಳಿ ಬ್ರೇಕಿಂಗ್ ನ್ಯೂಸ್ ವ್ಯಕ್ತಿಯೊಬ್ಬ ಪತ್ನಿ,ಮಗು ಹತ್ಯೆಗೈದು ತಾನೂ ಆತ್ಮಹತ್ಯೆ! – ರೈಲಿನಡಿಗೆ ತಲೆಕೊಟ್ಟು ಅತ್ಮಹತ್ಯೆ: ಮುಲ್ಕಿ ವ್ಯಾಪ್ತಿಯಲ್ಲಿ ಘಟನೆ – ಮಂಗಳೂರು: ಅತ್ಯಾಚಾರ, ಕೊಲೆ ಪ್ರಕರಣ, ಮೂವರಿಗೆ ಗಲ್ಲು ಶಿಕ್ಷೆ!! NAMMUR EXPRESS NEWS ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಜಲಜಾಕ್ಷಿ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಪತ್ನಿ, ಮಗುವನ್ನು ಹತ್ಯೆಗೈದು ತಾನೂ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರುತಿಸಲಾಗಿದ್ದು, ಪತ್ನಿ ಪ್ರಿಯಾಂಕ (28), ಮಗು ಹೃದಯ್ (4) ಹತ್ಯೆಗೀಡಾದ ದುರ್ದೈವಿಗಳು ಎಂದು ತಿಳಿದುಬಂದಿದೆ. ನ. 8ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಕಾರ್ತಿಕ್ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದು ಮುಲ್ಕಿಯ ಬೆಳಾಯರುನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನ. 8ರಂದು ಮಧ್ಯಾಹ್ನ ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುವಾಗ…
ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಊರಿಗಿಲ್ಲ ಅಭಿವೃದ್ಧಿ ಭಾಗ್ಯ! – ಸೇತುವೆ ಇಲ್ಲ, ರಸ್ತೆ ಇಲ್ಲ, ಬೆಳಕೂ ಇಲ್ಲ… ಕೇಳೋರು ಯಾರು ಇಲ್ಲ – ಸಿಎಂ, ಸಚಿವರು, ಶಾಸಕರ ಭರವಸೆ ಈಡೇರಿಲ್ಲ NAMMUR EXPRESS NEWS ಕಾರ್ಕಳ : ಕಾರ್ಕಳ ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶವಾದ ಈದುವಿನ ಬೊಳ್ಳೆಟ್ಟು ಭಾಗದಲ್ಲಿ ಮೂಲಸೌಕರ್ಯ ವಿಲ್ಲದೆ ಅಭಿವೃದ್ಧಿ ಮರಿಚಿಕೆಯಾಗಿದೆ. ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಗ್ರಾಮದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟುವ ಸುವರ್ಣ ನದಿಯು ಈದು ಗ್ರಾಮದ ಬೊಳ್ಳೆಟ್ಟು ಪ್ರದೇಶದಲ್ಲಿ ಹರಿಯುತ್ತಿದೆ. ಆದರೆ ಮಳೆಗಾಲವೆಂದರೆ ಈ ಗ್ರಾಮಕ್ಕೆ ಕಷ್ಟ, ಏಕೆಂದರೆ 4 ತಿಂಗಳು ಲಾರಿ ಪಿಕಪ್ ಸಹಿತ ವಾಹನ ಗಳು ಬರುವಂತಿಲ್ಲ. ವಾಹನಗಳು ಸಾಗಬೇಕಾದರೆ ಮಳೆಗಾಲ ಕಳೆದು ಚಳಿಗಾಲ ಕಳೆಯಬೇಕು . ನದಿಯ ಮೂಲಕ ವಾಹನ ಸಾಗಿ ಬೊಳ್ಳೆಟ್ಟು ತಲುಪಬೇಕು. ಈದುವಿನಿಂದ ಸಂಪರ್ಕವಿಲ್ಲ: ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯಿತಿಯಿಂದ ಬೊಲ್ಲೊಟ್ಟಿಗೆಸಾಗಲು ಸುಮಾರು ನಾಲ್ಕು ಕಿಮೀ ನಡೆದುಕೊಂಡು ಸಾಗಬೇಕು.ಯಾವುದೇ ವಾಹನ…