ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಊರಿಗಿಲ್ಲ ಅಭಿವೃದ್ಧಿ ಭಾಗ್ಯ! – ಸೇತುವೆ ಇಲ್ಲ, ರಸ್ತೆ ಇಲ್ಲ, ಬೆಳಕೂ ಇಲ್ಲ… ಕೇಳೋರು ಯಾರು ಇಲ್ಲ – ಸಿಎಂ, ಸಚಿವರು, ಶಾಸಕರ ಭರವಸೆ ಈಡೇರಿಲ್ಲ NAMMUR EXPRESS NEWS ಕಾರ್ಕಳ : ಕಾರ್ಕಳ ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶವಾದ ಈದುವಿನ ಬೊಳ್ಳೆಟ್ಟು ಭಾಗದಲ್ಲಿ ಮೂಲಸೌಕರ್ಯ ವಿಲ್ಲದೆ ಅಭಿವೃದ್ಧಿ ಮರಿಚಿಕೆಯಾಗಿದೆ. ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಗ್ರಾಮದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟುವ ಸುವರ್ಣ ನದಿಯು ಈದು ಗ್ರಾಮದ ಬೊಳ್ಳೆಟ್ಟು ಪ್ರದೇಶದಲ್ಲಿ ಹರಿಯುತ್ತಿದೆ. ಆದರೆ ಮಳೆಗಾಲವೆಂದರೆ ಈ ಗ್ರಾಮಕ್ಕೆ ಕಷ್ಟ, ಏಕೆಂದರೆ 4 ತಿಂಗಳು ಲಾರಿ ಪಿಕಪ್ ಸಹಿತ ವಾಹನ ಗಳು ಬರುವಂತಿಲ್ಲ. ವಾಹನಗಳು ಸಾಗಬೇಕಾದರೆ ಮಳೆಗಾಲ ಕಳೆದು ಚಳಿಗಾಲ ಕಳೆಯಬೇಕು . ನದಿಯ ಮೂಲಕ ವಾಹನ ಸಾಗಿ ಬೊಳ್ಳೆಟ್ಟು ತಲುಪಬೇಕು. ಈದುವಿನಿಂದ ಸಂಪರ್ಕವಿಲ್ಲ: ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯಿತಿಯಿಂದ ಬೊಲ್ಲೊಟ್ಟಿಗೆಸಾಗಲು ಸುಮಾರು ನಾಲ್ಕು ಕಿಮೀ ನಡೆದುಕೊಂಡು ಸಾಗಬೇಕು.ಯಾವುದೇ ವಾಹನ…
Author: Nammur Express Admin
ವಯನಾಡಲ್ಲಿ ಮಂಜುನಾಥ ಭಂಡಾರಿ ಪ್ರಚಾರ – ನ.13ಕ್ಕೆ ಉಪ ಚುನಾವಣೆ: ಕಾಂಗ್ರೆಸ್ ಪರ ಪ್ರಚಾರ – ರಾಹುಲ್ ಗಾಂಧಿ ಆಪ್ತರಾಗಿರುವ ಮಂಜುನಾಥ ಭಂಡಾರಿ NAMMUR EXPRESS NEWS ಮಂಗಳೂರು: ವಯನಾಡು ಲೋಕಸಭಾ ಉಪಚುನಾವಣೆಯ ಪ್ರಚಾರ ಜೋರಾಗಿದೆ.ಇಡೀ ದೇಶದ ಗಮನ ಸೆಳೆದಿರುವ ರಾಹುಲ್ ಗಾಂಧಿ ಅವರಿಂದ ತೆರವಾದ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ. ಕರ್ನಾಟಕ ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಶಾಸಕರಾದ ಮಂಜುನಾಥ ಭಂಡಾರಿ ಅವರು ವಯನಾಡು ಲೋಕ ಸಭಾ ಕ್ಷೇತ್ರದಲ್ಲಿ ಪ್ರಚಾರದ ಕಣದಲ್ಲಿದ್ದಾರೆ. ಅಮೇಥಿ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ಕೆ.ಎಲ್ ಶರ್ಮಾ ರವರೊಂದಿಗೆ ಸುಲ್ತಾನ್ ಬತ್ತೇರಿಯ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಕಚೇರಿಗೆ ಭೇಟಿ ನೀಡಿದರು. ಜತೆಗೆ ಅನೇಕ ಕಡೆ ಪ್ರಚಾರ ಸಭೆ ಕೂಡ ನಡೆಸಿದ್ದಾರೆ. ಮಂಜುನಾಥ ಭಂಡಾರಿ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ಇದೀಗ ವಯನಾಡು ಲೋಕ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ತೀರ್ಥಹಳ್ಳಿಯ ಕುಡುಮಲ್ಲಿಗೆಯಲ್ಲಿ ಆಕ್ಸಿಡೆಂಟ್! * ಒಂದೇ ಜಾಗದಲ್ಲಿ ಮೂರು ಬಾರಿ ಕಾರು ಹೊಂಡ ಪಾಲು * ರಾಷ್ಟ್ರೀಯ ಹೆದ್ದಾರಿಯ ಪರಿಶೀಲನೆಗೆ ಗ್ರಾಮಸ್ಥರ ಪಟ್ಟು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಮಾಣ ಹೆಚ್ಚಳವಾಗುತ್ತಿದ್ದು, ದಿನೇ ದಿನೇ ರಸ್ತೆ ಅಪಘಾತಗಳಾಗಿ ಜನರಿಗೆ ತೊಂದರೆಯಾಗುತ್ತಿದೆ. ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮ ಪಂಚಾಯತಿ ಎದುರು ಶಿವಮೊಗ್ಗ ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆಯುತ್ತಿದ್ದು, ಒಂದೇ ಜಾಗದಲ್ಲಿ ಮೂರನೇ ಬಾರಿ ಕಾರು ಹೊಂಡಕ್ಕೆ ಬಿದ್ದಿದ್ದು, ಬದಲಾಗಿ ಅಪಘಾತಗಳ ಸಂಖ್ಯೆೆ ಹೆಚ್ಚಾಾಗುತ್ತಿದೆ. ಒಂದೇ ವಾರದಲ್ಲಿ ಇಷ್ಟೊಂದು ಅಪಘಾತವಾಗಿದ್ದು ಜನರ ಪರಿಸ್ಥಿತಿ ಯಾರೂ ಕೇಳುವವರಿಲ್ಲದಂತಾಗಿದೆ. ಆದ್ದರಿಂದ ಅಪಘಾತ ವಲಯ ಎಂದು ಜನರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಯಾವುದೇ ಸೌಕರ್ಯ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಬೇಕಾಗಿ ಈ ಮೂಲಕ ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಿದ್ದಾರೆ. ಕುಡುಮಲ್ಲಿಗೆ ಕ್ರಾಸ್ ಅಲ್ಲಿ ಅಪಘಾತ ಕುಡುಮಲ್ಲಿಗೆ ಕ್ರಾಸ್ ಬಳಿಯೂ ಪದೇ ಪದೇ ಅಪಘಾತ ನಡೆಯುತ್ತಿದೆ. ಹಲವರ ಜೀವ…
ಚಿಕ್ಕಮಗಳೂರು ಟಾಪ್ ನ್ಯೂಸ್ – ಬಾಳೆಹೊನ್ನೂರು: ಹುಲಿ ದಾಳಿಯಿಂದ ಇಬ್ಬರಿಗೆ ಗಂಭೀರ ಗಾಯ! – ಕಾಫಿನಾಡಿಗೆ ಮತ್ತೆ ಬೀಟಮ್ಮ ಗ್ಯಾಂಗ್ ಎಂಟ್ರಿ! – ವಿದ್ಯುತ್ ಸ್ಪರ್ಶಿಸಿ ಸಲಗ ಸಾವನ್ನಪ್ಪಿರುವ ಘಟನೆ! NAMMUR EXPRESS NEWS ಬಾಳೆಹೊನ್ನೂರು: ಕಾಡು ಪ್ರಾಣಿಯ ದಾಳಿಯಿಂದ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಬಿದರೆ ಪಂಚಾಯಿತಿಯ ನೆಲ್ಲಿಖಾನ್ ಬಳಿ ನಡೆದಿದೆ. ಮೇಸ್ತ್ರಿಯಾದ ರಾಜು ಹಾಗೂ ಅಸ್ಸಾಂ ಮೂಲದ ವ್ಯಕ್ತಿ ಮೇಲೆ ಕಾಡು ಪ್ರಾಣಿ ದಾಳಿ ಮಾಡಿದೆ. ರಾಜು ಅವರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದು, ಅಸ್ಸಾಂ ಮೂಲದ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆಯವರು ಹುಲಿ ಬಿಟ್ಟಿದ್ದಾರೆ ಅದರಿಂದಲೇ ದಾಳಿಯಾಗಿದೆ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಹುಲಿ ದಾಳಿ ಎಂಬ ವದಂತಿ…
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? – ಅಡಿಕೆ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? NAMMUR EXPRESS NEWS 09/11/2024 ಇಂದಿನ ಅಡಿಕೆ ಬೆಲೆ ಹಸ 61009 85400 ಬೆಟ್ಟೆ 48099 55799 ರಾಶಿ ಇಡಿ 34000 49899 ಗೊರಬಲು 23000 30899 ಇಡಿ 34500 49969
ಉಡುಪಿ:ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ – ಭತ್ತ ಗ್ರೇಡ್ ಎ ವಿಧಕ್ಕೆ ದರ 2320 ರೂ. ರಂತೆ ನಿಗದಿ – ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ! NAMMUR EXPRESS NEWS ಉಡುಪಿ: ಕೇಂದ್ರ ಸರಕಾರವು ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಸಾಮಾನ್ಯ ದರ 2300 ರೂ. ಹಾಗೂ ಭತ್ತ ಗ್ರೇಡ್ ಎ ವಿಧಕ್ಕೆ ದರ 2320 ರೂ. ರಂತೆ ನಿಗದಿಪಡಿಸಲಾಗಿದೆ. ಜಿಲ್ಲೆಯ ರೈತರಿಂದ ಭತ್ತವನ್ನು ನಿಯಮಾನುಸಾರ ಖರೀದಿಸಲು ಮತ್ತು ರೈತರಿಗೆ ನೊಂದಣಿ ಕೇಂದ್ರಗಳನ್ನು ತೆರೆದು ನೊಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಭತ್ತವನ್ನು ಖರೀದಿಸಲು ಕರ್ನಾಟಕ ಆಹಾರ ನಿಗಮ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಸದರಿ ಖರೀದಿ ಏಜೆನ್ಸಿಯವರು ರೈತರಿಂದ ಭತ್ತದ ನೊಂದಣಿ ಪ್ರಕ್ರಿಯೆಯನ್ನು ನವೆಂಬರ್ 15 ರಿಂದ ಡಿಸೆಂಬರ್ 31 ರವರೆಗೆ ರೈತರ ನೊಂದಣಿ ಕಾರ್ಯಗಳನ್ನು ಹಾಗೂ 2025 ರ ಜನವರಿ 1 ರಿಂದ ಮಾರ್ಚ್ 31 ರ ಅವಧಿಯೊಳಗೆ ರೈತರಿಂದ…
ಟಾಪ್ ನ್ಯೂಸ್ – ಭದ್ರಾವತಿ: ಕೂಲಿ ಕೆಲಸ ಮಾಡುವ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿ ಗಂಭೀರ ಗಾಯ – ಭದ್ರಾವತಿ: 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ – ಶಿವಮೊಗ್ಗ : ಮೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ: ಐವರ ವಿರುದ್ಧ ಕೇಸ್ – ಶಿವಮೊಗ್ಗ : ಬೈಕ್ ಅಪಘಾತದಲ್ಲಿ ಐಟಿಐ ವಿದ್ಯಾರ್ಥಿಗಳಿಬ್ಬರು ಸಾವು NAMMUR EXPRESS NEWS ಶಿವಮೊಗ್ಗ: ಭದ್ರಾವತಿ ತಾಲೂಕಿನ ಅಂತರಗಂಗೆ ಸಮೀಪದ ಕೆ ಹೆಚ್ ನಗರದ ನಿವಾಸಿ ದೇವೇಂದ್ರಪ್ಪ(52) ಎನುವವರ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಸಂಭವಿಸಿದೆ. ಗಾಯಾಳುವಿನ ತಲೆ ಮುಖ ಸೇರಿದಂತೆ ದೇಹದ ವಿವಿಧ ಕಡೆ ಗಂಭೀರ ಗಾಯಗಳಾಗಿವೆ. ಈತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಕೆ. ಹೆಚ್ ನಗರದಿಂದ ಬಿಸಿಲು ಮನೆಯಲ್ಲಿ ಜಮೀನು ಕೆಲಸಕ್ಕೆ ಹೋಗಿ ವಾಪಸ್ಸ್ ಆಗುವಾಗ ಕರಡಿ ದಿಢೀರ್ ದಾಳಿ ನಡೆಸಿದೆ. ದೇವೇಂದ್ರಪ್ಪ ಮೂಲತಃ ಟ್ರೈಲರಿಂಗ್ ಕೆಲಸ ಮಾಡುವವರಾಗಿದ್ದಾರೆ. ಟೈಲರಿಂಗ್ ಜೊತೆಗೆ ಕೃಷಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.…
ರಸಪ್ರಶ್ನೆಯಲ್ಲಿ ವಾಗ್ದೇವಿ ವಿದ್ಯಾರ್ಥಿಗಳಸಾಧನೆ! – ವಿಭಾಗ ಮಟ್ಟಕ್ಕೆ ಆಯ್ಕೆಯಾದ ಪಾರ್ಥ ಎಂಆರ್, ನಕುಲ್ ಕೆ.ಸಿ, ಚಿರಾಗ್ ಗೌಡ ವೈ.ಆರ್ – ವಾಗ್ದೇವಿ ಶಾಲೆ ಆಡಳಿತ ಮಂಡಳಿ ಅಭಿನಂದನೆಗಳು NAMMUR EXPRESS NEWS ತೀರ್ಥಹಳ್ಳಿ: ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಲ್ಲಿ ನಡೆದ ಜಿಲ್ಲಾಮಟ್ಟದ 2024 ನೆಯ ಸಾಲಿನ (Rural IT Quiz) ರೂರಲ್ ಐ.ಟಿ ಕ್ವಿಜ್ ಕಾರ್ಯಕ್ರಮದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪಾರ್ಥ ಎಂಆರ್ ( 8 ನೆಯ ತರಗತಿ ) ಮತ್ತು ನಕುಲ್ ಕೆ.ಸಿ (10 ನೆಯ ತರಗತಿ ) ಮತ್ತು ಚಿರಾಗ್ ಗೌಡ ವೈ.ಆರ್ (8 ನೆಯ ತರಗತಿ) ಇವರು ಭಾಗವಹಿಸಿ ಅತ್ಯುತ್ತಮವಾಗಿ ಸ್ಪರ್ಧಿಸಿ ತುಮಕೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಮಾರು 120ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಈ ಕ್ವಿಜ್ ಪಂದ್ಯಾವಳಿಗೆ ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದು, ಅತ್ಯುತ್ತಮವಾಗಿ ಅಂಕಗಳನ್ನು ಪಡೆದ 50 ವಿದ್ಯಾರ್ಥಿಗಳನ್ನು ಮಾತ್ರ ವಿಭಾಗಮಟ್ಟಕ್ಕೆ ಆಯ್ಕೆಮಾಡಲಾಗುವುದು. ಇದರಲ್ಲಿ ಪಾರ್ಥ ಪ್ರಥಮ ಸ್ಥಾನ ಹಾಗೂ ನಕುಲ್ 4 ನೆಯ…
ಜೀವನಾನುಭವ ಕಥನ “ಬರೆದಷ್ಟೂ ಮೊಗೆದಷ್ಟೂ ” ಕೃತಿ ಲೋಕಾರ್ಪಣೆ – ಶೃಂಗೇರಿಯ ಉಳುವೆಬೈಲು ದೇಗುಲದಲ್ಲಿ ಚಿಂತನಾ ವ್ಯಾಟ್ಸಪ್ ಬಳಗ ಗಣಿತವನ ಶಿವಶಂಕರ್ ಅವರ ಕೃತಿ ಬಿಡುಗಡೆ – ಕನ್ನಡ ಸಾಹಿತ್ಯ ಪರಿಷತ್ ಶೃಂಗೇರಿ ಸಹಯೋಗದಲ್ಲಿ ಕಾರ್ಯಕ್ರಮ NAMMUR EXPRESS NEWS ಶೃಂಗೇರಿ: ಶೃಂಗೇರಿಯ ಉಳುವೆಬೈಲು ಪ್ರಸನ್ನ ಮಹಾಗಣಪತಿ ದೇವಾಲಯದಲ್ಲಿ , ಕನ್ನಡ ಸಾಹಿತ್ಯ ಪರಿಷತ್ ಶೃಂಗೇರಿ ಸಹಯೋಗದಲ್ಲಿ ಚಿಂತನಾ ವ್ಯಾಟ್ಸಪ್ ಬಳಗ ಗಣಿತವನ ಶಿವಶಂಕರ್ ಅವರ ಜೀವನಾನುಭವ ಕಥನ ಬರೆದಷ್ಟೂ ಮೊಗೆದಷ್ಟೂ ಕೃತಿ ಲೋಕಾರ್ಪಣೆ ಸಮಾರಂಭ ನಡೆಯಿತು ಬೀರೂರು ಕ್ಷೇತ್ರಶಿಕ್ಷಣಾಧಿಕಾರಿಗಳು ರುದ್ರಪ್ಪ ಟಿ.ಆರ್ ಬಿಡುಗಡೆಗೊಳಿಸಿ ಮಾತನಾಡಿ, ಚೈತನ್ಯದ ತರಬೇತಿ ದಿನಗಳ ಸಂಭ್ರಮವನ್ನು ನೆನಪಿಸಿಕೊಂಡರು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಟಿ.ಎಂ. ಕುಮಾರ್ ಆತ್ಮಕಥನ ಬರೆಯುವುದು ಒಂದು ಸಂಕೀರ್ಣ ಅನುಭವ. ಕೃತಿಕಾರರು ಸರಳವಾಗಿ ತೆರೆದಿಟ್ಟಿದ್ದಾರೆ.ಇದರ ಅನುಭವ ಮುಂದಿನ ಮಡಿಲು ಕೃತಿಯಲ್ಲಿ ನಿಮಗೆ ಕಾಣಸಿಗುತ್ತದೆ ಎಂದರು.ಸಾಹಿತ್ಯ ಪರಿಷತ್ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಪರಿಷತ್ತಿನ ಒಂದು ತಿಂಗಳ ಕಾರ್ಯಕ್ರಮದ ರೂಪು…
ವೆನ್ಲಾಕ್ ಜಿಲ್ಲಾಸ್ಪತ್ರೆ ಹೈಟೆಕ್: ಬಡವರಿಗೆ ವರದಾನ – ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡ – ಮೊದಲ ದಿನವೇ 7 ಶಸ್ತ್ರಚಿಕಿತ್ಸೆ: ಡಿ.1ರಿಂದ ಶಸ್ತ್ರಚಿಕಿತ್ಸಾ ಹಾಗೂ ಮೂಳೆ ವಿಭಾಗದ ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭ NAMMUR EXPRESS NEWS ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡದಲ್ಲಿ ನ.6ರಿಂದ ಶಸ್ತ್ರಚಿಕಿತ್ಸೆಗಳನ್ನು ಪ್ರಾರಂಭಿಸಲಾಗಿದ್ದು, ಮೊದಲ ದಿನವೇ 7 ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತಜ್ಞ ವೈದ್ಯ ಡಾ. ಸದಾನಂದ ಪೂಜಾರಿ ಹಾಗೂ ಆಸ್ಪತ್ರೆ ಸಿಬ್ಬಂದಿ ತಂಡ ಕಾರ್ಯಾರಂಭಕ್ಕೆ ಸಹಕಾರ ಮಾಡಿದ್ದಾರೆ. ಮೊದಲ ದಿವಸ ಡಾ. ಸುರೇಶ ಪೈ ತಂಡದವರಿಂದ ಥೋರಾಸಿಕ್ ಸರ್ಜರಿ ಮಾಡಲಾಯಿತು. ಡಾ. ಹೇಮಲತಾ ಹಾಗೂ ಡಾ. ವಿಶ್ವ ವಿಜೇತ ತಂಡವು ಐದು ಜನರ ಮೂಗಿನ ಶಸ್ತ್ರಚಿಕಿತ್ಸೆ ನಡೆಸಿದರು. ಡಾ. ಅರ್ಜುನ್ ಶೆಟ್ಟಿ ತಂಡವು ಮೆದುಳಲ್ಲಿ ರಕ್ತ ಹೆಪ್ಪು ಗಟ್ಟಿದ ರೋಗಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಿದರು. ಡಾ. ಸುರೇಶ ಭಟ್ ಅರವಳಿಕೆ ತಂಡದ ಮುಖ್ಯಸ್ಥರಾಗಿದ್ದು ಎಲ್ಲ…