ಹಣಗೆರೆ ಹುಂಡಿ ಎಣಿಕೆ: ಸಮಿತಿ ನೇತೃತ್ವದಲ್ಲಿ ಎಣಿಕೆ – ಎಣಿಕೆಯಲ್ಲಿ 77 ಸಾವಿರ ಹೆಚ್ಚುವರಿ ಹಣ – ಎಣಿಕೆ ಮೋಸ ಆಗಿದ್ದಾ.. ಮಿಸ್ ಆಗಿದ್ದಾ…? – ದೇವಸ್ಥಾನ ಖಾತೆ ಬದಲು: ಎಸ್ ಬಿಐಗೆ ಹಣ ವರ್ಗಾವಣೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ನ. 7ರಂದು ನಡೆದ ಹುಂಡಿ ಎಣಿಕೆಯಲ್ಲಿ ನ. 8 ರಂದು ನಡೆದ ಮರು ಎಣಿಕೆಯಲ್ಲಿ ಹೆಚ್ಚುವರಿ 77 ಸಾವಿರ ಹಣ ಸಿಕ್ಕಿಡೆ. ದೇವಸ್ಥಾನ ಸಮಿತಿ ಮತ್ತು ತಹಸೀಲ್ದಾರ್ ನೇತೃತ್ವದಲ್ಲಿ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು. ಬೆಳಿಗ್ಗೆ ತಹಶೀಲ್ದಾರ್, ಡಿವೈಎಸ್ಪಿ ಸಮ್ಮುಖದ ಬಿಗಿ ಬಂದೋಬಸ್ನಲ್ಲಿ ಹಣವನ್ನು ಹಣಗೆರೆಗೆ ಸಾಗಿಸಲಾಗಿದ್ದು ಮರು ಎಣಿಕೆ ನಡೆದಿದೆ. ಒಟ್ಟು 66 ಲಕ್ಷದ 4 ಸಾವಿರದ 950 ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಎಣಿಕೆ ಮಾಡದೆ ಹೆಚ್ಚುವರಿಯಾಗಿ ಉಳಿಸಿಟ್ಟಿದ್ದ 77,930 ರೂಪಾಯಿ ಹಣವನ್ನು ಸಮಿತಿ…
Author: Nammur Express Admin
ವಿದ್ಯಾರ್ಥಿ ಚುನಾವಣೆ: ನವದೀಪ್ ಹೆಗ್ಡೆಗೆ ವಿಜಯಮಾಲೆ! – ಉಡುಪಿ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಚುನಾವಣೆ – ಪ್ರಧಾನ ಕಾರ್ಯದರ್ಶಿಯಾಗಿ ಮೇಗರವಳ್ಳಿಯ ನವದೀಪ್ ಹೆಗ್ಡೆ ಆಯ್ಕೆ – ಸ್ನೇಹಿತರು, ವಿದ್ಯಾರ್ಥಿಗಳ ಶುಭಾಶಯಗಳು NAMMUR EXPRESS NEWS ಉಡುಪಿ: ಉಡುಪಿ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿಗಳ ಚುನಾವಣೆ 26 ಅಕ್ಟೋಬರ್ 2024 ರಂದು ಶ್ರೀ ತುಳುಜಾ ಭವಾನಿ ಮರಾಠಿ ಸಮುದಾಯದ ಭವನ ಕುಂಜಿಬಿಟ್ಟು ಉಡುಪಿಯಲ್ಲಿ ನೆರವೇರಿದ್ದು,ತೀರ್ಥಹಳ್ಳಿಯ ಮೇಗರವಳ್ಳಿ ನಿವಾಸಿ ನವದೀಪ್ ಎಂಪಿ ಹೆಗ್ಡೆ ಉಡುಪಿ ಜಿಲ್ಲೆ ಸ್ಟೂಡೆಂಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ನವದೀಪ್ ಎಂ.ಪಿ ಹೆಗ್ಡೆ ಅವರು ನಿವೃತ್ತ ಪ್ರಾಂಶುಪಾಲರಾದ ಪ್ರಭಾಕರ್ ಹೆಗ್ಡೆ ಪುತ್ರ. ಉತ್ತಮ ಸಂಘಟನೆ, ಮಾತುಗಾರಿಕೆ, ವಿದ್ಯಾರ್ಥಿಗಳ ಸ್ಪಂದನೆ ಮೂಲಕ ಈಗಾಗಲೇ ಅಪಾರ ಸ್ನೇಹಿತ ವಲಯವನ್ನು ಹೊಂದಿರುವ ನವದೀಪ್ ಅವರು ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲಾ ಡಿಗ್ರಿ ಕಾಲೇಜು ವಿದ್ಯಾರ್ಥಿ ಚುನಾವಣೆಯಲ್ಲಿ ಭಾಗವಹಿಸಿ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಇದು ಹೆಮ್ಮೆಯ ವಿಷಯ ಆಗಿದ್ದು, ಇವರಿಗೆ…
ಅಬ್ಬಾ…ಚಳಿ ಶುರುವಾಯ್ತು! – ರಾತ್ರಿ ಮತ್ತು ಮುಂಜಾನೆ ಸಾಕಷ್ಟು ಚಳಿ ವಾತಾವರಣ – ಮುಂದಿನ ತಿಂಗಳು ಚಳಿ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ – ಚಳಿ ಇರುವುದರಿಂದ ಮಳೆ ಮರೆಯಲಾಗುತ್ತಾ? ವಿಶೇಷ ವರದಿ: ಪ್ರಾಪ್ತಿ ಸಾಗರ NAMMUR EXPRESS NEWS ರಾಜ್ಯಾದ್ಯಂತ ಮಳೆ ಪ್ರಮಾಣ ತಗ್ಗುತ್ತಿದ್ದಂತೆಯೇ ಚಳಿ ಎಂಟ್ರಿ ಕೊಟ್ಟಿದೆ, ಇದರಿಂದ ರಾಜ್ಯದಲ್ಲಿ ಚಳಿ ಶುರುವಾಗಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಇರುವುದರಿಂದ ತಣ್ಣನೆ ಗಾಳಿ ಬೀಸುತ್ತಿದ್ದು, ರಾತ್ರಿ ವೇಳೆ ಚಳಿ ಕಾಣಿಸಿಕೊಳ್ಳುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಒಂದು ವಾರದಿಂದ ತಂಪಾದ ವಾತಾವರಣ ಕಂಡುಬಂದಿದ್ದು ರಾತ್ರಿ ಕ್ರಮೇಣ ಚಳಿ ಆವರಿಸಿಕೊಂಡ ಅನುಭವವಾಗುತ್ತಿದೆ. ಮಳೆಯ ವಾತಾವರಣ ಕಡಿಮೆಯಾಗಿದ್ದು ಇದರಿಂದ ಕೆಲವು ಜಿಲ್ಲೆಗಳಲ್ಲಿಯೂ ಚಳಿ ಆವರಿಸಿಕೊಂಡಿದೆ ಎಂದು ಹೇಳಬಹುದು, ತಾಪಮಾನ ಹೆಚ್ಚಾಗಿದ್ದರೆ, ಬೀಸುವ ಗಾಳಿ ತಂಪಾಗಿರುವುದಿಲ್ಲ. ವಾರದಿಂದ ಕೆಲ ಜಿಲ್ಲೆಗಳಲ್ಲಿ ಹಗಲಿನಲ್ಲಿ ಬಿಸಿಲು ಕಡಿಮೆ ಇದ್ದರೆ ಸಂಜೆ ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ಈ ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ತಿಂಗಳು ಇನ್ನಷ್ಟು…
ಟಾಪ್ ನ್ಯೂಸ್ ಕರ್ನಾಟಕ – ಸಂಸದ ತೇಜಸ್ವಿ ಸೂರ್ಯ, ಸುದ್ದಿತಾಣಗಳ ವಿರುದ್ಧ ಕೇಸ್! – ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಜೀವಂತ ಹೂತುಹಾಕಿದರು! – ಬೆಂಗಳೂರು: ಅಪಹರಣಗೊಂಡ ಹೆಣ್ಣುಮಗು ಪತ್ತೆ NAMMUR EXPRESS NEWS ಹಾವೇರಿ: ವಕ್ಫ್ ವಿವಾದಕ್ಕೆ ಸಂಭಂಧಿಸಿದಂತೆ ಸುಳ್ಳು ಸುದ್ದಿ ಹಂಚಿಕೊಂಡ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಎರಡು ಸುದ್ದಿ ತಾಣಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಹಾವೇರಿಯ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನ್ಯೂಸ್ ಮಾನಿಟರಿಂಗ್ ಸೆಲ್ಲಿನಲ್ಲಿ ಕೆಲಸ ಮಾಡುವ ಸುನಿಲ್ ಎನ್ನುವವರು ನೀಡಿದ ದೂರನ್ನು ಆಧರಿಸಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. E-Paper ಕನ್ನಡ ದುನಿಯಾ ಹೆಸರಿನ ಸುದ್ದಿ ತಾಣದಲ್ಲಿ, “”ಬ್ರೇಕಿಂಗ್ : ಜಮೀನಿನ ಪಹಣಿಯಲ್ಲಿ ವಕ್ಷ ಹೆಸರು ನಮೂದು ಹಾವೇರಿಯಲ್ಲಿ ರೈತ ಆತ್ಮಹತ್ಯೆ ಎಂಬ ಶಿರ್ಷಿಕೆ ಅಡಿಯಲ್ಲಿ ಹಾವೇರಿ: ಜಮೀನಿನ ಪಹಣಿಯಲ್ಲಿ ಪಕ್ಷ ಹೆಸರು ನಮೂದಾಗಿದ್ದಕ್ಕೆ ಹಾವೇರಿಯಲ್ಲಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎನ್ನುವ ಸುದ್ದಿ ಪ್ರಕಟವಾಗಿತ್ತು. ಹಾವೇರಿ…
ಕರಾವಳಿ ಟಾಪ್ ನ್ಯೂಸ್ – ಮಂಗಳೂರು ವಿಮಾನ ನಿಲ್ದಾಣದ ಬಳಿಯೇ ಚಿರತೆ ಪ್ರತ್ಯಕ್ಷ! – ಪುತ್ತೂರು: ಜಾಗದ ವಿಚಾರ, ನೆರಮನೆಯವನನ್ನು ಕಡಿದು ಕೊಲೆ! – ಸುಳ್ಯ: ವಾಹನ ನಡುವೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು NAMMUR EXPRESS NEWS ಮಂಗಳೂರು: ಬಜ್ಪೆಯ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆಯೊಂದು ಪತ್ತೆಯಾದ ಘಟನೆ ನಡೆದಿದೆ.ಈ ಚಿರತೆಯನ್ನು ಖುದ್ದು ವಿಮಾನ ನಿಲ್ದಾಣದ ಅಧಿಕಾರಿಯೇ ನೋಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಬೆಳ್ಳಂಬೆಳಗ್ಗೆ ವೇಳೆ ಕಾರಿನಲ್ಲಿ ಕರ್ತವ್ಯಕ್ಕೆ ಬರುತ್ತಿದ್ದರು. ಈ ವೇಳೆ ಕಾರಿನ ಮುಂಭಾಗವಾಗಿ ಚಿರತೆಯೊಂದು ರಸ್ತೆ ದಾಟಿದೆ. ತಕ್ಷಣ ಅಧಿಕಾರಿ ತಮ್ಮ ಮೊಬೈಲ್‌ನಿಂದ ಚಿರತೆಯ ಫೋಟೊ ಕ್ಲಿಕ್ಕಿಸಿ, ಬಳಿಕ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. * ಪುತ್ತೂರು: ಜಾಗದ ವಿಚಾರ, ನೆರಮನೆಯವನನ್ನು ಕಡಿದು ಕೊಲೆ! ಪುತ್ತೂರು:…
ಯಕ್ಷಗಾನ ಮೇಳಗಳ ತಿರುಗಾಟ ಶುರು! – ಕರಾವಳಿ, ಮಲೆನಾಡಲ್ಲಿ ಇನ್ನು ಚಂಡೆ ಸದ್ದು – ಚಳಿ ನಡುವೆ ಯಕ್ಷಗಾನ ಪ್ರಿಯರಿಗೆ ಸಂಭ್ರಮ NAMMUR EXPRESS NEWS ಮಂಗಳೂರು/ ಉಡುಪಿ: ಕರಾವಳಿ ಮತ್ತು ಮಲೆನಾಡಿನ ಮೆಚ್ಚಿನ ಕಲೆ ಯಕ್ಷಗಾನದ ಸಂಭ್ರಮ ಇದೀಗ ಶುರುವಾಗಿದೆ. ಈಗಾಗಲೇ ಕೆಲವು ಮೇಳಗಳು ತಿರುಗಾಟ ಆರಂಭಿಸಿದ್ದರೆ, ನವೆಂಬರ್ 13ರಿಂದ 29ರ ನಡುವೆ ಇನ್ನಷ್ಟು ಮೇಳಗಳು ಸಂಚಾರ ಹೊರಡಲಿವೆ. ಹೊಸ ಪ್ರಸಂಗ, ಹೊಸ ಕಲಾವಿದರು ಮೇಳದಲ್ಲಿ ಸ್ಥಾನ ಪಡೆಯು ವುದು, ಈಗಾಗಲೇ ಮೇಳದಲ್ಲಿ ಇದ್ದವರಿಗೆ ವೇಷದ ಸ್ಥಾನದಲ್ಲಿ ಭಡ್ತಿ ದೊರೆಯುವುದು, ಭಾಗವತರು ಹಾಗೂ ಹಿಮ್ಮೇಳ ಕಲಾ ವಿದರ ಬದಲಾವಣೆ, ಕಟೀಲಿನ 6 ಮೇಳಗಳಲ್ಲಿ ನಡೆಯುವ ಆಂತರಿಕ ವರ್ಗಾವಣೆ, ಆರಂಭವಾಗುವ ಹೊಸ ಮೇಳಗಳು, ಅದಕ್ಕೆ ಸೇರ್ಪಡೆಯಾಗುವ ಕಲಾವಿದರು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಧರ್ಮಸ್ಥಳ ಮೇಳದ ತಿರುಗಾಟ ಆರಂಭ ಧರ್ಮಸ್ಥಳ ಮೇಳ ನ.3ರಿಂದ ಕ್ಷೇತ್ರದಲ್ಲಿ ಸೇವೆಯಾಟ ಆರಂಭಿಸಿದ್ದು, ನ.21ರಿಂದ ಕ್ಷೇತ್ರದ ಹೊರಗಡೆಗೆ ತಿರುಗಾಟ ಹೊರಡಲಿದೆ. ಕಮಲಶಿಲೆ ಮೇಳ ನ.5ರಂದು ಸೇವೆಯಾಟ…
ತೀರ್ಥಹಳ್ಳಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯ ಸಾಧನೆ – ಶ್ರೇಷ್ಠ ಕೆ.ಆರ್ ಪ್ರಥಮ ಸ್ಥಾನ: ನಾಭಿಹ ಫಾತಿಮಾ, ಅಕ್ಷರ ಕೆ ಆರ್ ತೃತೀಯ, – ಅದಿತಿ ಎ ಗೌಡ, ಅಕ್ಷಯ್, ಅಭಯ್ ಪ್ರಸಾದ್, ಎಂ.ಪಿ ಅಭಿರುಧ್, ಸಮರ್ಥ್, ಆಯುಷ್ ಚತುರ್ಥ ಸ್ಥಾನ – ಪ್ರವೀಣ್ಯ ಮತ್ತು ವೈಭವ್ ಪಂಚಮ ಸ್ಥಾನದ ಸಾಧನೆ NAMMUR EXPRESS NEWS ತೀರ್ಥಹಳ್ಳಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 19 ರಾಜ್ಯ ಮಟ್ಟದ ಅಬಾಕಸ್ ಮತ್ತು 7ನೇ ರಾಜ್ಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಚಿತ್ರದುರ್ಗದ ಮುರುಘಾಮಠದಲ್ಲಿ ತೀರ್ಥಹಳ್ಳಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯ 11 ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಕೆ.ಆರ್ 6ನೇ ವಿಭಾಗದಲ್ಲಿ 100 ಕ್ಕೆ 100 ಲೆಕ್ಕ ಐದು ನಿಮಿಷದಲ್ಲಿ ಮಾಡಿ ಪ್ರಥಮ ಸ್ಥಾನ ಪಡೆದಿದ್ದಾಳೆ. ನಾಭಿಹ ಫಾತಿಮಾ ಮತ್ತು ಅಕ್ಷರ ಕೆ ಆರ್ ತೃತೀಯ, ಅದಿತಿ ಎ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶನಿ ದೇವನ ಆಶೀರ್ವಾದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಗೆ ಸೇರಿದ ಜನರಿಗೆ ಈ ದಿನ ಸಾಮಾನ್ಯವಾಗಿರಲಿದೆ. ಈ ದಿನ ನೀವು ಮನೆಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವುದರಿಂದ ಮನಸ್ಸು ಸಂತೋಷವಾಗಿರುವುದು. ಮನೆಯ ಸದಸ್ಯರೊಂದಿಗೆ ಯಾವುದಾದರೂ ವಿಷಯಕ್ಕಾಗಿ ವಿವಾದ ಉಂಟಾಗಿದ್ದರೆ ಅದು ಈ ದಿನ ಕೊನೆಗೊಳ್ಳಲಿದೆ. ಇಂದು ನೀವು ಎಲ್ಲಾ ಸದಸ್ಯರು ಸೇರಿ ಯೋಜನೆಗಳ ಬಗ್ಗೆ ಮಾತುಕತೆ ನಡೆಸುವಿರಿ. ಇಂದು ನೀವು ನಿಮ್ಮ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ನಿರಾಶೆಯನ್ನು ಹೊಂದುವ ಕಾರಣದಿಂದಾಗಿ ಸ್ವಲ್ಪ ಒತ್ತಡಕ್ಕೆ ಒಳಗಾಗುವಿರಿ. ** ವೃಷಭ ರಾಶಿ : ಇಂದು ರಾಜಕೀಯಕ್ಕೆ ಸಂಬಂಧಿಸಿದ ವೃಷಭ ರಾಶಿಗೆ ಸೇರಿದ…
ಹಾಸನ ಅಕ್ಷರ ಬುಕ್‌ಹೌಸ್‌ಗೆ ದಶಕದ ಸಂಭ್ರಮ! – ಓದುಗ ವಲಯದ ಮೆಚ್ಚುಗೆ ಪಡೆದ ಪುಸ್ತಕ ಮಳಿಗೆ – ಟೈಮ್ಸ್ ಗಂಗಾಧರ್, ಶಿವಕುಮಾರ್ ಸಾಹಸಕ್ಕೆ ಅಭಿನಂದನೆ NAMMUR EXPRESS NEWS ಹಾಸನ: ಸಾವಿರ ಉದ್ಯಮಗಳನ್ನು ಹುಟ್ಟು ಹಾಕುವುದು ಕಷ್ಟದ ಕೆಲಸವಲ್ಲ, ಆದರೆ ಪುಸ್ತಕ ಸಂಸ್ಕೃತಿ ಹುಟ್ಟು ಹಾಕುವುದು ಬಹಳ ಕಷ್ಟದ ಕೆಲಸ. ಆದರೂ ಓದುವ ಸಂಸ್ಕೃತಿ ಹುಟ್ಟು ಹಾಕಿದ ಅಕ್ಷರ ಬುಕ್ ಹೌಸ್ ಮಾಲೀಕರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿ ಬಾನು ಮುಸ್ತಾಕ್ ತಿಳಿಸಿದ್ದಾರೆ. ಹಾಸನದಲ್ಲಿ ನಡೆದ ಅಕ್ಷರಬುಕ್ ಹೌಸ್‌ನ ದಶಕದ ಸಂಭ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾಹಿತ್ಯ ಲೋಕಕ್ಕೆ ಮುಕುಟ ಮಣಿ ಕೊಟ್ಟ ಹಾಸನ ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಒಂದು ಉತ್ತಮ ಪುಸ್ತಕ ಮಳಿಗೆ ಇಲ್ಲವೆಂಬ ಕೊರಗು ಎಲ್ಲರನ್ನೂ ಕಾಡುತಿತ್ತು. ಸಾಹಿತ್ಯ ಪ್ರಿಯರ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ದಶಕದ ಹಿಂದೆಯೇ ನಗರದಲ್ಲಿ ಪುಸ್ತಕ ಮಳಿಗೆ ಪ್ರಾರಂಭಿಸಿ ಸಾಹಿತ್ಯಾಸಕ್ತರನ್ನು…
ವಿರಕ್ತಮಠದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ – ನ.9ರ ಸಂಜೆ ಪಂದ್ಯಾವಳಿ: ಸರ್ವರಿಗೂ ಸ್ವಾಗತ – ಅರಗದ ಗೆಳೆಯರ ಬಳಗದ ವತಿಯಿಂದ ಆಯೋಜನೆ ತೀರ್ಥಹಳ್ಳಿ ತಾಲೂಕು ಆರಗ ಗ್ರಾ,ಪಂ ವ್ಯಾಪ್ತಿಯ ವಿರಕ್ತಮಠದಲ್ಲಿ ದಿ:9:11:24 ರ ಶನಿವಾರದಂದು ಸಂಜೆ 8 ಗಂಟೆಗೆ ಗೆಳೆಯರ ಬಳಗದ ವತಿಯಿಂದ ವಿರಕ್ತ ಮಠದ ಗುತ್ಯಮ್ಮ ದೇವಸ್ಥಾನದ ಆವರಣದಲ್ಲಿ ಐದನೇ ವರ್ಷದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪ್ರಥಮ ಬಹುಮಾನ ವಾಗಿ 20,000, ದ್ವಿತೀಯ ಬಹುಮಾನ 10,000, ತೃತೀಯ ಬಹುಮಾನ 5000 ಹಾಗೂ ಪಾರಿತೋಷಕವನ್ನು ನೀಡಲಾಗುವುದು. ಕ್ರೀಡಾಕೂಟಕ್ಕೆ ಕಬ್ಬಡಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮಂಜುನಾಥ 94802 17889 .ಆನಂದ 9448026795 ಸಂಪರ್ಕಿಸಬಹುದಾಗಿದೆ.