ಹುಲಿಕಲ್ ಘಾಟಿ ರಸ್ತೆ ಹಾಳಾಗಿದೆ ಸ್ವಾಮಿ..! – ಪ್ರತಿನಿತ್ಯ ಸಾವಿರಾರು ಪ್ರಯಾಣಿಕರ ಪರದಾಟ – ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ರಸ್ತೆ ಅವ್ಯವಸ್ಥೆ – ಮಾಸ್ತಿಕಟ್ಟೆಯಿಂದ ಕೈಮರದವರೆಗೆ ಭಾರೀ ಹೊಂಡ ಗುಂಡಿ NAMMUR EXPRESS NEWS ತೀರ್ಥಹಳ್ಳಿ/ಹೊಸನಗರ: ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ಹುಲಿಕಲ್ ಘಾಟಿಯಲ್ಲಿ ಪ್ರತೀ ದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಪ್ರವಾಸಿಗರು ಕೂಡ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಈ ರಸ್ತೆ ಇದೀಗ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಮಂಗಳೂರು, ಉಡುಪಿ, ಕುಂದಾಪುರ,ಸಿದ್ದಾಪುರ,ಮಾಸ್ತಿಕಟ್ಟೆ ಯಡೂರು, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗ,ಬೆಂಗಳೂರು ದಾವಣಗೆರೆ,ಮಂತ್ರಾಲಯ, ರಾಯಚೂರು, ಕೂಡ್ಲಗಿ ಮುಂತಾದ ಊರುಗಳಿಗೆ ಸುಗಮ ಸಂಚಾರ ಮಾರ್ಗವಾಗಿರುವ ಹುಲಿಕಲ್ ಘಾಟಿ ರಸ್ತೆ ಅವ್ಯವಸ್ಥೆ ಇದೀಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಬಸ್ ಓಡಾಡೋದು ಇಲ್ಲೇ…! ಈ ರಸ್ತೆಯಲ್ಲಿ ಪ್ರತಿದಿನ ಐವತ್ತಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ ಗಳು 30ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಹಾಗೂ ಸರಕು ಸಾಗಾಣಿಕೆ ವಾಹನಗಳು, ಪ್ರವಾಸಿ ವಾಹನ ಹೆಚ್ಚಾಗಿ…
Author: Nammur Express Admin
ಮದ್ಯಪ್ರಿಯರಿಗೆ ಗುಡ್ ನ್ಯೂಸ್ * ನವೆಂಬರ್ 20ರಂದು ಬಾರ್ ಬಂದ್ ಆಗಲ್ಲ * ಸಿಎಂ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿ * ಮುಷ್ಕರ ಹಿಂಪಡೆದ ಬಾರ್ ಮಾಲೀಕರು ನಿರ್ಧಾರ NAMMUR EXPRESS NEWS ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾರ್ ಮಾಲೀಕರ ಸಂಘ ನ.20ರಂದು ರಾಜ್ಯಾದ್ಯಂತ ಬಾರ್ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಾರ್ ಮಾಲೀಕರ ಸಂಘದ ಪದಾಧಿಕಾರಿಗಳ ಸಂಧಾನ ಸಭೆ ಕರೆಯಲಾಗಿತ್ತು ಈಗ ಸಭೆಯು ಯಶಸ್ವಿಯಾಗಿದ್ದು, ಬಂದ್ ಮಾಡುವ ವಿಚಾರ ಹಿಂಪಡೆಯಲಾಗಿದೆ. ಮಂಗಳವಾರ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿತ್ತು. ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನವೆಂಬರ್ 20ರ ಬುಧವಾರ ಕರೆ ನೀಡಲಾಗಿದ್ದ ಬಾರ್ ಬಂದ್ ಕರೆ ವಾಪಸ್ ಪಡೆಯಲಾಗಿದೆ. ಇದರಿಂದ ಮದ್ಯಪ್ರಿಯರು ಸಂತಸಗೊಂಡಿದ್ದಾರೆ.
ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತ ತರಬೇತಿ – ಇಂದು ವಿಧಾನ ಸೌಧದಲ್ಲಿ ಸಚಿವ ಮಧು ಬಂಗಾರಪ್ಪ ಚಾಲನೆ – ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ NAMMUR EXPRESS NEWS ಬೆಂಗಳೂರು: ಪ್ರಸಕ್ತ ಬಜೆಟ್ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ನೀಡಲಿದ್ದು, ಇಂದು ಚಾಲನೆ ನೀಡಲಾಗುತ್ತದೆ. ಉಚಿತ ಆನೈನ್ ತರಗತಿಗಳ ಮೂಲಕ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಚಾಲನೆ ನೀಡಲಾಗುವುದು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬುಧವಾರ ಬೆಳಗ್ಗೆ 10.30ಕ್ಕೆ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆನೈನ್ ತರಗತಿಗಳಿಗೆ ಚಾಲನೆ ನೀಡಲಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್, ಆಯುಷ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ರಾಜ್ಯದ ಸಿಇಟಿ, ಕೇಂದ್ರದ ನೀಟ್, ಐಐಟಿಗಳ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಗೌರಿ ಯೋಗ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಮಕ್ಕಳಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಮನೆಯ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವಿರಿ. ವ್ಯಾಪಾರ ಪರಿಸ್ಥಿತಿ ಬಲವಾಗಿರುತ್ತದೆ. ** ವೃಷಭ ರಾಶಿ : ವೃಷಭ ರಾಶಿಯ ಜನರು ಇಂದು ಉತ್ಸುಕರಾಗಿರುತ್ತಾರೆ. ಇಂದು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಪ್ರೇಮಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನಿಮ್ಮ ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವ್ಯಾಪಾರಿಗಳಿಗೆ ಲಾಭದ ಸೂಚನೆಗಳಿವೆ. ನಿಮ್ಮ ಸಂಗಾತಿಯೊಂದಿಗೆ ಘರ್ಷಣೆಯನ್ನು…
ರಾಮಕೃಷ್ಣಪುರದಲ್ಲಿ ನ.22 ಕನ್ನಡ ರಾಜ್ಯೋತ್ಸವ – ಸಮರ್ಪಣ ತಂಡ ಮತ್ತು ಗೆಳೆಯರ ಬಳಗದಿಂದ ಆಯೋಜನೆ – ಖ್ಯಾತ ಗಾಯಕರಿಂದ ಸಂಜೆ 7ಕ್ಕೆ ಸಂಗೀತ ಗಾನ ಸುಧೆ: ಸಾಧಕರಿಗೆ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ಸಮರ್ಪಣ ತಂಡ ಮತ್ತು ಗೆಳೆಯರ ಬಳಗ ರಾಮಕೃಷ್ಣಪುರ ಇವರ ಸಹಯೋಗದಲ್ಲಿ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವ ನ. 22 ಶುಕ್ರವಾರದಂದು ಕುವೆಂಪು ರಂಗ ಮಂದಿರ ರಾಮಕೃಷ್ಣಪುರದಲ್ಲಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಶಾಲಾ ಮಕ್ಕಳೊಂದಿಗೆ ನೆರವೇರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರು ಆದಂತಹ ಅಂಬರೀಶ್ ಭಾರದ್ವಾಜ್ ಅವರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ತಂಡಗಳಿಗೆ ವಾಲಿಬಾಲ್ ಕ್ರೀಡಾಕೂಟ, ಸಂಜೆ 6 ಗಂಟೆಗೆ ಸಾಧಕರಿಗೊಂದು ಸನ್ಮಾನ ಕಾರ್ಯಕ್ರಮ ಹಾಗೂ ಏಳು ಗಂಟೆಗೆ ಸಂಗೀತ ಗಾನ ಸುಧೆ ಕಾರ್ಯಕ್ರಮ ನಡೆಯಲಿದೆ. ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಾಕರಾದ ಶ್ರೀ ಕಂಬದ ರಂಗಯ್ಯ ಹಾಗೂ ಶಶಿಕುಮಾರ್ ಕಾರಂತ್, ಉಷಾ ಬಾಳೆಬೈಲು, ನಿಧಿ ಸುರೇಶ್ ಇವರಿಂದ ಈ…
ಜಪಾನ್ ತೆರಳಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ! – ಗ್ಲೋಬಲ್ ಅಚೀವರ್ ಅವಾರ್ಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ – ಮಜಾ ಭಾರತ ಕಾರ್ತಿಕ್ ಸೇರಿ ಅನೇಕ ಗಣ್ಯರು, ಕಲಾವಿದರ ಸಮಾಗಮ – ವಿಶ್ವವಾಣಿ ಪತ್ರಿಕೆ ಆಯೋಜಿಸಿರುವ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜಪಾನ್ ತೆರಳಿದ್ದಾರೆ. ಸೋಮವಾರ ರಾತ್ರಿ ತೆರಳಿರುವ ಅವರು, ಗ್ಲೋಬಲ್ ಅಚೀವರ್ ಅವಾರ್ಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಜಾ ಭಾರತ ಕಾರ್ತಿಕ್ ಸೇರಿ ಅನೇಕ ಗಣ್ಯರು, ಕಲಾವಿದರ ಸಮಾಗಮವಾಗಲಿದ್ದು, ವಿಶ್ವವಾಣಿ ಪತ್ರಿಕೆ ಆಯೋಜಿಸಿರುವ ಕಾರ್ಯಕ್ರಮ ಇದಾಗಿದೆ. ರಾಜ್ಯದ ಗೃಹ ಮಂತ್ರಿಗಳಾಗಿ, ಬಿಜೆಪಿ ನಾಯಕರಾಗಿ, ಪಕ್ಷ ನಿಷ್ಠರಾಗಿ ಗುರುತಿಸಿಕೊಂಡಿದ್ದಾರೆ.
ಕರ್ನಾಟಕ ಟಾಪ್ 5 ನ್ಯೂಸ್ – ಈಜು ಕೊಳದಲ್ಲಿ ಮೃತಪಟ್ಟಿದ್ದ ಮೂವರು ಯುವತಿಯರ ಅಂತ್ಯಸಂಸ್ಕಾರ! – ಚಿತ್ರದುರ್ಗ: ಬಾಂಗ್ಲಾ ವಲಸಿಗರ ವಶಕ್ಕೆ ಪಡೆದ ಪೊಲೀಸರು – ತುಮಕೂರು : ಕೆರೆಗೆ ಕಾಲುಜಾರಿ ಬಿದ್ದು ತಂದೆ ಮಗಳು ಸಾವು – ಚಿತ್ರದುರ್ಗ : ಮಾನಸಿಕ ಖಿನ್ನತೆಯಿಂದ ತಾಯಿ ಮಗಳು ಆತ್ಮಹತ್ಯೆ – ಬೆಳಗಾವಿ: ರಸ್ತೆಯಲ್ಲೇ ಮಹಿಳೆಯ ಬಟ್ಟೆ ಹರಿದು ಹಲ್ಲೆ NAMMUR EXPRESS NEWS ಮಂಗಳೂರು: ಮಂಗಳೂರು ಹೊರ ವಲಯದ ಉಲ್ಲಾಳ ಠಾಣಾ ವ್ಯಾಪ್ತಿಯ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಮೂವರು ಯುವತಿಯರ ಮೃತದೇಹವನ್ನು ಸೋಮವಾರ ಮೈಸೂರಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು, ಮೃತರ ಕುಟುಂಬದವರಿಗೆ ಶವ ಹಸ್ತಾಂತರಿಸಿದರು. 11 ಗಂಟೆಯ ಹೊತ್ತಿಗೆ ಮೂರು ಶವಗಳನ್ನು ಮೈಸೂರಿಗೆ ತಂದ ಕುಟುಂಬವರು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಿ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಿದರು.ಪಾರ್ವತಿ ಅವರ ಅಂತಿಮ ದರ್ಶನಕ್ಕೆ ಅಗ್ರಹಾರದ ಮನೆ ಬಳಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಚಾಮುಂಡಿ ಬೆಟ್ಟದ…
ಅನಂತಶಯನ ಶಾರದಾ ಮಹಿಳಾ ಮಂಡಲದ ಕಾರ್ಯಕ್ರಮ ಸೂಪರ್ – ಕಾರ್ಕಳದ ಜನತೆಯ ಅಭಿಮಾನಕ್ಕೆ ಪಾತ್ರವಾದ ಮಹಿಳಾ ಮಂಡಲ – ಕಾರ್ಕಳ ಲಯನ್ಸ್ ಅಧ್ಯಕ್ಷರಾದ ಜ್ಯೋತಿ ರಮೇಶ್ ಉದ್ಘಾಟನೆ, ಬಹುಮಾನ ವಿತರಣೆ NAMMUR EXPRESS NEWS ಕಾರ್ಕಳ: ಉಡುಪಿ ಜಿಲ್ಲಾ ಕಾರ್ಕಳ ಅನಂತಶಯನ ಶಾರದಾ ಮಹಿಳಾ ಮಂಡಲದ ನವೆಂಬರ್ ತಿಂಗಳ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಕ್ಕಳನ್ನು ಮಹಿಳಾ ಮಂಡಲದ ಸದಸ್ಯರನ್ನು ಅಭಿನಂದಿಸಿ ಮಕ್ಕಳಿಗೆ ಬಹುಮಾನ ವಿತರಿಸಿದ ಬಿಜೆಪಿ ನಾಯಕಿ, ಕಾರ್ಕಳ ಲಯನ್ಸ್ ಅಧ್ಯಕ್ಷರಾದ ಜ್ಯೋತಿ ರಮೇಶ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ದಿನ ಆಚರಿಸುವುದೆಂದರೆ ಅದೊಂದು ಸಂಭ್ರಮವೇ ಸರಿ. ಮಕ್ಕಳನ್ನು ಸದಾ ನಾವು ಸಂಭ್ರಮದಿಂದ ಎದುರುಗೊಂಡು ಅವರೊಂದಿಗೆ ಬೆರೆತು ನಮ್ಮ ಮನಸ್ಸನ್ನು ಹಗುರ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾರದ ಮಹಿಳಾ ಮಂಡಲ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಕಳದ ಜನತೆಯ ಅಭಿಮಾನಕ್ಕೆ ಪಾತ್ರವಾಗಿದೆ. ಹಿರಿಯರಿಗಾಗಿ ಕಿರಿಯರಿಗಾಗಿ ಅಶಕ್ತರಿಗಾಗಿ ಪ್ರತಿಭಾನ್ವಿತರಿಗಾಗಿ ಹಲವು ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರಿಗೆ ಉಪಯುಕ್ತ…
ಟಾಪ್ ನ್ಯೂಸ್ ಶಿವಮೊಗ್ಗ – ತೀರ್ಥಹಳ್ಳಿಯಲ್ಲಿ ಈಜಲು ಹೋಗಿ ಪ್ರಾಣ ಬಿಟ್ಟರೇ ಬ್ಯಾಂಕ್ ಮ್ಯಾನೇಜರ್!? – ತುಂಗಾ ನದಿಯ ತೀರದಲ್ಲಿ ಚಪ್ಪಲಿ, ಮೊಬೈಲ್ ಪತ್ತೆ- ಶಿವಮೊಗ್ಗ : ಹಸುವಿನ ಮೈ ತೊಳೆಯಲು ನದಿಗೆ ಹೋದ ವ್ಯಕ್ತಿ ನಾಪತ್ತೆ – ಸಾಗರ: ಬಾದಾಮ್ ಪೌಡರಲ್ಲಿ ಪ್ಲಾಸ್ಟಿಕ್ ಪೇಪರ್, ವಯರ್ ಪತ್ತೆ.! – ಭದ್ರಾವತಿ: ಭದ್ರಾವತಿಯಲ್ಲಿ ಹೆಚ್ಚಾಗುತ್ತಿರುವ ದರೋಡೆ ಪ್ರಕರಣ NAMMUR EXPRESS NEWS ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಮತ್ತೊಂದು ಬಲಿಯಾಗಿರುವ ಅನುಮಾನ ಮೂಡಿದೆ. ಸೋಮವಾರ ಮಧ್ಯಾಹ್ನ ವೇಳೆಗೆ ತುಂಗಾ ನದಿಯ ದಡದಲ್ಲಿ ಚಪ್ಪಲಿ, ಮೊಬೈಲ್ ಬಿಟ್ಟು ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಮೊಬೈಲ್ ಆಧಾರದಲ್ಲಿ ಅವರು ಬ್ಯಾಂಕ್ ಮ್ಯಾನೇಜರ್ ಎಂದು ತಿಳಿದು ಬಂದಿದೆ. ಈತ ಈಜಲು ಹೋಗಿ ನದಿಯಲ್ಲಿ ಮುಳುಗಿದ್ದಾರೆ. ಮೂಲತಃ ಅಂದ್ರಪ್ರದೇಶದ ವಿಶಾಖಪಟ್ಟಣದ ಶ್ರೀವತ್ಸ ನಾಪತ್ತೆಯಾದವರು. ಅರಳಸುರಳಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಆಗಿದ್ದು ತೀರ್ಥಹಳ್ಳಿಯಲ್ಲಿ ವಾಸವಿದ್ದರು. ತುಂಗಾ ನದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದು ಹುಡುಕಾಟ ನಡೆಸುತ್ತಿದ್ದಾರೆ.…
ನಕ್ಸಲ್ ನಾಯಕ ವಿಕ್ರಂ ಗೌಡ ಗುಂಡಿಗೆ ಬಲಿ: ಮತ್ತೊಬ್ಬರು ಸಾವು!? – ಹೆಬ್ರಿ ಸೀತಂಬೈಲು ಬಳಿ ಘಟನೆ: ರಾಜ್ಯದ ದೊಡ್ಡ ಕಾರ್ಯಾಚರಣೆ – ಇನ್ನು ಸ್ಪಷ್ಟವಾಗದ ಮಾಹಿತಿ: ಒಟ್ಟು ಮೂವರಿಗೆ ಗುಂಡೇಟು! NAMMUR EXPRESS NEWS ಉಡುಪಿ/ ಹೆಬ್ರಿ: ನಕ್ಸಲ್ ಕಮಾಂಡರ್ ವಿಕ್ರಂ ಗೌಡನನ್ನು ಎನ್‌ಕೌಂಟರ್ ಮಾಡಲಾಗಿದೆ. ಉಡುಪಿ ಜಿಲ್ಲೆಯ ಸೀತಂಬೈಲು ಪೀತಬೈಲ್ ಅರಣ್ಯದಲ್ಲಿ ನಡೆದ ಕೂಂಬಿಂಗ್ ವೇಳೆ ವಿಕ್ರಂ ಗೌಡನ ಎನ್ಕೌಂಟರ್ ಮಾಡಲಾಗಿದೆ ಎನ್ನಲಾಗಿದೆ. ಶೂಟೌಟ್‌ನಲ್ಲಿ ನಕ್ಸಲ್ ಸುಂದರಿ ಮತ್ತು ವನಜಾಕ್ಷಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂಬ ವದಂತಿ ಇದೆ. ಇನ್ನು ಇನ್ನೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಗುಂಡಿನ ಚಕಮಕಿ: ಇನ್ನಿಬ್ಬರಿಗೆ ಗಾಯ ಹೆಬ್ರಿಯ ಸೀತಂಬೈಲ್‌ನಲ್ಲಿ ತಡರಾತ್ರಿ ಎಎನ್‌ಎಫ್ ಸಿಬಂದ್ದಿ ಹಾಗೂ ನಕ್ಸಲ್ ತಂಡದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಎನ್‌ಕೌಂಟರ್ ಮಾಡಲಾಗಿದೆ. ಇದೀಗ ಬಂದ ಕೆಲ ಮೂಲಗಳ ಮಾಹಿತಿ ಪ್ರಕಾರ ನಕ್ಸಲ್ ಸುಂದರಿ ಮತ್ತು ವನಜಾಕ್ಷಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ…