Author: Nammur Express Admin

ರಾಜ್ಯದಲ್ಲಿ ಕಡಿಮೆಯಾದ ಮಳೆ: ಚಳಿ ಶುರು! – ಎಲ್ಲಡೆ ಗಾಢವಾದ ಮಂಜು ಕವಿದ ವಾತಾವರಣ – ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ NAMMUR EXPRESS NEWS ಬೆಂಗಳೂರು: ಎರಡು ವಾರಗಳಿಂದ ರಾಜ್ಯದಲ್ಲಿ ಅಬ್ಬರಿಸಿದ ಮಳೆ ಸದ್ಯ ತಗ್ಗಿದೆ. ಆದರೆ, ನಿರಂತರ ಮಳೆಯಾದ ಪರಿಣಾಮ ಇದೀಗ ದಿಢೀರ್‌ ಚಳಿಯ ಕಾಟವೂ ಹೆಚ್ಚಾಗಿದೆ. ರಾತ್ರಿಯಿಂದಲೇ ಚಳಿ ಆರಂಭವಾಗುತ್ತಿದ್ದು, ಬೆಳಿಗ್ಗೆ ದಟ್ಟವಾದ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಡಿಶಾದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಈಗ ಕರಾವಳಿ ಒಡಿಶಾದ ಮೇಲಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದೊಂದಿಗೆ ನೈಋತ್ಯಕ್ಕೆ ವಾಲುತ್ತದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಲಕ್ಷದ್ವೀಪ ಪ್ರದೇಶದಿಂದ ಉತ್ತರ ತಮಿಳುನಾಡು ತೀರದವರೆಗೆ ಸಮುದ್ರ ಮಟ್ಟದಿಂದ 4.5 ಮತ್ತು 5.8 ಕಿ.ಮೀ ಎತ್ತರದ ನಡುವಿನ ಟ್ರಫ್ ಕಡಿಮೆ ಗುರುತಿಸಲ್ಪಟ್ಟಿದೆ. ಹಾಗಾಗಿ ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ಹವಾಮಾನ ಪರಿಸ್ಥಿತಿ ಈ ರೀತಿ ಇರಲಿದೆ. ಮುಂದಿನ 2 ದಿನಗಳಲ್ಲಿ…

Read More

ಕರಾವಳಿ ನ್ಯೂಸ್ – ಮಣಿಪಾಲ: ತುಳು ನಾಟಕ ಕಲಾವಿದರ ಕಾರು ಅಪಘಾತ; ಅಪಾಯದಿಂದ ಪಾರು!! – ಕುಂದಾಪುರ: ಕೋಣಿ ಬ್ಯಾಂಕ್‌ ಕಳ್ಳತನ ಯತ್ನ; ಅಂತರ್‌ ರಾಜ್ಯ ಕಳ್ಳರಿಬ್ಬರ ಬಂಧನ! – ಕುಂದಾಪುರ: ವರದಕ್ಷಿಣೆ ಕಿರುಕುಳ – ಪ್ರಕರಣ ದಾಖಲು NAMMUR EXPRESS NEWS ಮಣಿಪಾಲ: ತುಳು ನಾಟಕ ಕಲಾವಿದರ ಕಾರೊಂದು ಮಣಿಪಾಲ ಈಶ್ವರ ನಗರದ ನಗರಸಭೆಯ ಪಂಪ್‌ಹೌಸ್ ಬಳಿ ಅ.27ರಂದು ಸಂಜೆ ವೇಳೆ ಅಪಘಾತಕ್ಕೀಡಾಗಿದ್ದು, ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಉಡುಪಿಯ ಹೀರೆಬೆಟ್ಟುವಿನಲ್ಲಿ ಅ. 28ರಂದು ಸಂಜೆ ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ ಪ್ರದರ್ಶನಕ್ಕಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಕಾರಿನಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ತುಳು ನಾಟಕದ ಕಲಾವಿದ ಭೋಜರಾಜ ವಾಮಂಜೂರ್ ಕೂಡ ಇದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ತಂಡದ ಕಲಾವಿದರೆಲ್ಲರೂ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು…

Read More

ದೀಪಾವಳಿ ಪ್ರಾರಂಭ ಯಾವಾಗ? – ಹಬ್ಬದ ಮಹತ್ವ, ಹಿನ್ನೆಲೆ ಏನು ಗೊತ್ತಾ? – ದೀಪಾವಳಿ ದಿನಾಂಕ ಮತ್ತು ಸಮಯ ಯಾವಾಗ? NAMMUR EXPRESS NEWS ದೀಪಗಳ ಹಬ್ಬ ದೀಪಾವಳಿ ಬಂದೇ ಬಿಡ್ತು. ದೀಪಾವಳಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ದೀಪಾವಳಿಯನ್ನು ಯಾವಾಗ ಆಚರಿಸಲಾಗುತ್ತದೆ ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ದೀಪಾವಳಿಯ ನಿಖರವಾದ ದಿನಾಂಕ ಯಾವುದು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಇನ್ನೂ ಕೆಲವರು ನವೆಂಬರ್ 1ರಂದು ದೀಪಾವಳಿ ಆಚರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಈ ದಿನ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದರೆ ಪಂಚಾಂಗದ ಪ್ರಕಾರ, ದೀಪಾವಳಿಯ ಸರಿಯಾದ ದಿನಾಂಕ ಮತ್ತು ಮಂಗಳಕರ ಸಮಯ ಯಾವುದು ಎಂದು ತಿಳಿಯೋಣ.…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ರಾಮ ಏಕಾದಶಿಯಂದು ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಶುಭ ದಿನ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ನಿಮ್ಮ ಸಾಮರ್ಥ್ಯವನ್ನು ತೋರಿಸಲು ಈ ದಿನ ಶುಭವಾಗಲಿದೆ. ನಿಮ್ಮ ಮೇಲೆ ವಿಶ್ವಾಸವಿರಲಿ. ಈ ಸಮಯವು ನಿಮ್ಮನ್ನು ಅನಿರೀಕ್ಷಿತ ಅವಕಾಶಗಳಿಗೆ ಕರೆದೊಯ್ಯುತ್ತದೆ. ಇಂದು ಆರ್ಥಿಕ ಪ್ರಗತಿಯ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ** ವೃಷಭ ರಾಶಿ : ಇಂದು ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಫಲ ನೀಡುತ್ತದೆ. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯಬೇಡಿ.…

Read More

ಒಂದೇ ಆಸ್ತಿ ಹಲವರಿಗೆ ಖಾತೆ ಇನ್ಮೇಲೆ ಅಸಾಧ್ಯ!? – ಕೃಷಿಯೇತರ ಭೂ ಮಾರಾಟದ ವಂಚನೆಗೆ ಮೂಗುದಾರ – ಭೂಮಿ ಖರೀದಿಗೆ ಸರ್ಕಾರದ ಹೊಸ ನಿಯಮ ಏನು..? NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಜಮೀನಿಗೆ ಖಾತಾ ನೋಂದಣಿಯಾದ ತರುವಾಯವೂ ಅದನ್ನು ಕೃಷಿ ಭೂಮಿ ಎಂಬುದಾಗಿ ಮಾರಾಟ ಮಾಡಿ ವಂಚಿಸಲು ಅವಕಾಶವಿಲ್ಲದಂತೆ ‘ಭೂಮಿ’ ತಂತ್ರಾಂಶದಲ್ಲೇ ನಿರ್ಬಂಧಿಸುವ ವ್ಯವಸ್ಥೆ ಜಾರಿಗೆ ಕಂದಾಯ ಇಲಾಖೆ ಸಜ್ಜಾಗಿದೆ. ಆ ಮೂಲಕ ಒಂದೇ ಆಸ್ತಿಯನ್ನು ಅಕ್ರಮವಾಗಿ ಹಲವರಿಗೆ ಮಾರಾಟ ಮಾಡಿ ವಂಚಿಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ರಾಜ್ಯದಲ್ಲಿ ನೋಂದಣಿಯಾಗುವ ಸ್ಥಿರಾಸ್ತಿಗಳ ಖಾತಾ, ಸರ್ವೆ ನಂಬರ್‌ ಇತರೆ ವಿವರವನ್ನು ಒದಗಿಸುವಂತೆ ಇಲಾಖೆಯು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರಮುಖೇನ ಕೋರಿದೆ. ಈ ಮಾಹಿತಿಯು ಇಲಾಖೆಗೆ ನಿರಂತರವಾಗಿ ಲಭ್ಯವಾಗುವುದರಿಂದ ಒಮ್ಮೆ ಖಾತಾ ಪಡೆದಿರುವ ಪರಿವರ್ತಿತ ಜಮೀನನ್ನು ‘ಭೂಮಿ’ ತಂತ್ರಾಂಶದಲ್ಲಿ ಮಾರಾಟಕ್ಕೆ ತಡೆಯೊಡ್ಡುವ ವ್ಯವಸ್ಥೆ ರೂಪಿಸಲು ಸಿದ್ಧತೆ ನಡೆದಿದೆ. ಜತೆಗೆ ಭೂಪರಿವರ್ತನೆಯಾದ ಆದರೆ ಅಭಿವೃದ್ಧಿಯಾಗದ ಜಮೀನುಗಳನ್ನು ‘ಭೂಮಿ’ ತಂತ್ರಾಂಶ ಮಾಹಿತಿ ಆಧರಿಸಿ…

Read More

ಅಡಿಕೆ ಆಯ್ತು, ಈಗ ಶ್ರೀಲಂಕಾದಿಂದ ಕಾಳು ಮೆಣಸು – ಐದು ವಾರಗಳಲ್ಲಿ ಕಿಲೋಗೆ 35 ರೂಪಾಯಿ ಕುಸಿತ ಕಂಡ ಕರಿ ಚಿನ್ನ – ರೈತರಲ್ಲಿ ಆತಂಕ: ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಪಟ್ಟು NAMMUR EXPRESS NEWS ಅಡಿಕೆ ಬಳಿಕ ಇದೀಗ ದೇಶೀಯ ಕಾಳು ಮೆಣಸು ದರ ಈಗ ಕುಸಿಯುತ್ತಿದೆ. ಕಾರಣ ವಿದೇಶದ ಕಾಳು ಮೆಣಸು!. ಹೌದು. ದೇಶೀ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರವು ಎರಡು ವಾರಗಳಲ್ಲಿ ಕಿಲೋಗೆ 19 ರೂಪಾಯಿಗಳಷ್ಟು ಕುಸಿತ ಕಂಡಿದೆ. ಕಳೆದ ವಾರದಲ್ಲಿಯೇ ಕಿಲೋಗೆ ₹ 11 ಕುಸಿತವಾಗಿದೆ, ಕಳೆದ ಐದು ವಾರಗಳಲ್ಲಿ ಒಟ್ಟು ಕುಸಿತವು ಕೆಜಿಗೆ ₹35ರಷ್ಟು ಕುಸಿದಿದೆ. SAFTA ಅಡಿಯಲ್ಲಿ 8 ಶೇಕಡ ಸುಂಕದ ಅಡಿಯಲ್ಲಿ ಶ್ರೀಲಂಕಾದಿಂದ ಆಮದು ಮಾಡಿದ ಉತ್ಪನ್ನಗಳ ಬೃಹತ್ ಆಗಮನವು ಬೆಲೆ ಕುಸಿತಕ್ಕೆ ಕಾರಣವೆಂದು ಬೆಳೆಗಾರ ಸಂಘಟನೆಗಳು ಆರೋಪಿಸಿದೆ. ಕೊಚ್ಚಿ ಟರ್ಮಿನಲ್ ಮಾರುಕಟ್ಟೆಯಲ್ಲಿ ಅನ್‌ಗಾರ್ಬಲ್ಡ್ ಕಿಲೋಗೆ ₹627 ಮತ್ತು ಗಾರ್ಬಲ್‌ಗೆ ₹647 ರಂತೆ ಬೆಲೆಗಳು ಇವೆ. ಕೊಚ್ಚಿಯ ಕಾಳುಮೆಣಸಿನ ವ್ಯಾಪಾರಿ…

Read More

ಶಿವಮೊಗ್ಗ ಸಂಸದ ರಾಘವೇಂದ್ರ ಅವರಿಗೆ ಮಹತ್ವದ ಹೊಣೆ – ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಸಲಹಾ ಸಮಿತಿಗೆ ನೇಮಕ – ಸಿಂಪಲ್ ಸಂಸದರಿಗೆ ಶುಭಾಶಯಗಳ ಮಹಾಪೂರ NAMMUR EXPRESS NEWS ತೀರ್ಥಹಳ್ಳಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಬಿ.ವೈ. ರಾಘವೇಂದ್ರ ನೇಮಕವಾಗಿದ್ದಾರೆ. ಈಗಾಗಲೇ ರಾಜ್ಯದ ಮೆಚ್ಚಿನ ಸಂಸದರಾಗಿರುವ ರಾಘವೇಂದ್ರ ಅವರಿಗೆ ಈ ಸಮಿತಿಯಲ್ಲಿ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸುರಕ್ಷತಾ ಕ್ರಮಗಳನ್ನು ರೂಪಿಸಿ, ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರಿಗೆ ಮಲೆನಾಡಿನ ಬಿಜೆಪಿ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಮಣಿಪಾಲ: ಬೆಳ್ಳಂಬೆಳಗ್ಗೆ ಕಾರು ಅಪಘಾತ, – ಮಂಗಳೂರು : ಪೊಲೀಸ್‌ ಹೆಸರಲ್ಲಿ ಕರೆ ಮಾಡಿ 50 ಲಕ್ಷ ರೂ. ವಂಚನೆ – ಸುಳ್ಯ: ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯ ಬಂಧನ NAMMUR EXPRESS NEWS ಮಣಿಪಾಲ: ಈಶ್ವರ ನಗರದ ನಗರಸಭೆ ರೇಚಕದ ಬಳಿ ಹಳೆಯ ರಸ್ತೆಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ಮೋರಿಗೆ ಬಿದ್ದ ಘಟನೆ ಅ.27 ಬೆಳಗ್ಗೆ ನಡೆದಿದೆ. ಉಡುಪಿಯಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಕಾರು ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ‌ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ಅಡ್ಡವಾಗಿ ರಸ್ತೆ ಆಗೆದಿದ್ದು ಮತ್ತೆ ಹೊಂಡ ಬಿದ್ದಿದೆ, ರಸ್ತೆಯ ಸುತ್ತಮುತ್ತ ಹೊಂಡ ಇರುವುದರಿಂದ ವಾಹನ ಚಾಲಕರು ಅತ್ತಿಂದಿತ್ತ ಚಲಿಸಿ ನಿಯಂತ್ರಣ ತಪ್ಪಿ ಅಪಘಾತವು ದಿನನಿತ್ಯ ಆಗುವಂತಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. * ಮಂಗಳೂರು : ಪೊಲೀಸ್‌ ಹೆಸರಲ್ಲಿ ಕರೆ ಮಾಡಿ 50 ಲ.ರೂ. ವಂಚನೆ ಮಂಗಳೂರು: ಪೊಲೀಸ್‌ ಅಧಿಕಾರಿಯ…

Read More

ಶೀಘ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಲ್ಲೂ ಡಿಜಿಟಲ್ ಪೇಮೆಂಟ್! – ಯುಪಿಐ, ಎಟಿಎಂ ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ – ಆ್ಯಂಡ್ರಾಯ್ಡ ಆಪರೇಟಿಂಗ್‌ನ ಟಚ್‌ ಸ್ಕ್ರೀನ್‌ ಯಂತ್ರ ಸೌಲಭ್ಯ – ಹಣ ಇನ್ನು ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು NAMMUR EXPRESS NEWS Bengal: ಶೀಘ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಲ್ಲೂ ಡಿಜಿಟಲ್ ಪೇಮೆಂಟ್ ಜಾರಿಗೆ ಬರಲಿದೆ. ಈಗ ಎಲ್ಲಾ ಕಡೆ ಡಿಜಿಟಲ್ ಹಣ ವರ್ಗಾವಣೆ ಇರುವುದರಿಂದ ಕೆ.ಎಸ್. ಆರ್.ಟಿ.ಸಿ ಕೂಡ ಜಾರಿಗೆ ಮುಂದಾಗಿದೆ. ಯುಪಿಐ, ಎಟಿಎಂ ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ ಮಾಡಿಕೊಡಲು ಆ್ಯಂಡ್ರಾಯ್ಡ ಆಪರೇಟಿಂಗ್‌ನ ಟಚ್‌ ಸ್ಕ್ರೀನ್‌ ಯಂತ್ರ ಸೌಲಭ್ಯ ಸಿದ್ಧಮಾಡಿಕೊಳ್ಳಲಾಗುತ್ತಿದೆ. ಇನ್ನು ನಿಮ್ಮ ಮೊಬೈಲ್ ಅಲ್ಲೇ ಹಣ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು ಈಗಾಗಲೇ ಮಾದರಿ ಯೋಜನೆ ಜಾರಿ! ಕೆಎಸ್‌ಆರ್‌ಟಿಸಿಗೂ ಸ್ಮಾರ್ಟ್‌ ಟಿಕೆಟ್‌ ಯಂತ್ರಗಳು ಬಂದಿದ್ದು, ಪ್ರಯಾಣಿಕರು ಯುಪಿಐ ಮೂಲಕ ಕ್ಯೂಟರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿಸಬಹುದು. ಈ ನಗದು ರಹಿತ ವ್ಯವಸ್ಥೆಯು ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಆರಂಭವಾಗುವ…

Read More

ದೀಪಾವಳಿಗೆ ಬಸ್ ದುಬಾರಿ: ಈಗ್ಲೇ ಬುಕ್ ಮಾಡ್ಕೊಳ್ಳಿ..! – ದುಬಾರಿ ದರ: ಕಡಿವಾಣ ಹಾಕಲು ಮುಂದಾದ ಸರ್ಕಾರ – ಭಾರೀ ಟ್ರಾಫಿಕ್ ಸಾಧ್ಯತೆ: ಈಗಲೇ ಪ್ಲಾನ್ ಮಾಡಿಕೊಳ್ಳಿ..! NAMMUR EXPRESS NEWS ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಿಂಗಳಾಂತ್ಯ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಸಾಲು ಸಾಲು ರಜೆಗಳಿದ್ದು, ಖಾಸಗಿ ಬಸ್‌ ಮಾಲೀಕರಿಗೆ ಹಬ್ಬವೋ ಹಬ್ಬ. ಯಾಕಂದ್ರೆ ಸಾಲು ಸಾಲು ರಜೆ ಇರುವುರಿಂದ ಟಿಕೆಟ್‌ ದರ ಹೆಚ್ಚಳದ ಚಿಂತನೆ ನಡೆಸಿದ್ದಾರೆ, ಇದೀಗ ಇದಕ್ಕೆ ರಾಜ್ಯ ಸಾರಿಗೆ ಇಲಾಖೆ ಕಡಿವಾಣ ಹಾಕಲು ಮುಂದಾಗಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಆನ್ ಲೈನ್ ಮೂಲಕ ಟಿಕೆಟ್ ದರವನ್ನು ಹೆಚ್ಚಿಸಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಖಾಸ್ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಸಾರ್ವಜನಿಕ ಸೇವಾ ವಾಹನಗಳಲ್ಲಿ ಸ್ಪೋಟಕ ಸಾಮಗ್ರಿಗಳ ಸಾಗಾಣಿಕೆಗೆ ‌ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸಾರಿಗೆ ಇಲಾಖೆ, ಖಾಸಗಿ ಬಸ್ ಗಳು ಹೆಚ್ಚಿನ ಟಿಕೆಟ್ ದರ ಸಂಗ್ರಹಿಸಿದ್ರೆ…

Read More