Author: Nammur Express Admin

ಉಡುಪಿ: ಬೆಂಗಳೂರು ಇಬ್ಬರು ಯುವಕರು ಕುಂದಾಪುರ ಬೀಚ್ ನಲ್ಲಿ ನೀರುಪಾಲು! – ಮುಲ್ಕಿ: ಸಂಬಂಧಿತ ಕಾಯಿಲೆ ಉಲ್ಬಣಿಸಿ 7ನೇ ತರಗತಿಯ ವಿದ್ಯಾರ್ಥಿ ನಿಧನ! – ಕಾಪು: ತ್ಯಾಜ್ಯ ಪೇಪರ್ ಸಾಗಾಟ ವಾಹನ ಪಲ್ಟಿ NAMMUR EXPRESS NEWS ಉಡುಪಿ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಅ.26 ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ಸಂಭವಿಸಿದೆ. ಘಟನೆಯಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆಯಲ್ಲಿ ನೀರುಪಾಲಾಗಿದ್ದ ಕುಂದಾಪುರ ಮೂಲದ ಅಜಯ್ ಮೃತಪಟ್ಟಿದ್ದು, ಬೆಂಗಳೂರು ದಾಸರಹಳ್ಳಿ ನಿವಾಸಿ ಸಂತೋಷ್ ನೀರುಪಾಲಾದ ಮತ್ತೊಬ್ಬ ಯುವಕ. ಈತನಿಗಾಗಿ ಹುಡುಕಾಟ ಮುಂದುವರೆದಿದೆ. ಜೊತೆಗೆ ಬಂದಿದ್ದ ಮೋಕ್ಷಿತ್ ಮತ್ತು ಶ್ರೀಯಾನ್ ಅಪಾಯದಿಂದ ಪಾರಾಗಿದ್ದಾರೆ. ಮದುವೆ ಕಾರ್ಯಕ್ರಮಕ್ಕೆಂದು ಇಬ್ಬರು ಬೆಂಗಳೂರಿನ ದಾಸರಹಳ್ಳಿಯಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಅದರಂತೆ ಅ. 26ರಂದು ಬೆಳಿಗ್ಗೆ ತನ್ನ ಇನ್ನಿಬ್ಬರು ಸ್ಥಳೀಯ ಸ್ನೇಹಿತರ ಜೊತೆ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಸಮುದ್ರಪಾಲಾಗಿದ್ದಾರೆ. ಈ ವೇಳೆ…

Read More

ಮಲ್ನಾಡ್ ಟಾಪ್ ನ್ಯೂಸ್ – ಸಾಗರ: ರಸ್ತೆ ಅಪಘಾತದಲ್ಲಿ ಶಿಕ್ಷಕಿ ಸಾವು – ಜಯಪುರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜೈಲು ಶಿಕ್ಷೆ – ಸೊರಬ : ಬಾರಿ ಮಳೆಯಿಂದ ಸಿಡಿಲು ಬಡಿದು ಜಾನುವಾರು ಸಾವು – ಸಾಗರ: ಬೈಕ್ ಹಾಗೂ ಅಶೋಕಾ ಲೈಲ್ಯಾಂಡ್ ವಾಹನ ಡಿಕ್ಕಿಯಾಗಿ ಮಾವ- ಅಳಿಯ ಸಾವು – ಶಿವಮೊಗ್ಗ : ಮಾದಕ ವಸ್ತು ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ – ಎನ್‌ .ಆರ್‌. ಪುರ: ಸಾಗುವಾನಿ ಮರಗಳ ಕಳ್ಳತನ ಮಾಡಿದ ಆರೋಪಿಗಳ ಬಂಧನ NAMMUR EXPRESS NEWS ಸಾಗರ : ತಾಲೂಕಿನ ಸಿರಿವಂತೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಕುಂತಲಾ (29) ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗದಲ್ಲಿ ಹೊರಟಿದ್ದ ಅವರು, ನಡೆಯುತ್ತಿದ್ದ ಚನ್ನಗಿರಿಯ ತರಬೇತಿಗೆ ಮಾವಿನಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಲಾರಿಯೊಂದು ಶಕುಂತಲಾ ಅವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಶಿವಮೊಗ್ಗದ…

Read More

ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ನೂತನ ಸಮಿತಿ – 2024-25 ರ ಪದಾಧಿಕಾರಿಗಳ ಆಯ್ಕೆ: ಗೌರವಾಧ್ಯಕ್ಷರಾಗಿ ಶಾಕೀರ್ ಹುಸೈನ್, ಅಧ್ಯಕ್ಷರಾಗಿ ಅವಿನಾಶ್ ಜಿ ಶೆಟ್ಟಿ ಆಯ್ಕೆ NAMMUR EXPRESS NEWS ಕಾರ್ಕಳ: ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ಇದರ 2024-25 ರ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಶಾಕೀರ್ ಹುಸೈನ್, ಅಧ್ಯಕ್ಷರಾಗಿ ಅವಿನಾಶ್ ಜಿ ಶೆಟ್ಟಿ, ಉಪಾಧ್ಯಕ್ಷರಾಗಿ ದೀಪಕ್ ರಾಣೆ ಅವರು, ಕಾರ್ಯದರ್ಶಿಯಾಗಿ ದಿನೇಶ್ ಆರ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ತೌಸಿಫ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.. ನೂತನ ಪದಾಧಿಕಾರಿಗಳಿಗೆ ಸದಸ್ಯರು, ಕ್ರೀಡಾ ಅಭಿಮಾನಿಗಳು ಶುಭಾಶಯ ಸಲ್ಲಿಸಿದ್ದಾರೆ.

Read More

ಬಂಗಾರಪ್ಪನವರ 92ನೇ ಹುಟ್ಟುಹಬ್ಬ: ಎಲ್ಲೆಡೆ ಆಚರಣೆ – ನಾಡು ಕಂಡ ವರ್ಣ ರಂಜಿತ ರಾಜಕಾರಣಿ ಬಂಗಾರಪ್ಪ – ಜನಪರ ಯೋಜನೆ ಜಾರಿಗೆಗೊಳಿಸಿದ ಧೀಮಂತ ನಾಯಕ – ತವರೂರು ಸೊರಬ ಸಾರೆಕೊಪ್ಪದಲ್ಲಿ ಕಾರ್ಯಕ್ರಮ NAMMUR EXPRESS NEWS ಕರ್ನಾಟಕದ ಮಾಜಿ ಮುಖ್ಯಮಂತ್ರಿ, ನಾಡು ಕಂಡ ವರ್ಣ ರಂಜಿತ ರಾಜಕಾರಣಿ ಮಾಜಿ ಸಿ ಎಂ ಎಸ್ ಬಂಗಾರಪ್ಪ ಅವರ 92ನೇ ಹುಟ್ಟುಹಬ್ಬ ಸಂದರ್ಭದಲ್ಲಿ ನಾಡಿನ ಎಲ್ಲೆಡೆ ಅವರಿಗೆ ನಮನ ಸಲ್ಲಿಸಲಾಗುತ್ತಿದೆ. ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿ ಆದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳಾದ ಆಶ್ರಯ ಮನೆ, ಅಕ್ಷಯ ಯೋಜನೆ, ಆರಾಧನಾ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೃಪಾಂಕ ಯೋಜನೆ ಮತ್ತು ಗ್ರಾಮೀಣ ಕುಶಲ ಕಾರ್ಮಿಕರ ಏಳ್ಗೆಗಾಗಿ ವಿಶ್ವ ಯೋಜನೆ ಅಂಥಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆಗೊಳಿಸಿ ಇಡೀ ಕರ್ನಾಟಕದ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು. ರೈತರ ಸಂಕಟಗಳ ಬಗ್ಗೆ ಅರಿವಿದ್ದ ಬಂಗಾರಪ್ಪನವರು ಉಚಿತ ಕೃಷಿ ಪಂಪ್ ಸೆಟ್ ನೀಡಿದ್ದು ಐತಿಹಾಸಿಕ ಮಹತ್ವದ ಸಂಗತಿ. ರೈತರ ಬಾಳಿಗೆ ನಿಜವಾದ…

Read More

ಕರಾವಳಿಯಲ್ಲಿ ತಲೆ ಎತ್ತಿದ ರೌಡಿಸಂ! * ಸುರತ್ಕಲ್​: 24 ತುಂಡು ಮಾಡುವೆ ಎಂದು ಯುವಕನಿಗೆ ಬೆದರಿಕೆ * ಮಂಗಳೂರು: ಮತ್ತೆ ರೌಡಿಶೀಟರ್‌ಗಳ ತಲ್ವಾರ್ ಕಾಳಗ! NAMMUR EXPRESS NEWS ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್​ನಲ್ಲಿ ವಾಸವಾಗಿರುವ ಓರ್ವ ಯುವಕನಿಗೆ ಬೆದರಿಕೆ ಸಂದೇಶ ಬಂದಿದೆ. “ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಎಂದು ಯುವಕನಿಗೆ ಬೆದರಿಕೆ ಸಂದೇಶ ಬಂದಿದೆ. ಮುಸ್ಲಿಂ ಸಮಾಜದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಆರೋಪಿ ಯುವತಿಯ ಫೇಸ್​ಬುಕ್ ಖಾತೆ ಹ್ಯಾಕ್ ಮಾಡಿದ್ದಾನೆ.ಅದರ ಮೂಲಕ ಆಕೆಯ ಸಹೋದರನಿಗೆ ಬೆದರಿಕೆ ಸಂದೇಶ ಮತ್ತು ಯುವತಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಪೊಲೀಸರು ಸದಾಶಿವನಗರದ ಶಾರಿಕ್‌ ನೂರ್ಜಹಾನ್‌ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವತಿಯ ಸಹೋದರಿನಿಗೆ ನಿರಂತರ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಡೆತ್​ನೋಟ್​…

Read More

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ!? – ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ – ಅಯ್ಯೋ ಈ ಮಳೆ ಬಿಡೋದು ಯಾವಾಗ..? NAMMUR EXPRESS NEWS ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಉತ್ತರ ಕರ್ನಾಟಕದಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಸುತ್ತಮುತ್ತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಳಿದಂತೆ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದರೆ, ಉಳಿದೆಡೆ ಶುಷ್ಕ ಹವಾಮಾನ ಮೇಲುಗೈ ಸಾಧಿಸಲಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯ ಸಿಂಚನವಾಗಲಿದೆ. ಕರಾವಳಿಯ ದಕ್ಷಿಣ ಕನ್ನಡದಲ್ಲಿ ಮಳೆ ಸಾಧಾರಣವಾಗಿರಲಿದ್ದು, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.…

Read More

ದೀಪಾವಳಿಗೆ ಜಿಯೋ ಭರ್ಜರಿ ಆಫರ್! * ಕೇವಲ 153 ರೂ. ರೀಚಾರ್ಜ್ ಸೇವೆ ಲಭ್ಯ! * 28 ದಿನಗಳ ವ್ಯಾಲಿಡಿಟಿ ಹಾಗೂ ಡೇಟಾ ಪ್ಲಾನ್ NAMMUR EXPRESS NEWS ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಪ್ರಾರಂಭಿಸಿದೆ. ರೂ. 153 ರ ಮೂಲ ಬೆಲೆಯಲ್ಲಿ, ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ 28 ದಿನಗಳಲ್ಲಿ ಒಟ್ಟು 14 ಜಿಬಿ ಡೇಟಾವನ್ನು ನೀಡುತ್ತಿದೆ. ಈ ಯೋಜನೆಯು 300 ಎಸ್‌ಎಂಎಸ್‌ಗಳನ್ನು ಸಹ ನೀಡುತ್ತದೆ, ಇದನ್ನು ಪ್ರತಿದಿನ ಬಳಕೆದಾರರಿಗೆ ನೀಡಲಾಗುತ್ತಿದೆ. ಇದಲ್ಲದೆ, ಯೋಜನೆಯು ಪ್ರತಿ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆಯನ್ನು ಸಹ ನೀಡುತ್ತದೆ. ಕ್ರಿಕೆಟ್ ಮತ್ತು ಸಿನಿಮಾ ಪ್ರಿಯರಿಗೆ, ಈ ಯೋಜನೆಯಿಂದ ಭಾರಿ ಲಾಭವಿದ್ದು, ಜಿಯೋ టివి, ಜಿಯೋ ಸಿನಿಮಾದ ಉಚಿತ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ, ಬಳಕೆದಾರರು ಈ ವರ್ಷದ ಐಪಿಎಲ್ ಪ್ರಸಾರವನ್ನು ವೀಕ್ಷಿಸಬಹುದು. ಈ ರೀಚಾರ್ಜ್‌ನಲ್ಲಿನ ಇಂಟರ್ನೆಟ್ ಪ್ಲಾನ್ ನಿಮಗೆ 500MB ಅಂದರೆ 0.5GBಯ ಬ್ರೌಸಿಂಗ್ ಮತ್ತು…

Read More

ಉದ್ಯೋಗಾವಕಾಶದಲ್ಲಿ ಬೆಂಗಳೂರೇ ನಂ.1..! – ಚೆನ್ನೈಗೆ ದ್ವಿತೀಯ ಸ್ಥಾನ, ದೆಹಲಿಗೆ ತೃತೀಯ ಸ್ಥಾನ – ದೇಶದಲ್ಲಿ ಬೆಂಗಳೂರಲ್ಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿ NAMMUR EXPRESS NEWS ಮುಂಬೈ: ಉದ್ಯೋಗಾವಕಾಶ ಮತ್ತು ವೇತನದ ವೃದ್ಧಿಯ ವಿಷಯದಲ್ಲಿ ಇಡೀ ದೇಶದಲ್ಲಿ ಬೆಂಗಳೂರೇ ಪ್ರಥಮ ಸ್ಥಾನದಲ್ಲಿದ್ದು, ಚೆನ್ನೈ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ಸರಾಸರಿ ವೇತನ ಹೆಚ್ಚಳ ಶೇಕಡ 9.3ರಷ್ಟಾಗಿದೆ. ಚೆನ್ನೈನಲ್ಲಿ ಇದು ಶೇ. 7.5 ಮತ್ತು ದೆಹಲಿಯಲ್ಲಿ ಸರಾಸರಿ ಮಾಸಿಕ ಏಕೀಕೃತ ಸಂಬಳವು ಬೆಂಗಳೂರಿನಲ್ಲಿ 29,500 ರೂ. ಇದ್ದು, ದೇಶದ ಇತರ ಹೋಲಿಸಿದರೆ ಇದು ಅತ್ಯಧಿಕವಾಗಿದೆ. ಚೆನ್ನೈ ನಲ್ಲಿ 24,500 . ರೂ ದೆಹಲಯಲ್ಲಿ 27,800 ರೂ., ಮುಂಬೈನಲ್ಲಿ 25,100 ರೂ.. ಪುಣೆಯಲ್ಲಿ 24,700 ರೂ. ಇದೆ. ಈ ಪೈಕಿ ರಿಟೇಲ್ ವಲಯದಲ್ಲಿ ಶೇ.8.4ರಷ್ಟು ವೇತನ ಹೆಚ್ಚಳವಾಗಿದ್ದು, ಅದು ಇತರ ಎಲ್ಲ ವಲಯಗಳಿಗಿಂತ ಈ ವಿಷಯದಲ್ಲಿ ಗ್ರಾಹಕ ಉತ್ಪನ್ನಗಳ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಶುಕ್ಲ ಯೋಗ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಶುಭ ದಿನವಾಗಿರುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಆದರೆ ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ವೃತ್ತಿಜೀವನದಲ್ಲಿ ಸವಾಲುಗಳ ಹೊರತಾಗಿಯೂ, ಎಲ್ಲಾ ಕಾರ್ಯಗಳು ಸುಲಭವಾಗಿ ಯಶಸ್ವಿಯಾಗಬಹುದು. ಕೆಲವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ಆದರೆ, ಇಂದು ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಎದುರಾಗಬಹುದು. ** ವೃಷಭ ರಾಶಿ : ಇಂದು ನಿಮ್ಮೆಲ್ಲಾ ಕೆಲಸಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ನಷ್ಟ ಉಂಟಾಗಬಹುದು. ಸೋಮಾರಿತನದಿಂದ ದೂರವಿರಿ. ಈ ಕಾರಣದಿಂದಾಗಿ, ನೀವು ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ವ್ಯವಹಾರ ಒಪ್ಪಂದಕ್ಕೆ ಸಹಿ…

Read More

ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಸಾಧನೆ ಹೆಜ್ಜೆ – ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮ ಜತೆಗೆ ಸಮಾಜ ಸೇವೆ – ಇತ್ತೀಚಿಗೆ ಕಾರ್ಕಳದಲ್ಲಿ ಮಾದರಿ ಕಾರ್ಯಕ್ರಮ NAMMUR EXPRESS NEWS ಕಾರ್ಕಳ: ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಇದೀಗ ಸಾಧನೆಯತ್ತ ಹೆಜ್ಜೆ ಇಟ್ಟಿದೆ. ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮ ಜತೆಗೆ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ಕಾರ್ಕಳದಲ್ಲಿ ಮಾದರಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಬಗ್ಗೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಪಡುಕುತ್ಯಾರು ಶ್ರೀ ಸರಸ್ವತೀ ಮಾತೃಮಂಡಳಿ ಉಪಾಧ್ಯಕ್ಷೆ ಕೆ. ರಮಾ ಅಚ್ಚುತ ಆಚಾರ್ಯ ಮಾತನಾಡಿ, ಗಂಡುಕಲೆಯಾದ ಯಕ್ಷಗಾನ ತಾಳಮದ್ದಲೆಯಲ್ಲಿ ಉತ್ತಮ ಅರ್ಥಗಾರಿಕೆ ನೀಡುವ ಮೂಲಕ ವಿಶ್ವಕರ್ಮರ ಪ್ರಥಮ ಮಹಿಳಾ ತಾಳಮದ್ದಲೆ ತಂಡವನ್ನು ರಚಿಸಿ ಸೇವೆ ಸಲ್ಲಿಸುತ್ತಿದೆ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ನಳಿನಿ ವಿಜೇಂದ್ರ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬಜಗೋಳಿ ಶ್ರೀ ಸಾಯಿಕೃಪಾ ಜ್ಯುವೆಲ್ಲರ್ಸ್…

Read More