ವರ್ಷದ ನಂತರ ತೆರೆದ ಹಾಸನಾಂಬೆ ಬಾಗಿಲು! – ಕಳೆದ ವರ್ಷ ಹಚ್ಚಿದ್ದ ಹಣತೆ, ಹೂವು ಹಾಗೆಯೇ ಇತ್ತು! – ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರ ದರ್ಶನ NAMMUR EXPRESS NEWS ಹಾಸನ: ಹಾಸನದ ಅಧಿದೇವತೆ ಹಾಗೂ ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಗರ್ಭಗುಡಿ ಬಾಗಿಲು ಗುರುವಾರ ಮಧ್ಯಾಹ್ನ ೧೨.೧೦ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಿತು. ಮೈಸೂರು ಅರಸು ವಂಶಸ್ಥ ನಂಜರಾಜ/ನಟೇಶ್ ಅರಸ್ ಅವರು ಗೊನೆಕಟ್ಟಿದ್ದ ಬಾಳೆ ಕಂಬ ಕಡಿದ ಕೂಡಲೇ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಯಿತು.ಈ ಅಪರೂಪದ ಸನ್ನಿವೇಶಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಾಸನ ಆದಿ ಚುಂಚನಗಿರಿ ಮಠದ ಶ್ರೀ ಶಂಭುನಾಥಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಹಾಗೂ ಜಿಲ್ಲಾಡಳಿತದ ಎಲ್ಲಾ…
Author: Nammur Express Admin
ಕರಾವಳಿ ಟಾಪ್ ನ್ಯೂಸ್ – ಕುಂದಾಪುರದಲ್ಲಿ ಹಾಡಹಗಲೇ ಕಳ್ಳತನ! – ಉಡುಪಿ: ಆನ್‌ಲೈನ್‌ನಲ್ಲಿ ವ್ಯವಹಾರ: 86 ಲಕ್ಷ ರೂ. ವಂಚನೆ – ಮಂಗಳೂರು: ಅಪಘಾತ, ಮಾನವೀಯತೆ ಮೆರೆದ ಮಹಿಳಾ ಪೊಲೀಸ್ – ಕಾಸರಗೋಡು: ಡಿವೈಎಫ್‌ಐ ಮಾಜಿ ಸದಸ್ಯೆ ಮೇಲೆ ವಂಚನೆ ದೂರು – ಕಾರ್ಕಳ: ರಬ್ಬರ್ ಎಸ್ಟೇಟ್‌ಗಳಲ್ಲಿ ಶಂಕಿತ ಬಾಂಗ್ಲಾದೇಶಿಗರು?! NAMMUR EXPRESS NEWS ಕುಂದಾಪುರ: ನಗರದ ಹಂಗಳೂರು ಬ್ರಹ್ಮ ದೇವಸ್ಥಾನ ರಸ್ತೆಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಸಹಿತ ಪರಾರಿಯಾದ ಘಟನೆ ಅ. 24 ಮಧ್ಯಾಹ್ನ ನಡೆದಿದೆ. ಇಲ್ಲಿನ ನಿವಾಸಿ ಜಗದೀಶ್ ಚಂದ್ರ ನಾಯರ್ ಎಂಬುವವರ ಮನೆಯಲ್ಲಿ ಕಳವು ನಡೆದಿದೆ. ಜಗದೀಶ್ ರಾವ್ ಅವರು ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟ ಮಾಡಿ ತಮ್ಮ ಕೆಲಸಕ್ಕೆ ತೆರಳಿದ್ದರು. ಸುಮಾರು 4 ಗಂಟೆಗೆ ಜಗದೀಶ್ ಪತ್ನಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಗಲಲ್ಲಿಯೇ ಕಳ್ಳತನ ನಡೆದ ಬಗ್ಗೆ ಸುತ್ತಲಿನ ಜನರು…
ಕುವೆಂಪು ವಿವಿ ಸಮಸ್ಯೆ: ವಿದ್ಯಾರ್ಥಿಗಳ ಪರದಾಟ! – ಡಿಗ್ರಿ ಮುಗಿದರೂ ಮಾರ್ಕ್ಸ್ ಕಾರ್ಡ್ ಬರಲಿಲ್ಲ – ಮರು ಮೌಲ್ಯ ಮಾಪನಕ್ಕೆ ಹಾಕಿದವರಿಗೆ ಉತ್ತರವೇ ಇಲ್ಲ – ಅವ್ಯವಸ್ಥೆ ಖಂಡಿಸಿ ಹೋರಾಟದ ಎಚ್ಚರಿಕೆ ನೀಡಿದ ಆರಗ ಜ್ಞಾನೇಂದ್ರ NAMMUR EXPRESS NEWS ತೀರ್ಥಹಳ್ಳಿ: ಕುವೆಂಪು ವಿವಿ ಸಮಸ್ಯೆ ಇದೀಗ ಅನೇಕ ವಿದ್ಯಾರ್ಥಿಗಳ ಬದುಕನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ. ಇದೀಗ ಕುವೆಂಪು ವಿವಿ ಉಪ ಕುಲಪತಿಗಳಾದ ಡಾ.ಶರತ್ ಅನಂತಮೂರ್ತಿಯವರಿಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ಮಾಡಿ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಪದವಿ ಅಂಕಪಟ್ಟಿ ನೀಡದ ಕುವೆಂಪು ವಿವಿ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕುವೆಂಪು ವಿಶ್ವ ವಿಧ್ಯಾನಿಲಯದಿಂದ ಪದವಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೇ ತೊಂದರೆ ಆಗುತ್ತಿರುವ ವಿಚಾರ ಶಾಸಕ ಆರಗ ಜ್ಞಾನೇಂದ್ರರವರಿಗೆ ವಿಧ್ಯಾರ್ಥಿಗಳ ಮೂಲಕ ಗಮನಕ್ಕೆ ಬಂದಿದ್ದು, ತಕ್ಷಣವೇ ಕುವೆಂಪು ವಿವಿ ಉಪ ಕುಲಪತಿಗಳಾದ ಡಾ.ಶರತ್ ಅನಂತಮೂರ್ತಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು ವಿಧ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು…
ತೀರ್ಥಹಳ್ಳಿ ಆರ್.ಎಸ್.ಬಿ ಸಭಾ ಭವನ ಲೋಕಾರ್ಪಣೆ! * 3 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸಭಾ ಭವನ * ಅಚ್ಚುಕಟ್ಟಿನ ಕಾರ್ಯಕ್ರಮ: ಅತಿಥಿಗಳ ಮೆಚ್ಚುಗೆ * ಉದ್ಯಮಿ ನಟರಾಜ ಕಾಮತ್ ಸಹಕಾರಕ್ಕೆ ಗೌರವ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ರಾಜಾಪುರ ಬ್ರಾಹ್ಮಣ ಸಮಾಜ ತಾಲ್ಲೂಕಿನಲ್ಲೇ ಅತ್ಯಂತ ವ್ಯವಸ್ಥಿತವಾದ, ವಿಶಾಲವಾದ ಆರ್.ಎಸ್.ಬಿ.ಸಭಾ ಭವನವನ್ನು ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬುಧವಾರ ತೀರ್ಥಹಳ್ಳಿ ಕುರುವಳ್ಳಿ ಪುತ್ತಿಗೆ ಮಠದ ಸಮೀಪದಲ್ಲೇ ನಿರ್ಮಾಣಗೊಂಡಿರುವ ಆರ್‌ಎಸ್ ಬಿ ಸಭಾಭವನದ ಲೋಕಾರ್ಪಣೆ ಸಮಾರಂಭ ಸಂಭ್ರಮದಿಂದ ನಡೆದಿದ್ದು ಇಡೀ ಸಮುದಾಯಕ್ಕೆ ಅಂದು ಹಬ್ಬದ ಅನುಭವವಾಯಿತು. ಸಮಾರಂಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡರಲ್, ಗ್ರಾ.ಪಂ.ಅಧ್ಯಕ್ಷ ಬಂಡೆ ವೆಂಕಟೇಶ್, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಉದ್ಯಮಿ ಎಂ.ಸದಾನಂದ ನಾಯಕ್ ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್…
ಕೆರೆ ಬೇಟೆ ಸಿನಿಮಾ ಪನೋರಮ ಫಿಲಂ ಫೆಸ್ಟಿವಲ್ ಗೆ ಆಯ್ಕೆ! – ತೀರ್ಥಹಳ್ಳಿ ನಾಯಕ ಗೌರಿಶಂಕರ್ ನಟಿಸಿ ನಿರ್ಮಿಸಿರುವ ಸಿನಿಮಾ – 400 ಚಿತ್ರಗಳ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದ ಸಿನಿಮಾ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ನಟ ಗೌರಿಶಂಕರ್ ನಟಿಸಿ ನಿರ್ಮಿಸಿರುವ ‘ ಕೆರೆಬೇಟೆ’ ಚಿತ್ರ ಇಂಡಿಯನ್ ಪನೋರಮ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ. ಭಾರತೀಯ ಚಿತ್ರರಂಗದ ಸುಮಾರು 400 ಚಿತ್ರಗಳ ಆಯ್ಕೆ ಪಟ್ಟಿಯಲ್ಲಿ ಕೇವಲ 25 ಚಿತ್ರಗಳು (ಫ್ಯೂಚರ್ ಫಿಲಂಸ್) ಮಾತ್ರ “ಪನೋರಮ”(Goa international film festival)ಗೆ ಆಯ್ಕೆಯಾಗಿವೆ. ಈ ಪೈಕಿ ಗುರುರಾಜ್ ನಿರ್ದೇಶನದ ಕೆರೆಬೇಟೆ ಹಾಗು ಸಾಗರ್ ಪುರಾಣಿಕ್ ಅವರ ವೆಂಕ್ಯಾ ಈ ಎರಡು ಕನ್ನಡದ ಚಿತ್ರಗಳು ಆಯ್ಕೆಯಾಗಿವೆ.
ಆಗುಂಬೆ ಕಾಡಾನೆ ಸಮಸ್ಯೆ: ಅರಣ್ಯ ಸಚಿವರಿಗೆ ಆರ್. ಎಂ ಮನವಿ – ಆನೆ ಹಿಡಿಯಲು ಒತ್ತಡ ಹಾಕಲು ಮಾತುಕತೆ – ಮಲೆನಾಡು ಅಭಿವೃದ್ಧಿ ಮಂಡಳಿಗೆ ಅನುದಾನಕ್ಕೆ ಸಚಿವ ಸುಧಾಕರ್ ಜತೆ ಚರ್ಚೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಗುಂಬೆಯ ಭಾಗದಲ್ಲಿ ಕಾಡಾನೆ ಕಾಟದಿಂದ ರೈತರಿಗೆ ತೊಂದರೆ ಹೆಚ್ಚಾಗಿದ್ದು, ಇದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಆನೆ ಹಿಡಿಯಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವಂತೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಜತೆ ಸಹಕಾರಿ ನಾಯಕರಾದ ಡಾ. ಆರ್. ಎಂ. ಮಂಜುನಾಥ ಗೌಡ ಮನವಿ ಮಾಡಿದರು. ವಿಧಾನ ಸೌಧದಲ್ಲಿ ಬುಧವಾರ ಅರಣ್ಯ ಸಚಿವರನ್ನು ಭೇಟಿ ಮಾಡಿದ ಅವರು, ಮಲೆನಾಡ ಅರಣ್ಯ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸಚಿವ ಸುಧಾಕರ್ ಜತೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಬಗ್ಗೆ ಚರ್ಚೆ ನಡೆಸಿದರು. ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರು ಆದ ಬೇಳೂರು ಗೋಪಾಲಕೃಷ್ಣ, ಶಿಮೂಲ್…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ದೇವಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಸಂಪತ್ತು ವೃದ್ಧಿಯಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಾಗಬಹುದು. ನಿಮ್ಮಲ್ಲಿರುವ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ** ವೃಷಭ ರಾಶಿ : ಇಂದು ನಿಮಗೆ ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮ್ಮ ತಾಯಿಯ ನೆರವಿನಿಂದ ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು. ವಾಹನ ನಿರ್ವಹಣೆಗೆ ಹಣ ವ್ಯಯವಾಗಬಹುದು. ಇಂದು, ನಿಮ್ಮ…
ಧರ್ಮಸ್ಥಳ: ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ – ಛದ್ಮವೇಷ ಸ್ಫರ್ಧೆ: ಹೆಗ್ಗಡೆಯವರಿಗೆ ಭಕ್ತರ ಶುಭಾಶಯಗಳು NAMMUR EXPRESS NEWS ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅ. 24ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ ಪ್ರಯುಕ್ತ ನಡೆದ ಛದ್ಮವೇಷ ಸ್ಫರ್ಧೆ ನಡೆಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕೆ.ಪಿ.ಸಿ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್ ಕುಮಾರ್, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್‌ಸಾಮ್ರಾಜ್ಯ, ಶಿರ್ತಾಡಿ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್, ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಎಮ್. ಜಿನರಾಜ ಶೆಟ್ಟಿ, ಮಂಗಳೂರು, ಪಿ. ಜಯರಾಜ ಕಂಬಳಿ, ಪೆರಿಂಜೆಗುತ್ತು, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಮೊಕ್ತೆಸರ ಜೀವಂಧರ ಕುಮಾರ್, ಕೆ. ಪ್ರದೀಪ್‌ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಮೊದಲಾದ ಗಣ್ಯರು ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಿ ಅಭಿನಂದಿಸಿದರು. ಛದ್ಮವೇಷ ಸ್ಫರ್ಧೆಯಲ್ಲಿ ವಿಜೇತರು ಯಾರ್ಯಾರು? ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ…
ಟಾಪ್ 3 ನ್ಯೂಸ್ ಕರ್ನಾಟಕ – ಚನ್ನಪಟ್ಟಣ: ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್! – ಎನ್.ಡಿ.ಎ ಅಭ್ಯರ್ಥಿಯಾಗಿ ನಿಖಿಲ್ ಕಕಣಕ್ಕೆ – ಚನ್ನಪಟ್ಟಣದಲ್ಲಿ ಬೃಹತ್ ಸಭೆ: ಯೋಗೇಶ್ವರ್ ನಾಮಪತ್ರ – ಚುನಾವಣೆ ನಡುವೆ ರಾಜ್ಯದಲ್ಲಿ 5 ದಿನ ಮಳೆ! NAMMUR EXPRESS NEWS ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿಯ ಹೆಸರು ಕೊನೆಗೂ ಘೋಷಣೆಯಾಗಿದೆ. ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿಯ ಎನ್.ಡಿ.ಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಲಿದ್ದಾರೆ. ಬೆಂಗಳೂರಿನ ಮಾಜಿ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ನಾಯಕರು ಸೇರಿ ಈ ಸಂಬಂಧ ಅಂತಿಮ ಚರ್ಚೆಯನ್ನು ಮಾಡಿದ್ದಾರೆ. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಎನ್ ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಇವತ್ತು ನಮ್ಮ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಪ್ರಧಾನಿ ಮೋದಿ ಅವರ ಆಶೀರ್ವಾದವಿದೆ. ಮೋದಿ ಅವರ ಬೆಂಬಲದಿಂದ ಕುಮಾರಸ್ವಾಮಿ, ಅಶೋಕ್ ಎಲ್ಲರೂ…
ಟಾಪ್ 9 ನ್ಯೂಸ್ – ಕಟ್ಟಡ ಕುಸಿತಕ್ಕೆ 8 ಬಲಿ: ಪರಿಹಾರ ಘೋಷಿಸಿದ ಸಿಎಂ! – ಬಳ್ಳಾರಿ: ದರ್ಶನ್‌ಗೆ ಡಿಸ್ಕ್ ಸಮಸ್ಯೆ ಚಿಕಿತ್ಸೆಗೆ ಸೂಚನೆ – ವೇಶ್ಯಾವಾಟಿಕೆ ಅಡ್ಡೆ: 12 ಅಪ್ರಾಪ್ತೆಯರ ರಕ್ಷಣೆ! – ಅಕ್ರಮ ಪೊಲೀಸ್ ಆಯ್ತು, ಈಗ ನಕಲಿ ಕೋರ್ಟ್! – ಆಭರಣ ಪ್ರಿಯರಿಗೆ ಬಿಗ್ ಶಾಕ್: ಬೆಲೆ ಏರಿಕೆ – ಕೆರೆಗೆ ಇಳಿದ ಆನೆ, ಮೇಲೆ ಕುಳಿತಿದ್ದ ಕಾವಾಡಿಗ ಸಾವು – ಮಂಗಳೂರು: ಶಾಲಾ ಮಕ್ಕಳಿದ್ದ ವಾಹನ ಅಪಘಾತ: ಸಾವು – ಬೆಂಗಳೂರು : ತಿಮಿಂಗಿಲದ ವಾಂತಿ ಸಾಗಣೆ: ಅರೆಸ್ಟ್ – ವಿಜಯಪುರ: ರೇಂಜರ್ ಸ್ವಿಂಗ್ನಿಂದ ಬಿದ್ದು ಯುವತಿ ಸಾವು NAMMUR EXPRESS NEWS ಬೆಂಗಳೂರು: ಹೆಗಡೆ ನಗರದ ಬಾಬುಸಪಾಳ್ಯದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವನ್ನಪ್ಪಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೃತರ ಪ್ರತಿ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯಲ್ಲಿ ಗಾಯಗೊಂಡವರಿಗೆ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ…