ಟಾಪ್ 9 ನ್ಯೂಸ್ – ಕಟ್ಟಡ ಕುಸಿತಕ್ಕೆ 8 ಬಲಿ: ಪರಿಹಾರ ಘೋಷಿಸಿದ ಸಿಎಂ! – ಬಳ್ಳಾರಿ: ದರ್ಶನ್‌ಗೆ ಡಿಸ್ಕ್ ಸಮಸ್ಯೆ ಚಿಕಿತ್ಸೆಗೆ ಸೂಚನೆ – ವೇಶ್ಯಾವಾಟಿಕೆ ಅಡ್ಡೆ: 12 ಅಪ್ರಾಪ್ತೆಯರ ರಕ್ಷಣೆ! – ಅಕ್ರಮ ಪೊಲೀಸ್ ಆಯ್ತು, ಈಗ ನಕಲಿ ಕೋರ್ಟ್! – ಆಭರಣ ಪ್ರಿಯರಿಗೆ ಬಿಗ್ ಶಾಕ್: ಬೆಲೆ ಏರಿಕೆ – ಕೆರೆಗೆ ಇಳಿದ ಆನೆ, ಮೇಲೆ ಕುಳಿತಿದ್ದ ಕಾವಾಡಿಗ ಸಾವು – ಮಂಗಳೂರು: ಶಾಲಾ ಮಕ್ಕಳಿದ್ದ ವಾಹನ ಅಪಘಾತ: ಸಾವು – ಬೆಂಗಳೂರು : ತಿಮಿಂಗಿಲದ ವಾಂತಿ ಸಾಗಣೆ: ಅರೆಸ್ಟ್ – ವಿಜಯಪುರ: ರೇಂಜರ್ ಸ್ವಿಂಗ್ನಿಂದ ಬಿದ್ದು ಯುವತಿ ಸಾವು NAMMUR EXPRESS NEWS ಬೆಂಗಳೂರು: ಹೆಗಡೆ ನಗರದ ಬಾಬುಸಪಾಳ್ಯದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವನ್ನಪ್ಪಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೃತರ ಪ್ರತಿ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯಲ್ಲಿ ಗಾಯಗೊಂಡವರಿಗೆ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ…
Author: Nammur Express Admin
ಕರಾವಳಿ ಟಾಪ್ ನ್ಯೂಸ್ – ಮಂಗಳೂರು: ಶಾಲಾ ರಿಕ್ಷಾ ಮತ್ತು ಪಿಕಪ್ ನಡುವೆ ಅಪಘಾತ, ಬಾಲಕಿ ಸಾವು! – ಮಂಗಳೂರು: ಸರಕಾರಿ ಮರದ ದಿಮ್ಮಿ ಅಕ್ರಮ ಸಾಗಾಟ.! – ಮಂಗಳೂರು: ಅಂಬರ್ ಗ್ರೀಸ್ ಅಕ್ರಮ ಸಾಗಾಟ – ಇಬ್ಬರು ಆರೋಪಿಗಳ ಬಂಧನ! NAMMUR EXPRESS NEWS ಮಂಗಳೂರು : ಶಾಲಾ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ 4ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳ್ಮ ಗ್ರಾಮದ ಕಲ್ಪಾದೆ ಎಂಬಲ್ಲಿ ಅ. 24ರಂದು ಸಂಭವಿಸಿದೆ. ಬಡಕಬೈಲು ನಿವಾಸಿ ಮಹಮ್ಮದ್ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (11 ) ಮೃತ ವಿದ್ಯಾರ್ಥಿನಿ. ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ಆಟೋ ರಿಕ್ಷಾಗೆ ಕಲ್ಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ದಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ಪಲ್ಟಿಯಾಗಿ ಆಯಿಷಾ ವಹಿಬಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ…
ಅಡಿಕೆ ದರ ಎಷ್ಟಿದೆ ? – ಅಡಿಕೆ ದರ ಮತ್ತೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? NAMMUR EXPRESS NEWS ಸರಕು 52509-70200-8300 ಬೆಟ್ಟೆ 46530-53900-56099 ರಾಶಿ 42009-48800-50589 ಗೊರಬಲು 18069-31900-33109
ಅಡಿಕೆ ಬೆಳೆಗಾರರಿಗೆ ಒಂದು ಸಂತಸದ ಸುದ್ದಿ. ತೀರ್ಥಹಳ್ಳಿ ಯ ರೈತರಿಗೆ ಒಂದು ಸುವರ್ಣ ಅವಕಾಶ. ದೋಟಿ ಯಿಂದಲೇ ಪ್ರಖ್ಯಾತಿ ಹೊಂದಿರುವ ಯುಎಸ್ಎ ಬಾಲ ಸುಬ್ರಹ್ಮಣ್ಯಂ ಅವರ ಹೈ-ಟೆಕ್ ನ ಪ್ರೀಮಿಯಂ ಮಾದರಿಯ ದೋಟಿಯನ್ನು ನಮ್ಮ ತೀರ್ಥಹಳ್ಳಿಯ ಹೆಮ್ಮೆಯ ಕೃಷಿ ಉಪಖಾರ್ ಸಂಸ್ಥೆಯಲ್ಲಿ ಈಗ ಸಬ್ಸಿಡಿ ಗೆ ಅವಕಾಶವನ್ನು ಕಲ್ಪಿಸಿದ್ದೇವೆ. ತೋಟಗಾರಿಕಾ ಇಲಾಖೆ ನೀಡುವ ದೋಟಿಯ ಮಾರಾಟ ಬೆಲೆಯಲ್ಲಿ ನೇರವಾಗಿ ಮಾರಾಟ ಮಾಡಲು ಕೃಷಿಉಪಖಾರ್ ಸಂಸ್ಥೆ ಇಚ್ಛಿಸಿದ್ದೂ, ಇದರ ಸದುಪಯೋಗವನ್ನು ಎಲ್ಲಾ ಅಡಿಕೆ ಬೆಳೆಗಾರರು ಪಡೆದುಕೊಳ್ಳಬಹುದು. ಹೈ ಟೆಕ್ ನ ಪ್ರೀಮಿಯಂ ಪ್ಲಸ್ ಮಾದರಿಯ ಕಾರ್ಬನ್ ಫೈಬರ್ ದೋಟಿಗಳಿಗೆ ನೇರ ಸಬ್ಸಿಡಿ ಲಭ್ಯ ರೈತರಿಗೆ ನೇರ ಸಬ್ಸಿಡಿ ಲಭ್ಯವಿದೆ ರೈತರ ವಂತಿಗೆ (ಪರಿಶಿಷ್ಟ ಜಾತಿ, ಪಂಗಡ ಅಥವಾ ಮಹಿಳೆ) 60 ಅಡಿ ದೋಟಿ 43000 70 ಅಡಿ ದೋಟಿ 53000 80 ಅಡಿ ದೋಟಿ 57000 ರೈತರ ವಂತಿಗೆ (ಸಾಮಾನ್ಯ ಪುರುಷ) 60 ಅಡಿ ದೋಟಿ 48200 70 ಅಡಿ ದೋಟಿ 59000…
ಚೀನಾದಲ್ಲಿ ಎಳೆ ಅಡಿಕೆಗೆ ಭಾರೀ ಡಿಮ್ಯಾಂಡ್! – ಶುಂಠಿ ಕ್ಯಾಂಡಿಯಂತೆ ಸಿಹಿಯಾದ,ಸ್ವಲ್ಪ ಮಸಾಲೆಯುಕ್ತ ಅಡಿಕೆ ಬಳಕೆ – ವಿದೇಶದಲ್ಲಿ ಜನಪ್ರಿಯತೆ ಹೆಚ್ಚಿಸುತ್ತಿರುವ ಅಡಿಕೆ ಕ್ಯಾಂಡಿ..! – ಚೀನಾದಲ್ಲಿ ಔಷಧಿಯಾಗಿ ಅಡಿಕೆ ಬಳಕೆ!… ರೈತರಿಗೆ ಗುಡ್ ನ್ಯೂಸ್ NAMMUR EXPRESS NEWS ಮಲೆನಾಡ ಬೆಳೆ ಅಡಿಕೆ ವಿಶ್ವದ ಹಲವು ಕಡೆ ಉಪಯೋಗ ಈಗಲೂ ಇದೆ. ಅದರಲ್ಲೂ ಚೀನಾದಲ್ಲಿ ಅಡಿಕೆಯಿಂದ ವಿವಿಧ ಬಗೆಯ ಉತ್ಪನ್ನ ತಯಾರಿಸುತ್ತಾರೆ. ಈಗ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿದೆ. ಚೀನಾದ ಅಡಿಕೆ ಮಾತ್ರವಲ್ಲ ವಿಯೆಟ್ನಾಂನಿಂದಲೂ ಹಸಿ ಅಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಕೆಲವು ಸಮಯಗಳಿಂದ ಚೀನಾದ ಅಡಿಕೆ ವ್ಯಾಪಾರಿಗಳು ವಿಯೆಟ್ನಾಂನಿಂದ ಸಾಕಷ್ಟು ಪ್ರಮಾಣದಲ್ಲಿ ಹಸಿ ಅಡಿಕೆಯನ್ನು ಖರೀದಿ ಮಾಡುತ್ತಿದ್ದರು. ಏಕೆ ಎಂಬುದರ ಬಗ್ಗೆ ಅರಿವು ಇರಲಿಲ್ಲ. ಅದರ ಹಿಂದೆಯೇ ಹೋದಾಗ ಚೀನಾದಲ್ಲಿ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಹಸಿ ಅಡಿಕೆ ದರವೂ ಅಲ್ಲಿ ಏರಿಕೆಯಾಗಿದೆ. ಚೀನಾದ ವ್ಯಾಪಾರಿಗಳು ಅಡಿಕೆ ಕ್ಯಾಂಡಿ ಮಾಡಲು ವಿಯೆಟ್ನಾಂನಿಂದ ಎಳೆಯ ವೀಳ್ಯದೆಲೆಗಳನ್ನು ಖರೀದಿಸುತ್ತಿದ್ದಾರೆ.…
ವಿಧಾನ ಪರಿಷತ್ ಫಲಿತಾಂಶ: ಕಿಶೋರ್ ಕುಮಾರ್ ಗೆಲುವು! – ಕಿಶೋರ್ ಕುಮಾರ್ 3654, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ 1757 ಮತ – 1697 ಮತಗಳ ಅಂತರದಿಂದ ಗೆದ್ದು ಪರಿಷತ್ ಸದಸ್ಯರಾಗಿ ಆಯ್ಕೆ – ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರ ಅಭಿನಂದನೆ NAMMUR EXPRESS NEWS ಉಡುಪಿ/ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಅತ್ಯಧಿಕ ಮತಗಳನ್ನು ಪಡೆದು ಗೆಲುವುಸಾಧಿಸಿದ್ದಾರೆ. ಗುರುವಾರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಅವರು 3654 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು 1757 ಮತ ಪಡೆದಿದ್ದಾರೆ. SDPI 195, ಪಕ್ಷೇತರ ಅಭ್ಯರ್ಥಿ 9 ಮತ ಗಳಿಸಿದ್ದಾರೆ. ಆ ಮೂಲಕ ಕಿಶೋರ್ ಕುಮಾರ್ 1697 ಮತಗಳ ಅಂತರದಿಂದ ಗೆದ್ದು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರು ಉಡುಪಿ ಚಿಕ್ಕಮಗಳೂರು…
ಶೃಂಗೇರಿ ಸಮೀಪ ಚಿರತೆ ಪ್ರತ್ಯಕ್ಷ! – ಮಲೆನಾಡಲ್ಲಿ ಕಾಡು ಪ್ರಾಣಿಗಳ ಹಾವಳಿ: ಆತಂಕದಲ್ಲಿ ಗ್ರಾಮಸ್ಥರು – ಕೊಪ್ಪದಲ್ಲಿ ಮಹಿಳೆ ಆತ್ಮಹತ್ಯೆ: ಕಾರಣ ಏನು…? NAMMUR EXPRESS NEWS ಶೃಂಗೇರಿ: ಶೃಂಗೇರಿ ತಾಲೂಕಿನ ಕುಂಚೇಬೈಲು ಸಮೀಪ ಮುಂಡಗೋಡುವಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಶೃಂಗೇರಿಯಿಂದ ಅಂಗಡಿ ಕೆಲಸ ಮುಗಿಸಿ ಮನೆಗೆ ಬೈಕ್‌ನಲ್ಲಿ ಹಿಂತಿರುಗುವಾಗ ರಾತ್ರಿ 10 ಗಂಟೆ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆಕಂಡು ಗಾಬರಿಗೊಂಡ ಬೈಕ್ ಸವಾರ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರಿಗೆ ಎಚ್ಚರಿಕೆಯಿಂದಿರಲು ತಿಳಿಸಲಾಗಿದೆ. ಹಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ. ಕಾಡುಕೋಣ,ಕಾಡಾನೆ,ಕರಡಿ,ಚಿರತೆಯಂತಹ ಪ್ರಾಣಿಗಳ ಹಾವಳಿ ಮಲೆನಾಡಿಗರಲ್ಲಿ ಆತಂಕ ಸೃಷ್ಠಿಸಿದೆ. ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ನಾಶವಾಗುತ್ತಿದ್ದು ರೈತರು ಆತಂಕಕ್ಕೀಡಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಂಡು ಕಾಡು ಪ್ರಾಣಿಗಳ ಹಾವಳಿಯಿಂದ ಸಾರ್ವಜನಿಕರು ಹಾಗು ರೈತರ ಬೆಳೆಯನ್ನು ರಕ್ಷಿಸುವ ಕಾರ್ಯ ಮಾಡುವಂತೆ ಮಲೆನಾಡಿಗರು ಒತ್ತಾಯಿಸಿದ್ದಾರೆ. ಕೊಪ್ಪದಲ್ಲಿ ಮಹಿಳೆ ಆತ್ಮಹತ್ಯೆ! ಕೊಪ್ಪ: ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪ ತಾಲೂಕಿನ…
ಟಿಎಸ್‌ಟಿ ಹೈಪರ್ ಮಾರ್ಟ್ ದೀಪಾವಳಿ ಹಬ್ಬಕ್ಕೆ ವಿಶೇಷ ಕೊಡುಗೆ – ದೀಪಾವಳಿ, ರಾಜ್ಯೋತ್ಸವದ ಆಫರ್: ಅ.30ರವರೆಗೆ ವಿಶೇಷ ರಿಯಾಯಿತಿ – ಲಕ್ಕಿ ಡ್ರಾ ಕನಿಷ್ಠ ರೂ 1999 ಖರೀದಿ ಮಾಡಿದರೆ ಆಫರ್ NAMMUR EXPRESS NEWS ತೀರ್ಥಹಳ್ಳಿ : ಟಿಎಸ್‌ಟಿ ಹೈಪರ್ ಮಾರ್ಟ್ ವತಿಯಿಂದ ದೀಪಾವಳಿ ಹಬ್ಬಕ್ಕೆ ವಿಶೇಷವಾದ ಕೊಡುಗೆಗಳು ಈ ದೀಪಾವಳಿ ಆಫರ್ ಅ. 21 ರಿಂದ ಅ. 31 ರವರೆಗೆ ಇರುತ್ತದೆ. ಈ ಆಫರ್ ನಲ್ಲಿ ನೀವೇನಾದರೂ 1999 ರೂಗಳಲ್ಲಿ ಖರೀದಿ ಮಾಡಿದರೆ ಲಕ್ಕಿ ಡ್ರಾ ಕೂಡ ಇರುತ್ತದೆ. ಮೊದಲನೇ ಬಹುಮಾನ ಗೋದ್ರೆಜ್ ಸಿಂಗಲ್ ಡೋರ್ ರೆಫ್ರಿಜಿರೇಟರ್, ಎರಡನೇ ಬಹುಮಾನ ಎಲ್ ಇ ಡಿ ಟಿವಿ 32 ಇಂಚು, ಮೂರನೇ ಬಹುಮಾನ ಎರಡು ಬರ್ನರ್ ಗ್ಯಾಸ್ ಸ್ಟವ್, ನಾಲ್ಕನೇ ಬಹುಮಾನ ಕಿಚನ್ ಸೆಟ್, ಐದನೇ ಬಹುಮಾನ ಹಾಟ್ ಬಾಕ್ಸ್ ಸೆಟ್, ಕೊಂಬೊ ಆಫರ್ ಗಳು ಕೂಡ ಲಭ್ಯವಿದೆ. ರೂ.799 ಗಳಲ್ಲಿ ನೀವೇನಾದರೂ ಖರೀದಿ ಮಾಡಿದರೆ 999 ರೈಸ್ 10…
ಚಿತ್ರದುರ್ಗ : ಜಿಲ್ಲಾಸ್ಪತ್ರೆಯಲ್ಲಿ ಮೇಲ್ಚಾವಣಿ ಸಿಮೆಂಟ್ ಕುಸಿತ, ರೋಗಿಯ ತಲೆಗೆ ಗಾಯ.! – ದಾವಣಗೆರೆ: ಗೃಹಲಕ್ಷ್ಮೀ ಯೋಜನೆ ಹಣ ಡ್ರಾ ಮಾಡಿಕೊಂಡು ಬರಲು ಹೋಗಿದ್ದ ಮಹಿಳೆ ಗಂಡನಿಂದಲೇ ಹತ್ಯೆ! – ಚಿತ್ರದುರ್ಗ: ಅಕಾಲಿಕ ಮಳೆಯಿಂದ ಶೇಂಗಾ ಬೆಳೆಗಾರರಿಗೆ ಆತಂಕ..! NAMMUR EXPRESS NEWS ಚಿತ್ರದುರ್ಗ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಅಲ್ಲದೆ ಅಪಾರ ಬೆಳೆ, ಮನೆ ಹಾನಿಯಾಗಿದೆ. ಇದಲ್ಲದೆ, ಚಿತ್ರದುರ್ಗ ನಗರದ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ಛಾವಣಿ ಸಿಮೆಂಟ್ ಕುಸಿದು ಬಿದ್ದಿದ್ದು, ಅದೃಷ್ಟಾವತ್ ಬಹುದೊಡ್ಡ ದುರಂತವೊಂದು ತಪ್ಪಿದೆ. ಮೇಲ್ಭಾಗದ ಛಾವಣಿಯ ಸಿಮೆಂಟ್ ಕುಸಿದು ರೋಗಿ ಇದ್ದ ಬೆಡ್ ಮೇಲೆ ಬಿದ್ದಿದ್ದು, ರೋಗಿಯ ತಲೆಗೆ ಗಾಯವಾಗಿದೆ. ಗಾಯಗೊಂಡವರನ್ನು ಆಂಧ್ರಪ್ರದೇಶ ಮೂಲದ ಲಕ್ಷ್ಮಕ್ಕ ಎಂದು ಗುರುತಿಸಲಾಗಿದೆ. ಲಕ್ಷ್ಮಕ್ಕ ಅವರು ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಡ್ ಮೇಲೆ ಮಲಗಿದ್ದಾಗ ಛಾವಣಿಯ ಸಿಮೆಂಟ್ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ರೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಛಾವಣಿ…
ಬೇಕಾಬಿಟ್ಟಿ ಪಟಾಕಿ ಸಿಡಿಸಿದ್ರೆ ಬೀಳುತ್ತೆ ಕೇಸ್!? – ರಾಜ್ಯ ಸರ್ಕಾರದಿಂದ ಹೊಸ ಆದೇಶ – ದೀಪಾವಳಿಯಲ್ಲಿ ದಿನವಿಡೀ ಪಟಾಕಿ ಸಿಡಿಸುವಂತಿಲ್ಲ – ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ NAMMUR EXPRESS NEWS ದೀಪಾವಳಿ ಹಬ್ಬದಲ್ಲಿ ದಿನವಿಡೀ ಪಟಾಕಿ ಸಿಡಿಸಿದರೆ ಬೀಳುತ್ತೆ ಕೇಸ್. ಹೀಗೊಂದು ಹೊಸ ನಿಯಮವನ್ನು ಸುಪ್ರೀಂಕೋರ್ಟ್ ಆದೇಶದ ಮೂಲಕ ರಾಜ್ಯ ಸರ್ಕಾರ ಜಾರಿ ಮಾಡಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ಕೂಡ ಇದೆ ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ಅದು ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನಿಂದ ನಿರ್ದೇಶನವಿದೆ ಎಂದು ಹೇಳಿದರು. ದೀಪಾವಳಿ ಎಂದರೆ ಕೇವಲ ಪಟಾಕಿ ಸಿಡಿಸುವುದಷ್ಟೇ ಅಲ್ಲ. ಕತ್ತಲೆಯಿಂದ ಬೆಳಕಿನತ್ತ ಹೋಗುವಾಗ ಪರಿಸರ ಮಾಲಿನ್ಯ ಬೇಡ. ಹಾಗೊಮ್ಮೆ ಸಿಡಿಸುವುದೇ ಆದರೆ ವಾಯುಮಾಲಿನ್ಯ ದೂರ ಮಾಡುವ ಹಸಿರು…