Author: Nammur Express Admin

ಬೇಕಾಬಿಟ್ಟಿ ಪಟಾಕಿ ಸಿಡಿಸಿದ್ರೆ ಬೀಳುತ್ತೆ ಕೇಸ್!? – ರಾಜ್ಯ ಸರ್ಕಾರದಿಂದ ಹೊಸ ಆದೇಶ – ದೀಪಾವಳಿಯಲ್ಲಿ ದಿನವಿಡೀ ಪಟಾಕಿ ಸಿಡಿಸುವಂತಿಲ್ಲ – ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ NAMMUR EXPRESS NEWS ದೀಪಾವಳಿ ಹಬ್ಬದಲ್ಲಿ ದಿನವಿಡೀ ಪಟಾಕಿ ಸಿಡಿಸಿದರೆ ಬೀಳುತ್ತೆ ಕೇಸ್. ಹೀಗೊಂದು ಹೊಸ ನಿಯಮವನ್ನು ಸುಪ್ರೀಂಕೋರ್ಟ್ ಆದೇಶದ ಮೂಲಕ ರಾಜ್ಯ ಸರ್ಕಾರ ಜಾರಿ ಮಾಡಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ಕೂಡ ಇದೆ ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ಅದು ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನಿಂದ ನಿರ್ದೇಶನವಿದೆ ಎಂದು ಹೇಳಿದರು. ದೀಪಾವಳಿ ಎಂದರೆ ಕೇವಲ ಪಟಾಕಿ ಸಿಡಿಸುವುದಷ್ಟೇ ಅಲ್ಲ. ಕತ್ತಲೆಯಿಂದ ಬೆಳಕಿನತ್ತ ಹೋಗುವಾಗ ಪರಿಸರ ಮಾಲಿನ್ಯ ಬೇಡ. ಹಾಗೊಮ್ಮೆ ಸಿಡಿಸುವುದೇ ಆದರೆ ವಾಯುಮಾಲಿನ್ಯ ದೂರ ಮಾಡುವ ಹಸಿರು…

Read More

ಬಿಎಸ್‌ಎನ್‌ಎಲ್ ಈಗ ಮತ್ತಷ್ಟು ಹೊಸತು! – ಲೋಗೋ ಬದಲಿಸಿ ಗುಡ್‌ನ್ಯೂಸ್: ಜಿಯೋ, ಏರ್‌ಟೆಲ್‌ಗೆ ಬಿಗ್ ಶಾಕ್ – ಹೊಸ ಸೇವೆ ಪರಿಚಯ, ಯಾವೆಲ್ಲಾ ಸೇವೆಗಳು ಲಭ್ಯ? – 1.8 ಕೋಟಿ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರ್ಪಡೆ NAMMUR EXPRESS NEWS ಬೆಂಗಳೂರು: ಬಿಎಸ್‌ಎನ್‌ಎಲ್ ಈಗ ಮತ್ತಷ್ಟು ಹೊಸತನದೊಂದಿಗೆ ಹವಾ ಶುರು ಮಾಡಿದೆ. ಲೋಗೋ ಬದಲಿಸಿ ಗುಡ್‌ನ್ಯೂಸ್ ನೀಡಿ ಜಿಯೋ, ಏರ್‌ಟೆಲ್‌ಗೆ ಬಿಗ್ ಶಾಕ್ಕೊಟ್ಟಿದೆ. ಹೊಸ ಸೇವೆ ಪರಿಚಯ ಮಾಡಿ 1.8 ಕೋಟಿ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರ್ಪಡೆಮಾಡಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾ‌ರ್ ನಿಗಮ್ ಲಿಮಿಡೆಟ್ (ಬಿಎಸ್ಸೆನ್ನೆಲ್) ಸದ್ಯಕ್ಕೆ ಕರೆ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾರ್ಬಟ್ ರವಿ ಹೇಳಿದ್ದಾರೆ, ಇತ್ತೀಚೆಗೆ ಜಿಯೋ, ಏರ್‌ಟೆಲ್‌, ವೊಡಾಫೋನ್‌ಗಳು ಭಾರಿ ಪ್ರಮಾಣದಲ್ಲಿ ದರ ಹೆಚ್ಚಿಸಿದ ಬೆನ್ನಲ್ಲೇ ರವಿ ಈ ಹೇಳಿಕೆ ನೀಡಿ, “ನಮಗೆ ಗ್ರಾಹಕರ ಸಂತೋಷ ಮುಖ್ಯ ಹೀಗಾಗಿ ಸದ್ಯ ಭವಿಷ್ಯದಲ್ಲಿ ದರ ಏರಿಕೆ ಇಲ್ಲ’ ಎಂದಿದ್ದಾರೆ. ಹೊಸ ಸೇವೆ ಪರಿಚಯ,…

Read More

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಜನ್ಮದಿನ ಆಚರಣೆ – ಮೂವರಿಗೆ ಬಂಗಾರ ಪ್ರಶಸ್ತಿ, ನಗದು ಮತ್ತು ತಾಮ್ರದ ಫಲಕ – ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ – ಅ.26ರಂದು ಸೊರಬದ ಬಂಗಾರಧಾಮದಲ್ಲಿ ಸಮಾರಂಭದಲ್ಲಿ ಪ್ರಶಸ್ತಿ NAMMUR EXPRESS NEWS ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಜನ್ಮದಿನದ ಸಂದರ್ಭ ನೀಡುವ ಬಂಗಾರ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅ.26ರಂದು ಸೊರಬದ ಬಂಗಾರಧಾಮದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಎಸ್‌.ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್‌ ನಾಯಕ್‌ ಈ ಮಾಹಿತಿ ಹಂಚಿಕೊಂಡರು. ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್‌.ಜಿ.ಸುಶೀಲಮ್ಮ, ಸಾಹಿತಿ ಕುಂ.ವೀರಭದ್ರಪ್ಪ, ಗ್ರಾಮೀಣ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ್‌ ಅವರಿಗೆ ಈ ಬಾರಿ ಬಂಗಾರ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ತಾಮ್ರದ ಫಲಕವನ್ನು ಹೊಂದಿರಲಿದೆ ಎಂದರು. ಅ.26ರಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್‌…

Read More

ಮಲ್ಪೆಯಲ್ಲಿ ಸಿಕ್ತು ಎರಡೂವರೆ ಕ್ವಿಂಟಲ್ ಮೀನು! – 250 ಕೆಜಿ ಭರ್ಜರಿ ತೊರಕೆ ಮೀನು ಬಲೆಗೆ – ಕೆ .ಜಿ.ಗೆ 50 ರಿಂದ ರೂ.100 ಬೆಲೆಗೆ ಮಾರಾಟವಾಗುತ್ತೆ! NAMMUR EXPRESS NEWS ಮಲ್ಪೆ: ಮಲ್ಪೆ ಮೀನುಗಾರರು 250 ಕೆಜಿಯ ಭರ್ಜರಿ ತೊರಕೆ ಮೀನೊಂದನ್ನು ಭೇಟೆಯಾಡಿದ್ದಾರೆ. ಸುಮಾರು ಎರಡೂವರೆ ಕ್ವಿಂಟಲ್ ಮೀನು ಇದೀಗ ಮೀನುಗಾರರಿಗೆ ದೀಪಾವಳಿ ಖುಷಿ ನೀಡಿದೆ. ಸ್ಟಿಂಗ್ ರೇ ಎಂದು ಕರೆಯಲ್ಪಡುವ ಬೃಹತ್ ತೂಕದ ತೊರಕೆ ಮೀನು ಬಲೆಗೆ ಬಿದ್ದು ಮೀನುಗಾರರ ಅದೃಷ್ಟ ಖುಲಾಯಿಸಿದೆ. ಸುಮಾರು 250 ಕೆ.ಜಿ ತೂಗುವ ತೊರಕೆ ಮೀನು ಬಲೆಗೆ ಬಿದ್ದಿದ್ದು, ಇದು ಅಪರೂಪಕ್ಕೆ ಒಮ್ಮೆ ಸಿಗುವ ಭಾರಿ ಗಾತ್ರದ ತೊರಕೆ ಮೀನಾಗಿದೆ. ಕೆ.ಜಿ.ಗೆ 50 ರಿಂದ ರೂ.100 ಬೆಲೆಗೆ ಮಾರಾಟವಾಗುವ ಈ ಮೀನು, ಅರಬ್ಬಿ ಸಮುದ್ರದಲ್ಲಿ ಆಳ ಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದಿದೆ. ಅಪರೂಪಕ್ಕೆ ಸಿಗುವ ಭಾರಿ ಗಾತ್ರದ ಮತ್ತ್ವ ಎಂದು ಮೀನುಗಾರರು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ.

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯ ಜನರು ಹೂಡಿಕೆಯ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ನಿಮಗೆ ಸಂದೇಹವಿರುವ ಕಡೆ ಹಣ ಹೂಡಿಕೆ ಮಾಡಬೇಡಿ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಕಾನೂನು ವಿವಾದ ಸಾಧ್ಯ. ಮಾತಿನ ಮೂಲಕ ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಮಿಶ್ರ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವರು ಮನೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಕೆಲಸದ ಸ್ಥಳದಲ್ಲಿ ನೀವು ಸವಾಲುಗಳನ್ನು ಎದುರಿಸಬೇಕಾಗಬಹುದು. ಕಚೇರಿ…

Read More

ಆವಾಸ್ ಮನೆ ಹಂಚಿಕೆ: ಶಾಸಕರ ವಿರುದ್ಧ ಹೋರಾಟ! – ಹೊದಲದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಉಪವಾಸ ಸತ್ಯಾಗ್ರಹ – ನ್ಯಾಯ ಸಿಗುವವರೆಗೂ ನಮ್ಮ ಹೋರಾಟ: ತುಪ್ಪದ ಮನೆ ವಿನಾಯಕ – ತೀರ್ಥಹಳ್ಳಿ ತಾಪಂ ಆವರಣದಲ್ಲಿ ಹೋರಾಟ: ಕಿಮ್ಮನೆ NAMMUR EXPRESS NEWS ತೀರ್ಥಹಳ್ಳಿ: ವಸತಿ ವಂಚಿತರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರಿಂದ ಅದ ಅನ್ಯಾಯದ ವಿರುದ್ಧ ಬುಧವಾರ ಹೊದಲ ಅರಳಾಪುರ ಗ್ರಾಮ ಪಂಚಾಯತ್‌ ಕಛೇರಿಯ ಎದುರು ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ತುಪ್ಪದ ಮನೆ ಇವರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು. ವಿನಾಯಕ ಮತ್ತು ಅವರ ತಂಡಕ್ಕೆ ಕಾಂಗ್ರೆಸ್ ನಾಯಕರು, ಹೋರಾಟಗಾರರು ಸಾಥ್ ನೀಡಿದರು. ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಮಿಕರ ಘಟಕದ ಅಧ್ಯಕ್ಷರು, ಹೊದಲ ಅರಳಾಪುರ ಗ್ರಾಮ ಪಂಚಾಯಿತಿಯ ಸದಸ್ಯ ವಿನಾಯಕ್ ತುಪ್ಪದ ಮನೆ ಹಾಗೂ ಮಂಜುನಾಥ್ ಇವರಿಗೆ ಹೊದಲ ಅರಳಾಪುರ ಪಂಚಾಯತಿಯ ಕೆಲವು ಸದಸ್ಯರು,ಗ್ರಾಮಸ್ಥರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲ ಘೋಷಣೆ ಮಾಡಿದರು. ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಕೆಸ್ತೂರು…

Read More

ಡ್ರಗ್ಸ್ ಮಟ್ಟ ಹಾಕಲು ಬೇಕು ಬಿಗಿ ಕಾನೂನು! * ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು * ಕಾಂಗ್ರೆಸ್ ನಾಯಕ ಮಂಜುನಾಥ ಭಂಡಾರಿ ಮಾತು NAMMUR EXPRESS NEWS ಮಂಗಳೂರು: ಕರಾವಳಿಯಲ್ಲಿ ವ್ಯಾಪಕವಾಗುತ್ತಿರುವ ಡ್ರಗ್ಸ್ ಜಾಲವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾನೂನನ್ನು ಬಿಗಿಗೊಳಿಸುವ ಅಗತ್ಯ ಇದೆ. ಈ ಕುರಿತಂತೆ ಕಾನೂನಿನಲ್ಲಿ ಕೆಲವು ಬದಲಾವಣೆ ತರುವ ನಿಟ್ಟಿನಲ್ಲಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದ್ದಾರೆ. ಮಂಗಳಳೂರಲ್ಲಿ ಮಾತನಾಡಿದ ಅವರು, ಡ್ರಗ್ಸ್ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿರುವ ಕಾರಣ ಕರಾವಳಿಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಡ್ರಗ್ಸ್ ಜಾಲದ ಆರೋಪಿಗಳು ಸಿಕ್ಕಿಬಿದ್ದರೂ ಅವರು ಕೆಲವೇ ದಿನದ ಅಂತರದಲ್ಲಿ ಜಾಮೀನಿನಲ್ಲಿ ಹೊರಬಂದು ಮತ್ತೆ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕಾನೂನಿಗೆ ತಿದ್ದುಪಡಿ ತಂದು ಕಠಿನ ನಿಯಮ ರೂಪಿಸಬೇಕಾಗಿದೆ ಎಂದರು. ಎಚ್‌ಡಿಕೆಗೆ ಅಭಿವೃದ್ಧಿ ಬೇಡ, ರಾಜಕೀಯ ಮಾತ್ರ!: ಎಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಈ ಹಿಂದೆ ಯಾವ ರೀತಿ…

Read More

ಸಿಬಿಐ ಅಧಿಕಾರಿ ಹೆಸರಲ್ಲಿ ಆನ್ ಲೈನ್ ಹಣ ವರ್ಗಾವಣೆ! – ಕುಂದಾಪುರ: 3.80 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು – ಮಂಗಳೂರು: ತಲೆಮರೆಸಿಕೊಂಡಿದ್ದ, ಆರೋಪಿ ಅರೆಸ್ಟ್! – ಮಂಗಳೂರು:ಅಕ್ರಮ ಮದ್ಯ, ಅವಧಿ ಮೀರಿದ ಬಿಯರ್ ವಶ – ಸುರತ್ಕಲ್: ನೀರಿನಲ್ಲಿ ಆಡಿ,ಯುವಕನೋರ್ವ ಸಮುದ್ರ ಪಾಲು!  ಮಂಗಳೂರು: ಮಂಗಳೂರು ನಗರದಲ್ಲಿ ಹೆಲ್ಮೆಟ್ ಕಳ್ಳರ ಕಾಟ! NAMMUR EXPRESS NEWS ಕುಂದಾಪುರ: ಸಿಬಿಐ ಆಫೀಸರ್ ಎಂದು ಹೇಳಿಕೊಂಡು ವ್ಯಕ್ತಿಯನ್ನು ವಂಚಿಸಿದ ಪ್ರಕರಣ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ನಿವಾಸಿ ಪ್ರವೀಣ್ ಕುಮಾರ್ ವಂಚನೆಗೊಳಗಾದವರು. ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ. ಅ.19ರಂದು ಇವರ ಸಂಚಾರಿ ದೂರವಾಣಿಗೆ ಕರೆ ಬಂದಿದ್ದು ನಿಮ್ಮ ಸಂಚಾರಿ ದೂರವಾಣಿ ಸಂಖ್ಯೆಯನ್ನು 2 ಗಂಟೆಯೊಳಗೆ ಸ್ಥಗಿತಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ 9 ಪ್ರೆಸ್‌ ಮಾಡುವಂತೆ ತಿಳಿಸಿದ ಮೇರೆಗೆ ಪ್ರೆಸ್ ಮಾಡಿದ್ದಾರೆ. ಕೂಡಲೇ ಅದು ಬೇರೆಯವರಿಗೆ ಕನೆಕ್ಟ್ ಆಗಿದೆ. ನಿಮ್ಮ ಆಧಾರ್ ಕಾರ್ಡ್ ಪ್ರಾಡ್ ಆಗಿದೆ ಎಂದು ತಿಳಿಸಿ ಕೂಡಲೇ ಸಿಬಿಐ ಲೋಗೊ ನಂಬರ್‌ನಿಂದ ಕರೆಮಾಡಿ…

Read More

ಟಾಪ್ ನ್ಯೂಸ್ ಶಿವಮೊಗ್ಗ – ತೀರ್ಥಹಳ್ಳಿಯ ಬಳಗಟ್ಟೆಯಲ್ಲಿ ಓಮ್ನಿ ಆಕ್ಸಿಡೆಂಟ್! – ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ ಅಡಿಕೆ ಕೊಯ್ದು ಕಳ್ಳತನ – ಸಾಗರ: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕ ಸಾವು – ಶಿವಮೊಗ್ಗ: ಆನ್ಲೈನ್ ಮೂಲಕ ಶಿಕ್ಷಕಿಗೆ ವಂಚನೆ – ಶಿವಮೊಗ್ಗ: ಮೊಬೈಲ್‌ ಟವರ್‌ ಬಿಡಿ ಭಾಗ ಕಳ್ಳತನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ. ಬಳಗಟ್ಟೆ ಎಂಬಲ್ಲಿ ಬುಧವಾರ ಬೆಳಗ್ಗೆ ಓಮ್ನಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇನ್ನು ಯಾರು ಏನೂ ಎಂಬುದು ತಿಳಿದು ಬಂದಿಲ್ಲ. ಕಾರು ಸ್ಥಳದಲ್ಲಿ ಪತ್ತೆಯಾಗಿದೆ. ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ ಅಡಿಕೆ ಕೊಯ್ದು ಕಳ್ಳತನ ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ 20 ಚೀಲ ಅಡಿಕೆ ಕೊಯ್ದು ಟ್ರಾಕ್ಟರ್‌ನಲ್ಲಿ ಕಳ್ಳತನ ಮಾಡಿದ ಘಟನೆ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ. ಕಿರಣ್‌ ಕುಮಾರ್‌ ಎಂಬುವವರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮೂವರು,…

Read More