Author: Nammur Express Admin

ಟಾಪ್ ನ್ಯೂಸ್ ಶಿವಮೊಗ್ಗ – ತೀರ್ಥಹಳ್ಳಿಯ ಬಳಗಟ್ಟೆಯಲ್ಲಿ ಓಮ್ನಿ ಆಕ್ಸಿಡೆಂಟ್! – ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ ಅಡಿಕೆ ಕೊಯ್ದು ಕಳ್ಳತನ – ಸಾಗರ: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕ ಸಾವು – ಶಿವಮೊಗ್ಗ: ಆನ್ಲೈನ್ ಮೂಲಕ ಶಿಕ್ಷಕಿಗೆ ವಂಚನೆ – ಶಿವಮೊಗ್ಗ: ಮೊಬೈಲ್‌ ಟವರ್‌ ಬಿಡಿ ಭಾಗ ಕಳ್ಳತನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ. ಬಳಗಟ್ಟೆ ಎಂಬಲ್ಲಿ ಬುಧವಾರ ಬೆಳಗ್ಗೆ ಓಮ್ನಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇನ್ನು ಯಾರು ಏನೂ ಎಂಬುದು ತಿಳಿದು ಬಂದಿಲ್ಲ. ಕಾರು ಸ್ಥಳದಲ್ಲಿ ಪತ್ತೆಯಾಗಿದೆ. ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ ಅಡಿಕೆ ಕೊಯ್ದು ಕಳ್ಳತನ ಹೊಳೆಹೊನ್ನೂರು: ತೋಟಕ್ಕೆ ನುಗ್ಗಿ 20 ಚೀಲ ಅಡಿಕೆ ಕೊಯ್ದು ಟ್ರಾಕ್ಟರ್‌ನಲ್ಲಿ ಕಳ್ಳತನ ಮಾಡಿದ ಘಟನೆ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ. ಕಿರಣ್‌ ಕುಮಾರ್‌ ಎಂಬುವವರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮೂವರು,…

Read More

ತೀರ್ಥಹಳ್ಳಿಯಲ್ಲಿ ಧರ್ಮಸ್ಥಳ ಸಂಘದ ಜನಜಾಗೃತಿ ಜಾಥಾ! – ಗಾಂಧಿ ಜಯಂತಿ ಪ್ರಯುಕ್ತ ಜನಜಾಗೃತಿಯ ಮೆರವಣಿಗೆ – ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ, ಶಿವಮೊಗ್ಗ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕಗಳು, ನವಜೀವನ ಸಮಿತಿ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ತೀರ್ಥಹಳ್ಳಿ ತಾಲ್ಲೂಕು ಇವರ ಸಹಯೋಗದಲ್ಲಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಗಾಂಧೀ ಜಯಂತಿ ಪ್ರಯುಕ್ತ ಜನಜಾಗೃತಿ ಜಾಥಾ ಮೆರವಣಿಗೆ ಕಾರ್ಯಕ್ರಮ ತೀರ್ಥಹಳ್ಳಿಯಲ್ಲಿ ಮಂಗಳವಾರ ನಡೆಯಿತು. ಕುಶಾವತಿ ಪಾರ್ಕ್ ನಿಂದ, ಪಟ್ಟಣದಲ್ಲಿ ಸಂಚರಿಸಿ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದವರೆಗೆ ಈ ಜಾಥಾ ನಡೆಯಿತು. ಸಮಾವೇಶದಲ್ಲಿ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ಘಾಟನೆ ನಡೆಸಿದರು.ಜಿಲ್ಲಾ ಜನಜಾಗೃತಿ ವೇದಿಕೆ, ಶಿವಮೊಗ್ಗ ಇದರ…

Read More

ರಾಜ್ಯ ರಾಜಕಾರಣದಲ್ಲಿ ಆರ್. ಎಂ ಪ್ರಭಾವಿ! – ಸಚಿವರ ಜತೆ ಚರ್ಚೆ: ಯೋಗೇಶ್ವರ್ ಸೇರ್ಪಡೆ ವೇಳೆ ಉಪಸ್ಥಿತಿ – ಡಿಕೆಶಿ ಜತೆ ಸಹಕಾರಿ ನಾಯಕನ ಮಾತುಕತೆ NAMMUR EXPRESS NEWS ತೀರ್ಥಹಳ್ಳಿ: ರಾಜ್ಯ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯ ಸಹಕಾರ ನಾಯಕ ಡಾ.ಆರ್. ಎಂ.ಮಂಜುನಾಥ ಗೌಡ ಪ್ರಭಾವಿಯಾಗಿದ್ದು ಕಳೆದ 3 ದಿನಗಳಿಂದ ವಿವಿಧ ಸಚಿವರನ್ನು ಭೇಟಿ ಮಾಡಿ ಶಿವಮೊಗ್ಗ ಜಿಲ್ಲೆ, ಸಹಕಾರ ಸಂಸ್ಥೆಗಳು, ತೀರ್ಥಹಳ್ಳಿ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಉಪ ಚುನಾವಣೆ ಪ್ಲಾನ್: ಸಭೆಯಲ್ಲಿ ಹಾಜರ್ ಬೆಂಗಳೂರು ಕಾಂಗ್ರೆಸ್ ಕಛೇರಿಯಲ್ಲಿ ಡಿಕೆಶಿ ಹಾಗೂ ಪ್ರಮುಖ ನಾಯಕರಾದ ಚಂದ್ರಶೇಖರ್,, ವಸಂತ ಕುಮಾರ್, ಪ್ರಚಾರ ಸಮಿತಿಯ ವಿನಯಕುಮಾರ ಸೊರಕೆ ನೇತೃತ್ವದಲ್ಲಿ ಮುಂಬರುವ ಉಪ ಚುಣಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳು ವಿಭಾಗಗಳ‌ ಮುಖ್ಯಸ್ಥರ ಸಭೆಯಲ್ಲಿ ಮಂಜುನಾಥ ಗೌಡ ಅವರು ಭಾಗವಹಿಸಿದ್ದರು. ಸಹಕಾರ ಸಚಿವರ ಜತೆ ಸಹಕಾರ ಚರ್ಚೆ ವಿಧಾನ ಸೌಧದಲ್ಲಿ ರಾಜ್ಯ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಗೌರವ ಉಪಸ್ಥಿತಿ ಹಾಗೂ…

Read More

ಕಡ್ತೂರು ಸಹಕಾರಿಯ ನೂತನ ಕಟ್ಟಡ ಉದ್ಘಾಟನೆ – ಶಾಸಕ ಜ್ಞಾನೇಂದ್ರ, ಕಿಮ್ಮನೆ, ಮಂಜುನಾಥ್ ಗೌಡ ಸಮಾಗಮ – ಮಹಿಳಾ ನಾಯಕಿ ಡಾ.ಆರತಿ ಕೃಷ್ಣ ಅವರಿಗೆ ಗೌರವ NAMMUR EXPRESS NEWS ತೀರ್ಥಹಳ್ಳಿ: ಕಡ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಕಟ್ಟಡ ಮತ್ತು ವಾಣಿಜ್ಯ ಮಳಿಗೆ ಉದ್ಘಾಟನೆ ಸಂಭ್ರಮದಿಂದ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ಕಡ್ತೂರು ಪ್ಯಾಕ್ಸ್‌ನ ಆಡಳಿತ ಮಂಡಳಿಯನ್ನು ಅಭಿನಂದಿಸಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆ‌ರ್.ಎಂ.ಮಂಜುನಾಥಗೌಡರು. ಸಹಕಾರಿ ರತ್ನ ಬಸವಾನಿ ವಿಜಯದೇವ್, ಅನಿವಾಸಿ ಭಾರತೀಯ ಸಂಘದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಕೇಳೂರು ಮಿತ್ರ, ಕಡ್ತೂರು ದಿನೇಶ್, ಕಾರಬೈಲು ರಮೇಶ್, ಅನ್ನಪೂರ್ಣ ಮೋಹನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸಹಕಾರಿಯ ಅಧ್ಯಕ್ಷ ಕಡ್ತೂರು ಮೋಹನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Read More

ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಶುರು: 24 ಗಂಟೆ ದರ್ಶನ! – ಸಿದ್ಧತಾ ಕಾರ್ಯ ಬಹುತೇಕ ಪೂರ್ಣ: ದೀಪಾಲಂಕಾರ ವೀಕ್ಷಣೆಗೆ ಡಬಲ್ ಡೆಕ್ಕರ್ ಬಸ್ – ಇಸ್ಕಾನ್ ಹೆಗಲಿಗೆ ಲಾಡು-ಪ್ರಸಾದ ಹಂಚುವ ಹೊಣೆ NAMMUR EXPRESS NEWS ಹಾಸನ: ನಗರದ ಅಧಿದೇವತೆ, ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದೇವಿಯ ದರ್ಶನೋತ್ಸವ ಇದೇ ತಿಂಗಳ ೨೪ ರಿಂದ ನ.೩ ರವರೆಗೆ ನಡೆಯಲಿದ್ದು, ಗುರುವಾರ ಮಧ್ಯಾಹ್ನ ೧೨ ಗಂಟೆಗೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಡಾ.ಶ್ರೀ ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಹಾಗೂ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಉಪಸ್ಥಿತ ರಿರುವರು.ನ.೩ ರ ಮಧ್ಯಾಹ್ನ ೧೨ ಗಂಟೆಗೆ ದೇವಾಲಯದ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಿದೆ. ಈ ಬಾರಿ ದಿನದ ೨೪ ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳಾದ ಮಳೆ-ಬಿಸಿಲಿನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್…

Read More

ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲೇ ಹಲಸಿನ ತುಂಡುಗಳು, ಮತ್ತೊಂದು ಕಡೆ ಹಲಸಿನ ಮರವೇ ಮಾಯ! – ಅರಣ್ಯ ಇಲಾಖೆ ವೈಫಲ್ಯ ಕೇಳೋರು ಯಾರು…? – ವಾಹನ ಸವಾರರು, ಓಡಾಡುವ ಜನರಿಗೆ ತೊಂದರೆ – ದಿಂಡ ಸಮೀಪದ ಹಲಗೇರಿಯಲ್ಲಿ ಹಲಸಿನ ಮರ ಕಡಿತಲೆ NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಜೂನಿಯರ್ ಕಾಲೇಜ್ ರಸ್ತೆಯ ಅರಣ್ಯ ಇಲಾಖೆಯ ಸಮೀಪವೇ ಹಲಸಿನ ಮರವನ್ನ ಕಡಿತಲೆ ಮಾಡಲಾಗಿ ತಿಂಗಳುಗಟ್ಟಲೆ ಕಾಲ ಆಗಿದೆ. ಆದರೆ ಇನ್ನೂ ಅದನ್ನು ವಿಲೇವಾರಿ ಮಾಡಿಲ್ಲ ಇದರಿಂದಾಗಿ ವಾಹನ ಸವಾರರು ಮತ್ತು ವಿದ್ಯಾರ್ಥಿಗಳು ವಯಸ್ಸಾದವರು ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ತೊಂದರೆ ಆಗುತ್ತಿದೆ. ಜೊತೆಗೆ ವಾಹನ ನಿಲುಗಡೆಗೂ ಕೂಡ ಸಮಸ್ಯೆ ಆಗುತ್ತಿದೆ. ಈಗಾಗಲೇ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ನಡುವೆ ಸುಮಾರು 50 ಮೀಟರ್ ನಷ್ಟು ದೂರದಲ್ಲಿ ಹಲಸಿನ ಮರದ ತುಂಡುಗಳನ್ನ ರಸ್ತೆ ಬದಿಯಲ್ಲಿ ಹಾಕಲಾಗಿದೆ. ಇದು ತೀರ್ಥಹಳ್ಳಿಯ ಅಂದಕೂ ಕೂಡ ತೊಂದರೆ ನೀಡಿದೆ. ಅರಣ್ಯ ಇಲಾಖೆ ಈ ಕಡಿತಲೆ ಮಾಡಿದ್ದು ಇದರ…

Read More

ನೀರಿನಲ್ಲಿ ಕೊಚ್ಚಿ ಹೋದ 200 ಚೀಲ ಅಡಕೆ!! * ಇಡೀ ದಿನ ರಾಜ್ಯ ಹೆದ್ದಾರಿ ಬಂದ್!! * ಹಳ್ಳದಲ್ಲಿ ಕೊಚ್ಚಿ ಹೋದ ವೃದ್ಧ ಸಾವು NAMMUR EXPRESS NEWS ನಾಯಕನಹಟ್ಟಿ/ಚಿತ್ರದುರ್ಗ: ನಾಗಣ್ಣ ಎಂಬುವರು ಜಮೀನಿನಲ್ಲಿ ಒಣಗಲು ಹಾಕಿದ್ದ 100 ಚೀಲ ಚಾಲಿ ಅಡಕೆ ಹಳ್ಳದ ನೀರಿಗೆ ಕೊಚ್ಚಿ ಹೋಗಿದೆ. ಕಾಂತರಾಜ್‌ಗೆ ಸೇರಿದ 8 ಕ್ವಿಂಟಲ್ ಒಣ ಅಡಕೆ ನೀರು ಪಾಲಾಗಿದೆ. ಅಡಕೆ ಸುಲಿಯುವ ಯಂತ್ರ, ಎರಡು ಬೈಕ್‌ಗಳು ನೀರಿನಲ್ಲಿ ಮುಳುಗಿವೆ. ಬಿ.ಟಿ.ತಿಪ್ಪೇಸ್ವಾಮಿ ಯವರು 400 ಚೀಲ ಅಡಕೆಯನ್ನು ಒಣಗಲು ಮೈದಾನದಲ್ಲಿ ಹಾಕಿದ್ದರು. ಇದರಲ್ಲಿ 100 ಚೀಲ ಕೊಚ್ಚಿ ಹೋಗಿದೆ. ಹಳ್ಳ ಮತ್ತು ಜಾಲಿಗಿಡದಲ್ಲಿ ಸಿಕ್ಕಿಕೊಂಡಿರುವ ಅಡಕೆಯನ್ನು ಕೂಲಿ ಕಾರ್ಮಿಕರಿಂದ ಆರಿಸಲಾಗುತ್ತಿದೆ. ಇಡೀ ದಿನ ರಾಜ್ಯ ಹೆದ್ದಾರಿ ಬಂದ್!! ಚಳ್ಳ ಕೆರೆ ತಾಲೂಕಿನ ಮನಮೈನಹಟ್ಟಿ ಹಾಗೂ ನಾಯಕನಹಟ್ಟಿ’ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ 45ರಲ್ಲಿ ಚಿಕ್ಕಹಳ್ಳ ಮತ್ತು ಕೆರೆ ಕೋಡಿ ನೀರು ಭಾರಿ ಪ್ರಮಾಣದಲ್ಲಿ ಹರಿದಿದೆ. ಇದರಿಂದ ಕೋಡಿ ನೀರು ಹರಿವ…

Read More

ಹಾಸನದಲ್ಲೂ ಬಾಂಗ್ಲಾ ಅಕ್ರಮ ವಲಸಿಗರು! – ಮೂವರು ಬಾಂಗ್ಲಾ ಪ್ರಜೆಗಳ ಬಂಧನ – ಶಿವಮೊಗ್ಗ, ಉಡುಪಿ ಈಗ ಹಾಸನದಲ್ಲಿ ಅಕ್ರಮ ಆಧಾರ್ – ಪಶ್ಚಿಮ ಬಂಗಾಳ ನಕಲಿ ಆಧಾರ್ ಕಾರ್ಡ್ ಬಳಕೆ! NAMMUR EXPRESS NEWS ಹಾಸನ: ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಜಮಾಲ್ ಅಲಿ, ಫಾರೂಕ್ ಅಲಿ ಮತ್ತು ಅಕ್ಮಲ್ ಹೊಕ್ಕು ಬಂಧಿತ ಆರೋಪಿಗಳು. ನಗರದ ೮೦ ಅಡಿ ರಸ್ತೆಯ ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬುವವರ ಮನೆಯಲ್ಲಿ ಈ ಮೂವರು ವಾಸ ಇದ್ದರು. ಜುಬೇರ್ ಅವರ ಹೊಸ ಮನೆಯ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಇಲ್ಲಿಗೆ ಬರುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದಿದ್ದ ನುಸುಳುಕೋರರು, ಈಗಲೂ ಪಶ್ಚಿಮ ಬಂಗಾಳ ವಿಳಾಸ ಇರುವ ಆಧಾರ್‌ಕಾರ್ಡ್ ಹೊಂದಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಖಚಿತ ಮಾಹಿತಿ ಮೇರೆಗೆ ಬಾಂಗ್ಲಾ ಪ್ರಜೆಗಳನ್ನು ಡಿಸಿಆರ್‌ಬಿ ಪೊಲೀಸರು ಬಂಧಿಸಿ ತನಿಖೆಗೆ…

Read More

ದತ್ತಮಾಲಾ ಅಭಿಯಾನ: ಜಿಲ್ಲಾಡಳಿತ ಷರತ್ತು ನಿಬಂಧನೆ!! * ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ!! * ಹಾನಿಗೊಳಿಸುವ ಚಟುವಟಿಕೆಗಳ ನಿಷೇಧ! NAMMUR EXPRESS NEWS ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನ. 4ರಿಂದ 10ರ ವರೆಗೆ ಶ್ರೀರಾಮಸೇನೆಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಷರತ್ತು, ನಿಬಂಧನೆಗಳನ್ನು ವಿಧಿಸಿ ಆದೇಶಿಸಿದ್ದಾರೆ. ಅ. 22ರಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಕರು ಅನುಮತಿ ಪಡೆದುಕೊಳ್ಳಬೇಕು. ಧಾರ್ಮಿಕ ಸಂಸ್ಥೆಗಳ ಕಟ್ಟುಪಾಡಿಗೆ ಷರತ್ತಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.ಮಾರಕಾಸ್ತ್ರ ಆಯುಧಗಳನ್ನು ಹಿಡಿದು ಓಡಾಡುವುದು, ಸ್ಫೋಟಕ, ಸಿಡಿಮದ್ದುಗಳ ದಾಸ್ತಾನು ಸಾಗಾಟ, ಆಸ್ತಿಪಾಸ್ತಿ ಹಾನಿಗೊಳಿಸುವ ಚಟುವಟಿಕೆ ನಿಷೇಧಿಸಲಾಗಿದೆ. ಪ್ರತಿಭಟನೆ, ಮುಷ್ಕರ ನಿರ್ಬಂಧಿಸಲಾಗಿದೆ. ದತ್ತಮಾಲಾಧಾರಿಗಳು ಸಾಗುವ ಮಾರ್ಗ ಸ್ಥಳ, ಸಮಯ, ಧಾರ್ಮಿಕ ಸಭೆ ಬಗ್ಗೆ ಆಯೋಜಕರು ಮುಂಚಿತವಾಗಿ ತಹಶೀಲ್ದಾರ್ ಮತ್ತು ಪೊಲೀಸ್‌ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಕೋಮುಸಂಘರ್ಷಮೂಡಿಸುವ ಭಾಷಣ, ಅವಹೇಳಕನಾರಿ ಘೋಷಣೆ, ಪ್ರಚೋದನಕಾರಿ ಭಾಷಣ,…

Read More

ಚನ್ನಪಟ್ಟಣದಲ್ಲಿ ಕೈ ಪಾಳಯ ಸೇರಿದ ಸೈನಿಕ! – ಯೋಗೇಶ್ವರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ – ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ?… ನಿಖಿಲ್ ಸ್ಪರ್ಧೆ ಮಾಡ್ತಾರಾ? NAMMUR EXPRESS NEWS ಬೆಂಗಳೂರು/ಚನ್ನಪಟ್ಟಣ: ಮಂಗಳವಾರ ತಡರಾತ್ರಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಕ್ಯಾಂಪ್‌ಗೆ ಜಂಪ್ ಆಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾದ ಸಿಪಿವೈ ಚನ್ನಪಟ್ಟಣದ ಅಖಾಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದೆ. ಎಂಎಲ್ಸಿ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿ ನಾಯಕರು ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಯತ್ನ ಮುಂದುವರಿಸಿದ್ದರು. ಡಿಸಿಎಂ ಮತ್ತು ಅವರ ಆಪ್ತರು ನಡೆಸಿದ ಕಾರ್ಯಾಚರಣೆಯ ಫಲವಾಗಿ ಯೋಗೇಶ್ವರ್ ಕಾಂಗ್ರೆಸ್ ಕಡೆ ವಾಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರಿಷ್ಠರು ಕೂಡ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದಿಂದ ಕಣಕ್ಕಿಳಿಸಲು ಸಮ್ಮತಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ?… ನಿಖಿಲ್ ಸ್ಪರ್ಧೆ ಮಾಡ್ತಾರಾ? ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ…

Read More