Author: Nammur Express Admin

ಮಹಾ ಮಳೆಗೆ ರಾಜಧಾನಿಯಲ್ಲಿ ಮೂರು ಬಲಿ! – ಮಳೆಗೆ ಹೊಸ ಕಟ್ಟಡ ಕುಸಿತ: ಮೂವರ ಶವ ಪತ್ತೆ – ಅವಶೇಷಗಳಡಿ 17ಕ್ಕೂ ಹೆಚ್ಚು ಕಾರ್ಮಿಕರು – ರಾಜ್ಯದ ವಿವಿಧ ಕಡೆ ಇಬ್ಬರು ಸಾವು – ಅಪಾರ ಪ್ರಮಾಣದ ಬೆಳೆ, ಅಸ್ತಿ ಪಾಸ್ತಿ ಹಾನಿ NAMMUR EXPRESS NEWS ಬೆಂಗಳೂರು: ಬೆಂಗಳೂರು ನಗರದಲ್ಲಿ ಮಳೆ ಬಿಟ್ಟೂಬಿಡದೆ ರಾದ್ಧಾಂತ ಸೃಷ್ಟಿಸುತ್ತಿದ್ದರೆ, ಕಮ್ಮನಹಳ್ಳಿ ಬಳಿಯ ಬಾಬುಸಾ ಪಾಳ್ಯದಲ್ಲಿ (ಬಾಬುಸಾಹೇಬ್ ಪಾಳ್ಯ) ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಐವರು ಅಸುನೀಗಿದ್ದಾರೆ ಎನ್ನಲಾಗಿದೆ. ಈವರೆಗೆ ಮೂವರ ಶವ ಹೊರತೆಗೆಯಲಾಗಿದೆ. ಕಟ್ಟಡದ ಅವಶೇಷಗಳಿಡಿ 17ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಹೆಣ್ಣೂರು ಸಮೀಪ ಇರುವ ಬಾಬುಸಾಬ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಕಟ್ಟಡ ಕಾಮಗಾರಿಯ ವೇಳೆಗೆ 17 ಜನಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪರಿಹಾರ ಕಾರ್ಯಾಚರಣೆ ತಂಡ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ನಾಲ್ಕು ಅಗ್ನಿಶಾಮಕ…

Read More

ಉಡುಪಿ:ಕುಡಿದು ಜಗಳ, ಕತ್ತು ಸೀಳಿ ಕೊಲೆ! – ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿಯ ಕೃಷ್ಣಕೃಪಾ ಬಿಲ್ಡಿಂಗ್‌ನಲ್ಲಿ ಘಟನೆ! – ಗಲಾಟೆ ವಿಕೋಪಕ್ಕೆ ತಿರುಗಿ,ಹರಿತವಾದ ಚೂರಿಯಿಂದ ಕತ್ತು ಸೀಳಿದ ಆರೋಪಿ! NAMMUR EXPRESS NEWS ಉಡುಪಿ: ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನನ್ನೇ ವ್ಯಕ್ತಿಯೊಬ್ಬ ಕತ್ತು ಸೀಳಿ ಕೊಂದಿರುವ ಘಟನೆ ನಡೆದಿದೆ. ಅಲ್ಲದೆ ಘಟನೆಯ ಬಗ್ಗೆ ಸ್ವಯಂ ಆರೋಪಿಯೇ ಪೊಲೀಸರಿಗೆ ಮಾಹಿತಿ ನೀಡಿರುವ ಘಟನೆಯ ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿಯ ಕೃಷ್ಣಕೃಪಾ ಬಿಲ್ಡಿಂಗ್‌ನ ನೆಲ ಅಂತಸ್ತಿನ ಕೊಠಡಿಯಲ್ಲಿ ಅ. 22ರಂದು ನಡೆದಿದೆ. ಕೊರಂಗ್ರಪಾಡಿಯ ಪ್ರಶಾಂತ್‌ ಶೆಟ್ಟಿ ಕೊಲೆಯಾದ ವ್ಯಕ್ತಿ.ಮೃತನ ಸ್ನೇಹಿತ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ್‌ ಎಂಬಾತನೇ ಕೊಲೆ ಆರೋಪಿ. ಇಬ್ಬರೂ ಕುಡಿದು ಜಗಳ ಮಾಡಿಕೊಂಡಿದ್ದು, ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿ ಈರಣ್ಣ ಹರಿತವಾದ ಚೂರಿಯಿಂದ ಪ್ರಶಾಂತ್‌ನ ಕತ್ತು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕತ್ತು ಸೀಳಿದ ಬಳಿಕ ಆರೋಪಿಯು ಖುದ್ದು ಪೊಲೀಸರಿಗೆ…

Read More

ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ – ಎಸ್‌ಸಿ/ಎಸ್ಟಿ ಸಮುದಾಯದ ರೈತರು ಎಸ್‌ಸಿಪಿ / ಟಿಎಸ್‌ಪಿ ಯೋಜನೆಯಡಿ ಸೌಲಭ್ಯ – ಅಗತ್ಯ ದಾಖಲೆಗಳ ಮೂಲಕ ನವಂಬ‌ರ್ 15ರೊಳಗೆ ಅರ್ಜಿ ಸಲ್ಲಿಸಿ NAMMUR EXPRESS NEWS ತೀರ್ಥಹಳ್ಳಿ: ತಾಲ್ಲೂಕಿನ ತೀರ್ಥಹಳ್ಳಿ ಹಾಗೂ ಬೆಜ್ಜವಳ್ಳಿ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ ಗ್ರಾಮಗಳ ಎಸ್‌ಸಿ/ಎಸ್ಟಿ ಸಮುದಾಯದ ರೈತರು ಎಸ್‌ಸಿಪಿ / ಟಿಎಸ್‌ಪಿ ಯೋಜನೆಯಡಿ ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ಮೆಸ್ಕಾಂ ತೀರ್ಥಹಳ್ಳಿ/ಬೆಜ್ಜವಳ್ಳಿ ಉಪವಿಭಾಗ ಕಛೇರಿಗೆ ಆರ್‌ಟಿಸಿ, ಆರ್‌ಡಿ ನಂಬರ್ ಇರುವ ಎಸ್‌ಸಿ/ಎಸ್‌ಟಿ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಫೋಟೋದೊಂದಿಗೆ ನಿಗದಿತ ನಮೂನೆ ಅರ್ಜಿ ಭರ್ತಿ ಮಾಡಿ ಪೂರ್ಣ ದಾಖಲೆ ಲಗತ್ತಿಸಿ ನವಂಬ‌ರ್ 15ರೊಳಗೆ ಸಲ್ಲಿಸಬೇಕು. ನಿಗದಿಪಡಿಸಿದ ದಿನಾಂಕದೊಳಗೆ ಸ್ವೀಕೃತ ವಾದ ಅರ್ಜಿಗಳಿಗೆ ಮೆಸ್ಕಾಂ ನಿಗಮ ತಾಂತ್ರಿಕ ಕಾರ್ಯ ಸಾಧ್ಯತೆ ಪರಿಶೀಲಿಸಿ ಹಾಗು ಸಮಾಜ ಕಲ್ಯಾಣ ಇಲಾಖೆ ಅನುಮೋದನೆ ನಂತರ ಆದ್ಯತೆ ಮೇರೆಗೆ ವಿದ್ಯುತ್ ಸೌಲಭ್ಯ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ವಿನಾಯಕನ ವಿಶೇಷ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯ ಜನರು ಇಂದು ತಮ್ಮ ಕೆಲಸದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಹೋದರ ಸಹೋದರಿಯರೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ** ವೃಷಭ ರಾಶಿ : ಇಂದು ವೃಷಭ ರಾಶಿಯ ಜನರು ಸಾಲದಿಂದ ಮುಕ್ತರಾಗಬಹುದು. ಮನೆಗೆ ಅತಿಥಿಗಳ ಆಗಮನ ಸಂತಸ ತರಲಿದೆ. ಆಸ್ತಿ ಖರೀದಿ ಸಾಧ್ಯ. ಆದರೂ, ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಬಹುದು. ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ಬಾಕಿ ಉಳಿದಿದ್ದರೆ,…

Read More

ಬೆಂಗಳೂರಿನಲ್ಲಿ ಮಳೆಗೆ ದುರಂತ: ಕೊಚ್ಚಿ ಹೋದ ಅಣ್ಣ, ತಂಗಿ!? – ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ಬರದಂತೆ ಜನರಿಗೆ ಸೂಚನೆ – ಮತ್ತೆ ಮಳೆ: ಕೈಗೆ ಸಿಗದ ಬೆಳೆ: ರೈತರ ಬದುಕು ಮೂರಾಬಟ್ಟೆ!? NAMMUR EXPRESS NEWS ಬೆಂಗಳೂರು : ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಳೆನೀರಿನಲ್ಲಿ ಅಣ್ಣ, ತಂಗಿ ಇಬ್ಬರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಕೆಂಗೇರಿ ಬಳಿ ಅಣ್ಣ, ತಂಗಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಣ್ಣ ಶ್ರೀನಿವಾಸ್ (13) ಹಾಗೂ ತಂಗಿ (11) ನಾಪತ್ತೆಯಾಗಿದ್ದು, ಮಳೆನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. – ಚಿಕ್ಕಮಗಳೂರು : ಭಾರೀ ಮಳೆ ಇದರಿಂದ ಪ್ರವಾಸಿ ತಾಣಗಳಿಗೆ ಬರದಂತೆ ಜನರಿಗೆ ಸೂಚನೆ ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಗುತ್ತಿರುವ ಭಾರೀ ಮಳೆಯ ಹಿನ್ನೆಲೆ, ಈ ಭಾಗದ ಪ್ರವಾಸಿ ತಾಣಗಳಿಗೆ ಬರುವ ವಿವಿಧ ಭಾಗಗಳ ಪ್ರವಾಸಿಗರಿಗೆ ಒಂದು ವಾರಗಳ ಕಾಲ ಪ್ರವಾಸ ಮುಂದೂಡುವಂತೆ…

Read More

ದೀಪಾವಳಿ ಹಬ್ಬಕ್ಕೆ ಗುಡ್ ನ್ಯೂಸ್!! * ಹುಬ್ಬಳ್ಳಿ- ಮಂಗಳೂರು ನಡುವೆ ಸ್ಪೇಷಲ್ ರೈಲು ಸಂಚಾರ!! * ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ನಿರ್ಧಾರ! * ಯಾವೆಲ್ಲಾ ರೈಲು, ಎಲ್ಲೆಲ್ಲಿ ನಿಲುಗಡೆ? NAMMUR EXPRESS NEWS ಬೆಂಗಳೂರು: ದೀಪಾವಳಿ ಹಬ್ಬ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ನಿಭಾಯಿಸಲು ನೈಋತ್ಯ ರೈಲ್ವೆಯು ಎಸ್‌ಎಸ್ ಎಸ್ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರ ಮನವಿ ಮೇರೆಗೆ ನೈಋತ್ಯ ರೈಲ್ವೆಯು ಎಸ್‌ಎಸ್‌ಎಸ್ ಹುಬ್ಬಳ್ಳಿ – ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. * ರೈಲು ಸಂಖ್ಯೆ 07311 ನವೆಂಬರ್ 2 ರಂದು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ…

Read More

ಹೆಬ್ರಿ ಅಮೃತ ಭಾರತಿಯಲ್ಲಿ ಅಮೃತವಾಣಿ ಅನಾವರಣ – ಶಾಲೆಯಿಂದ ಮನೆಗೊಂದು ಪತ್ರಿಕೆ: 12 ವರ್ಷಗಳಿಂದ ಪ್ರತಿ ಶೈಕ್ಷಣಿಕ ವರ್ಷದ ಪ್ರತಿ ತಿಂಗಳು ಬಿಡುಗಡೆ -ಮಕ್ಕಳಿಗೆ ಸಾಹಿತ್ಯ ಪರಿಚಯ ಮಾಡುವ ವಿಭಿನ್ನ ಕಾರ್ಯಕ್ರಮ NAMMUR EXPRESS NEWS ಹೆಬ್ರಿ: ಪತ್ರಿಕೆ ವಿದ್ಯಾರ್ಥಿಗಳ ಓದುವಿಕೆ ಮತ್ತು ಬರೆಯುವಿಕೆಯ ಹವ್ಯಾಸವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಥೆ ಕವನ ಬರೆಯುವಂತ ಹವ್ಯಾಸಗಳು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಮೃತ ಭಾರತಿ ಸಂಸ್ಥೆಯು ಅಮೃತವಾಣಿ ಶಾಲೆಯಿಂದ ಮನೆಗೊಂದು ಪತ್ರಿಕೆ 12 ವರ್ಷಗಳಿಂದ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷ ತಂದಿದೆ. ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಭಾಗಿಯಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಅನಾವರಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ವಿಜಯಕುಮಾರ್ ಶೆಟ್ಟಿ ಮಾತನಾಡಿದರು. ಅಮೃತ ಭಾರತಿ ಸಭಾಂಗಣದಲ್ಲಿ ಜುಲೈ ಮತ್ತು ಆಗಸ್ಟ್ ಮಾಸದ ಅಮೃತವಾಣಿ ಪತ್ರಿಕೆ ಅನಾವರಣ ಸಮಾರಂಭದಲ್ಲಿ ಮಾತನಾಡಿದರು. ಅಮೃತ ಭಾರತಿ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಜುಲೈ ಮಾಸದ ಪತ್ರಿಕೆ ಪ್ರಾಯೋಜಕರು ರಾಘವೇಂದ್ರ…

Read More

ತೀರ್ಥಹಳ್ಳಿ ಶೌರ್ಯ ತಂಡದ ಸೇವಾ ಹೆಜ್ಜೆ! – ತೀರ್ಥಹಳ್ಳಿ ತಾಲೂಕಲ್ಲೇ ನಂ.1: ಹಾರೋಗೊಳಿಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕ – ಕೊಪ್ಪ ಸರ್ಕಲ್ ಕುವೆಂಪು ಪ್ರತಿಮೆ ಸ್ವಚ್ಛತೆ ಮಾಡಿದ ಸ್ವಯಂ ಸೇವಕರು NAMMUR EXPRESS NEWS ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತೀರ್ಥಹಳ್ಳಿ ತಾಲ್ಲೂಕಿನ ಯೋಜನಾಧಿಕಾರಿಗಳಾದ ಮಾಲತಿ ದಿನೇಶ್ ಇವರ ಮಾರ್ಗದರ್ಶನದೊಂದಿಗೆ “ಹಾರೋಗೊಳಿಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ” ತಾಲ್ಲೂಕು ಮಟ್ಟದಲ್ಲಿ, ಸಮಾನ ಮನಸ್ಕ, ಉತ್ಸಾಹಿ ಯುವಕರ ಸಹಕಾರದೊಂದಿಗೆ ಸಮಾಜಕ್ಕೆ ಅತೀ ಹೆಚ್ಚು ಸೇವೆ ಮಾಡುತ್ತಿದೆ. ಮೇಲ್ವಿಚಾರಕರಾದ ಗಜೇಂದ್ರ, ಸೇವಾಪ್ರತಿನಿಧಿ ಚೈತ್ರ,ಘಟಕ ಪ್ರತಿನಿಧಿ ಮಂಜುನಾಥ ಹೊಳೆಗದ್ದೆ, ಸದಸ್ಯರಾಗಿ, ಅಶ್ವಥ ಹೊಳೆಗದ್ದೆ, ಶಂಕರ ಹೊಳೆಗದ್ದೆ, ನಾಗರಾಜ ಹೊಳೆಗದ್ದೆ, ಆದಿತ್ಯ ಹೊಳೆಗದ್ದೆ,ಕಿರಣ ಹೊಸ ಅಗ್ರಹಾರ, ಚಂದ್ರಶೇಖರ ಹೊಸ ಅಗ್ರಹಾರ, ರಾಘವೇಂದ್ರ ಹರಳಿಮಠ,ಗಿರೀಶ ಹಾರೋಗೋಳಿಗೆ,ನಾರಾಯಣ ಹಾರೋಗೋಳಿಗೆ, ಮಂಜುನಾಥ ಹಾರೋಗೋಳಿಗೆ, ಭರತ್ ಹಾರೋಗೋಳಿಗೆ, ಸುಧಾಕರ ಹಾರೋಗೋಳಿಗೆ, ಉದಯ ಹಾರೋಗೋಳಿಗೆ,ಅಕ್ಷಯ ಹಾರೋಗೋಳಿಗೆ, ರಂಜನ ಧರಾಖಾಸ್ ಸೇರಿದಂತೆ ಇನ್ನು ಅನೇಕರು ಈ ಸೇವೆ ಸಲ್ಲಿಸುತ್ತಿದ್ದಾರೆ. ಕೊಪ್ಪ…

Read More

ಎಲ್ಲೆಡೆ ವಾತಾವರಣದ ಅವಾಂತರ, ಕಂಗಾಲಾದ ಜನ! – ಮುಂಜಾನೆ ಬಿಸಿಲು ವಾತಾವರಣ, ಸಂಜೆ ಬಳಿಕ ನಿರಂತರ ಮಳೆ!! – ವಾತಾವರಣದ ಎಫೆಕ್ಟ್, ಕೃಷಿ ಮತ್ತು ಆರೋಗ್ಯಕ್ಕೆ ತೊಂದರೆ! NAMMUR EXPRESS NEWS ಬೆಂಗಳೂರು: ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅ. 21ರಂದು ಹಗಲು ವೇಳೆಯಲ್ಲಿ ಮೋಡ ಕವಿದ ಬಿಸಿಲಿನ ವಾತಾವರಣವಿತ್ತು. ಸಂಜೆಯಾಗುತ್ತಲೇ ದಟ್ಟ ಮೋಡ ಕವಿಯಲು ಆರಂಭವಾಗಿ ವಿವಿಧೆಡೆ ಮಳೆ ಸುರಿದಿದೆ. ಮಂಗಳೂರು ನಗರ ಆಸುಪಾಸಿನಲ್ಲಿ ಮುಂಜಾನೆ ವೇಳೆ ಸಾಮಾನ್ಯ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಕರಾವಳಿಗೆ ಎರಡು ದಿನ ಎಲ್ಲೋ ಅಲರ್ಟ್‌ ಘೋಷಿಸಿದೆ. ಅ. 22ಮತ್ತು 23ರಂದು ಮಳೆ ಇರುವ ಸಾಧ್ಯತೆಯಿದೆ. ಅ.24ಮತ್ತು 25 ಯಾವುದೇ ಮಳೆ ಮುನ್ಸೂಚನೆ ಇಲ್ಲ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 24.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. – ಮುಂಜಾನೆ ಬಿಸಿಲು ವಾತಾವರಣ, ಸಂಜೆ ಬಳಿಕ…

Read More

ದೀಪಾವಳಿ ಹಬ್ಬಕ್ಕೆ ಯಜಮಾನಿಯರಿಗೆ ಸಿಹಿಸುದ್ದಿ!! – ಎರಡು ಕಂತು ಗೃಹಲಕ್ಷ್ಮಿಹಣ ಖಾತೆಗೆ ಜಮಾ! – ಗೃಹಲಕ್ಷ್ಮಿ ಯೋಜನೆ ಅನ್ನಭಾಗ್ಯ ಯೋಜನೆ ಹಣ ವಿವರಗಳನ್ನು ತಿಳಿಯುವುದು ಹೇಗೆ? NAMMUR EXPRESS NEWS ಬೆಂಗಳೂರು : ರಾಜ್ಯ ಸರ್ಕಾರವು ಯಜಮಾನಿಯರಿಗೆ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಎರಡು ತಿಂಗಳ ಹಣ ವರ್ಗಾವಣೆಯಾಗಿದೆ. ಈ ಮೂರು ತಿಂಗಳ ಬಳಿಕ ಗೃಹಲಕ್ಷ್ಮಿಹಣಗಳ ಖಾತೆ ಸೇರಿದೆ. ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಯೋಜನೆ ಹಣವು ತಾಂತ್ರಿಕ ಕಾರಣದಿಂದ ಯಮಾನಿಯರ ಖಾತೆಗೆ ಜಮಾ ಆಗಲಿಲ್ಲ. ಯಜಮಾನಿಯರಿಗೆ ಇದೀಗ ಎರಡು ಕಂತುಗಳ ಗೃಹಲಕ್ಷ್ಮಿಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಜುಲೈ, ಆಗಸ್ಟ್ ತಿಂಗಳ 2000 ರೂ. ಆಗಿದ್ದು, ಸದ್ಯ ಬಾಕಿ ಇರುವ ಸೆಪ್ಟೆಂಬ‌ರ್ ತಿಂಗಳ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಗೃಹಲಕ್ಷ್ಮಿ ಯೋಜನೆ ಅನ್ನಭಾಗ್ಯ ಯೋಜನೆ ಹಣ ವಿವರಗಳನ್ನು ತಿಳಿಯುವುದು ಹೇಗೆ? ವರ್ಗಾವಣೆ ಅಗತ್ಯ ಗೃಹಲಕ್ಷ್ಮಿ ಹಣ ಸ್ಟೇಟಸ್ ತಿಳಿದುಕೊಳ್ಳುವ ವಿಧಾನ ಹೇಗಿದೆ…

Read More