Author: Nammur Express Admin

ರಾಜ್ಯದಾದ್ಯಂತ ಭಾರಿ ಮಳೆ: ಜನ ತತ್ತರ! * ಅ.21,22ರಂದು ಹವಾಮಾನ ಮುನ್ಸೂಚನೆ: ಎಲ್ಲೆಲ್ಲಿ ಮಳೆ? * ಕರಾವಳಿ, ಮಲೆನಾಡಲ್ಲಿ ಮಳೆ ನಿಲ್ಲಲ್ಲ * ಬೆಂಗಳೂರು ಶಾಲೆಗಳಿಗೆ ರಜೆ, ಶಿವಮೊಗ್ಗದಲ್ಲಿ ಮುಂದುವರಿದ ಮಳೆ * ರಾಜ್ಯದ ಬಹುತೇಕ ಕಡೆ ಬೆಳೆ ಹಾನಿ: ದರ ಏರಿಕೆ ಸಾಧ್ಯತೆ NAMMUR EXPRESS NEWS ಬೆಂಗಳೂರು: ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಆರೆಂಜ್ ಎಚ್ಚರಿಕೆ ನೀಡಲಾಗಿದೆ. ಅ.22ರಂದು ಯಲ್ಲೋ ಎಚ್ಚರಿಕೆ ನೀಡಲಾಗಿದೆ.ಹಾಗಾಗಿ ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅ.20 ದಿನ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಇವತ್ತು ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರವಾದ ಸಾಧಾರಣ…

Read More

ಯಕ್ಷ ಲೋಕದಲ್ಲಿ ಹಾಸ್ಯಗಾರ ಜಯರಾಮ ಆಚಾರ್ಯ ಇನ್ನಿಲ್ಲ! – ಬೆಂಗಳೂರಲ್ಲಿ ವಿಧಿ ವಶ: ಊರಿನಲ್ಲಿ ಇಂದು ಅಂತ್ಯ ಸಂಸ್ಕಾರ – ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಕಲಾವಿದ – ನಾಯಕರು, ಕಲಾವಿದರ ಸಂತಾಪ: ನುಡಿ ನಮನ NAMMUR EXPRESS NEWS ಬಂಟ್ವಾಳ: ಹಾಸ್ಯ ಕಲಾವಿದ ಬಂಟ್ವಾಳ ಬಂಟ್ವಾಳ: ಯಕ್ಷಗಾನ ಪ್ರದರ್ಶನಕ್ಕೆಂದು ಬೆಂಗಳೂರಿಗೆ ತೆರಳಿದ್ದ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಹಿರಿಯ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ಆರ್ ಕೆ ಭಟ್ಟರ ಮನೆಗೆ ತೆರಳಿದ್ದರು. ಇಂದು ಬೆಳಗ್ಗೆ ಅವರಿಗೆ ಹೃದಯ ಸ್ತಂಭನವಾದಾಗ ಜತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದೀಗ ಸ್ಥಳೀಯ ಆಸ್ಪತ್ರೆಯಲ್ಲಿರುವ ಮೃತ ದೇಹ ಆರ್.ಕೆ ಭಟ್ಟರ ಮನೆಗೆ ಅಂತಿಮ ದರ್ಶನಕ್ಕೆ ತರಲಾಗುವುದು. ಬಳಿಕ ಆಂಬುಲೆನ್ಸ್ ಮೂಲಕ ಊರಿಗೆ ಸಾಗಲಿದೆ ಎಂದು ಭಾಗವತರಾದ ಗಿರೀಶ್…

Read More

ಕರಾವಳಿ ನ್ಯೂಸ್ ಮಂಗಳೂರು: ಮೀನು ಸಾಗಿಸುವ ಕಂಟೇನರಿಗೆ ಯುವತಿ ಬಲಿ! * ಕಾರ್ಕಳ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ * ಉಳ್ಳಾಲ: ರೈಲು ಹಳಿತಪ್ಪಿಸುವ ಯತ್ನ ನಡೆಯಿತೇ? * ಅಜೆಕಾರು: ಧರ್ಮಸ್ಥಳಕ್ಕೆ ಹೋದವರ ಕಾರು ಅಪಘಾತ NAMMUR EXPRESS NEWS ಮಂಗಳೂರು: ಮೀನು ಸಾಗಿಸುವ ಕಂಟೇನರ್ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಂತೂರು ವೃತ್ತದ ಬಳಿ ಅ.20ರಂದು ನಡೆದಿದೆ. ಮೃತರನ್ನು ಕೋಡಿಕಲ್ ನಿವಾಸಿ ಕ್ರಿಸ್ತಿ ಕ್ರಾಸ್ತಾ (27) ಎಂದು ಗುರುತಿಸಲಾಗಿದೆ.ಕ್ರಿಸ್ತಿ ಕ್ರಾಸ್ತಾ ಅವರು ಕೋಡಿಕಲ್ ವೆಲಂಕಣಿ ವಾರ್ಡಿನ ಸಿರಿಲ್ ಕ್ರಾಸ್ತಾ ಮತ್ತು ಸ್ಯಾಂಡ್ರಾ ಕ್ರಾಸ್ತಾ ದಂಪತಿಯ ಪುತ್ರಿ. ಮೃತ ಕ್ರಿಸ್ತಿಯವರು ನಂತೂರು ವೃತ್ತದಿಂದ ಪಂಪೈಲ್ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಮೀನು ಸಾಗಿಸುವ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದ ಚಾಲನೆಯಿಂದಾಗಿ ಟಿಪ್ಪರ್ ಕ್ರಿಸ್ತಿ ಅವರ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಈ ವೇಲೆ ಹಿಂದಿನ ಚಕ್ರಕ್ಕೆ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾಶಿವನ ವಿಶೇಷ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮ್ಮ ಆತ್ಮಸ್ಥೈರ್ಯವೇ ಇಂದು ನಿಮ್ಮ ಅಸ್ತ್ರವಾಗಿರುತ್ತದೆ. ಆದರೆ ನಿಮ್ಮ ಅಹಂಕಾರವು ಕೆಲಸದಲ್ಲಿ ನಿಮ್ಮ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು. ಕೆಲಸದ ಸ್ಥಳದಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿರಬಹುದು, ಹಣಕಾಸಿನ ಪರಿಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ, ಆದರೆ ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಸ್ವಲ್ಪ ತಾಳ್ಮೆಯ ಅಗತ್ಯವಿರುತ್ತದೆ, ಯಾವುದೇ ರೀತಿಯ ತಪ್ಪುಗ್ರಹಿಕೆಯನ್ನು ಶೀಘ್ರದಲ್ಲೇ ಪರಿಹರಿಸಲು ಪ್ರಯತ್ನಿಸಿ. ** ವೃಷಭ ರಾಶಿ : ಇಂದು ನಿಮಗೆ ಹೊಸ ಅವಕಾಶಗಳನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಹೊಸ ಯೋಜನೆಯನ್ನು ಪಡೆಯಬಹುದು, ಅದು ನಿಮ್ಮ ಇಮೇಜ್ ಅನ್ನು ಮತ್ತಷ್ಟು…

Read More

ವಿವಿ ಸಾಗರ ಜಲಾಶಯ ಭರ್ತಿಯತ್ತ! – ಹಿನ್ನೀರಿನ ಕೆಲ ಗ್ರಾಮಗಳಿಗೆ ನೀರು ನುಗ್ಗುವ ಭೀತಿ – 89 ವರ್ಷಗಳ ಬಳಿಕ ತುಂಬುತ್ತಿರುವ ನೀರು NAMMUR EXPRESS NEWS ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಪ್ರಸ್ತುತ ವರ್ಷದಲ್ಲಿ ತುಂಬುವ ಹಂತಕ್ಕೆ ಬಂದಿದೆ. ಡ್ಯಾಂ 3ನೇ ಬಾರಿಗೆ ಕೋಡಿಬೀಳುವ ಎಲ್ಲಾ ಸಾಧ್ಯತೆಗಳಿದ್ದು, ಜಲಾಶಯದ ಹಿನ್ನೀರಿನ ಹೊಸದುರ್ಗ ತಾಲೂಕಿನ ಕೆಲ ಗ್ರಾಮಗಳ ಜನರಲ್ಲಿ ಈಗಾಗಲೇ ಆತಂಕ ಶುರುವಾಗಿದೆ. ಡ್ಯಾಮ್ ತುಂಬಿದಾಗ ಈ ಜನರ ಗೋಳು ಕೇಳುವವರ್ಯಾರು” 2022.ಸೆಪ್ಟೆಂಬರ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗಿ 2 ನೇ ಬಾರಿಗೆ ಕೋಡಿ ಬಿದ್ದು ಮೈದುಂಬಿ ನಿರಂತರವಾಗಿ ಎರಡು ತಿಂಗಳುಗಳ ಕಾಲ ಹರಿದಿತ್ತು. 89 ವರ್ಷಗಳ ಬಳಿಕ ಡ್ಯಾಮ್ ಕೋಡಿಬಿದ್ದ ಸಂತೋಷ ಒಂದು ಕಡೆಯಾದರೆ, ಹಿನ್ನೀರಿನ ಗ್ರಾಮಗಳ ಜನರು ಸಂಕಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಡದಕೆರೆ ಹೋಬಳಿಯ ಪೂಜಾರಹಟ್ಟಿ ಗ್ರಾಮಕ್ಕೆ ನೀರು ನುಗ್ಗಿ ಬಹಳಷ್ಟು ಮನೆಗಳು ಜಲಾಶಯದ ಹಿನ್ನೀರಿನಲ್ಲಿ ಮುಳುಗಿ, ಜನರು ಮನೆ ತೊರೆದು ಊರ…

Read More

ಈಗ ಚನ್ನ ಪಟ್ಟಣ ರಾಜಕೀಯ ಕುತೂಹಲ! – ನಿಖಿಲ್ ಕಣಕ್ಕೋ… ಯೋಗೇಶ್ವರ್ ಕಣಕ್ಕೋ..? – ಬೊಮ್ಮಾಯಿ ಪುತ್ರನಿಗೆ ಶಿಗ್ಗಾವಿ ಬಿಜೆಪಿ ಟಿಕೆಟ್‌ – ಬಂಗಾರು ಹನುಮಂತುಗೆ ಸಂಡೂರು ಟಿಕೆಟ್ – ಇನ್ನು ಚನ್ನಪಟ್ಟಣ ಮೈತ್ರಿ ಟಿಕೆಟ್ ಘೋಷಣೆ ಇಲ್ಲ NAMMUR EXPRESS NEWS ಬೆಂಗಳೂರು: ರಾಜ್ಯದ ಮೂರು ಸ್ಥಾನಗಳಿಗೆ ನಡೆಯುವ ಉಪ ಚುನಾವಣೆ ಪೈಕಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇದೀಗ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಟಿಕೆಟ್ ಘೋಷಿಸಲಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಿಂದ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಇನ್ನು ಕೂಡ ಟಿಕೆಟ್ ಘೋಷಣೆ ಮಾಡಿಲ್ಲ. ನ.13ರಂದು ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ

Read More

ಮಳೆ ಸುನಾಮಿಗೆ ಮಲೆನಾಡು ತತ್ತರ! – ಒಂದೇ ಸಮನೆ ಸುರಿದ ಮಳೆಗೆ ನೂರಾರು ಕಡೆ ಜಲಾವೃತ – ಶಿವಮೊಗ್ಗ ನಗರ ಸೇರಿ ಜಿಲ್ಲೆಯಲ್ಲಿ ಅಪಾರ ಹಾನಿ – ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇತುವೆ ಸಂಪರ್ಕ ಬಂದ್ NAMMUR EXPRESS NEWS ಮಲೆನಾಡು: ಮಲೆನಾಡು ಭಾಗದಲ್ಲಿ ಮಳೆ ಸುನಾಮಿ ಸೃಷ್ಟಿ ಮಾಡಿದೆ. ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ಸುರಿದ ಮಳೆಗೆ ಇಡೀ ಮಲೆನಾಡು ನಲುಗಿ ಹೋಗಿದೆ. ಇನ್ನು 3-4 ದಿನ ಮಳೆ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ ಪಟ್ಟಣ ಸಂಪೂರ್ಣ ನೀರಲ್ಲಿಮುಳುಗಿದಂತಾಗಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶದಲ್ಲೇ ಚಿಕ್ಕಮಗಳೂರಿನ ದತ್ತಪೀಠದ ರಸ್ತೆಯಲ್ಲಿ 3 ಅಡಿ ಎತ್ತರದಲ್ಲಿ ನೀರು ಹರಿದಿದೆ. ಎಷ್ಟೇ ಮಳೆ ಬಂದರೂ ಪಶ್ಚಿಮ ಘಟ್ಟಕ್ಕೆ ಲೆಕ್ಕವೇ ಅಲ್ಲ ಸಾವಿರಾರು ಅಡಿ ಆಳ, ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಕೆರೆಯಂತೆ ನೀರು ಹರಿಯುತ್ತಿದೆ. ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆ ಆಗಿದ್ದಾರೆ. ನದಿಗಳು ಒಂದೇ ದಿನಕ್ಕೆ ತುಂಬಿವೆ. ಶಿವಮೊಗ್ಗ ಜಿಲ್ಲಾದ್ಯಂತ ಕಳೆದ ರಾತ್ರಿಯಿಂದ…

Read More

ದೀಪಾವಳಿ ಹಬ್ಬ: ಯಾವತ್ತು, ಏನೇನು ವಿಶೇಷ? – ಹಬ್ಬದ ದಿನ ಹಾಗೂ ಮುಹೂರ್ತ ಯಾವಾಗ? – ಗೋಪೂಜೆ, ಲಕ್ಷ್ಮಿ ಪೂಜೆ ದೀಪಾವಳಿ ಸಂಭ್ರಮ NAMMUR EXPRESS NEWS ದೀಪಾವಳಿ ಎಂದರೆ ಬೆಳಕಿನ ಹಬ್ಬದ ಸಂಭ್ರಮ, ಈ ಹಬ್ಬವನ್ನು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಕೂಡ ಸಂಭ್ರಮಿಸುವ ಹಬ್ಬ ಎಂದು ಹೇಳಬಹುದಾಗಿದೆ. ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾಕೃತಿಕ, ನೈಸರ್ಗಿಕ ಸಂಬಂಧಗಳಿದ್ದರೂ ಎಲ್ಲಾ ಹಬ್ಬಗಳೂ ಮನರಂಜನೆ ಜೊತೆಗೆ ಸಂಬಂಧಗಳನ್ನು ಬೆಸೆಯುವ ಕೊಂಡಿಗಳೇ ಆಗಿವೆ. ದೀಪಾವಳಿ ಹಬ್ಬದಲ್ಲಿ ಎಲ್ಲರೂ ಕೂಡ ಕುಟುಂಬದವರೊಂದಿಗೆ ಸಂಭ್ರಮದಿಂದ ದೀಪ ಹಚ್ಚಿ ಸಂಭ್ರಮದಿಂದ ಪೂಜೆ ಪುನಸ್ಕಾರ ಮಾಡಿ ಆಚರಿಸುವ ಹಬ್ಬವೇ ಈ ದೀಪಾವಳಿ ಹಬ್ಬ. ದೀಪಾವಳಿ ಹಬ್ಬದ ಸಂಭ್ರಮ ಎಲ್ಲರ ಮನೆಯಲ್ಲಿಯೂ ಕೂಡ ಒಂದು ಸಮಾರಂಭದ ವಾತಾವರಣ ಆಗಿದೆ. ಈ ಹಬ್ಬದಲ್ಲಿ ಯಾವೆಲ್ಲಾ ರೀತಿಯ ವಿಶೇಷತೆಗಳಿವೆ, ಮುಹೂರ್ತ, ಯಾವ ದಿನ ಲಕ್ಷ್ಮಿ ಪೂಜೆ, ಗೋ ಪೂಜೆ ತಿಳಿಯೋಣ. ಅಕ್ಟೋಬರ್ 30 ಬುಧವಾರದಂದು ನೀರು ತುಂಬುವ ಹಬ್ಬ, ರಾತ್ರಿ…

Read More

ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ..!! – ವಯೋಸಹಜ ಅನಾರೋಗ್ಯದಿಂದ ನಿಧನ – ಕನ್ನಡ ಚಿತ್ರರಂಗದ ಸಂತಾಪ NAMMUR EXPRESS NEWS ಬೆಂಗಳೂರು: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ (78)ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಶನಿವಾರ ಸಂಜೆಯೇ ಸುದೀಪ್ ತಾಯಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದು ಬಂದಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧ್ಯಾಹ್ನ 12 ಗಂಟೆಯ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿದೆ. ಸುದೀಪ್ ತಾಯಿ ಮೂಲತಃ ಉಡುಪಿಯವರಾಗಿದ್ದು ಶಿವಮೊಗ್ಗದಲ್ಲಿ ಶ್ರೀ ಲಾಡ್ಜ್, ಬೆಂಗಳೂರಿನಲ್ಲಿ ಸರೋವರ ಎಂಬ ಹೋಟೆಲ್ ಉದ್ಯಮ ನಡೆಸಿ ಉದ್ಯಮದಲ್ಲಿ ಯಶಸ್ವಿಯಾಗಿದ್ದರು.ಮೃತರು ಪತಿ, ನಟ ಸುದೀಪ್ ಸೇರಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುದೀಪ್ ತಾಯಿ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

Read More

ತೀರ್ಥಹಳ್ಳಿ: ಆರ್.ಎಸ್.ಎಸ್ ಪಥ ಸಂಚಲನ! * ರಾಷ್ಟೀಯ ಸ್ವಯಂ ಸೇವಕರಿಂದ 100ನೇ ವರ್ಷದ ಪಥಸಂಚಲನ * ಶಾಸಕ ಆರಗ ಜ್ಞಾನೇಂದ್ರ ಸೇರಿ ನೂರಾರು ಕಾರ್ಯಕರ್ತರು ಹಾಜರ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಅ. 19ರಂದು ಆರ್ ಎಸ್ ಎಸ್ ಸಂಘಟನೆಯ ರಾಷ್ಟೀಯ ಸ್ವಯಂ ಸೇವಕರಿಂದ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಪಥ ಸಂಚಲನ ಇಡೀ ದೇಶವನ್ನು ಹಲವು ವರ್ಷಗಳಿಂದ ಸಂಘಟಿಸುವ ಹಾಗೂ ದೇಶಭಕ್ತಿ ಉದ್ದೀಪನಗೊಳಿಸುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತ ಸಾಗಿರುವುದು ಸ್ಮರಣೀಯವಾಗಿದೆ. ಸಂಘ ಸ್ಥಾಪನೆಯಾಗಿ 100 ವರ್ಷಗಳಾಗಿದ್ದು, ಇದನ್ನು ಪ್ರತಿವರ್ಷವೂ ಇಡೀ ಜಗತ್ತಿನಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಭಾರತೀಯ ಜೀವನ ಪದ್ಧತಿಯಲ್ಲಿ ಪರಿಹಾರವಿದೆ. ಸಾಮರಸ್ಯದಿಂದ ಬಾಳುವುದು, ಪರಿಸರ ಸಂರಕ್ಷಣೆ ಸೇರಿ ಹಲವು ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ದೇಶವನ್ನು ಮುನ್ನಡೆಸಬೇಕಾಗಿದೆ ಎಂಬ ಉದ್ದೇಶದಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ಪಥ ಸಂಚಲನ ನಡೆಸಲಾಯಿತು. ಶಾಸಕರು ಹಾಗೂ ತಾಲೂಕಿನ ಎಲ್ಲಾ ಆರ್ ಎಸ್ ಎಸ್ ಸಂಘಟನೆಯ ಸ್ವಯಂ…

Read More