Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗಜಕೇಸರಿ ಯೋಗದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿನೋದ ತುಂಬಿದ ಕ್ಷಣಗಳನ್ನು ಆನಂದಿಸುವಿರಿ. ಹಣಕಾಸಿನ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಅತಿಯಾದ ಖರ್ಚುಗಳಿಂದಾಗಿ ಮನಸ್ಸು ತೊಂದರೆಗೊಳಗಾಗಬಹುದು. ವೃತ್ತಿಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತೀರಿ. ಕಚೇರಿಯಲ್ಲಿ ಸವಾಲಿನ ಕಾರ್ಯಗಳ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ. ವ್ಯವಹಾರದಲ್ಲಿ ಲಾಭ ಇರುತ್ತದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸ ಯಶಸ್ವಿಯಾಗಲಿದೆ. ** ವೃಷಭ ರಾಶಿ : ವೃತ್ತಿಪರ ಜೀವನದಲ್ಲಿ ಮಾಡಿದ ಕೆಲಸದ ಪ್ರಾರಂಭವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೆ. ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಶ್ರಮ ಹಾಕಬೇಕು.…

Read More

ಟಾಪ್ ನ್ಯೂಸ್ ಮಲ್ನಾಡ್ – ಚಿಕ್ಕಮಗಳೂರು: ವಾಮಾಚಾರ ಮಡಿಕೆಗೆ ಕಾಳಿ ರೂಪ – ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಚಿನ್ನ ಹೂತಿಟ್ಟಿದ್ದ ಆರೋಪಿ ಅರೆಸ್ಟ್! NAMMUR EXPRESS NEWS ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ಭಯಂಕರ ವಾಮಾಚಾರಕ್ಕೆ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ಬೆಚ್ಚಿಬಿದ್ದಿದೆ. ಮೂರು ದಾರಿ ಕೂಡಿರುವ ಕಡೆ ಕಿಡಿಗೇಡಿಗಳು ಮಡಿಕೆಗೆ ಮೂರ್ತಿ ರೂಪ ಕೊಟ್ಟು ವಾಮಾಚಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದ ಚೇತನ್ ಎಂಬವರ ಮನೆ ಹಾಗೂ ಚೇತನ್ ಮನೆಯ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ಮಾಡಿದ್ದಾರೆ. ಒಂದು ಗುಚ್ಚು ಹಸಿರು ಬಳೆಯ ಮೇಲೆ ಮಣ್ಣಿನ ಮಡಕೆ ಕೂರಿಸಿ, ಆ ಮಡಿಕೆಗೆ ಗೊಂಬೆ ರೂಪ ನೀಡಿ ಕಾಳಿಯ ಮುಖದಂತೆ ಮಾಡಿ ಮಾಟ ಮಾಡಿದ್ದಾರೆ. ಬೆಳಗಿನ ಜಾವ 4 ರಿಂದ 5 ಗಂಟೆ ಸುಮಾರಿಗೆ ಐವರು ಕಿಡಿಗೇಡಿಗಳ ಈ ದುಷ್ಕೃತ್ಯವನ್ನ ಸ್ಥಳೀಯರು ತಮ್ಮ ಮನೆಯ ಒಳಭಾಗದಿಂದ ನೋಡಿದ್ದಾರೆ. ಆದರೆ, ಯಾರೋ? ಏನೋ? ಎಂದು ಹೋಗಲು ಭಯಗೊಂಡು ಮನೆಯಲ್ಲೇ ಇದ್ದರು. ಬೆಳಗ್ಗೆ…

Read More

ಹಾಸನದಲ್ಲಿ ಧಾರಾಕಾರ ಮಳೆ! – ಜನ ಜೀವನ ಅಸ್ತವ್ಯಸ್ತ: ಜನರಿಗೆ ತೊಂದರೆ – ಒಂದು ವಾರದಿಂದ ಜಿಲ್ಲೆಯಲ್ಲಿ ಸತತವಾಗಿ ಮಳೆ NAMMUR EXPRESS NEWS ಹಾಸನ: ನಗರದ ವಿವಿಧೆಡೆ ಇಂದು ಧಾರಾಕಾರ ಮಳೆ ಸುರಿಯಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಧೋ ಎಂದು ಮಳೆ ಸುರಿಯಲಾರಂಭಿತು. ಸುಮಾರು ಅರ್ಧಗಂಟೆಯಿಂದ ಒಂದು ಗಂಟೆವರೆಗೂ ಎಡೆಬಿಡದೆ ಜೋರು ಮಳೆ ಸುರಿಯಿತು. ಇದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ವೀಕೆಂಡ್ ಆಗಿದ್ದರಿಂದ ಅನೇಕರು ತೊಂದರೆ ಅನುಭವಿಸಿದರು. ಮಧ್ಯಾಹ್ನದ ಊಟಕ್ಕೆ ಮನೆ ಅಥವಾ ಬೇರೆಡೆಗೆ ಹೋಗಬೇಕಿದ್ದವರಿಗೆ ತೀವ್ರ ತೊಂದರೆ ಅನುಭವಿಸಿದರು. ಶಾಲೆಗಳಿಗೆ ದಸರೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಬಚಾವಾದರು. ಆದರೂ ಕೆಲ ಶಾಲೆಗಳಲ್ಲಿ ತರಗತಿ ನಡೆಯುತ್ತಿರುವುದರಿಂದ ಅಂಥ ಮಕ್ಕಳು ತೊಂದರೆ ಅನುಭವಿಸಿದರು. ಕೇವಲ ಹಾಸನ ನಗರ ಮಾತ್ರವಲ್ಲದೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಭಾಗದಲ್ಲಿ ಜೋರು ಮಳೆ ಸುರಿಯಿತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಅಕ್ಷರಶಃ ಪರದಾಡಿದರು. ಸಣ್ಣ ಪುಟ್ಟ ಕೆಲಸಕ್ಕೆ ಹೋಗ ಬೇಕಿದ್ದವರು…

Read More

ಶಿವಮೊಗ್ಗ ಕೃಷಿ ಮೇಳ ನೋಡ ಬನ್ನಿ! – ಕೃಷಿ, ಕೃಷಿ ಸಲಕರಣೆಗಳ ಅನಾವರಣ: 300ಕ್ಕೂ ಹೆಚ್ಚು ಸ್ಟಾಲ್‌ – ಕೃಷಿ ಮೇಳಕ್ಕೆ ಆಗಮಿಸಿದ್ದ ರೈತರಿಗೆ ಉಚಿತ ಆರೋಗ್ಯ ತಪಾಸಣೆ – ಮಳೆಯಿಂದ ಕೃಷಿ ಮೇಳಕ್ಕೆ ಅಡ್ಡಿ: ಭಾನುವಾರ ಲಕ್ಷ ಜನ? NAMMUR EXPRESS NEWS ಶಿವಮೊಗ್ಗ : ನವುಲೆಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅ.18ರಿಂದ 21ರವರೆಗೆ ನಡೆಯುವ ಕೃಷಿ ಮೇಳಕ್ಕೆ ಶಿವಮೊಗ್ಗ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ರೈತರು, ಕೃಷಿ ಆಸಕ್ತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಕೃಷಿ ಕಾಲೇಜು ಆವರಣದಲ್ಲಿ ಸ್ಟಾಲ್‌ಗಳನ್ನು ನಿರ್ಮಿಸಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಕೃಷಿ ಮೇಳದಲ್ಲಿ 300ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ವಿವಿಧ ಕೃಷಿ ವಿಶ್ವವಿದ್ಯಾಲಯದ ವಿಭಾಗಗಳು, ಕೃಷಿ, ತೋಟಗಾರಿಕೆ ಇಲಾಖೆಗಳ ವಿವಿಧ ವಿಭಾಗಗಳು ಸ್ಟಾಲ್‌ ನಿರ್ಮಿಸಿದ್ದವು. ಕೀಟಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ…

Read More

ತೀರ್ಥಹಳ್ಳಿಯಲ್ಲಿ ಮೃತ ತಹಸೀಲ್ದಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ – ಗ್ರಾಮೀಣಾಭಿವೃದ್ಧಿ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು, ಪ್ರಮುಖರು ಹಾಜರ್ – ಪಟ್ಟಣ ಪಂಚಾಯತ್ ಅಧ್ಯಕ್ಷರಿಂದಲೂ ಸಂತಾಪ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಕ್ಕಣ್ಣ ಗೌಡರ್ ಇತ್ತೀಚಿಗೆ ವಿಧಿವಶರಾದ ಹಿನ್ನೆಲೆ ತಾಲೂಕು ಆಡಳಿತ ತೀರ್ಥಹಳ್ಳಿ, ಸಹಭಾಗಿತ್ವದಲ್ಲಿ ಭಾವಪೂರ್ವ ಶ್ರದ್ಧಾಂಜಲಿ ಸಭೆಯನ್ನು ಗ್ರಾಮೀಣಾಭಿವೃದ್ಧಿ ಭವನದಲ್ಲಿ ನೆರವೇರಿಸಲಾಯಿತು. ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ ನಿಷ್ಕಲ್ಮಶವಾದ ಮುಖಭಾವ, ಪ್ರತಿಯೊಬ್ಬರನ್ನು ಸೌಜನ್ಯದಿಂದ ನಡೆಸಿಕೊಳ್ಳುವಂತಹ ವ್ಯಕ್ತಿತ್ವ ತಹಶೀಲ್ದಾರರದ್ದು.ಕೇವಲ ಒಂದು ವರ್ಷದಲ್ಲಿ ನಮ್ಮ ಮನಸ್ಸಿನ ಮೇಲೆ ಅಗಾಢವಾದ ನೆನಪಿನ ಛಾಯೆ ಮೂಡಿಸಿದ ವ್ಯಕ್ತಿ. ತಹಶೀಲ್ದಾರರ ಈ ರೀತಿ ಬೀಳ್ಕೊಡುಗೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದೆ ಯಾವುದೇ ಅಧಿಕಾರಿಗಳಿಗೆ ಈ ರೀತಿಯ ಬೀಳ್ಕೊಡುಗೆ ನೀಡುವ ಪರಿಸ್ಥಿತಿ ಒದಗದೆ ಇರಲಿ ಎಂದು ಭಾವುಕರಾದರು. ತಹಶೀಲ್ದಾರರು ನಮ್ಮೆಲ್ಲರ ಭಾವನೆಯ ಮೇಲೆ ಬಹುದೊಡ್ಡ ನೆನಪಿನ ಅಚ್ಚು ಒತ್ತಿದ್ದಾರೆ. ಅವರ ನೆನಪು ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ. ಅವರ ಆತ್ಮಕ್ಕೆ…

Read More

ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟ ಕುಮಾರಸ್ವಾಮಿ! * ಮತ್ತೆ ನಾನೇ ಸಿಎಂ ಆಗುತ್ತೇನೆ, ಜನ ಆಶೀರ್ವಾದ ಮಾಡ್ತಾರೆ * ಕಾಂಗ್ರೆಸ್ ಸರ್ಕಾರ 2028ರವರೆಗೆ ನಡೆಯಲ್ಲ ಎಂದ ಕೇಂದ್ರ ಮಂತ್ರಿ NAMMUR EXPRESS NEWS ಬೆಂಗಳೂರು: 2028ರವರೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಯಲ್ಲ, ಜನರೇ ಸರ್ಕಾರವನ್ನು ತೆಗೆಯುತ್ತಾರೆ. ಮತ್ತೆ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಜನರು ಬಯಸಿದ್ರೆ ಮತ್ತೆ ಯಾಕೆ ನಾನು ಸಿಎಂ ಆಗಬಾರದು? ಎಂದು ಪ್ರಶ್ನಿಸಿದ್ದಾರೆ. ಜನ ಮತ್ತೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳುವ ಮೂಲಕ 3ನೇ ಬಾರಿ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ. 2028ರವರೆಗೆ ಈ ಸರ್ಕಾರ ನಡೆಯುವುದಿಲ್ಲ. ಮತ್ತೆ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದರು. ಈಗಿನ ಪರಿಸ್ಥಿತಿಯನ್ನು ನೋಡಿದರೆ ಜನರೇ ಸರ್ಕಾರವನ್ನು ತೆಗೆಯುತ್ತಾರೆ. 2028ರವರೆಗೆ ಈ ಸರ್ಕಾರವನ್ನು ಎಳೆಯುವುದೂ ಕಷ್ಟ. ಕಾರಣ ಕಾಂಗ್ರೆಸ್‌ ಶಾಸಕರೇ ಸರ್ಕಾರದ ವಿರುದ್ಧ…

Read More

ಈಶ್ವರ್ ಮಲ್ಪೆ ಅವರಿಂದ ಇನ್ನೊಂದು ಸಾಮಾಜಿಕ ಕಾರ್ಯ! * ಕಿವಿ ಸಮಸ್ಯೆಯವರಿಗೆ ನೆರವು! * ಅ. 25 ಮತ್ತು 26ರಂದು ನೊಂದಾಯಿಸಿಕೊಳ್ಳಿ! * ಉಚಿತ ಶ್ರವಣ ತಪಾಸಣೆ ಮತ್ತು ಬಹಳ ಕಡಿಮೆ ಬೆಲೆಯಲ್ಲಿ ಯಂತ್ರಗಳ ವಿತರಣೆ! * ಅಂತರಾಷ್ಟ್ರೀಯ ಸಂಸ್ಥೆ ಅನುಭವ ವೈದ್ಯರಿಂದ ಶಿಬಿರ! * ಅಂತರಾಷ್ಟ್ರೀಯ ಸಂಸ್ಥೆಗಳ ಶ್ರವಣ ಯಂತ್ರ ವಿತರಣೆ! * ಈ ಶಿಬಿರದಲ್ಲಿ ಸಂಸ್ಥೆಯವರು ತಮ್ಮ ದೇಣಿಗೆ ಮೊತ್ತದಿಂದ ಶೇಕಡ 40ರಷ್ಟು ಯಂತ್ರದ ವೆಚ್ಚವನ್ನ ಬರಿಸಲಿದ್ದಾರೆ NAMMUR EXPRESS NEWS ಟೀಮ್ ಈಶ್ವರ್ ಮಲ್ಪೆ ನೇತೃತ್ವದಲ್ಲಿ ವಿಘ್ನಹರ್ತ ಸಂಸ್ಥೆ ಉಡುಪಿ ಸಹಯೋಗದೊಂದಿಗೆ ಹಾಗೂ ವಿಘ್ನಹರ್ತ ಸಂಸ್ಥೆ ಇವರ ಆಶ್ರಯದಲ್ಲಿ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ. ಟೀಮ್ ಈಶ್ವರ್ ಮಲ್ಪೆ ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಅವರು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಸಮಸ್ಯೆಯಿಂದ…

Read More

ಕರಾವಳಿ ಟಾಪ್ ನ್ಯೂಸ್ – ಮಂಗಳೂರು: ಶಾಲಾ ಬಸ್ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ! – ಪುತ್ತೂರು: ಗುಡಿಸಲು ಬೆಂಕಿಗಾವುತಿ,15 ಸಾವಿರ ನಗದು, ದಾಖಲೆ ಪತ್ರ ಭಸ್ಮ! – ಕುಂದಾಪುರ: ವೆಲ್ಡಿಂಗ್ ಕೆಲಸ ವೇಳೆ ಶೀಟ್ ಮಾಡಿನಿಂದ ಬಿದ್ದು ಸಾವು! NAMMUR EXPRESS NEWS ಮಂಗಳೂರು: 9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲಾ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ತೃಕ್ಕಾರಿಪುರ ಮಣಿಯನೋಡಿ ನಿವಾಸಿ ಶಬೀರ್ ಆಲಿ ಬಂಧಿತ ಆರೋಪಿ. ಚಾಂತೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆಯ ತಾಯಿಯ ಪರಿಚಯವಿದ್ದ ಶಬೀರ್ ಇದರ ಲಾಭ ಪಡೆದು ಆಕೆಗೆ ಕಿರುಕುಳ ನೀಡಿದ್ದಾನೆ. ಬಾಲಕಿಯ ವರ್ತನೆಯ ಬಗ್ಗೆ ಅನುಮಾನಗೊಂಡ ಪೋಷಕರು ವಿಚಾರಿಸಿದಾಗ ಬಸ್ ಚಾಲಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಶಬೀರ್‌ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. * ಗುಡಿಸಲು ಬೆಂಕಿಗಾವುತಿ,15 ಸಾವಿರ ನಗದು ಹಣ,…

Read More

ಕ್ಷೇತ್ರದ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್! * ಕಾಣೆಯಾಗಿದ್ದಾರೆ ಶೃಂಗೇರಿ ಕ್ಷೇತ್ರದ ಶಾಸಕ ಎಂದ ಜನ * ರಸ್ತೆ ಗುಂಡಿಗಳಿಂದ ಕೈ ಕಾಲು ಮುರಿದು ಕೊಂಡ ಕ್ಷೇತ್ರದ ಜನತೆ NAMMUR EXPRESS NEWS ಶೃಂಗೇರಿ/ಕೊಪ್ಪ/ಎನ್. ಆರ್. ಪುರ: ಶಾಸಕರೇ ನಮಗೆ ಸಿಂಗಾಪುರ ರಸ್ತೆ ಬೇಡ ಸ್ವಾಮೀ.. ನಮಗೆ ನಮ್ಮ ಈ ಹಿಂದಿನ ಶೃಂಗೇರಿ ಕ್ಷೇತ್ರದ ರಸ್ತೆಗಳನ್ನು ಕೊಡಿ ಸಾಕು..!!” ಹೌದು ಇದು ಶೃಂಗೇರಿ ಕ್ಷೇತ್ರದ ಜನರ ಕೂಗು. ರಸ್ತೆ ಗುಂಡಿಗಳಿಂದ ದಿನೇ ದಿನೇ ಅಪಘಾತಗಳಾಗಿ ಜನರು ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶೃಂಗೇರಿ ಕ್ಷೇತ್ರದ ರಸ್ತೆಗಳಲ್ಲಿನ ಹೊಂಡಗಳದ್ದೇ ಚರ್ಚೆಗಳಾಗುತ್ತಿದೆ. ರಸ್ತೆ ಸರಿಪಡಿಸುವಂತೆ ಕನಿಷ್ಠ ರಸ್ತೆಗುಂಡಿಗಳನ್ನಾದರೂ ಮುಚ್ಚುವಂತೆ ಕ್ಷೇತ್ರದ ಜನ ಒತ್ತಾಯಿಸಿದ್ದಾರೆ. ಈ ವಿಷಯ ಇಷ್ಟೆಲ್ಲ ಗಂಭೀರ ಸ್ವರೂಪ ಪಡೆಯುತ್ತಿದ್ದರೂ ಕ್ಷೇತ್ರದ ಶಾಸಕರು ಸ್ಪಂದಿಸುತ್ತಿಲ್ಲ. ಕ್ಷೇತ್ರಕ್ಕೆ ಬರೋ ಸಾವಿರಾರು ಪ್ರವಾಸಿಗರು ರಸ್ತೆಯ ಅವಸ್ಥೆನೋಡಿ ಹಿಡಿಶಾಪ ಹಾಕುತ್ತಿದ್ದಾರೆ. ವರ್ಷಕ್ಕೊಮ್ಮೆ ವಾಹನ ಸರ್ವೀಸ್‌ಗೆ ಬಿಡುತ್ತಿದ್ದ ಮಾಲಿಕರು,ಚಾಲಕರು ಈಗ ತಿಂಗಳಿಗೊಮ್ಮೆ ರಿಪೇರಿಗೆ ಬಿಡುವಂತಾಗಿದೆ. ಆಟೋ,ಟಾಕ್ಸಿ ಚಾಲನೆ ಮಾಡಿ…

Read More

ಮಾಜಿ ಸಿಎಂ ಎಸ್.ಎಂ ಕೃಷ್ಣ ಆರೋಗ್ಯದಲ್ಲಿ ಏರುಪೇರು – ಮಣಿಪಾಲ್ ಆಸ್ಪತ್ರೆಗೆ ದಾಖಲು – ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ NAMMUR EXPRESS NEWS ಬೆಂಗಳೂರು: ಹಿರಿಯ ರಾಜಕಾರಣಿ ಎಸ್ಎಮ್ ಕೃಷ್ಣ ವಯೋಸಹಜ ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಣಿಪಾಲ್ ಆಸ್ಪತ್ರೆಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಎಸ್ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದರು. ಹಿರಿಯ ರಾಜಕಾರಣಿ ಎಸ್ಎಮ್ ಕೃಷ್ಣ ಅವರು ಈ ಹಿಂದೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಡಾ. ಸತ್ಯನಾರಾಯಣ ಹಾಗೂ ಸನಿಲ್ ಕಾರಂತ್ ನೇತೃತ್ವದಲ್ಲಿ 92 ವರ್ಷದ ಎಸ್ಎಮ್ ಕೃಷ್ಣ ಅವರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಮುಂದುವರೆದಿದೆ.

Read More