Author: Nammur Express Admin

ಕರಾವಳಿ ಟಾಪ್ ನ್ಯೂಸ್ – ಕರಾವಳಿಯಲ್ಲಿ ಸರಣಿ ಆತ್ಮಹತ್ಯೆ! – ಕುಂದಾಪುರ: ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ – ಕುಂದಾಪುರ: ದೇವಸ್ಥಾನ ಹಿಂಬದಿಯಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ – ಕಾಪು: ವೈಯಕ್ತಿಕ ಕಾರಣಕ್ಕೆ ನೇಣು ಬಿಗಿದು ಆತ್ಮಹತ್ಯೆ! – ಕೋಟ: ವಿಷ ಸೇವಿಸಿ ಆತ್ಮಹತ್ಯೆ NAMMUR EXPRESS NEWS ಕುಂದಾಪುರ: ತಾಯಿಯ ಅನಾರೋಗ್ಯದ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕಂದಾವರ ಗ್ರಾಮದ ನವೀನ ಡಿಸೋಜ(42) ಎಂಬವರು ಅ.15ರಂದು ಮಧ್ಯಾಹ್ನ ವೇಳೆ ಮನೆಯಲ್ಲಿ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. * ಕುಂದಾಪುರ ದೇವಸ್ಥಾನ ಹಿಂಬದಿಯಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಕುಂದಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ಬಸ್ರೂರು ಗ್ರಾಮದ ಕಲ್ಯಾಣಿ(82) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಅ.15ರಂದು ಮದ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆ ಸಮೀಪದ ವೆಂಕಟರಮಣ ದೇವಸ್ಥಾನದ ಹಿಂಬದಿಯ ದೇವರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ…

Read More

ವಕೀಲರ ಮೇಲೆ ಯುವಕರ ತಂಡ ಹಲ್ಲೆ!! – ಯುವಕರ ಮೇಲೆ ಪ್ರಕರಣ ದಾಖಲಿಸುವಂತೆ ವಕೀಲರ ಜಮಾವಣೆ! – ಚಿಕ್ಕಮಗಳೂರು ಬಾರ್ ಕೌನ್ಸಿಲ್ ಆಕ್ರೋಶ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ವಕೀಲರ ಮೇಲೆ ಯುವಕರ ತಂಡ ಹಲ್ಲೆ ನಡೆಸಿದ ಘಟನೆ ನಡೆದಿದೆ.ಹಲ್ಲೆ ಮಾಡಿದ ಯುವಕರ ಮೇಲೆ ಪ್ರಕರಣ ದಾಖಲಿಸುವಂತೆ ವಕೀಲರು ಜಮಾವಣೆ ನಡೆಸಿದ್ದಾರೆ. ಬುಲೆರೋ ವಾಹನದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದು, ಬುಲೆರೋ ಚಾಲಕ ಕಾರಿಗೆ ಅಡ್ಡ ಬಂದು ನಿಂತದ್ದು, ಬುಲೆರೋ ಚಾಲಕನಿಗೆ ವಕೀಲ ಪ್ರಶ್ನೆ ಮಾಡಿದ್ದಾರೆ. ನಂತರ ವಕೀಲರು, ಆಸ್ಪತ್ರೆ ಮುಂಭಾಗ ರೋಗಿಯನ್ನು ನೋಡಿ ಕ್ಷಮೆ ಕೇಳಿದ್ದಾರೆ. ವಕೀಲರು ಕ್ಷಮೆ ಕೇಳಿದ್ದರೂ ಬುಲೆರೋ ವಾಹನದಲ್ಲಿದ್ದ ನಾಲ್ವರು ಯುವಕರಿಂದ ಹಲ್ಲೆ ನಡೆಸಿದ್ದಾರೆ. ವಕೀಲ,ಪೃಥ್ವಿ ಮಂಜುನಾಥ್ ಮೇಲೆ ಹಲ್ಲೆ ಎಸಗಿದ ಘಟನೆ ನಡೆದಿದೆ.ಹಲ್ಲೆ ಖಂಡಿಸಿ ಬಸವನಹಳ್ಳಿ ಪೊಲೀಸ್ ಠಾಣೆಯ ಮುಂದೆ ವಕೀಲರು ಪಟ್ಟು ಹಿಡಿದಿದ್ದಾರೆ. ಹಲ್ಲೆ ನಡೆಸಿದ ಯುವಕರ ಮೇಲೆ ಪ್ರಕರಣ ದಾಖಲಿಸುವಂತೆ ಚಿಕ್ಕಮಗಳೂರು ಬಾರ್ ಕೌನ್ಸಿಲ್ ಆಕ್ರೋಶ ವ್ಯಕ್ತಪಡಿಸಿದೆ.

Read More

ತೀರ್ಥಹಳ್ಳಿ ತಹಸೀಲ್ದಾರ್ ಹುಟ್ಟೂರಲ್ಲಿ ಇಂದು ಅಂತಿಮ ದರ್ಶನ! – ಬೆಂಗಳೂರು ಲಾಡ್ಜ್ ಅಲ್ಲಿ ಸಾವು: ಮರಣೋತ್ತರ ಪರೀಕ್ಷೆ – ತೀರ್ಥಹಳ್ಳಿಯಿಂದ ನೂರಾರು ಸಿಬ್ಬಂದಿ ಗದಗಕ್ಕೆ ಪಯಣ – ಶಾಸಕ ಆರಗ ಸೇರಿ ಎಲ್ಲಾ ನಾಯಕರ ಸಂತಾಪ – ತೀರ್ಥಹಳ್ಳಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅಧಿಕಾರಿ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ತಹಶೀಲ್ದಾರ್ ಜಿ.ಬಿ.ಜಕ್ಕಣಗೌಡರ್ (56) ಬುಧವಾರ ಬೆಂಗಳೂರಿನ ಖಾಸಗಿ ಲಾಡ್ಜ್ ವೊಂದರಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದು ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು ಅವರ ಮೃತ ದೇಹ ತವರೂರು ಗದಗಕ್ಕೆ ತೆಗೆದುಕೊಂಡು ಹೋಗಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ. ಬೆಂಗಳೂರು ಮೆಜೆಸ್ಟಿಕ್ ಬಳಿ ಲಾಡ್ಜ್ ಅಲ್ಲಿ ಅವರು ಸಾವನ್ನು ಕಂಡಿದ್ದರು. ಹೈಕೋರ್ಟ್ ಕೆಲಸದ ನಿಮಿತ್ತ ಮಂಗಳವಾರ ತೀರ್ಥಹಳ್ಳಿಯಿಂದ ತೆರಳಿದ್ದರು. ಫೋನ್ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ನೌಕರರು ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದರು. ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. . ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಅಧಿಕಾರಿಗಳು ಸ್ಥಳದಲ್ಲಿದ್ದು ಕುಟುಂಬಕ್ಕೆ…

Read More

ಭೂಮಿ ಹುಣ್ಣಿಮೆ ಹಬ್ಬದಲ್ಲಿ ಮಿಂದೆದ್ದ ರೈತರು! – 101 ಬಗೆಯ ಬೆರಕೆ ಸೊಪ್ಪಿನ ಪಲ್ಯ ತಳಿದು ಭೂಮಿ ಪೂಜೆ – ಭೂಮಿ ತಾಯಿಗೆ ಸೀಮಂತದ ಹಬ್ಬ: ಮುಂಜಾನೆ ಹಬ್ಬ – ಭೂಮಿ ತಾಯಿಗೆ ಪೂಜೆ ಮಾಡಿದ ರೈತ ಕುಟುಂಬ NAMMUR EXPRESS NEWS ರೈತರಿಗೆ ಭೂಮಿ ಹುಣ್ಣಿಮೆ ಹಬ್ಬ ಸಂಭ್ರಮ ಸಡಗರಗಳ ದೊಡ್ಡ ಹಬ್ಬ. ಭೂಮಿ ತಾಯಿ ಗರ್ಭಿಣಿಯಾಗಿದ್ದಾಳೆ, ತಾಯಿಗೆ ಸೀಮಂತ ಮಾಡಬೇಕು ಎಂಬ ನಂಬಿಕೆಯಿಂದ ಭೂಮಿ ಹುಣ್ಣಿಮೆ ನಡೆಸುವ ರೂಢಿ ತಲೆತಲಾಂತರದಿಂದ ಬಂದಿದೆ. ಬುಧವಾರ 101 ಬಗೆಯ ಸೊಪ್ಪು, ತರಕಾರಿ ಹೆರಕಿ ಪಲ್ಯ ಮಾಡಿ ಅಡುಗೆ ಮಾಡಲಾಯಿತು. ಗುರುವಾರ ಮುಂಜಾನೆ ಗದ್ದೆ ತೋಟಗಳಲ್ಲಿ ರೈತರು ಕುಟುಂಬದೊಂದಿಗೆ ಸೇರಿ ಪೂಜೆ ಮಾಡಲಾಯಿತು. ಮಲೆನಾಡು, ಕರಾವಳಿ ಈ ಭಾಗಗಳನ್ನು ಕೂಡ ಈ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡುತ್ತಾರೆ ಮತ್ತು ಈಗಾಗಲೇ ಎಲ್ಲಾ ಸಿದ್ಧತೆಗಳು ಕೂಡ ನಡೆಯುತ್ತಾ ಇವೆ. ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ವಸ್ತು .…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರುರಾಯರ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಸಾಲದಿಂದ ಮುಕ್ತಿ ಸಿಗಲಿದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ದೂರ ಪ್ರಯಾಣದ ಅವಕಾಶವಿರುತ್ತದೆ. ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳ ಲಕ್ಷಣಗಳಿವೆ. ಇಂದು ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವೃತ್ತಿಯಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಪಿತ್ರಾರ್ಜಿತ ಆಸ್ತಿ ಸಿಗುತ್ತದೆ. ನಿಮ್ಮ ಸಂಗಾತಿ ಅಥವಾ ಕುಟುಂಬದ ಸದಸ್ಯರ ಸೋಮಾರಿ ಸ್ವಭಾವದಿಂದಾಗಿ ನೀವು ಕಿರಿಕಿರಿಯನ್ನು ಅನುಭವಿಸಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಒಳ್ಳೆಯ…

Read More

ಆ‌ರ್.ಎಸ್.ಬಿ ಸಭಾ ಭವನದ ಲೋಕಾರ್ಪಣೆಗೆ ಸಜ್ಜು! * ಸಮಾಜದ ಹೆಮ್ಮೆಯ ನೂತನ ಕಟ್ಟಡ ಅ 23ರಂದು ಉದ್ಘಾಟನೆ * ಅಧ್ಯಕ್ಷರಾದ ಸುಮಾ ರಾಮಚಂದ್ರ, ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ನಾಯಕ್ ಮಾಹಿತಿ NAMMUR EXPRESS NEWS ತೀರ್ಥಹಳ್ಳಿ: ಕುರುವಳ್ಳಿಯಲ್ಲಿ ಆರ್.ಎಸ್. ಬಿ ಸಭಾ ಭವನದ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜುಗೊಂಡಿದೆ. ಆರ್. ಎಸ್. ಬಿ ಸಭಾಭವನದಲ್ಲಿ ತಾಲೂಕು ಆರ್.ಎಸ್. ಬಿ ಸಮಾಜದ ತಾಲೂಕು ಅಧ್ಯಕ್ಷರಾದ ಸುಮಾ ರಾಮಚಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಅಶೋಕ್ ವಿ. ನಾಯಕ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಆರ್ ಎಸ್ ಬಿ ಸಮಾಜ ತೀರ್ಥಹಳ್ಳಿ ತಾಲೂಕಿನ ಹಿಂದುಳಿದ ಅಲ್ಪಸಂಖ್ಯಾತರ ಸ್ವಲ್ಪ ಸಂಖ್ಯೆಯನ್ನು ಹೊಂದಿರುವ ಸಮಾಜವಾಗಿತ್ತು.1999ರಲ್ಲಿ ಕಟ್ಟಡದ ನಿರ್ಮಾಣಕ್ಕೆ ಕನಸು ಕಂಡಿದ್ದಾರೆ. ಅದಕ್ಕಾಗಿಯೇ ಆರ್ ಎಸ್ ಬಿ ಸಮಾಜಕ್ಕಾಗಿ ಕಟ್ಟಡ ಕಟ್ಟಬೇಕು ಎಂದು ರಾಮಚಂದ್ರ ಅವರ ಕನಸು,2000 ಇಸವಿಯಲ್ಲಿ ಸಣ್ಣದಾಗಿ ಕಟ್ಟಡವನ್ನು ಕಟ್ಟಲಾಯಿತು. ಪ್ರತಿಯೊಬ್ಬರ ಬೆವರಹನಿ ಈ ಸಮಾಜದ ಕಟ್ಟಡದಲ್ಲಿದೆ ಎಂದು ಆರ್ ಎಸ್ ಬಿ ಸಮಾಜದ ತಾಲೂಕು ಅಧ್ಯಕ್ಷರಾದ…

Read More

ಗಾಯತ್ರಿ ಜ್ಯುವೆಲ್ಲರ್ಸ್ ನೂತನ ಚಿನ್ನಾಭರಣಗಳ ಮಳಿಗೆ ಪ್ರಾರಂಭೋತ್ಸವ – ಅ.17ರಂದು ತೀರ್ಥಹಳ್ಳಿಯ ಗಾಂಧಿ ಚೌಕದ ಅಲಂಕಾರ್ ಕಾಂಪ್ಲೆಕ್ಸಲ್ಲಿ ಉದ್ಘಾಟನೆ – ಕ್ಷೇತ್ರ ಹೊರನಾಡು ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿ ಮತ್ತು ಶ್ರೀಮತಿ ರಾಜೇಶ್ವರಿ ಜೋಶಿಯವರ ಅಮೃತ ಹಸ್ತದಿಂದ ಉದ್ಘಾಟನೆ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾದ ತೀರ್ಥಹಳ್ಳಿ ಗಾಯತ್ರಿ ಜ್ಯುವೆಲ್ಲರ್ಸ್ ನೂತನ ಚಿನ್ನಾಭರಣ ಮಳಿಗೆಯ ಉದ್ಘಾಟನೆ ಅ.17ರ ಗುರುವಾರ ಬೆಳಿಗ್ಗೆ 10-30ಕ್ಕೆ ತೀರ್ಥಹಳ್ಳಿ ಪಟ್ಟಣದ ಗಾಂಧಿಚೌಕ ದಲ್ಲಿರುವ ಅಲಂಕಾರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿ ಮತ್ತು ಶ್ರೀಮತಿ ರಾಜೇಶ್ವರಿ ಜೋಶಿಯವರ ಅಮೃತ ಹಸ್ತದಿಂದ ನೆರವೇರಲಿದ್ದು, ಸರ್ವರಿಗೂ ಆದರದ ಸ್ವಾಗತವನ್ನು ಮಾಲೀಕರು ಹಾಗೂ ಕುಟುಂಬದವರು ಕೋರಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಜ್ಯುವೆಲ್ಲರ್ಸ್ ಉದ್ಯಮಕ್ಕೆ ಒಂದು ಹೊಸ ರೂಪವನ್ನು ನೀಡಿದಂತಹ ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಅವರು ಬಂಗಾರದ ಗುಣಮಟ್ಟ ಹಾಗೂ ನಂಬಿಕೆ ವಿಶ್ವಾಸದ ಮೇರೆಗೆ ಜ್ಯುವೆಲ್ಲರ್‌ನ ಉದ್ಯಮವನ್ನು ನಡೆಸಿಕೊಂಡು…

Read More

ಟಾಪ್ ನ್ಯೂಸ್ ಕರಾವಳಿ -ಉಡುಪಿ: ಅಪಪ್ರಚಾರ ವಿರುದ್ದ ಪ್ರಸಾದ್ ಕಾಂಚನ್ ಆಕ್ರೋಶ: ಶಿಕ್ಷೆ ಆಗುವವರೆಗೆ ಹೋರಾಟ – ಮಂಗಳೂರು: ಅಪಾರ ಪ್ರಮಾಣದ ಹೋಮ್ ಮೇಡ್ ವೈನ್‌ ಪತ್ತೆ! – ಪುತ್ತೂರು ಅಮಾನುಷ ಗೋವಿನ ಸಾಗಾಟ, ರಕ್ಷಣೆ! – ಕಿನ್ನಿಗೋಳಿ: ಮಳೆ, ಕೊಳೆಯುವ ಭೀತಿಯಲ್ಲಿ ಭತ್ತದ ಬೆಳೆ – ಮಂಗಳೂರು: ಸ್ಕೂಟರ್ ಮರಕ್ಕೆ ಡಿಕ್ಕಿ : ಓರ್ವ ಸಾವು NAMMUR EXPRESS NEWS ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಅಪಪ್ರಚಾರ ನಡೆಸಿದ್ದಲ್ಲದೇ ಪೋಟೋವನ್ನು ವಿರೂಪಗೊಳಿಸಿ ಎಡಿಟ್ ಮಾಡುವ ಮೂಲಕ ಸಾರ್ವಜನಿಕವಾಗಿ ನನ್ನ ತೇಜೋವಧೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರೆಸುವುದಾಗಿ ಕಾಂಗ್ರೆಸ್ ಮುಖಂಡ, 2018ರ ವಿಧಾನಸಭಾ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಅವರು ಸ್ಪಷ್ಟನೆಯನ್ನು ಕೂಡ ನೀಡಿರುತ್ತಾರೆ. ಉಡುಪಿ- ಉಚ್ಚಿಲ‌ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ನಡೆದ ದಸರಾಕ್ಕೆ ಸೌಹಾರ್ಧತೆಯ ಸಂಕೇತವಾಗಿ ಮುಸ್ಲಿಂ ಮಾಲಿಕತ್ವದ ಎಕೆಎಂಎಸ್…

Read More

ಶ್ರೀ ಹಾಸನಾಂಬ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರೆಗೆ ಸಜ್ಜು! – ವರ್ಷಕ್ಕೊಮ್ಮೆ ನಡೆಯುವ ಅದ್ದೂರಿ ಹಾಸನಾಂಬ ಜಾತ್ರೆ – ಅ.24ರಿಂದ ನ.3ರ ತನಕ ಹಾಸನಾಂಬೆ ಗರ್ಭಗುಡಿಯ ಬಾಗಿಲು ಓಪನ್ – ಅ. 25 ರಿಂದ ನವೆಂಬರ್ 02 ತನಕ ದರ್ಶನಕ್ಕೆ ಅವಕಾಶ NAMMUR EXPRESS NEWS ಹಾಸನ: ವರ್ಷಕ್ಕೊಮ್ಮೆ ನಡೆಯುವ ಅದ್ದೂರಿ ಹಾಸನಾಂಬ ಜಾತ್ರಾ ಮಹೋತ್ಸವ 2024ರ ದಿನಾಂಕ ನಿಗದಿಯಾಗಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ನಿಗದಿ ಪಡಿಸಿದ ದಿನಗಳಂದು ಮಾತ್ರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗುತ್ತದೆ. ಈ ಬಾರಿ ಅಕ್ಟೋಬರ್ 24ರಿಂದ ನವೆಂಬರ್ 3ರ ತನಕ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿರಲಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. 2024ರ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಹಾಸನ ಜಿಲ್ಲಾಡಳಿತ ತಯಾರಿ ನಡೆಸಿದೆ. ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಈ ಕುರಿತು ಮಾಹಿತಿ ನೀಡಿದ್ದಾರೆ. ಅಕ್ಟೋಬರ್…

Read More

ಕರಾವಳಿ ನ್ಯೂಸ್ – ಭ್ರಷ್ಟಾಚಾರ ಆರೋಪ, ಎಡಿಎಂ ಆತ್ಮಹತ್ಯೆ – ಖಾಸಗಿ ಬಸ್ ನಿರ್ವಾಹಕ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ!! – ಉಡುಪಿ:ವಿದ್ಯುತ್ ಮೀಟರ್‌ಗೆ ಸಿಡಿಲು ಬಡಿದು ಮೂವರು ಗಾಯ! – ಸುಳ್ಯ: ದ್ವಿಚಕ್ರ ವಾಹನಗಳ ಭೀಕರ ಅಪಘಾತ; ಸಹಕಾರಿ ಸಂಘದ ಉದ್ಯೋಗಿ ಮೃತ್ಯು! NAMMUR EXPRESS NEWS ಕಾಸರಗೋಡು: ಕಣ್ಣೂರು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಬೀಳ್ಕೊಡುಗೆ ಸಮಾರಂಭದಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿದ ಬೆನ್ನಲ್ಲೇ ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌(ಎಡಿಎಂ) ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಈ ಹಿಂದೆ ಎಡಿಎಂ ಆಗಿ ಸೇವೆ ಸಲ್ಲಿಸಿದ್ದು, ಈಗ ಕಣ್ಣೂರು ಜಿಲ್ಲೆಯ ಎಡಿಎಂ ಆಗಿ ಸೇವೆ ಸಲ್ಲಿಸುತ್ತಿದ್ದ ನವೀನ್‌ ಬಾಬು ಅವರ ಮೃತದೇಹ ಕಣ್ಣೂರು ಪಳ್ಳಿಕುನ್ನಿನಲ್ಲಿರುವ ಕ್ವಾಟ್ರಸ್‌ನಲ್ಲಿ ಅ. 15ರಂದು ಬೆಳಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನವೀನ್‌ ಬಾಬು ಅವರಿಗೆ ಕಣ್ಣೂರಿನಿಂದ ತಮ್ಮ ಹುಟ್ಟೂರಾದ ಪತ್ತನಂತಿಟ್ಟಕ್ಕೆ ವರ್ಗಾವಣೆಯಾಗಿತ್ತು. ಈ ಮಧ್ಯೆ ಕಣ್ಣೂರು ಕಲೆಕ್ಟರೇಟ್‌ನಲ್ಲಿ ಅ. 14ರಂದು ಸಂಜೆ…

Read More