Author: Nammur Express Admin

ನಮ್ಮೂರ್ ಪ್ರಾಬ್ಲಮ್ ಇನ್ಮೇಲೆ ನಿಮ್ಮ ಸಮಸ್ಯೆಗೆ ನಮ್ಮ ದನಿ! – ಬಿದರಗೋಡು ಗ್ರಾಮದಲ್ಲಿ ಕಾಡಾನೆಗಳ ಭಯ! – ಎಲ್ಲಿಂದ ಬಂದವು ಕಾಡಾನೆಗಳು? ಹೋರಾಟಕ್ಕೆ ಸಿದ್ದವಾದ ಜನರು – ಕನ್ನಂಗಿಯ ಬೈರುಗುಂಡಿ ರಸ್ತೆ ಸಮಸ್ಯೆ ಕೇಳುವವರಾರು? – ಹೊದಲದಲ್ಲಿ ನೀರಿನ ಪೈಪ್ ಕಾಮಗಾರಿ: ಜನರಿಗೆ ತೊಂದರೆ – ದಬ್ಬಣಗದ್ದೆ ಬಳಿ ರಸ್ತೆ ಕುಸಿತ: ಅಧಿಕಾರಿಗಳ ನಿರ್ಲಕ್ಷ್ಯ..! NAMMUR EXPRESS NEWS ತೀರ್ಥಹಳ್ಳಿ: ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮಕ್ಕೆ ಮಂಗಳವಾರ ಕಾಡಾನೆ ನುಗ್ಗಿದ್ದು ರೈತರು ಬೆಳೆದ ಬಹುಪಾಲು ಭತ್ತದ ಗದ್ದೆ ಹಾಳು ಮಾಡಿವೆ. ವರ್ಷದ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಆನೆಯ ಅವಾಂತರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಅನೇಕ ವರ್ಷಗಳಿಂದ ಕಾಡಾನೆ ಸಾಗಾಣೆ ಮಾಡಬೇಕೆಂಬ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಆಡಳಿತ ಪಕ್ಷವಾಗಲಿ, ಶಾಸಕರಾಗಲಿ ಮನ್ನಣೆ ನೀಡಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿದ್ದಾರೆ. ಸೋಮೇಶ್ವರ ಅಭಯಾರಣ್ಯ ಪ್ರದೇಶದಲ್ಲಿ ಹಿಂದೆಂದೂ ಕಾಡಾನೆ ವಾಸವಾಗಿದ್ದ ಉದಾಹರಣೆಗಳು ಇರಲಿಲ್ಲ. ಸುತ್ತಮುತ್ತಲ ಪ್ರದೇಶದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿ, ಬೃಹತ್…

Read More

ಅಡಿಕೆ ದರ ಎಷ್ಟಿದೆ? – ಬೆಟ್ಟೆ ಎಷ್ಟಿದೆ? ರಾಶಿ ಎಷ್ಟಿದೆ? NAMMUR EXPRESS NEWS ಸರಕು 56109 – 80996 ಬೆಟ್ಟೆ 46199 – 51500 – 55239 ರಾಶಿ 41009 – 48000 – 49699 ಗೊರಬಲು 18000 – 31900 -32658 ಹೊಸ ರಾಶಿ 44539 – 46559 – 47451

Read More

ಲೋಕಸಭಾ ಚುನಾವಣೆ: ಅಣ್ಣನ ಜಾಗಕ್ಕೆ ತಂಗಿ ಸ್ಪರ್ಧೆ!? * ರಾಹುಲ್ ಗಾಂಧಿ ಎರಡು ಗೆದ್ದಿದ್ದಕ್ಕೆ ತೆರವು: ಪ್ರಿಯಾಂಕಾ ಸ್ಪರ್ಧೆ? * ಕುತೂಹಲ ಮೂಡಿಸಿದ ವಯನಾಡು ಕ್ಷೇತ್ರ * 52 ವರ್ಷ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಕು! NAMMUR EXPRESS NEWS ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಘೋಷಣೆ ಮಾಡಿದೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಎಐಸಿಸಿ ಅಧಿಕೃತವಾಗಿ ತಿಳಿಸಿದೆ. ಕೇಂದ್ರ ಚುನಾವಣಾ ಆಯೋಗ ಕಳೆದ ದಿನ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಘೋಷಣೆ ಮಾಡಿತ್ತು. ಉಪಚುನಾವಣೆ ಘೋಷಣೆ ಮಾಡಿದ ಬೆನ್ನಲ್ಲಿಯೇ ಎಐಸಿಸಿ ತನ್ನ ಸ್ಪರ್ಧಿಯನ್ನು ಅಂತಿಮ ಮಾಡಿದೆ. ಈಗಾಗಲೇ ಈ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸುವುದು ಖಚಿತವೂ ಆಗಿತ್ತು. ಚುನಾವಣೆ ಘೋಷಣೆಯಾದ ಬಳಿಕ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲು ಕಾಂಗ್ರೆಸ್‌ ನಿರ್ಧರಿಸಿತ್ತು. ಕಳೆದ ಲೋಕಸಭಾ ಚುನಾವಣೆಯ ವೇಳೆ ವಯನಾಡ್ ಹಾಗೂ…

Read More

ಕೀಮ್ ಸ್ಟಾರ್ ಉಡುಪಿ ಯೂಟ್ಯೂಬ್ ಚಾನೆಲ್ ಮತ್ತು ಡ್ರೀಮ್ ಫಿಲ್ಮ್ ಸಂಸ್ಥೆ! – ಸ್ಥಳೀಯ ಯುವ ಪ್ರತಿಭೆಗಳ ಬೆಳೆಸುವ ಕಾರ್ಯ! – ಕಲೆ ಬೆಳೆಸುವುದಲ್ಲದೆ ಕಲಾವಿದರ ಕಷ್ಟಕಾರ್ಪಣ್ಯ ನೀಗಿಸುವ ಪ್ರಯತ್ನ! NAMMUR EXPRESS NEWS ಉಡುಪಿ:ಉಡುಪಿ ಯುಟ್ಯೂಬ್ ಚಾನೆಲ್ ಮತ್ತು ಕೀಮ್ ಸ್ಟಾರ್ ಡ್ರೀಮ್ ಫಿಲಂ ಸಂಸ್ಥೆ ಎಲ್ಲರ ಮನೆ ಮಾತಾಗಿದೆ. ಕಳೆದ ಮೂರು ವರ್ಷಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮತ್ತು ಸಾಮಾಜಿಕ ಗೌರವಗಳನ್ನು ನೀಡುತ್ತಾ ಬರುತ್ತಿದ್ದು ಕಲೆಯ ಉಳಿವಿಕೆ ಮತ್ತು ಬೆಳೆಸಿ ಶ್ರೀಮಂತಗೊಳಿಸುವ ಸಾಮಾನ್ಯ ಕಲಾವಿದರ ಯೋಗ ಕ್ಷೇಮ ಮತ್ತು ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೀಮ್ ಸ್ಟಾರ್ ಸಾಂಸ್ಕೃತಿಕ ವೈಭವ ಎಂಬ ಕಲಾ ಸೇವಾ ಸಂಸ್ಥೆಯನ್ನು ಪ್ರಾರಂಭಿಸುವ ಚಿಂತನೆಯನ್ನು ಸಂಸ್ಥೆಯು ಸಿಇಓ ಜಯಶೀಲ ಕಲ್ಯಾಣಪುರ ಪರಚಿಂತನೆಯನ್ನು ಮಾಡುತ್ತಿದ್ದಾರೆ. ಸ್ಥಳೀಯ ಯುವ ಪ್ರತಿಭೆಗಳನ್ನು ತಯಾರು ಮಾಡುವುದಲ್ಲದೆ ಸ್ಥಳೀಯ ತಂಡಗಳ ಸಹಯೋಗದೊಂದಿಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ರಾಜ್ಯದ್ಯಂತ ನಿಖರವಾದ ಮೊತ್ತಕ್ಕೆ ಕಾರ್ಯಕ್ರಮಗಳನ್ನು ನೀಡಿ ಕಲೆಯನ್ನು ಬೆಳೆಸುವುದಲ್ಲದೆ ಕಲಾವಿದರ ಕಷ್ಟಕಾರ್ಪಣ್ಯಗಳನ್ನು…

Read More

ಟಾಪ್ 3 ನ್ಯೂಸ್ ಕರ್ನಾಟಕ – ಕೊಲೆಯಾದ ರೇಣುಕಾಸ್ವಾಮಿಗೆ ಗಂಡು ಮಗು ಜನನ! – ಹೊಲದಲ್ಲಿ ಕಲ್ಲು ಉರುಳಿ ಮಕ್ಕಳಿಬ್ಬರು ಸೇರಿ ಮೂವರು ಸಾವು – ಅತ್ಯಾಚಾರ ಪ್ರಕರಣ: ಜೈಲಿಂದ ಬಿಡುಗಡೆಯಾದ ಶಾಸಕ ಮುನಿರತ್ನ: ಪಟಾಕಿ ಹೊಡೆದು, ಹೂ ಹಾರ ಹಾಕಿ ಸ್ವಾಗತಿಸಿದ ಅಭಿಮಾನಿಗಳು! NAMMUR EXPRESS NEWS ಚಿತ್ರದುರ್ಗ: ನಟ ದರ್ಶನ್ ಗ್ಯಾಂಗಿನಿಂದ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ಮಗು ಜನನವಾಗಿದೆ. ರೇಣುಕಾಸ್ವಾಮಿ ಕೊಲೆಯಾದಾಗ ಪತ್ನಿ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದರು. ಈ ನೋವು ಇಡೀ ಕುಟುಂಬವನ್ನು ಬಾಧಿಸಿತ್ತು. ಅಕ್ಟೋಬರ್ 16 ಬುಧವಾರ ಬೆಳಗ್ಗೆ 5 ಗಂಟೆಗೆ ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಸಹನಾ ದಂಪತಿಗೆ ಗಂಡು ಮಗು ಜನನವಾಗಿದೆ.ಮಗುವಿನ ತೂಕ 2 kg 200 ಗ್ರಾಂ ಇದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಹೆರಿಗೆ ಹಾಗೂ ಚಿಕಿತ್ಸೆಯ ಎಲ್ಲಾ ವೆಚ್ಚಗಳನ್ನು ಕೀರ್ತಿ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ ಕೀರ್ತಿ ಉಚಿತ ಮಾಡಿ ಮಾನವೀಯತೆ ಮೆರೆದಿದ್ದಾರೆ.…

Read More

1,099 ರೂಗೆ ರಿಲಯನ್ಸ್ ಸ್ಮಾರ್ಟ್‌ ಫೋನ್! – ಸ್ಮಾರ್ಟ್‌ ಫೋನ್ ಪ್ರಿಯರಿಗೆ ಗುಡ್ ನ್ಯೂಸ್: ಎರಡು ಮೊಬೈಲ್ ಬಿಡುಗಡೆ – ರಿಚಾರ್ಜ್ ದರ ಕೂಡ ಭಾರೀ ಕಡಿಮೆ: ಹೊಸ ಸೌಲಭ್ಯ NAMMUR EXPRESS NEWS ಬೆಂಗಳೂರು: ಸ್ಮಾರ್ಟ್‌ ಫೋನ್ ಪ್ರಿಯರಿಗೆ ಮುಖೇಶ್ ಅಂಬಾನಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸದ್ದಿಲ್ಲದೆ, ಕೇವಲ 1,099 ರೂ.ಗೆ ಎರಡು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ, ತನ್ನ ‘ಜಿಯೋ ಭಾರತ್ ಸರಣಿ’ಯಲ್ಲಿ ಕೈಗೆಟಕುವ 4G ಫೋನ್‌ಗಳನ್ನು ಅನಾವರಣಗೊಳಿಸಿದೆ. ಅದುವೇ, ಜಿಯೋ ಭಾರತ್ V3 ಮತ್ತು ಜಿಯೋ ಭಾರತ್ V4 ಸ್ಮಾರ್ಟ್‌ಫೋನ್‌. ಈ ಮೂಲಕ ಇನ್ನಿತರ ಮೊಬೈಲ್ ಕಂಪನಿಗಳಿಗೆ ಸವಾಲನ್ನು ಹಾಕಿದೆ. ರಿಲಯನ್ಸ್ ಜಿಯೋ, ಈ ಎರಡೂ 4G ಫೀಚರ್ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ 4G ಫೀಚರ್ ಫೋನ್‌ಗಳು 1,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿವೆ. ಕಂಪನಿಯು 128GB ಮೆಮೊರಿ ಕಾರ್ಡ್ ಅನ್ನು ಒದಗಿಸಿದೆ. ಈ ಫೋನ್‌ಗಳಲ್ಲಿ,…

Read More

ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ -ತೀರ್ಥಹಳ್ಳಿಯಲ್ಲಿ ಬೈಕ್ ಪಿಕಪ್ ಡಿಕ್ಕಿ: ಯುವಕ ಸಾವು! – ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಸಿಟಿ ಬಸ್! – ರಿಪ್ಪನ್‌ಪೇಟೆ : ಕಾರು ಬೊಲೆರೋ ಮುಖಾಮುಖಿ ಡಿಕ್ಕಿ, ಮೂವರಿಗೆ ಗಾಯ – ಸಾಗರ: ಕೋರ್ಟ್‌ ಆವರಣದ ಬಳಿ ವಿಷ ಸೇವಿಸಿದ ವ್ಯಕ್ತಿ – ಆಯನೂರು: ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ ಮಾಯ! – ಶಿವಮೊಗ್ಗ : ಜೈಲಿನಿಂದ ಕರೆ ಮಾಡಿ ಪತ್ನಿಗೆ ಬೆದರಿಕೆ ಒಡ್ಡಿದ ಖೈದಿ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮೇಲಿನ ಕುರುವಳ್ಳಿಯ ಸೋಮೇಶ್ವರ ತಿರುವಿನಲ್ಲಿ ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವ್ಯಕ್ತಿ ಮೇಲಿನ ಕುರುವಳ್ಳಿ ವಾಸಿ ಕಾರ್ತಿಕೇಯ(34) ಎಂದು ಗುರುತಿಸಲಾಗಿದ್ದು, ರಸ್ತೆಯ ತಿರುವಿನಲ್ಲಿ ಪಿಕಪ್ ಗೆ ಬೈಕ್ ಡಿಕ್ಕಿ ಹೊಡೆದಾಗ ಬೈಕ್ ಹಿಂಬದಿ ಸವಾರ ಕಾರ್ತಿಕೇಯ ಕೆಳಗೆ ಬಿದ್ದಾಗ ಪಿಕಪ್ ಎದೆಯ ಮೇಲೆ ಹರಿದಿದೆ, ಗಂಭೀರವಾಗಿ…

Read More

10 ವರ್ಷಗಳಲ್ಲಿ ಸಾವಿರಾರು ಕೋಟಿ ಬಿಲ್ ಪಾವತಿ ಡೀಲ್! – ಜಲ ಸಂಪನ್ಮೂಲ ಇಲಾಖೆಯಲ್ಲಿ ಭಾರೀ ಗೋಲ್ಮಾಲ್ – ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ: ಸಿಎಂಗೆ ವಕೀಲ ದೇವರಾಜೇಗೌಡ ಒತ್ತಾಯ NAMMUR EXPRESS NEWS ಹಾಸನ: ಜಲ ಸಂಪನ್ಮೂಲ ಇಲಾಖೆಯಲ್ಲಿ ೨೦೧೩ ರಿಂದ ೨೦೨೪ ರವರೆಗೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸಲಾಗಿದ್ದು, ಎಷ್ಟೋ ಕಡೆ ಕಳಪೆ ಕಾಮಗಾರಿ ನಡೆದಿದೆ. ಆ ಬಗ್ಗೆ ತನಿಖೆ ನಡೆಸಲು ಪ್ರಾಮಾಣಿಕ ನಿವೃತ್ತ ನ್ಯಾಯ ಮೂರ್ತಿಗಳ ಸಮಿತಿ ರಚಿಸಿ ತನಿಖೆ ಮಾಡಿಸಿ ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಪತ್ರಕರ್ತರ ಜತೆ ಮಾತನಾಡಿದ ಅವರು, ಆ ಸಮಿತಿಯಿಂದ ವರದಿ ಪಡೆದ ನಂತರ ಎಸ್‌ಐಟಿ ರಚನೆ ಮಾಡಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾವು ಮುಖ್ಯಮಂತ್ರಿ ಆದ ಮೇಲೆ ಹಿಂದಿನ ಸರ್ಕಾರಗಳ ಅವಧಿಯ ಹಳೆಯ ಹಗರಣಗಳ ಬಗ್ಗೆ ತನಿಖೆ ಮಾಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವುಗಳಲ್ಲಿ ಬಿಜೆಪಿ ಸರ್ಕಾರದ…

Read More

ಅಡಿಕೆ ಬೆಳೆಗೆ ರೋಗದ ಜತೆಗೆ ಈಗ ಕೀಟದ ಹಾವಳಿ! * ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ಅಡಿಕೆಯಲ್ಲಿ ಥ್ರಿಪ್ಸ್ ಹುಳದ ಬಾಧೆ * ಮತ್ತೊಂದು ಕಡೆ ರಿಂಗ್‌ಸ್ಪಾಟ್‌ ವೈರಸ್: ರೈತರೇ ಎಚ್ಚರ NAMMUR EXPRESS NEWS ದಾವಣಗೆರೆ: ಈಚೆಗೆ ಕೆಲವು ಸಮಯಗಳಿಂದ ಅಡಿಕೆ ಬೆಳೆಯ ಮೇಲೆ ಕೀಟಗಳ ಹಾವಳಿ, ರೋಗಗಳ ಹಾವಳಿ ಹೆಚ್ಚುತ್ತಿದೆ. ಎಲ್ಲದಕ್ಕೂ ಪ್ರಮುಖವಾದ ಕಾರಣ ಹವಾಮಾನ. ಇದೀಗ ಇನ್ನೊಂದು ಕೀಟವು ಅಡಿಕೆಗೆ ಹಾವಳಿ ನೀಡಲು ಪ್ರಾರಂಭವಾಗಿದೆ. ಥ್ರಿಪ್ಸ್ ಎಂದು ಕರೆಯಲ್ಪಡುವ ಕೀಟವು ಇದೀಗ ಅಡಿಕೆಯ ಮೇಲೆ ಕಾಟವನ್ನು ದಾವಣಗೆರೆಯಲ್ಲಿ ಥ್ರಿಪ್ಸ್ ಪ್ರಾರಂಭಿಸಿದೆ. ಹುಳದ ಬಾಧೆ ಆರಂಭವಾಗಿದೆ. ಕಳೆದ ಕೆಲವು ಸಮಯಗಳಿಂದ ಅಡಿಕೆಗೆ ಎಲೆಚುಕ್ಕಿ ರೋಗವು ತೀವ್ರವಾಗಿ ಬಾಧಿಸುತ್ತಿದೆ. ಈ ಬಾರಿಯೂ ಕೂಡ ಸೆಪ್ಟೆಂಬ‌ರ್ ತಿಂಗಳ ಅಂತ್ಯದವರೆಗೂ ಕಾಣಿಸದ ಎಲೆಚುಕ್ಕಿ ರೋಗ ಈಚೆಗೆ 10 ದಿನಗಳಿಂದ ಅಲ್ಲಲ್ಲಿ ತೀವ್ರವಾಗಿ ಕಾಣಿಸುತ್ತದೆ. ಅದರ ನಡುವೆ ರಿಂಗ್‌ಸ್ಪಾಟ್‌ ವೈರಸ್ ಕೂಡ ಶಿರಸಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಬಾಧಿಸುತ್ತಿದೆ. 1956ರಲ್ಲಿ ಕರ್ನಾಟಕ ಮತ್ತು…

Read More

ಕೆಪಿಟಿಸಿಎಲ್ ಸಂಸ್ಥೆಯು 2975 ಹುದ್ದೆಗಳಿಗೆ ನೇಮಕಾತಿ! * ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆ * ಅರ್ಜಿ ಹಾಕಿ: ಅ.21ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ NAMMUR EXPRESS NEWS ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಸಂಸ್ಥೆಯು 2975 ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ,10ನೇ, 12ನೇ ತರಗತಿ ಪಾಸಾಗಿರಬೇಕು. ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ತೇರ್ಗಡೆಯಾಗಿರಬೇಕು.ಅಕ್ಟೋಬರ್.21ರಂದು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕವಾಗಿದೆ. ನ.20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ…

Read More