Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ವಿಘ್ನ ವಿನಾಯಕನ ದಯೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯ ಜನರು ಇಂದು ಜೀವನದಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಮಾತಿನ ಮೂಲಕ ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ಯಾರೊಂದಿಗೂ ನಿಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬೇಡಿ. ಹಣಕಾಸಿನ ವಿಷಯಗಳಲ್ಲಿ ದಿನವು ಉತ್ತಮವಾಗಿರುತ್ತದೆ. ಆದಾಯ ಹೆಚ್ಚಲಿದೆ. ** ವೃಷಭ ರಾಶಿ : ಇಂದು ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಾಗಲಿದೆ. ನಿಮ್ಮ ಸಾಧನೆಗಳಿಂದ ನಿಮ್ಮ ಕುಟುಂಬದ ಸದಸ್ಯರು ಸಂತೋಷಪಡುತ್ತಾರೆ. ಹೊಸ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ.…

Read More

ಬಿಜೆಪಿ-ಸಂಘ ಪರಿವಾರದವರೂ ಭೂಮಿ ಹಿಂದಿರುಗಿಸುವರೇ?: ಮಂಜುನಾಥ ಭಂಡಾರಿ – ಶಿಕ್ಷಣ ಸಂಸ್ಥೆಗೆಂದು ಸಿಎ ನಿವೇಶನ ಪಡೆದು ಬಿರಿಯಾನಿ ಹೋಟೆಲ್ ನಡೆಸುತ್ತಿರುವ ಛಲವಾದಿ ನಾರಾಯಣಸ್ವಾಮಿ NAMMUR EXPRESS NEWS ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮಾನುಸಾರ ಹಂಚಿಕೆಯಾಗಿದ್ದ 5 ಎಕರೆ ಜಮೀನನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರು ಇತರರಿಗೆ ಆದರ್ಶರಾಗಿದ್ದಾರೆ. ಈಗ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ತಮಗೆ ಹಂಚಿಕೆಯಾಗಿದ್ದ ಜಮೀನು ಮತ್ತು ನಿವೇಶನಗಳನ್ನು ಹಿಂದುರುಗಿಸುವ ಮೂಲಕ ಆದರ್ಶರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ಶಾಸಕರು ಮಂಜುನಾಥ್ ಭಂಡಾರಿ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 5 ದಶಕಗಳಿಗೂ ಅಧಿಕ ಕಾಲ ಪರಿಶುದ್ಧ ರಾಜಕೀಯ ಜೀವನ ನಡೆಸಿಕೊಂಡು ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಕೇಳಿಬರುತ್ತಿದ್ದಂತೆ ರಾಹುಲ್ ಖರ್ಗೆ ಅವರು, ನ್ಯಾಯಬದ್ಧವಾಗಿ ಲಭ್ಯವಾಗಿರುವ ಜಮೀನನ್ನು ಹಿಂದಿರುಗಿಸಿ ಮೇಲ್ಪಂಕ್ತಿ ಹಾಕಿದ್ದಾರೆ.…

Read More

ದೋಸೆ ಪ್ರಿಯರಿಗೆ ಗುಡ್ ನ್ಯೂಸ್: ಶೀಘ್ರದಲ್ಲಿ ನಂದಿನಿ ದೋಸೆ ಹಿಟ್ಟು! – ಕೆಎಂಎಫ್ ನಂದಿನಿ ಬ್ಯಾಂಡ್ ದೋಸೆ ಹಿಟ್ಟು ಶೀಘ್ರ ಬಿಡುಗಡೆ – 1, 2 ಕೇಜಿ ಪ್ರಮಾಣದ ಪ್ಯಾಕೇಟ್‌ ಬಿಡುಗಡೆಗೆ ಸಿದ್ಧತೆ NAMMUR EXPRESS NEWS ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಹಾಲು ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಯೊಂದಿಗೆ ಒಂದು ಹೆಜ್ಜೆ ಮುಂದೆ ಹೋಗಿ ಮಾರುಕಟ್ಟೆಗೆ ನಂದಿನಿ ಬ್ರಾಂಡ್‌ನಡಿ ‘ದೋಸೆ ಹಿಟ್ಟು’ ಪರಿಚಯಿಸಲು ಮುಂದಾಗಿದೆ. ಕೆಎಂಎಫ್, ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿದೆ. ‘ರೆಡಿ ಟು ಕುಕ್’ ಪರಿಕಲ್ಪನೆಯಡಿ ಜನರು ಸುಲಭವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಕಡಿಮೆ ಅವಧಿಯಲ್ಲಿ ಸುಲಭವಾಗಿ ದೋಸೆ ಮಾಡಲು ಪೂರಕವಾಗಿ ಕೆಎಂಎಫ್ ದೋಸೆ ಹಿಟ್ಟು ಉತ್ಪಾದಿಸಲಿದೆ. ಪ್ರಾಯೋಗಿಕವಾಗಿ ಒಂದು ಮತ್ತು ಎರಡು ಕೆ.ಜಿ. ಪ್ರಮಾಣದ ದೋಸೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ನಂದಿನಿ ಬ್ಯಾಂಡ್…

Read More

ಅಡಿಕೆ ದರ ಎಷ್ಟಿದೆ? ರಾಶಿ ಎಷ್ಟು? ಬೆಟ್ಟೆ ಎಷ್ಟು? NAMMUR EXPRESS NEWS ಸರಕು 55129-80696 ಬೆಟ್ಟೆ 46129-59500 ರಾಶಿ 40009-48000-49269 ಗೊರಬಲು 18029-32200-32916 ಹೊಸ ರಾಶಿ 42159-46759-47509

Read More

ಭೂಮಿ ಹುಣ್ಣಿಮೆ ಹಬ್ಬ: ರೈತರ ಸಂಭ್ರಮದ ಹಬ್ಬ! – ನಾಳೆ 101 ಬಗೆಯ ಬೆರಕೆ ಸೊಪ್ಪಿನ ಪಲ್ಯ ಸಂಗ್ರಹ – ಅ. 17ರ ಮುಂಜಾನೆ ಭೂಮಿ ತಾಯಿಗೆ ಸೀಮಂತದ ಹಬ್ಬ – ಮಲೆನಾಡು, ಕರಾವಳಿ ಭಾಗದಲ್ಲಿ ಆಚರಣೆ ವಿಶೇಷ ವರದಿ: ಪ್ರಾಪ್ತಿ ಸಾಗರ NAMMUR EXPRESS NEWS ಮಲೆನಾಡಿನ ಗ್ರಾಮೀಣ ರೈತರಿಗೆ ಭೂಮಿ ಹುಣ್ಣಿಮೆ ಹಬ್ಬ ಸಂಭ್ರಮ ಸಡಗರಗಳ ದೊಡ್ಡ ಹಬ್ಬ. ಭೂಮಿ ತಾಯಿ ಗರ್ಭಿಣಿಯಾಗಿದ್ದಾಳೆ, ತಾಯಿಗೆ ಸೀಮಂತ ಮಾಡಬೇಕು ಎಂಬ ನಂಬಿಕೆಯಿಂದ ಭೂಮಿ ಹುಣ್ಣಿಮೆ ನಡೆಸುವ ರೂಢಿ ತಲೆತಲಾಂತರದಿಂದ ಬಂದಿದೆ. ಮಲೆನಾಡು, ಕರಾವಳಿ ಈ ಭಾಗಗಳನ್ನು ಕೂಡ ಈ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡುತ್ತಾರೆ ಮತ್ತು ಈಗಾಗಲೇ ಎಲ್ಲಾ ಸಿದ್ಧತೆಗಳು ಕೂಡ ನಡೆಯುತ್ತಾ ಇವೆ. ಅ. 16ರ ಬುಧವಾರ 101 ಬಗೆಯ ಬೆರಕೆ ಸೊಪ್ಪಿನ ಪಲ್ಯವನ್ನು ಮಾಡುತ್ತಾರೆ. ಹಸಿರಾಗಿ ನಿಂತ ಭೂಮಿ ತಾಯಿಗೆ ಹಬ್ಬದ ಆಚರಣೆಯೇ ವಿಶೇಷ ಮಲೆನಾಡಿನ ರೈತಾಪಿ ವರ್ಗದ ಭೂಮಿ ಹುಣ್ಣಿಮೆ ಹಬ್ಬ ತುಂಬಾ ಸಡಗರ.…

Read More

ಟಾಪ್ ನ್ಯೂಸ್ ಕರ್ನಾಟಕ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ – ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಚುನಾವಣೆ – ಭಾರೀ ಮಳೆಗೆ ಬೆಂಗಳೂರು ತತ್ತರ: ರಜೆ ಘೋಷಣೆ NAMMUR EXPRESS NEWS ಬೆಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲೆಗಳು, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಬೆಂಗಳೂರಿನ ಎಲ್ಲಾ ಶಾಲೆ, ಪ್ರಾಥಮಿಕ ಕೇಂದ್ರಗಳು, ಅಂಗನವಾಡಿಗಳಿಗೆ ಅಕ್ಟೋಬರ್ 16ರಂದು ರಜೆ ಘೋಷಿಸಿದ್ದಾರೆ. ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಕೆಲ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಮರು ಪರೀಕ್ಷೆ ನಿಗದಿ ಕಷ್ಟವಾಗಿರುವುದರಿಂದ ಕಾಲೇಜುಗಳಿಗೆ ರಜೆ ಘೋಷಣೆ…

Read More

ಗರ್ತಿಕೆರೆಯ ಹೆಮ್ಮೆಯ ವಿದ್ಯಾರ್ಥಿನಿ ಪೂರ್ವಿ ಕೆ ಆರ್!! * ಚಿತ್ರದುರ್ಗ, ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ * ಯೋಗಾಸನ ಸ್ಪರ್ಧೆ, ಪೂರ್ವಿ ಕೆ ಆರ್ ರಾಜ್ಯಮಟ್ಟಕ್ಕೆ ಆಯ್ಕೆ! NAMMUR EXPRESS NEWS ಗರ್ತಿಕೆರೆ: ಚಿತ್ರದುರ್ಗದಲ್ಲಿ ನಡೆದ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪೂರ್ವಿ ಕೆ ಆರ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಗರ್ತಿಕೆರೆಯ ಕೆಪಿಎಸ್ ಅಮೃತ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಕೆ ಆರ್.ಕಮ್ಮಚ್ಚಿಯ, ದಿ.ರಾಘವೇಂದ್ರ ಮತ್ತು ಲತಾ ದಂಪತಿಗಳ ಪುತ್ರಿಯಾಗಿರುತ್ತಾರೆ.ಕಾವ್ಯ ಅವರ ಮಾರ್ಗದರ್ಶನದಲ್ಲಿ ಯೋಗಾಸನ ತರಬೇತಿ ಪಡೆಯುತ್ತಾರೆ.ಅವರಿಗೆ ಶಾಲಾ ಅಧ್ಯಾಪಕರು ಮತ್ತು ಸಹಶಿಕ್ಷಕರ ವಿಭಾಗದ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

Read More

ಕಾಫಿನಾಡಲ್ಲಿ ಭೂಕುಸಿತ: ಅವೈಜ್ಞಾನಿಕ ಕಾಮಗಾರಿಯೇ ಕಾರಣ! * ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದಿಂದ ಅಧ್ಯಯನ * ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಮಳೆಗಾಲದಲ್ಲಿ ಪ್ರತಿ ಬಾರಿ ಭೂಕುಸಿತ ಉಂಟಾಗಲು ಭಾರಿ ಮಳೆಯೊಂದಿಗೆ ಅವೈಜ್ಞಾನಿಕವಾಗಿ ನಡೆಸಿರುವ ಕಾಮಗಾರಿಗಳೂ ಕಾರಣ ಎಂದು ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿಗೆ ವರದಿ ನೀಡಿದೆ. ಇದರೊಂದಿಗೆ ಭೂ ಕುಸಿತ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹೆಗಳನ್ನೂ ಕೊಟ್ಟಿದೆ. ತಾಲೂಕಿನ ಮುಳ್ಳಯ್ಯನ ಗಿರಿ, ದತ್ತಪೀಠ ರಸ್ತೆ, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕಿನ ಅಲ್ಲಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಧಾರಾಕಾರ ಮಳೆ ಇನ್ನೊಂದು ವಾರ ಮುಂದುವರಿದಿದ್ದಲ್ಲಿ ಕೇರಳದ ವಯನಾಡಿನಲ್ಲಿ ನಡೆದಂಥ ಅವಘಡ ಕಾಫಿನಾಡಿನಲ್ಲಿಯೂ ಸಂಭವಿಸುವ ಅಪಾಯವಿತ್ತು. ಹೀಗಾಗಿ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಜಿಯಾಲಜಿಕಲ್‌ ಸರ್ವೇ ಆಫ್ ಇಂಡಿಯಾದ ತಜ್ಞರ ತಂಡವನ್ನು ಚಿಕ್ಕಮಗಳೂರಿನ ಭೂ ಕುಸಿತ ಪ್ರದೇಶಗಳಿಗೆ ಕಳಿಸಿ ಭೂ…

Read More

ದತ್ತಮಾಲಾ ಅಭಿಯಾನ ಹಿನ್ನೆಲೆ ಪೂರ್ವಭಾವಿ ಸಭೆ! * ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಡಿ ಸಿ ಮೀನಾ ನಾಗರಾಜ್ ಸೂಚನೆ * ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಟೆಯಿಂದ ಆಸ್ಪತ್ರೆ ತೆರೆಯಬೇಕು – ವಿಕ್ರಂ ಆಮಟೆ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ನ.4ರಿಂದ 10ರವರೆಗೆ ಶ್ರೀರಾಮಸೇನೆಯಿಂದ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, ಈ ಅಭಿಯಾನ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ದತ್ತಮಾಲಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ದತ್ತಪೀಠ ದರ್ಶನಕ್ಕೆ ಹೋಗುವ ಸಮಯ ಹಾಗೂ ಬರುವ ಸಮಯ ತಿಳಿಸಲಾಗುವುದು. ಗಿರಿ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಈಗಾಗಲೇ ಮೂಲ ಸೌಲಭ್ಯ ಕಲ್ಪಿಸುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.ಕವಿಕಲ್ ಗಂಡಿ ಹತ್ತಿರ ರಸ್ತೆ ದುರಸ್ತಿಯಲ್ಲಿರುವುದರಿಂದ ಭಾರಿ ವಾಹನಗಳು ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಿನಿ ಬಸ್‌ಗಳ ವ್ಯವಸ್ಥೆ ಮಾಡಲು ಹಾಗೂ ವಾಹನಗಳ ದಟ್ಟಣೆ ಉಂಟಾಗುವುದರಿಂದ ಲಾಂಗ್ ಚಾರ್ಸಿ…

Read More

ಕರಾವಳಿ ನ್ಯೂಸ್ * ನವರಾತ್ರಿ ವೇಷಧಾರಿ ಸುಂದರ ನಾಯ್ಕ ನಿಗೂಢ ನಾಪತ್ತೆ!! * 61ರ ವಿಕಲ ಚೇತನ,ಯುವತಿ ಮೇಲೆ ಅತ್ಯಾಚಾರ ಪ್ರಕರಣ! * ರಬ್ಬರ್‌ ಆ್ಯಸಿಡ್‌ ಸೇವಿಸಿ ವ್ಯಕ್ತಿ ಸಾವು! NAMMUR EXPRESS NEWS ಕೋಟ: 61ರ ಹರೆಯದ ವಿಕಲ ಚೇತನನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅ.12ರಂದು ಘಟನೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಕೋಟ ಪಡುಕೆರೆ ನಿವಾಸಿ, ವಿಕಲ ಚೇತನ ರಮಾನಂದ ಐತಾಳ್‌ (61) ಅತ್ಯಾಚಾರ ಎಸಗಿದ ಆರೋಪಿ. ಯುವತಿಯ ಸಂಬಂಧಿಯಾಗಿರುವ ಆರೋಪಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಅ.12ರಂದು ವಿಜಯ ದಶಮಿ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರಿಕ್ಷಾದಲ್ಲಿ ಮನೆಗೆ ಬಂದಿದ್ದ ರಮಾನಂದ ಸಂತ್ರಸ್ತೆಯಲ್ಲಿ ನೀರು ಕೇಳಿದ್ದು, ನೀರನ್ನು ನೀಡುವ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಆರೋಪಿ ವಿವಾಹಿತನಾಗಿದ್ದು…

Read More