Author: Nammur Express Admin

ಅಬ್ದುಲ್‌ ಕಲಾಂ ದೇಶ ಕಂಡ ಗ್ರೇಟ್ ವ್ಯಕ್ತಿ! – ಜನ್ಮ ದಿನದ ಸವಿ ನೆನಪಿಗಾಗಿ ‘ವಿಶ್ವ ವಿದ್ಯಾರ್ಥಿಗಳ ದಿನ’! – ಭಾರತದ ಕ್ಷಿಪಣಿ ಮನುಷ್ಯ, ಭಾರತ ಕಂಡ ಗ್ರೇಟ್ ಸೈಂಟಿಸ್ಟ್ – ದೇಶದ ಅತಿ ಹೆಚ್ಚು ಜನ ಪ್ರೀತಿಸಿದ ರಾಷ್ಟ್ರಪತಿ NAMMUR EXPRESS NEWS ಬೆಂಗಳೂರು: ಅ.15ರಂದು ವಿಶ್ವ ವಿದ್ಯಾರ್ಥಿಗಳ ದಿನ. ಪ್ರತಿ ವರ್ಷ ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ.ಭಾರತದ ಕ್ಷಿಪಣಿ ಮನುಷ್ಯ, ಭಾರತ ಕಂಡ ಗ್ರೇಟ್ ಸೈಂಟಿಸ್ಟ್ ಮತ್ತು ಶಿಕ್ಷಕರು ಆದ ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ‘ವಿಶ್ವ ವಿದ್ಯಾರ್ಥಿಗಳ ದಿನ’ವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 2010 ರಲ್ಲಿ ವಿಶ್ವಸಂಸ್ಥೆಯು (ಯುಎನ್‌ಒ) ಅಕ್ಟೋಬ‌ರ್ 15 ರಂದು ‘ವಿಶ್ವ ವಿದ್ಯಾರ್ಥಿಗಳ ದಿನ’ ಎಂದು ಘೋಷಿಸಿತು. ಈ ಮೂಲಕ ಅವರು ಶಿಕ್ಷಣವನ್ನು ಉತ್ತೇಜಿಸಲು ಪ್ರಾಮಾಣಿಕ ಪ್ರಯತ್ನವನ್ನು ಸಹ ನೆನೆಯುವುದು ಇದರ ಉದ್ದೇಶವು ಆಗಿದೆ. ಸಮಾಜ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ.…

Read More

ದಸರಾ ಬಳಿಕ ದೀಪಾವಳಿ ಸಂಭ್ರಮಕ್ಕೆ ಜನತೆ ಸಜ್ಜು! – ಒಂದೇ ತಿಂಗಳಲ್ಲಿ ಎರಡು ಹಬ್ಬ: ಜನತೆಗೆ ಹಬ್ಬದ ಸಂಭ್ರಮ – ಅ.31ಕ್ಕೆ ನರಕ ಚತುರ್ದಶಿ, ನ.2ಕ್ಕೆ ಬಲಿಪಾಡ್ಯಮಿ – ಸತತ ನಾಲ್ಕು ದಿನಗಳ ಕಾಲ ರಜೆ ಮತ್ತೆ ಊರಿಗೆ ಜನ! NAMMUR EXPRESS NEWS ಬೆಂಗಳೂರು: ದಸರಾ ಸಂಭ್ರಮದ ಬಳಿಕ ಇದೀಗ ದೀಪಾವಳಿ ಸಂಭ್ರಮಕ್ಕೆ ಮತ್ತು ಸಡಗರದ ಹಬ್ಬ ಆಚರಣೆಗೆ ಜನತೆ ಸಿದ್ಧವಾಗುತ್ತಿದ್ದಾರೆ. ಈಗಾಗಲೇ ದಸರಾ ಕೂಡ ಸರಣಿ ರಜೆ ಇದ್ದ ಕಾರಣ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಜನ ಊರಿಗೆ ಬಂದಿದ್ದರು, ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಮಯವನ್ನು ಕಳೆದು ಸಂಭ್ರಮದಿಂದ ಆಚರಿಸಿದ್ದರು. ಇದೀಗ ದೀಪಾವಳಿ ಹಬ್ಬದ ಸಂಭ್ರಮ ಕೂಡ ಮತ್ತಷ್ಟು ಅವರಿಗೆ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಸೇರಿ ಹಬ್ಬವನ್ನ ಆಚರಿಸಲು ಸಹಕಾರಿಯಾಗಿದೆ. ಕಾರಣ ಅ.31 ಗುರುವಾರ ರಜೆ ಇದೆ, ನ.1 ಕನ್ನಡ ರಾಜ್ಯೋತ್ಸವ, ಶನಿವಾರ ಕೂಡ ಬಲಿಪಾಡ್ಯಮಿ ಇದ್ದು, ನ. 3 ಭಾನುವಾರ…

Read More

ಉದುರುತ್ತಿರುವ ಅಡಿಕೆ: ಮಲೆನಾಡಿನ ರೈತರ ಗೋಳು! – ಹವಾಮಾನದ ವೈಪರಿತ್ಯದಿಂದ ಅಡಿಕೆ ಪಸಲು ಭಾರಿ ಕುಂಠಿತ – ಅಡಿಕೆ ಮರದ ಬುಡದಲ್ಲಿ ಅಡಿಕೆ: ಹೀಗಾದರೆ ರೈತರ ಕಥೆ ಏನು? NAMMUR EXPRESS NEWS ಶಿವಮೊಗ್ಗ/ ಚಿಕ್ಕಮಗಳೂರು : ಮಲೆನಾಡಿನಲ್ಲಿ ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬದುಕು ಇದೀಗ ಆತಂಕಕ್ಕೆ ತಲುಪಿದೆ. ಒಂದು ಕಡೆ ಎಲೆ ಚುಕ್ಕಿ ರೋಗ, ಇತರೆ ಕೊಳೆ ರೋಗದಿಂದ ಕಂಗೆಟ್ಟಿರುವ ರೈತರು, ಇದೀಗ ತಮ್ಮ ಬದುಕಿನ ಪ್ರತಿರೂಪವಾಗಿರುವ ಅಡಿಕೆ ಬೆಳೆ, ಅಡಿಕೆ ಕಾಯಿಗಳು ಮರದಿಂದ ಉದುರುತ್ತಿದೆ. ಕೆ ಜಿ ಗಟ್ಟಲೆ ಕಾಯಿಗಳು ಮರದ ಬುಡದಲ್ಲಿ ಕೊಳೆತು ಬೀಳುತ್ತಿದೆ. ಇದರಿಂದ ರೈತರು ಏನು ಮಾಡಲಾಗದಂತಹ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ಒಂದು ತಿಂಗಳಿಂದ ಮಳೆ ಮತ್ತಷ್ಟು ಹೆಚ್ಚಾಗಿರುವುದು ಅಡಿಕೆ ತೋಟದಲ್ಲಿ ಶೀತದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಅಡಿಕೆ ಫಸಲು ಬರುವ ಹಂತದಲ್ಲಿದ್ದು ಅಂತಹ ಅಡಿಕೆಗಳು ಈಗ ಉದುರುತ್ತಿವೆ. ಅಡಿಕೆಗಳು ಅತಿ ಬೇಗ ಬಂದಂತೆ ಬಾಸವಾಗುತ್ತಿದೆ. ಇನ್ನೂ ಅಡಿಕೆ ಹಣ್ಣಾದಂತೆ ಕಂಡರೂ ಕೂಡ…

Read More

ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಮಳೆ! * ಮಳೆ ಕಾರಣ ರೋಸಿ ಹೋದ ಜನತೆ * ಬೆಳ್ತಂಗಡಿಯಲ್ಲಿ ಧರೆ ಕುಸಿತ: ಹಲವೆಡೆ ಹಾನಿ * ದ.ಕ., ಉಡುಪಿ: ಭಾರೀ ಮಳೆ ಸಾಧ್ಯತೆ? NAMMUR EXPRESS NEWS ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮಳೆ ಅಬ್ಬರ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು,ಮಂಗಳೂರು ನಗರ, ಬೆಳ್ತಂಗಡಿ, ಸುಳ್ಯ ತಾಲೂಕಿನ ಹಲವೆಡೆ ಮಳೆಯಾಗಿದೆ. ಕರಾವಳಿಗೆ ಎರಡು ದಿನ ಎಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಸದ್ಯದ ಪ್ರಕಾರ ಗುರುವಾರದವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಪ್ರದೇಶ ಪಶ್ಚಿಮ, ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಇದು ಒಮಾನ್‌ ತೀರದತ್ತ ಸಾಗಿ ಬಲ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಳಿಸಿದೆ.ಸಮುದ್ರ ತೀರ ಪ್ರದೇಶದಲ್ಲಿ 35-45 ಕಿ.ಮೀ. ವೇಗದಲ್ಲಿ, ಕೆಲವೊಮ್ಮೆ 55 ಕಿ.ಮೀ. ವೇಗದಲ್ಲಿ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಹನುಮನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ದೊಡ್ಡ ಲಾಭವನ್ನು ತಂದುಕೊಡುತ್ತವೆ. ಬಾಕಿ ಉಳಿದಿರುವ ಹಳೆಯ ಕೆಲಸಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭ ಉಂಟಾಗಬಹುದು. ಸಾಲಗಳು ತೀರಬಹುದು. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ನಿಮ್ಮ ಮೇಲೆ ಅಪವಾದಗಳನ್ನು ಹೇರಬಹುದು, ಬುದ್ಧಿವಂತಿಕೆಯಿಂದ ಮುಂದುವರಿಯಿರಿ. ಕೆಲಸ ಜಾಸ್ತಿ ಇರುತ್ತದೆ. ** ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ಆಸ್ತಿ ವ್ಯವಹಾರ ಇತ್ಯಾದಿಗಳಿಂದ ಲಾಭವಾಗಲಿದೆ. ಇದು ಯಶಸ್ಸಿನ ದಿನ, ನೀವು ಬಯಸುವ ಯಾವುದೇ ಕೆಲಸವು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯಿಂದ ನೀವು ಲಾಭ ಪಡೆಯುತ್ತೀರಿ. ದಿನನಿತ್ಯದ ಕಾರ್ಯಗಳು ಪ್ರಯೋಜನಕಾರಿಯಾಗಲಿವೆ. ಆದರೆ ಮನಸ್ಸಿನಲ್ಲಿ…

Read More

ರಾಮೇಶ್ವರ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ – ತೀರ್ಥಹಳ್ಳಿ ರೋಟರಿ ಕ್ಲಬ್ ಮಾನವೀಯ ಸೇವೆಗೆ ಮೆಚ್ಚುಗೆ – ಕೋಣಂದೂರು: ಗ್ರೀನ್ ಹಾರ್ಟ್ ಕೆಫೆಯಲ್ಲಿ ಗಿಡಗಳಿಗೆ ಕಸಿ ಮಾಡುವ ಪ್ರಾತ್ಯಕ್ಷಿಕೆ! NAMMUR EXPRESS NEWS ತೀರ್ಥಹಳ್ಳಿ: ಎಲ್ಲಾ ಕಾಲದಲ್ಲೂ ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುವಂತಾಗಬೇಕು ಅದು ಇಂದಿನ ಅಗತ್ಯ ಕೂಡ ಹೌದು ಎಂದು ಡಾ. ಜೀವೇಂದರ್ ಜೈನ್ ಹೇಳಿದ್ದಾರೆ. ಶ್ರೀರಾಮೇಶ್ವರ ದೇವಸ್ಥಾನ ತೀರ್ಥಹಳ್ಳಿ ಇಲ್ಲಿ ರೋಟರಿ ಕ್ಲಬ್,ತೀರ್ಥಹಳ್ಳಿ ನೀಡಿದ ಎರಡು ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಹಲವಾರು ಶಾಲೆಗಳಿಗೆ ಮಕ್ಕಳಿಗೋಸ್ಕರ ಕುಡಿಯುವ ನೀರಿನ ಘಟಕವನ್ನು ತೀರ್ಥಹಳ್ಳಿ ರೋಟರಿ ಕ್ಲಬ್ ವಿತರಿಸಿದೆ ಹಾಗೂ ಇದರ ಜೊತೆಯಲ್ಲಿ ಪ್ರತಿನಿತ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ನಿತ್ಯ ಅನ್ನ ದಾಸೋಹದ ಛತ್ರಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸಿರುವುದು ತುಂಬಾ ಸತ್ಕಾರ್ಯವಾಗಿದೆ ಎಂದು ತಿಳಿಸಿದರು. ರೊ. ಅನಿಲ್ ಕುಮಾರ್, ಅಧ್ಯಕ್ಷರು ರೋಟರಿ ಕ್ಲಬ್ ,ತೀರ್ಥಹಳ್ಳಿ ಇವರು ಮಾತನಾಡಿ ರೋಟರಿ ಕ್ಲಬ್ಬಿನ ಹಲವು ಸಮಾಜಮುಖಿ…

Read More

ತೀರ್ಥಹಳ್ಳಿಯಲ್ಲಿ ಅದ್ದೂರಿ ದಸರಾಕ್ಕೆ ತೆರೆ! – ತೀರ್ಥಹಳ್ಳಿ ಪಟ್ಟಣದಲ್ಲಿ ಸಾವಿರಾರು ಜನರಿಂದ ಮೆರವಣಿಗೆ ವೀಕ್ಷಣೆ – ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ – ಸಂಜೆ ಅರೆಹೊಳೆ ಪ್ರತಿಷ್ಠಾನದ ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗು – ಕರಾವಳಿ ಹುಡುಗಿಯರ ಹುಲಿ ನೃತ್ಯ ಝಲಕ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮದೊಂದಿಗೆ 9 ದಿನಗಳ ಕಾಲ ನೆರವೇರಿತು. ರಾಮೇಶ್ವರ ದೇವಾಲಯದಿಂದ ಚಾಮುಂಡೇಶ್ವರಿ ದೇವಿಯನ್ನು ಅಲಂಕಾರ ಮಾಡಿ ಪೂಜೆ ಮಾಡಿ ಮೆರವಣಿಗೆ ಮೂಲಕ ಪಟ್ಟಣದಲ್ಲಿ ರಾಜ ಬೀದಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವರ ಅಂಬಾರಿಯೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ಕುಶಾವತಿಗೆ ತರಲಾಯಿತು. ತೀರ್ಥಹಳ್ಳಿ ಪಟ್ಟಣದ ಸುತ್ತ ಸಾವಿರಾರು ಜನ ಭಾಗಿಯಾಗಿದರು. ಸ್ತಬ್ದ ಚಿತ್ರಗಳ ಮೆರವಣಿಗೆ, ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು. 8 ಟ್ಯಾಬ್ಲೋಗಳ ಪ್ರದರ್ಶನ ಗಮನ ಸೆಳೆದಿತ್ತು. ಒಂದರಕ್ಕಿಂತ ಒಂದು ಚೆನ್ನಾಗಿದ್ದವು. ಶಾಸಕ ಆರಗ ಜ್ಞಾನೇಂದ್ರ, ಸಹಕಾರ ನಾಯಕ ಮಂಜುನಾಥ್ ಗೌಡ, ಪಪಂ ಅಧ್ಯಕ್ಷರಾದ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ದಸರಾ ಸಮಿತಿ ಸಂಚಾಲಕ…

Read More

ರಾಷ್ಟ್ರ ಮಟ್ಟದ ಚೆಸ್ ಪಂದ್ಯಕ್ಕೆ ತೀರ್ಥಹಳ್ಳಿ ಹುಡುಗಿ ಪಾವನಿ! – ರಾಜ್ಯ ಮಟ್ಟಕ್ಕೆ ಗುಡ್ಡೇಕೇರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಶಾಹಿಫಾ! – ಸೇವಾ ಭಾರತಿ ಶಾಲೆ ವಿದ್ಯಾರ್ಥಿನಿ ಸಾನ್ವಿ ಎಸ್.ಕಾಂಚನ್ ರಾಜ್ಯಮಟ್ಟಕ್ಕೆ NAMMUR EXPRESS NEWS ತೀರ್ಥಹಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಾವೇರಿಯಲ್ಲಿ ನಡೆಸಿದ U- 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿಯಲ್ಲಿ ತೀರ್ಥಹಳ್ಳಿ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿನಿ ಪಾವನಿ ಆರ್ 9 ಪಂದ್ಯಗಳಲ್ಲಿ 8 ಅಂಕಗಳನ್ನು(2 ಡ್ರಾ) ಗಳಿಸಿ ಪ್ರಥಮವಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಈ ವಿದ್ಯಾರ್ಥಿಯು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳು ಕಶ್ಚಿ ಚೆಸ್ ಸ್ಕೂಲ್ (ಕುಂದಾಪುರ) ದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾಳೆ. ಸಾಧಕ ವಿದ್ಯಾರ್ಥಿಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ. ರಾಜ್ಯ ಮಟ್ಟಕ್ಕೆ ಗುಡ್ಡೇಕೇರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಶಾಹಿಫಾ! ಶಿವಮೊಗ್ಗ…

Read More

ಬಸ್ಸು ಚಾಲನೆಯಲ್ಲಿ ಚಾಲಕನಿಗೆ ಎದೆ ನೋವು; ಹೃದಯಾಘಾತಕ್ಕೆ ಯುವಕ ಬಲಿ! – ಕುಂದಾಪುರ: ಚಹಾ ಮಾಡುತ್ತಿದ್ದ ವೇಳೆ ಗ್ಯಾಸ್ ಒಲೆ ಬೆಂಕಿ ತಗುಲಿ ಸಾವು! – ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರು ತೋಟಕ್ಕೆ: ಸಾವು – ಮೂರ್ಛೆ ರೋಗ: ಶಾಲಾ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ! NAMMUR EXPRESS NEWS ಸುಳ್ಯ: ಸುಳ್ಯದ ಅರಂತೋಡು ತೋಡಿಕಾನ ಬಳಿ ಖಾಸಗಿ ಬಸ್ಸಿನ ಚಾಲಕರೊಬ್ಬರಿಗೆ ಬಸ್ಸು ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸೋಮವಾರ ಮುಂಜಾನೆ ಕರ್ತವ್ಯ ನಿರತರಾಗಿದ್ದ ವೇಳೆ ಗುರುಪ್ರಸಾದ್‌ ಕುಂಚಡ್ಕ (30) ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವಾಗ ಅರಂಬೂರು ಬಳಿ ಆಟೊ ರಿಕ್ಷಾದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಚಹಾ ಮಾಡುತ್ತಿದ್ದ ವೇಳೆ ಗ್ಯಾಸ್ ಒಲೆ ಬೆಂಕಿ ತಗುಲಿ ಸಾವು! ಗಂಗೊಳ್ಳಿ: ಚಹಾ ಮಾಡುತ್ತಿದ್ದ ವೇಳೆ ಗ್ಯಾಸ್ ಒಲೆಯ ಬೆಂಕಿ ಧರಿಸಿದ್ದ ಬಟ್ಟೆಗೆ ತಗಲಿ ಗಂಭೀರ ಗಾಯಗೊಂಡು ಗುಜ್ಜಾಡಿ ಸಮೀಪದ…

Read More

ಅಡಿಕೆ ದರ ಎಷ್ಟಿದೆ? – ಅಡಿಕೆ ದರ ಏರಿಕೆಯೋ? ಇಳಿಕೆಯೋ? NAMMUR EXPRESS NEWS ಸರಕು 54100-83986 ಬೆಟ್ಟೆ 45769-53200-54100 ರಾಶಿ 43009-47950-49399 ಗೊರಬಲು 18000-31700-32690 ಹೊಸ ರಾಶಿ 43399-46589-47259

Read More