ತೀರ್ಥಹಳ್ಳಿಗೆ ಕನ್ನಡ ರಥ: ಗಣ್ಯರ ಸ್ವಾಗತ! – ಕರ್ನಾಟಕ ಹೆಸರು ನಾಮಕರಣಕ್ಕೆ 50 ವರ್ಷದ ಸಂಭ್ರಮ ತೀರ್ಥಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಗುದ್ದಲಿ ಪೂಜೆ – ಶೀಘ್ರದಲ್ಲಿ ಶುರುವಾಗುತ್ತೆ ಇಂದಿರಾ ಕ್ಯಾಂಟೀನ್: ಕಡಿಮೆ ದರದಲ್ಲಿ ಊಟ, ತಿಂಡಿ NAMMUR EXPRESS NEWS ತೀರ್ಥಹಳ್ಳಿ: ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ಕಳೆದ ಹಿನ್ನಲೆಯಲ್ಲಿ ಕಳೆದ ವರ್ಷ ಹೊರಟ ಕನ್ನಡದ ರಥ ಭಾನುವಾರ ಹೊಸನಗರ ತಾಲ್ಲೂಕಿನಿಂದ ತೀರ್ಥಹಳ್ಳಿ ಪಟ್ಟಣ ತಲುಪಿತು. ಈ ಸಂದರ್ಭದಲ್ಲಿ ಶಾಸಕ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಕನ್ನಡದ ರಥವನ್ನು ಬರಮಾಡಿಕೊಂಡರು ನಂತರ ತೀರ್ಥಹಳ್ಳಿ, ಪಟ್ಟಣದಲ್ಲಿ ಮೆರವಣಿಗೆ ನಡೆಸಿ ನಂತರ ಕನ್ನಡದ ರಥವನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಾಲೂಕಿನ ಮುಖ್ಯ ದಂಡಾಧಿಕಾರಿ ಜಕ್ಕಣ್ಣ ಗೌಡರ್, ಶಾಸಕ ಅರಗ ಜ್ಞಾನೇಂದ್ರ, ತೀರ್ಥಳ್ಳಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ, ಕೆ. ರಮೇಶ್ ಶೆಟ್ಟಿ, ಸಂದೇಶ್ ಜವಳಿ, ಧರ್ಮಣ್ಣ, ನಾಗೇಶ್ ಮೇಳಿಗೆ, ಪ್ರಸನ್ನ ತಿರಳೆಬೈಲು, ರವೀಶ್ ಬಾಬಿ ಹಾಗೂ ವಿವಿಧ ಸಂಘ ಸಂಸ್ಥೆಯ…
Author: Nammur Express Admin
ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲದಲ್ಲಿ ದಸರಾಕ್ಕೆ ತೆರೆ! – ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿದ ಶಾರದೆಯ ಜಲಸ್ತಂಭನದ ವಿವಿಧ ಫೋಟೋಗಳು
ರಾಜ್ಯದ ಅಪರೂಪದ ನಾಯಕ ಮಂಜುನಾಥ ಭಂಡಾರಿ! – ಶಿಕ್ಷಣ ತಜ್ಞರಾಗಿ, ಉದ್ಯಮಿಯಾಗಿ, ಜನಪರ ನಾಯಕರಾಗಿ ಸೇವೆ – ರಾಜ್ಯ ಕಾಂಗ್ರೆಸ್ ಮುಂಚೂಣಿ ನಾಯಕನಿಗೆ ಜನ್ಮ ದಿನದ ಶುಭಾಶಯಗಳು NAMMUR EXPRESS NEWS ದೂರದೃಷ್ಟಿಯುಳ್ಳ ರಾಜಕಾರಣಿ ಮತ್ತು ಶಿಕ್ಷಣ ತಜ್ಞರಾಗಿ, ಉದ್ಯಮಿಯಾಗಿ ತಮ್ಮ ಕ್ರಿಯಾಶೀಲ ನಾಯಕತ್ವದಿಂದ ಶಿಕ್ಷಣದ ಮೂಲಕ ಹೆಚ್ಚು ಸಾಮಾಜಿಕ ಸುಧಾರಣೆಗಳನ್ನು ತಂದ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರು ಮತ್ತು ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ಅವರದ್ದು ಇತರರಿಗೂ ಸ್ಪೂರ್ತಿಯಾಗುವ ವ್ಯಕ್ತಿತ್ವ. ಅವರಿಗೆ ಜನ್ಮ ದಿನದ ಸಂಭ್ರಮ. ಲಕ್ಷ ಲಕ್ಷ ಜನ ಅಭಿಮಾನಿಗಳನ್ನು ಹೊಂದಿರುವ ಮಂಜುನಾಥ ಭಂಡಾರಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮಂಜುನಾಥ್ ಭಂಡಾರಿ ಅವರು ರಾಜ್ಯ ಶಾಸ್ತ್ರದಲ್ಲಿ ಎಂ.ಎ ಮತ್ತು ಎಂ. ಫಿಲ್ ಜೊತೆಗೆ ಬಿಇ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಪದವಿ ಪಡೆಯುವುದರೊಂದಿಗೆ ವೈವಿಧ್ಯಮಯ ಶೈಕ್ಷಣಿಕ ಅರ್ಹತೆಗಳನ್ನು ಸಾಧಿಸಿದ ಅಪರೂಪದ ಸಾಧಕರಾಗಿದ್ದಾರೆ. 2013ರಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದಿಂದ “ಪಂಚಾಯತ್ ರಾಜ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆ – ಕರ್ನಾಟಕ ರಾಜ್ಯ ಶಿವಮೊಗ್ಗ…
ಎಚ್ಚರ… ಎಚ್ಚರ: 5 ದಿನ ಭಾರೀ ಮಳೆ! – ಹವಾಮಾನ ಇಲಾಖೆಯಿಂದ ಯಲ್ಲೋ ಅಲರ್ಟ್ – ಬೆಂಗಳೂರು, ಕರಾವಳಿ, ಮಲೆನಾಡು ಸೇರಿ ಎಲ್ಲೆಡೆ ಮಳೆ NAMMUR EXPRESS NEWS ಬೆಂಗಳೂರು: ಅಯ್ಯೋ ಮಳೆ ಮಳೆ. ಎಲ್ಲೆಡೆ ಮಳೆ ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಎಲ್ಲೆಡೆ ಮಳೆ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ ಇದ್ದರೆ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ ಹೆಚ್ಚಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಕಳೆದ 15 ದಿನದಿಂದ ಭಾರೀ ಮಳೆಯಾಗುತ್ತಿದೆ. ನೈಋತ್ಯ ಮುಂಗಾರು ಇನ್ನೆರಡು ದಿನಗಳಲ್ಲಿ ಕರ್ನಾಟಕದಿಂದ ಹಿಂದೆ ಸರಿಯಲಿದ್ದು, ದಕ್ಷಿಣ ಒಳ ಕರ್ನಾಟಕದಲ್ಲಿ ಈಶಾನ್ಯ ಮುಂಗಾರು ಆರಂಭಕ್ಕೆ ಅನುಕೂಲಕರ ವಾತಾವರಣವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಶಾನ್ಯ ಮುಂಗಾರು ಪ್ರಾರಂಭವಾಗುವುದರೊಂದಿಗೆ, ಅಕ್ಟೋಬರ್ 16 ಮತ್ತು 17ರಂದು ದಕ್ಷಿಣ ಕರ್ನಾಟಕದ ಒಳನಾಡಿನ ಒಂಬತ್ತು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಜೊತೆಗೆ, ವ್ಯಾಪಕವಾದ ಭಾರೀ ಮಳೆಯ…
ಕಾಫಿ ನಾಡಲ್ಲಿ ಪ್ರತಿಷ್ಠಾಪಿಸಿದ ದುರ್ಗಾದೇವಿ ಜಲಸ್ತಂಭನ – ಜಗತ್ಪ್ರಸಿದ್ಧ ಶೃಂಗೇರಿ ಶರನ್ನವರಾತ್ರಿ,ಹೊರನಾಡು,ಬಾಳೆಹೊನ್ನೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದಸರಾ ಸಂಭ್ರಮ – ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಾಳೆಹೊನ್ನೂರಿನಲ್ಲಿ ಭದ್ರಾರತಿ, ಶೃಂಗೇರಿ ಉತ್ಸವದಲ್ಲಿ ಕಣ್ಮನಸೆಳೆದ ಸ್ಥಬ್ಥ ಚಿತ್ರಗಳು NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ದಸರಾ ಅದ್ದೂರಿಯಾಗಿ ತೆರೆಕಂಡಿದೆ. ಶೃಂಗೇರಿ,ಹೊರನಾಡು,ಚಿಕ್ಕಮಗಳೂರಿನ ವಿವಿಧ ದೇವಾಲಯಗಳು ಸೇರಿದಂತೆ ಎಲ್ಲಾ ತಾಲೂಕಿನಲ್ಲಿ ಪ್ರತಿಷ್ಠಾಪಿಸಿದ ದುರ್ಗಾದೇವಿಯ ಜಲಸ್ತಂಭನ ಹಾಗೂ ರಥೋತ್ಸವ ನಡೆಯಿತು. ಬೀಕನಹಳ್ಳಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ..!! ಚಿಕ್ಕಮಗಳೂರು: ಬೀಕನಹಳ್ಳಿ ದಸರಾ ಮಹೋತ್ಸವ ಪ್ರಯುಕ್ತ ಶನಿವಾರ ರಾತ್ರಿ ದೀಪಾಲಂಕಾರದಿಂದ ಗ್ರಾಮ ಕಂಗೊಳಿಸುತ್ತಿತ್ತು. ಚಿಕ್ಕಮಕ್ಕಳು ಆರತಿ ತಟ್ಟೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು, ಯುವಜನರು ಹಾಗೂ ಗ್ರಾಮಸ್ಥರು ಡಿಜೆ ಹಾಡಿಗೆ ಕುಣಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೀಕನಹಳ್ಳಿಯಲ್ಲಿ ಶನಿವಾರ ರಾತ್ರಿ ದಸರಾ ಮೆರವಣಿಗೆಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು,ಎಂಎಲ್‌ಸಿ ಸಿ.ಟಿ ರವಿ,ಗಾಯತ್ರಿ ಶಾಂತೇಗೌಡ,ದೇವಸ್ಥಾನ ಸಮಿತಿಯ ಹೆಚ್.ಪಿ ಮಂಜೇಗೌಡ ಇತರರು ಉಪಸ್ಥಿತರಿದ್ದರು.ತಾಯಿ ಚಾಮುಂಡೇಶ್ವರಿಯ ಮೆರವಣಿಗೆ ಬನ್ನಿಮಂಟಪದವರೆಗೆ ಸಾಗಿ ನಂತರ ಅಲ್ಲಿ ಅಂಬು ಹೊಡೆಯಲಾಯಿತು. ವಿಯಪುರದಲ್ಲಿ…
ಕರಾವಳಿ ನ್ಯೂಸ್ – ನಿಯಂತ್ರಣ ತಪ್ಪಿ ಉರುಳಿದ ಕಾರ್, ಮಹಿಳೆ ಸಾವು! – ಭಾರಿ ಮಳೆ,ರಸ್ತೆ ಹಾಗೂ ಮನೆಯ ಹಿಂಭಾಗ ಗುಡ್ಡ ಕುಸಿತ! – ಬಸ್ ಚಾಲನೆ ವೇಳೆ, ಎದೆ ನೋವು ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು! – ಸ್ಕೂಲ್ ಬಸ್ ಚಾಲನೆ ವೇಳೆ ಮೂರ್ಚೆ ರೋಗ,ವಿದ್ಯುತ್ ಕಂಬಕ್ಕೆ ಡಿಕ್ಕಿ! NAMMUR EXPRESS NEWS ಪುಂಜಾಲಕಟ್ಟೆ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಹೆದ್ದಾರಿ ಬದಿಯ ತೋಟವೊಂದಕ್ಕೆ ಬಿದ್ದ ಘಟನೆ ಬಿ.ಸಿ.ರೋಡು-ಬೆಳ್ತಂಗಡಿ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ. ಅ. 14ರಂದು ಮುಂಜಾನೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಕೊಡಿಯಾಲ್‌ಬೈಲ್ ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆಯಾಗಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ರೂಪೇಶ್ (40) ಎಂಬವರಿಗೆ ಗಂಭೀರ ಗಾಯಗಳಾಗಿವೆ. ರೂಪೇಶ್ ಅವರ ಪತ್ನಿ ಸುಚಿತ್ರಾ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೂಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದ ಕಾರು ಮುಂಜಾನೆ ಸುಮಾರು 4.30ರ ಸುಮಾರಿಗೆ ಬಾಂಬಿಲ ಮಸೀದಿ…
ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ ಸುದೀಪ್? * ಅಭಿನಯ ಚಕ್ರವರ್ತಿಗೆ ಬಿಗ್ ಬಾಸ್ ನಿಂದ ಅವಮಾನ! * ಯಾವ ಕಾರಣಕ್ಕೆ ಹೊರ ಬಂದರು ಕಿಚ್ಚ? NAMMUR EXPRESS NEWS ಬೆಂಗಳೂರು:ಕೆಲವರ ಆಟಕ್ಕೆ ಕಿಚ್ಚ ಸುದೀಪ್ ಬಿಗ್‌ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ” ಎಂದು ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ಕಿಡಿಕಾರಿದ್ದಾರೆ. ರೂಪೇಶ್ ರಾಜಣ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರೂಪೇಶ್ ರಾಜಣ್ಣ.. ಕೆಲವರ ಆಟಕ್ಕೆ ಕಿಚ್ಚ ಸುದೀಪ್ ಬಿಗ್‌ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್‌ಬಾಸ್ ಬಿಡಿ, ಇಲ್ಲ ಬಿಗ್‌ಬಾಸ್ ನಿಲ್ಲಬೇಕು. ಅಸಲಿ ವಿಷಯ ಮಾತಾಡ್ತೀನಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇತ್ತ ಅಭಿನಯ ಚಕ್ರವರ್ತಿ, ಬಾದ್‌ಶಾ ಕಿಚ್ಚ ಸುದೀಪ್ ಕರ್ನಾಟಕದ ಜನತೆಗೆ ಅದರಲ್ಲೂ ಬಿಗ್‌ಬಾಸ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಕರ್ನಾಟಕದ ಜನತೆಗೆ…
ಟಾಪ್ ನ್ಯೂಸ್ ಮಲ್ನಾಡ್ – ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರಿದ್ದ ವಾಹನ ಪಲ್ಟಿ – ಶಿವಮೊಗ್ಗ : ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಹೊರಟಿದ್ದ ಯುವಕ ಅಪಘಾತದಲ್ಲಿ ಸಾವು – ಭದ್ರಾವತಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ – ಕೊಪ್ಪ: ಬಾಳೆ ಕಂಬದ ಮೇಲೆ ತೆಂಗಿನ ಕಾಯಿ ಒಡೆಯುವ ವೇಳೆ ಸಿಡಿದ ಗುಂಡು ಆರು ಜನರಿಗೆ ಗಾಯ NAMMUR EXPRESS NEWS ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರಿದ್ದ ಟಿಟಿ ವಾಹನ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಆಗಮಿಸಿದ್ದ ಪ್ರವಾಸಿಗರು, ಹೊರನಾಡಿನಿಂದ ಬೆಂಗಳೂರಿಗೆ ವಾಪಸ್ ತೆರಳುವಾಗ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆಖಾನ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದೆ. ಪರಿಣಾಮ ಟಿಟಿ ವಾಹನದಲ್ಲಿದ್ದ 6 ಜನರಿಗೆ ಗಂಭೀರ ಗಾಯವಾಗಿದ್ದು, ಕಳಸ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ…
ಸಾಲಗಾರರಿಗೆ ಬಿಗ್ ರಿಲೀಫ್..! – ಲೋನ್ “EMI” ಕಟ್ಟುವವರಿಗೆ RBI ಹೊಸ ರೂಲ್ಸ್ ಜಾರಿ – ಹೊಸ ನಿಯಮದಿಂದ ಗ್ರಾಹಕರಿಗೆ ಪರಿಹಾರ NAMMUR EXPRESS NEWS ಸಾಲಗಾರರ ದಂಡದ ಶುಲ್ಕಗಳು ಮತ್ತು ದಂಡದ ಬಡ್ಡಿಗೆ ಸ೦ಬ೦ಧಿಸಿದಂತೆ ಆರ್.ಬಿ.ಐ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು. ಈ ಹೊಸ ನಿಯಮಗಳು ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳು ಸಾಲಗಾರರಿಂದ ಹೆಚ್ಚುವರಿ ಶುಲ್ಕ ಪಡೆಯುವುದನ್ನು ತಡೆಯುತ್ತವೆ. ಹೊಸ ನಿರ್ದೇಶನಗಳ ಪ್ರಕಾರ, ಆರ್‌ಬಿಐ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ದಂಡದ ಬಡ್ಡಿಯನ್ನು ವಿಧಿಸುವುದನ್ನು ನಿಲ್ಲಿಸಿದೆ, ಸಾಮಾನ್ಯವಾಗಿ ತಡವಾಗಿ ಇಎಂಐ ಪಾವತಿಗಳಿಗೆ ಗ್ರಾಹಕರಿಗೆ ವಿಧಿಸಲಾಗುತ್ತದೆ. ಅವರು ಬಡ್ಡಿ ದರಕ್ಕೆ ಹೆಚ್ಚುವರಿ ಶುಲ್ಕಗಳನ್ನು ಸೇರಿಸಲು ಸಾಧ್ಯವಿಲ್ಲ. ಹಾಗೆಯೇ ಇದೀಗ ಈ ಬ್ಯಾಂಕ್ ಹೊಸ ನಿಯಮವನ್ನು ವಿನ್ಯಾಸಗೊಳಿಸುವುದರ ಮೂಲಕ ತನ್ನ ಗ್ರಾಹಕರಿಗೆ ರಿಲೀಫ್ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಕೇಂದ್ರ ಬ್ಯಾಂಕ್ ಆಗಿದ್ದು, ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವುದು ಮತ್ತು ಆಡಳಿತ ಮಾಡುವುದು ಇದರ ಪ್ರಾಥಮಿಕ ಕಾರ್ಯವಾಗಿದೆ. ಇದು ಭಾರತೀಯ ರಿಸರ್ವ್…
ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆ – ದಶಕಗಳ ಕನಸು ಇದೀಗ ನನಸು – ಭಾರತೀಯ ರೈಲ್ವೆ ಇಲಾಖೆ ತಿರುಪತಿಗೆ ನೇರ ರೈಲು ಸೇವೆ ಆರಂಭಿಸಲು ಒಪ್ಪಿಗೆ NAMMUR EXPRESS NEWS ಕುಂದಾಪುರ: ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆಗೆ ಭಾರತೀಯ ರೈಲ್ವೆ ಸಮ್ಮತಿ ಸೂಚಿಸಿದೆ. ತಿರುಪತಿ ಮತ್ತು ಉಡುಪಿ-ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಉಡುಪಿ ಸಂಸದರ ಅವಿರತ ಪ್ರಯತ್ನದಿಂದ ನನಸಾಗಿದ್ದು, ಹೈದರಾಬಾದ್ ಮಹಾನಗರಿಯ ಜತೆಯೂ ಈ ಮೂಲಕ ರೈಲು ಸೇವೆ ಆರಂಭವಾಗಿದೆ. ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತಿದ್ದ ಕಾಚಿಗುಡ-ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ. ಮುರುಡೇಶ್ವರದ ಮೂಲಕ ಕುಂದಾಪುರ, ಉಡುಪಿ, ಸುರತ್ಕಲ್, ಮೂಲ್ಕಿ ನಗರಗಳು, ಕೊಯಂಬತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್…