ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾದೇವನ ಕೃಪೆಯಿಂದ ಯಾವ ರಾಶಿಯವರಿಗೆ ಅನುಕೂಲ ? ಯಾವ ರಾಶಿಯವರಿಗೆ ಅನಾನುಕೂಲ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಆದರೆ ಮನಸ್ಸು ವಿಚಲಿತವಾಗಬಹುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಜೀವನ ಜೀವನವು ಅಸ್ತವ್ಯಸ್ತವಾಗಬಹುದು. ಕೋಪದ ಕ್ಷಣಗಳು ಎದುರಾಗಬಹುದು. ಧಾರ್ಮಿಕ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಬಹುದು. ಆದಾಯ ಹೆಚ್ಚಲಿದೆ. ಆತ್ಮವಿಶ್ವಾಸ ಹೆಚ್ಚಾಗಬಹುದು. ** ವೃಷಭ ರಾಶಿ : ಇಂದು ತಾಳ್ಮೆ ಕಡಿಮೆಯಾಗುವುದು. ಸ್ವಯಂ ನಿಯಂತ್ರಣದಲ್ಲಿರಿ. ಧನಲಾಭದಲ್ಲಿ ಹೆಚ್ಚಳವಾಗಬಹುದು. ತಂದೆಯಿಂದ ಬೆಂಬಲ ಸಿಗಲಿದೆ. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಮಾತಿನಲ್ಲಿ ಮಾಧುರ್ಯ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದ…
Author: Nammur Express Admin
ತೀರ್ಥಹಳ್ಳಿ ಗೆಳೆಯರ ಬಳಗದ ಹುಲಿ ವೇಷ ಸ್ಪರ್ಧೆ ಸೂಪರ್! – ಮೊದಲ ವರ್ಷವೇ ಗಮನ ಸೆಳೆದ ಸ್ಪರ್ಧೆ: ನಿಂತು ವೀಕ್ಷಿಸಿದ ಜನ – ಮಂಗಳೂರು ಹುಡುಗಿಯರ ಹುಲಿ ವೇಷ ನರ್ತನಕ್ಕೆ ಜನರು ಫಿದಾ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ, ಹುಲಿ ಹೆಜ್ಜೆ ಪುರುಷರ ಹುಲಿ ಕುಣಿತ ಸ್ಪರ್ಧೆ ತೀರ್ಥಹಳ್ಳಿಯಲ್ಲಿ ಸಂಚಲನ ಮೂಡಿಸಿತು. ಪತ್ರಕರ್ತ, ಕಾಂಗ್ರೆಸ್ ನಾಯಕ ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಡೀ ಶಾಂತವೇರಿ ಗೋಪಾಲಗೌಡ ರಂಗ ಮಂದಿರ ತುಂಬಿ ಹೋಗಿತ್ತು. ಅದರಲ್ಲೂ ಮಂಗಳೂರು ಮಹಿಳಾ ಹುಲಿ ವೇಷ ಕುಣಿತದ ನೃತ್ಯ ನೋಡುಗರ ಮೈ ಜುಮ್ ಎನಿಸುವಂತೆ ಮಾಡಿತು. ಕರಾವಳಿ ಭಾಗದಲ್ಲಿ ನಡೆಯುತ್ತಿದ್ದ ಹುಲಿ ವೇಷ ಸ್ಪರ್ಧೆ ಇದೀಗ ಹೈಟೆಕ್ ಸ್ಪರ್ಶದೊಂದಿಗೆ ಸಾವಿರಾರು ಜನರ ಜತೆ ತೀರ್ಥಹಳ್ಳಿಯಲ್ಲಿ ನಡೆಯಿತು. ಹುಲಿ ವೇಷ ಸ್ಪರ್ಧೆ ಉದ್ಘಾಟನೆ ಮಾಡಿದ ಸಹಕಾರ ನಾಯಕ ಆರ್. ಎಂ. ಮಂಜುನಾಥ ಗೌಡ ಮಾತನಾಡಿ, ಮೊದಲ ಬಾರಿಗೆ ಕರಾವಳಿಯಲ್ಲಿ ನಡೆಯುತ್ತಿದ್ದ ಕಲೆಗಳ ಸ್ಪರ್ಧೆ ಇದೀಗ ಮಲೆನಾಡಿಗೆ ತಂದಿದ್ದೀರಿ.…
ತೀರ್ಥಹಳ್ಳಿಯಲ್ಲಿ ಅದ್ದೂರಿ ದಸರಾಕ್ಕೆ ತೆರೆ! – ತೀರ್ಥಹಳ್ಳಿ ಪಟ್ಟಣದಲ್ಲಿ ಸಾವಿರಾರು ಜನರಿಂದ ಮೆರವಣಿಗೆ ವೀಕ್ಷಣೆ – ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ – ಸಂಜೆ ಅರೆಹೊಳೆ ಪ್ರತಿಷ್ಠಾನದ ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗು – ಕರಾವಳಿ ಹುಡುಗಿಯರ ಹುಲಿ ನೃತ್ಯ ಝಲಕ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮದೊಂದಿಗೆ 9 ದಿನಗಳ ಕಾಲ ನೆರವೇರಿತು. ರಾಮೇಶ್ವರ ದೇವಾಲಯದಿಂದ ಚಾಮುಂಡೇಶ್ವರಿ ದೇವಿಯನ್ನು ಅಲಂಕಾರ ಮಾಡಿ ಪೂಜೆ ಮಾಡಿ ಮೆರವಣಿಗೆ ಮೂಲಕ ಪಟ್ಟಣದಲ್ಲಿ ರಾಜ ಬೀದಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವರ ಅಂಬಾರಿಯೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ಕುಶಾವತಿಗೆ ತರಲಾಯಿತು. ತೀರ್ಥಹಳ್ಳಿ ಪಟ್ಟಣದ ಸುತ್ತ ಸಾವಿರಾರು ಜನ ಭಾಗಿಯಾಗಿದರು. ಸ್ತಬ್ದ ಚಿತ್ರಗಳ ಮೆರವಣಿಗೆ, ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು. 8 ಟ್ಯಾಬ್ಲೋಗಳ ಪ್ರದರ್ಶನ ಗಮನ ಸೆಳೆದಿತ್ತು. ಒಂದರಕ್ಕಿಂತ ಒಂದು ಚೆನ್ನಾಗಿದ್ದವು. ಶಾಸಕ ಆರಗ ಜ್ಞಾನೇಂದ್ರ, ಸಹಕಾರ ನಾಯಕ ಮಂಜುನಾಥ್ ಗೌಡ, ಪಪಂ ಅಧ್ಯಕ್ಷರಾದ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ದಸರಾ ಸಮಿತಿ ಸಂಚಾಲಕ…
ಶಾರದಾ ಶರನ್ನವರಾತ್ರಿ ಅದ್ದೂರಿ ರಥೋತ್ಸವ..!! * ಹತ್ತು ದಿನಗಳ ವೈಭವದ ಶರನ್ನವರಾತ್ರಿಗೆ ಅದ್ದೂರಿ ತೆರೆ * ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ,ಹಲವು ಸ್ಥಬ್ಥಚಿತ್ರಗಳು,ಸಾಂಸ್ಕೃತಿಕ ಕಲಾ ತಂಡಗಳು ಭಾಗಿ NAMMUR EXPRESS NEWS ಶೃಂಗೇರಿ: ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಶೃಂಗೇರಿ ಶಾರದಾ ಶರನ್ನವರಾತ್ರಿ ಉತ್ಸವಕ್ಕೆ ಇಂದು ವಿಜೃಂಭಣೆಯ ತೆರೆ ಬಿದ್ದಿದೆ. ಕಳೆದ ಹತ್ತು ದಿನಗಳಲ್ಲಿದಿನಕ್ಕೊಂದು ವಿಶೇಷ ಅಲಂಕಾರದಲ್ಲಿ ಅಲಕೃತಗೊಂಡು ಭಕ್ತರಿಗೆ ದರ್ಶನ ನೀಡಿದ ಶೃಂಗೇರಿ ಶಾರದೇ, ಇಂದು ಗಜಲಕ್ಷ್ಮೀ ಅಲಂಕಾರದಲ್ಲಿ ಮಹಾರಥೋತ್ಸವ ಹಾಗೂ ವರ್ಷಕ್ಕೊಮ್ಮೆ ನಡೆಯುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಈ ವಿಜೃಂಭಣೆಯ ಮಹಾರಥೋತ್ಸವನ್ನು ಸಾವೀರಾರು ಜನ ಕಣ್‌ತುಂಬಿಕೊಂಡರು. ರಾಜಬೀದಿಯ ಉತ್ಸವದಲ್ಲಿ ಗಜಾಶ್ವಗಳಾಧಿಯಾಗಿ,ಚಂಡೆ,ಭಜನೆ,ಭಜನಾ ಕುಣಿತ,ನವಶಕ್ತಿ ವೈಭವದ ವೇಷಧಾರಿಗಳು,ಭಜರಂಗಿ ವೇಷಧಾರಿ,ಶಾರದೇ,ನರಸಿಂಹ,ಶ್ರೀರಾಮ,ಮರೆಯಾಗುತ್ತಿರುವ ಜಾರುಗಂಬ ಕ್ರೀಡೆ,ಗಂಗಾ ಮೂಲದಂತಹ ಹಲವು ಸಾಂಸ್ಕೃತಿಕ ಹಾಗೂ ಪಾರಂಪರಿಕ ವೈಭವ ಸಾರುವ ಅನೇಕ ಸ್ಥಬ್ಧಚಿತ್ರಗಳು ಪಾಲ್ಗೊಂಡಿದ್ದವು. ಸಾಗರೋಪಾದಿಯಲ್ಲಿ ಭಕ್ತರ ದಂಡು ಶೃಂಗೇರಿಗೆ ಹರಿದು ಬರುತ್ತಿದ್ದು, ಇಂದು ಮಧ್ಯಾಹ್ನವೇ ಜಗದ್ಗುರುಗಳ ದರ್ಬಾರ್ ನಡೆಯಿತು. ಉತ್ಸವ ಸಂಪನ್ನಗೊಳ್ಳುತ್ತಿದಂತೆ ವರುಣ ಸಿಂಚನವಾಗಿ ಅದ್ದೂರಿ ರಥೋತ್ಸವಕ್ಕೆ ಬಂದ…
ಬಿಗ್ ಬಾಸ್’ಗೆ ಬಿಗ್ ಶಾಕ್ – ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತಾದ ಹೇಳಿಕೆಯ ಬಗ್ಗೆ ಆಕ್ರೋಶ, ಪೊಲೀಸರಿಂದ ನೋಟಿಸ್ – ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ NAMMUR EXPRESS NEWS ಬೆಂಗಳೂರು : ‘ಬಿಗ್ ಬಾಸ್’ ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಬರುವಂತೆ ‘ಬಿಗ್ ಬಾಸ್’ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತಾದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದಿಂದ ದೂರು ದಾಖಲಿಸಿದ್ದು, ಮಹಿಳಾ ಆಯೋಗದ ದೂರು ಆಧರಿಸಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ‘ಬಿಗ್ ಬಾಸ್’ ಸೆಟ್ ಗೆ ತೆರಳಿ ಇನ್ ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಸಡ್ಡೆ ತೋರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು…
ಹೊಸಹಳ್ಳಿ ಗುತ್ಯಮ್ಮ ದೇವಿ ಸನ್ನಿಧಿಯಲ್ಲಿ ದಸರಾ ಸಂಭ್ರಮ! * ಅಲಂಕಾರದಿಂದ ಕಂಗೊಳಿಸುತ್ತಿದ್ದ ಗುತ್ಯಮ್ಮ ದೇವಿ * ನವರಾತ್ರಿ ಉತ್ಸವ ತಾಯಿಯ ಅದ್ದೂರಿ ಮೆರವಣಿಗೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಶ್ರೀ ಗುತ್ಯಮ್ಮ ದೇವಿಯ ದೇವಸ್ಥಾನದಲ್ಲಿ ವಿಜಯದಶಮಿ ಸಂಭ್ರಮ ಕಳೆಗಟ್ಟಿತ್ತು.. ಉತ್ಸವದ ಮೂಲಕ ಪಲ್ಲಕ್ಕಿಯಲ್ಲಿ ಗುತ್ಯಮ್ಮ ದೇವಿಯನ್ನ ಬನ್ನಿ ಮಂಟಪಕ್ಕೆ ಕರೆದೊಯ್ಯಲಾಯಿತು. ಬಳಿಕ ಭಕ್ತರಿಗೆ ಬನ್ನಿ ನೀಡಿ ಗ್ರಾಮದ ಬೇರೆ ಬೇರೆ ದೇವಾಲಯಗಳಿಗೆ ಪಲ್ಲಕ್ಕಿ ಮೂಲಕ ಉತ್ಸವ ಮೂರ್ತಿಯನ್ನು ಕರೆದೊಯ್ಯಲಾಯಿತು.. ದೇವಿಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದ ಗುತ್ಯಮ್ಮ ದೇವಿಯ ದರ್ಶನ ಪಡೆದು ಪುನೀತರಾದರು.. ತೀರ್ಥಹಳ್ಳಿ ತಾಲೂಕಿನ ಶಕ್ತಿದೇವತೆ ಎಂದೇ ಖ್ಯಾತಿ ಪಡೆದಿರುವ ಗುತ್ಯಮ್ಮ ದೇವಿ ಪಲ್ಲಕ್ಕಿಯಲ್ಲಿ ತೂಗುತ್ತಾ ದರ್ಶನ ನೀಡಿದ್ದು ವಿಶೇಷವಾಗಿತ್ತು. ಹೊಸಹಳ್ಳಿ ಊರಿನ ಶ್ರೀ ಗುತ್ಯಮ್ಮ ದೇವಿಯ ನವರಾತ್ರಿ ಉತ್ಸವ ತಾಯಿಯ ಗರ್ಭ ಗುಡಿ ಇಂದ ಮೆರವಣಿಗೆ ಮೂಲಕ ಬನ್ನಿ ಮಂಟಪವನ್ನು ತಲುಪಿ ಜನರಿಗೆಲ್ಲ ಬನ್ನಿಯನ್ನು ವಿತರಿಸಲಾಯಿತು.ತದನಂತರ ಪಕ್ಕದ ದೇವಸ್ಥಾನಗಳಿಗೆ…
ಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿಗೆ ಅದ್ದೂರಿ ತೆರೆ! * ಹತ್ತು ದಿನಗಳು ವೈಭವದ ದಸರಾ ಆಚರಣೆ * ಮೆರವಣಿಗೆಯಲ್ಲಿ ಅನೇಕ ಕಲಾ ತಂಡಗಳು ಭಾಗಿ NAMMUR EXPRESS NEWS ಬಾಳೆಹೊನ್ನೂರು: ದುರ್ಗಾದೇವಿ ಪೂಜಾ ಸಮಿತಿ ಆಯೋಜಿಸಿದ್ದ ದುರ್ಗಾದೇವಿ ನವರಾತ್ರಿ ಉತ್ಸವದ ಕೊನೆ ದಿನ ದುರ್ಗಾದೇವಿ ಜಲಸ್ತಂಭನ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಮುಖ್ಯ ರಸ್ತೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ಸಮಿತಿ ಪದಾಧಿಕಾರಿಗಳು ಬಿಳಿ ಪಂಚೆ, ಬಿಳಿ ಅಂಗಿ, ಕೇಸರಿ ಪೇಟ, ಶಾಲು ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಈಶ್ವರ, ಗಣಪತಿ, ಗರುಡ ದೇವರುಗಳ ಸ್ತಬ್ದಚಿತ್ರ, ಪಂಚದೇವತೆಗಳ ನಡೆದಾಡುವ ಸ್ತಬ್ಧ ಚಿತ್ರ ಮಹಿಳೆಯರ ವೀರಗಾಸೆ, ಡೊಳ್ಳುಕುಣಿತ, ಪುರುಷ ಮತ್ತು ಮಹಿಳೆಯರ ಹುಲಿ ವೇಷ, ಮರಗೋಲು, ಚಂಡೆ, ಪುರುಷರ ಬೊಂಬೆ ಕುಣಿತ, ನವಿಲು ಕುಣಿತ, ನಂದಿಧ್ವಜ, ಸೋಮನ ಕುಣಿತ ಭಜನೆ, ನಗಾರಿ, ಕೇರಳದ ಚಂಡೆ, ಕಾವಡಿ ನೃತ್ಯ, ಮೀನು ನರ್ತನ, ಧೈಯ್ಯಂ ನೃತ್ಯ, ಪಕ್ಷಿಗಳ ನರ್ತನ, ಹಲಗೆ ಓಲಗ, ಭಜನೆ, ಕಾಡು ಕೋಣ,…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ಪೂರ್ಣ ಆತ್ಮವಿಶ್ವಾಸ ಇರುತ್ತದೆ, ಆದರೆ ಮನಸ್ಸು ಚಂಚಲವಾಗಿರುತ್ತದೆ. ಸೋಮಾರಿತನ ಜಾಸ್ತಿ ಇರಬಹುದು. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನ ಜೀವನ ಅಸ್ತವ್ಯಸ್ತವಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲೂ ಬದಲಾವಣೆಯಾಗಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಖರ್ಚುಗಳು ಅಧಿಕವಾಗಿ ಉಳಿಯುತ್ತವೆ. ** ವೃಷಭ ರಾಶಿ : ಇಂದು ನೀವು ಕೋಪದಿಂದ ದೂರವಿರಿ. ಉದ್ಯೋಗ ಸಂದರ್ಶನ ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಆದಾಯ…
ಎಷ್ಟೊಂದು ಸುಂದರ ಮೈಸೂರು ದಸರಾ! – ಜಂಬೂ ಸವಾರಿ ನೋಡಲು ಲಕ್ಷ ಲಕ್ಷ ಜನ: ಅರಮನೆ ಸಿಂಗಾರ – ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ 51 ಸ್ತಬ್ಧ ಚಿತ್ರ NAMMUR EXPRESS NEWS ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಬಂಬೂ ಸವಾರಿ ಲಕ್ಷ ಲಕ್ಷ ಜನರ ಸಮ್ಮುಖದಲ್ಲಿ ನಡೆಯಿತು. ನವರಾತ್ರಿಯ 9 ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು ಜನಮನ ಸೂರೆಗೊಂಡಿದ್ದು, ೧೦ನೇ ದಿನವಾದ ಶನಿವಾರ ವಿಜಯ ದಶಮಿ ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಸಾಗಿದ್ದು, ಮೈಸೂರು ಜಂಬೂಸವಾರಿಗೆ ಸಿಂಗರಿಸಿಕೊಂಡಿತ್ತು. ದೇಶ ವಿದೇಶಗಳಿಂದ ಉತ್ಸವ ವೀಕ್ಷಿಸಲು ಜನರು ಬಂದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದಾರೆ. ಅರಮನೆ ಮುಂಭಾಗ 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಬಳಿಕ ಚಾಮುಂಡೇಶ್ವರಿ ವಿಗ್ರಹ ಹೊತ್ತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ…
ಶಾರದಾಂಬ ಮಹಾರಥೋತ್ಸವಕ್ಕೆ ಸಜ್ಜಾಗುತ್ತಿರುವ ಶೃಂಗೇರಿ..!!! * ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ: ಭಾಗವಹಿಸಲಿವೆ ಸ್ಥಬ್ಧ ಚಿತ್ರಗಳು,ಕಲಾ ತಂಡಗಳು * ಸೇರಲಿದೆ ಲಕ್ಷಾಂತರ ಭಕ್ತರು ದಂಡು: ಟ್ರಾಫಿಕ್ ನಿಯಮ ಬದಲು NAMMUR EXPRESS NEWS ಶೃಂಗೇರಿ: ಶ್ರಿಶಾರದಾ ಶರನ್ನವರಾತ್ರಿಯ ವಿಜಯದಶಮಿಯ ದಿನದಂದು ಗಜಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶೃಂಗೇರಿ ಶಾರದೆಗೆ ಭಾನುವಾರ ಅದ್ದೂರಿ ಮಹಾರಥೋತ್ಸವ ನಡೆಯಲಿದ್ದು, ವರ್ಷಕ್ಕೊಮ್ಮೆ ನಡೆಯುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಭಕ್ತರು ಸೇರಲಿದ್ದಾರೆ. ರಥ ಬೀದಿಯ ಎರಡೂಕಡೆಗಳಲ್ಲೂ ನೂರಾರು ಜಾತ್ರೆ ಅಂಗಡಿ ಬಂದಿದ್ದು ಅಂಗಡಿಗಳಿಗೆ ಜನರು ಮುಗಿಬಿದ್ದಿದ್ದಾರೆ. ವಿಜಯ ದಶಮಿಯಂದು ಜಗದ್ಗುರು ಶ್ರೀಶ್ರೀವಿಧುಶೇಖರ ಮಹಾಸ್ವಾಮಿಗಳು ಹರಿಹರನಾಮಾಮೃತ ಎಂಬ ಲೇಖನ ಯಜ್ಞಕ್ಕೆ ಚಾಲನೆ ನೀಡಿದರು. ರಥೋತ್ಸವಕ್ಕೆ ಮಳೆಯ ಭಯ..!! ವಾಯುಭಾರ ಕುಸಿತದಿಂದ ಕಳೆದ ದಿನಗಳಿಂದ ಮಳೆಯಾಗುತ್ತಿದ್ದು ಈ ಅಕಾಲಿಕ ಮಳೆಯಿಂದ ಬೀದಿ ಉತ್ಸವಕ್ಕೆ,ವ್ಯಾಪಾರಿಗಳಿಗೆ ತುಂಬಾ ತೊಂದರೆಯುಂಟಾಗಿದೆ. ಇನ್ನೂ ನಾಳೆ ನಡೆಯುವ ಮಹಾರಥೋತ್ಸವ ಸಂದರ್ಭದಲ್ಲಿ ಮಳೆ ಬರುವ ಆತಂಕವಿದೆ. ಅದೇನಿದ್ದರೂ ರಥೋತ್ಸವ,ಪೂಜಾ ಕೈಂಕರ್ಯ,ಭಕ್ತರ ಸಂಭ್ರಮಾಚರಣೆ,ವ್ಯಾಪಾರಿಗಳಿಗೆ ಮಳೆ ಅಡ್ಡಿಯಾಗದಿರಲಿ ಎಂಬುದು ಎಲ್ಲರ ಪ್ರಾರ್ಥನೆ..!!…