ತೀರ್ಥಹಳ್ಳಿಯಲ್ಲಿ ದಸರಾ ಮೆರವಣಿಗೆ ಶುರು! – ತೀರ್ಥಹಳ್ಳಿ ಪಟ್ಟಣದಲ್ಲಿ ಜನವೋ ಜನ – ಜಾನಪದ ಮೆರವಣಿಗೆ ಜತೆ 8 ಟ್ಯಾಬ್ಲೋಗಳ ಪ್ರದರ್ಶನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮ ಜೋರಾಗಿದ್ದು, ರಾಮೇಶ್ವರ ದೇವಾಲಯದಿಂದ ಚಾಮುಂಡೇಶ್ವರಿ ದೇವಿಯನ್ನು ಅಲಂಕಾರ ಮಾಡಿ ಪೂಜೆ ಮಾಡಿ ಮೆರವಣಿಗೆ ಮೂಲಕ ಕರೆ ತರಲಾಗುತ್ತಿದೆ. ಚಾಮುಂಡೇಶ್ವರಿ ದೇವರ ಅಂಬಾರಿಯೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದಾರೆ. ಸ್ತಬ್ದ ಚಿತ್ರಗಳ ಮೆರವಣಿಗೆ, ಕಲಾ ತಂಡಗಳ ಮೆರವಣಿಗೆ ನಡೆಯುತ್ತಿದೆ. 8 ಟ್ಯಾಬ್ಲೋಗಳ ಪ್ರದರ್ಶನ ಗಮನ ಸೆಳೆದಿದೆ. ಶಾಸಕ ಆರಗ ಜ್ಞಾನೇಂದ್ರ, ಸಹಕಾರ ನಾಯಕ ಮಂಜುನಾಥ್ ಗೌಡ, ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ, ರಾಘವೇಂದ್ರ ಸೊಪ್ಪುಗುಡ್ಡೆ, ಅನಿಲ್ ವಿಧಾತ ಎಲ್ಲಾ ಸದಸ್ಯರು ಇದ್ದರು.
Author: Nammur Express Admin
ವಾಯುಭಾರ ಕುಸಿತ: ಮತ್ತೆ 6 ದಿನ ಮಳೆ! – ಅ. 11ರಿಂದ 14ರವರೆಗೆ ಸಾಧಾರಣ ಮಳೆ – ಅ.15 ಮತ್ತು 16ರಂದು ಭಾರೀ ಮಳೆ ಅಲರ್ಟ್ – ಕರಾವಳಿ, ಮಲೆನಾಡಿಗೆ ಎಚ್ಚರಿಕೆ NAMMUR EXPRESS NEWS ಬೆಂಗಳೂರು: ಕರ್ನಾಟಕ, ಗೋವಾ, ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮುಂದಿನ 6 ದಿನಗಳವರೆಗೆ ರಾಜ್ಯಾದ್ಯಂತ ಎಲ್ಲೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಅಕ್ಟೊಬರ್ 11 ರಿಂದ 14 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಹಾವೇರಿ, ಗದಗ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಬಳ್ಳಾರಿ, ರಾಮನಗರದಲ್ಲಿ ಭಾರೀ ಮಳೆಯಾಗಲಿದೆ. ಇನ್ನು ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ಅಕ್ಟೊಬರ್ 12 ರಂದು ಭಾರೀ ಮಳೆ ಸಾಧ್ಯತೆಯಿದೆ ಎಂದು ತಿಳಿಸಿದೆ. ಅ.15 ಮತ್ತು 16 ರಂದು ವ್ಯಾಪಕ ಮಳೆ: ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು,ರಾಮನಗರ, ಮಂಡ್ಯ, ಮೈಸೂರು,…
ತೀರ್ಥಹಳ್ಳಿಯಲ್ಲಿ ದಸರಾ ರಂಗು ಜೋರು! – ತೀರ್ಥಹಳ್ಳಿ ಪಟ್ಟಣದ ಎರಡು ಕಡೆ ವಾಹನ ನಿಲುಗಡೆ ನಿಷೇಧ – ಪೊಲೀಸರಿಂದ ತೆರವು ಕಾರ್ಯಾಚರಣೆ: ತೀರ್ಥಹಳ್ಳಿಯಲ್ಲಿ ಎಲ್ಲಡೆ ಹುಲಿಗಳ ಸದ್ದು – ದಸರಾ ಮೆರವಣಿಗೆಗೆ ಸಿದ್ಧತೆ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ – ಸಂಜೆ ಜಾನಪದ ಮೆರವಣಿಗೆಯೊಂದಿಗೆ ಬನ್ನಿ ಮಂಟಪದಲ್ಲಿ ಪೂಜೆ – ಹುಲಿ ವೇಷ ಸ್ಪರ್ಧೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಿದ್ಧತೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮ ಜೋರಾಗಿದ್ದು, ಇದೀಗ ಎಲ್ಲಾ ರೀತಿಯ ಸಿದ್ಧತೆಗಳು ಕೂಡ ಜೋರಾಗಿದೆ. ಇನ್ನು ತೀರ್ಥಹಳ್ಳಿ ಪಟ್ಟಣದ ಎರಡು ಕಡೆ ಮೆರವಣಿಗೆ ಹಿನ್ನಲೆಯಲ್ಲಿ ವಾಹನ ನಿಲುಗಡೆಯನ್ನ ನಿಷೇಧ ಮಾಡಲಾಗಿದೆ. ಈಗಗಾಲೇ ನಿಲುಗಡೆ ಮಾಡಿರುವ ವಾಹನದ ಮಾಲೀಕರಿಗೆ ವಾಹನಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆ ಸೂಚನೆಯನ್ನು ನೀಡುತ್ತಿದ್ದಾರೆ. ಎರಡು ಕಡೆ ತಂತಿಯನ್ನ ಬಿಗಿಯಲಾಗಿದ್ದು, ವಾಹನ ಸಂಚಾರ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ತೀರ್ಥಹಳ್ಳಿ ದಸರಾದ ಅಂಗವಾಗಿ ಈಗಾಗಲೇ ಪಟ್ಟಣದ ಎಲ್ಲೆಡೆ ಹುಲಿಗಳ ಸಂಭ್ರಮ ಕಂಡು ಬರುತ್ತಿದೆ. ದಸರಾ ಹಬ್ಬದ ಮೆರಗು…
ತೀರ್ಥಹಳ್ಳಿ ಪಟ್ಟಣಕ್ಕೆ ಬರಲಿದೆ ಇಂದಿರಾ ಕ್ಯಾಂಟೀನ್! – ಹೊಸ ವರ್ಷದ ಹೊತ್ತಿಗೆ ಉದ್ಘಾಟನೆ ಸಾಧ್ಯತೆ – ಜಿಲ್ಲಾ ಪಂಚಾಯತ್ ಕಚೇರಿ ಪಕ್ಕ ಶಂಕುಸ್ಥಾಪನೆ NAMMUR EXPRESS NEWS ತೀರ್ಥಹಳ್ಳಿ: ಇಂದಿರಾ ಕ್ಯಾಂಟಿನ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಸಮಾರಂಭ ಕಾರ್ಯಕ್ರಮ ವಿಜಯದಶಮಿಯಂದು ನಡೆಯಲಿದೆ. ತೀರ್ಥಹಳ್ಳಿ ಗುರು ಭವನ ಪಕ್ಕದ ಜಿಲ್ಲಾ ಪಂಚಾಯತ್ ಅವರಣ, ಕೊಪ್ಪ ಸರ್ಕಲ್, ತೀರ್ಥಹಳ್ಳಿ ಇಲ್ಲಿ ನೂತನವಾಗಿ ಇಂದಿರಾ ಕ್ಯಾಂಟೀನ್ ಶಂಕು ಸ್ಥಾಪನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಸಹಕಾರ ನಾಯಕ ಡಾ.ಆರ್ ಎಂ ಮಂಜುನಾಥಗೌಡ, ರಹಮತ್ ಉಲ್ಲಾ ಅಸಾದಿ, ಗೀತಾ ರಮೇಶ್, ಬಿ ಗಣಪತಿ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾಯಿತಾ ಸದಸ್ಯರು ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹೀಗೆ ಇನ್ನೂ ಅನೇಕ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ, ಸರ್ವರಿಗೂ ಕೂಡ ಸ್ವಾಗತವನ್ನು ಕೋರಿದೆ. ಹೊಸ ವರ್ಷಕ್ಕೆ ಸೇವೆ ಶುರು ನೂತನ ಇಂದಿರಾ ಕ್ಯಾಂಟೀನ್ ಹೊಸ ವರ್ಷಕ್ಕೆ ಆರಂಭವಾಗುವ ಸಾಧ್ಯತೆ ಇದೆ.…
ಕುಂದಾಪುರದ ವಂಡ್ಸೆಯಲ್ಲಿ ಅವ್ಯವಸ್ಥೆ! * ರಸ್ತೆಯೋ ಚರಂಡಿಯೋ ವ್ಯತ್ಯಾಸ ತಿಳಿಯದ ಸ್ಥಿತಿ! * ಜನರ ಆಕ್ರೋಶಕ್ಕೆ ಅಧಿಕಾರಿಗಳ ನಿರ್ಲಕ್ಷ! * ರಸ್ತೆಯ ಚರಂಡಿಗಿಂತ ಕೊಳಕು ಬಾವಿ ನೀರು! * ಬೀದಿದೀಪವಿಲ್ಲದೆ ಜನರ ಪರದಾಟ! NAMMUR EXPRESS NEWS ಉಡುಪಿ: ವಂಡ್ಸೆ ಪೇಟೆಯ ಕಾನಮ್ಮ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಅಡಿಕೆಕೊಡ್ಲು ಮನೆಗಳಿಗೆ ಹೋಗುವ ದಾರಿಯಲ್ಲಿ ಸೂಕ್ತ ವ್ಯವಸ್ತೆ ಇಲ್ಲದೆ ರಸ್ತೆ ಚರಂಡಿಯಂತೆ ಆಗಿರುತ್ತದೆ. ವಾಹನ ಸವಾರರರು ಹೊಂಡ ಯಾವುದು ? ರಸ್ತೆ ಯಾವುದು ಯೋಚಿಸುತ್ತಾ ಪ್ರಯಾಣಿಸಬೇಕಾಗಿರುವ ಪರಿಸ್ಥಿತಿ ಒದಗಿದೆ.ಈ ದಾರಿಯಲ್ಲಿ ಶಾಲೆ ಮಕ್ಕಳು,ವಯಸ್ಸಾದವರು ಪ್ರತಿ ನಿತ್ಯ ಇದೇ ದಾರಿ ಅವಲಂಬಿಸುತ್ತಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದರು ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷಿಸಿರುತ್ತಾರೆಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ರಸ್ತೆಯ ಚರಂಡಿಗಿಂತ ಕೊಳಕು ಬಾವಿ ನೀರು! ಈ ರಸ್ತೆ ಹತ್ತಿರದ ಮನೆಯವರ ಬಾವಿ ರಸ್ತೆಯ ಕೊಳಕು ನೀರಿಗಿಂತ ಕೆಂಪಾಗಿರುತ್ತದೆ. ಈ ಮನೆಯವರು ಪಂಚಾಯತ್ ಆಧಿಕಾರಿ ಅವರಿಗೆ ಖುದ್ದಾಗಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಬೀದಿದೀಪವಿಲ್ಲದೆ ಜನರ…
ಕರಾವಳಿಯಲ್ಲಿ ದಸರಾ ಸಂಭ್ರಮ! * 3ನೇ ವರ್ಷದ ಉಡುಪಿ ಉಚ್ಚಿಲ ದಸರಾ! * ಮೂಡಬಿದ್ರೆಯಲ್ಲಿ ಭರ್ಜರಿ ದಸರಾ ಸಂಭ್ರಮ! * ಬಂಟ್ವಾಳ,ಪಾಣೆಮಂಗಳೂರಿನಲ್ಲಿ ವೇಷಧಾರಿಗಳ ಜೊತೆಗೆ ದಸರಾ ಸಂಭ್ರಮ! NAMMUR EXPRESS NEWS ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಐತಿಹಾಸಿಕ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ – 2024 ಕೊನೆಯ ಹಂತ ತಲುಪಿದ್ದು, ಶರನ್ನವರಾತ್ರಿಯ ವಿಜಯದಶಮಿ ದಿನವಾದ ಅ. 12ರಂದು ನಡೆಯಲಿರುವ ಭವ್ಯ ಶೋಭಾಯಾತ್ರೆಗೆ ಭರದ ಸಿದ್ಧತೆ ನಡೆಸಲಾಗಿದೆ. ಶೋಭಾಯಾತ್ರೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಪೊಲೀಸ್ ಇಲಾಖಾಧಿ ಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಮೆರವಣಿಗೆಯ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಏಕ ನಾಯಕತ್ವದೊಂದಿಗೆ ಶೋಭಾಯಾತ್ರೆ ಮುಂದುವರಿಸಲು ನಿರ್ಧರಿಸಲಾಗಿದೆ. ಪೊಲೀಸರು ಶೋಭಾಯಾತ್ರೆಯ ಮಾರ್ಗವನ್ನು ಪರಿಶೀಲಿಸಿದ್ದು, ಅಗತ್ಯವಿದ್ದೆಡೆ ಹೆಚ್ಚು ಬಂದೋಬಸ್ತ್ ನಿರ್ವಹಿಸಲು ಸಿದ್ಧತೆ ನಡೆಸಿದ್ದಾರೆ. ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್ ಮತ್ತು ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ…
ರಾಜ್ಯದಲ್ಲಿ ಬಿಯರ್ ಕುಡಿಯೋರೆ ಹೆಚ್ಚು..! – ಈ ವರ್ಷ ಸುಮಾರು 1000 ಕೋಟಿ ವಹಿವಾಟು – ರಜೆ, ವಾತಾವರಣ ಎಫೆಕ್ಟ್ ಕಾರಣ ಅಂತಾರೆ ತಜ್ಞರು! – ಮದ್ಯದಿಂದ ಈ ವರ್ಷ 17,533 ಕೋಟಿ ರೂ. ಆದಾಯ ಸಂಗ್ರಹ NAMMUR EXPRESS NEWS ಬೆಂಗಳೂರು: ವಾತಾವರಣ, ಸಾಲು ರಜೆಗಳು ಇತ್ಯಾದಿ ಹಲವು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024-25ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಮದ್ಯ ಮಾರಾಟದಲ್ಲಿ ಶೇ 5.55 ರಷ್ಟು ಏರಿಕೆಯಾಗಿದೆ. ಅಬಕಾರಿ ಇಲಾಖೆ ದಾಖಲೆಗಳ ಪ್ರಕಾರ, ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ 921.90 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಬಿಯರ್ ಮಾರಾಟದಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಮತ್ತು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಬಿಯರ್ ಮಾರಾಟದಲ್ಲಿ ಶೇ14.90 ಏರಿಕೆ ಮತ್ತು ಐಎಂಎಲ್…
ಅಡಿಕೆಗೆ ಈ ವರ್ಷ ಆತಂಕ!? – ಮಲೆನಾಡಿನಲ್ಲಿ ಬೆಳೆಗೆ, ಅಡಿಕೆ ಕೊಯ್ಲು ಮಾಡಲು ಮಳೆ ಅಡ್ಡಿ – ದೊಡ್ಡ ಸಂಸ್ಥೆಗಳಿಂದ ಅಡಿಕೆಯನ್ನು ಹಿಂಪಡೆಯುತ್ತಿರುವ ರೈತರು! – ಕುಸಿತದ ಧಾರಣೆಯಲ್ಲಿ ಅಡಿಕೆ ಮಾರಲಾಗದೆ ರೈತರು ಕಂಗಾಲು NAMMUR EXPRESS NEWS ಶಿವಮೊಗ್ಗ /ಚಿಕ್ಕಮಗಳೂರು: ಕಳೆದ ಆರೇಳು ವಾರಗಳಿಂದ ಅಡಿಕೆ ದರದಲ್ಲಿ ಉಂಟಾದ ಧಾರಣೆಯ ಕುಸಿತದ ಸಂಚಲನ ಮಲೆನಾಡು ಅಡಿಕೆ ಮಾರುಕಟ್ಟೆಯ ಎಪಿಎಂಸಿ ಒಳಗಿನ ಸಹಕಾರಿ ಸಂಘಗಳ ಅಡಿಕೆಗೆ ಹೆಚ್ಚು ಬಾಧಿಸುತ್ತಿದೆ. ಕಳಪೆ ಅಡಿಕೆ ಮಿಶ್ರಣ, ಗೊರಬಲು ಫಾಲಿಶ್ ಯಂತ್ರದ ಗಟ್ಟಿ ಅಡಿಕೆ ಮಿಶ್ರಣ, ಚೇಣಿದಾರರು ಕ್ವಾಲಿಟಿ ಅಡಿಕೆ ಕೊಡ್ತಾ ಇಲ್ಲ, ಗುಟ್ಕಾ ಕಂಪನಿಯವರು ಅಡಿಕೆ ಕ್ವಾಲಿಟಿ ಸರಿ ಇಲ್ಲದೆ ಕೆಲ ಸಂಸ್ಥೆಗಳ ಅಡಿಕೆಗಳ ಅನೇಕ ಲೋಡ್‌ಗಳನ್ನು ರಿಟರ್ನ್ಸ್ ಮಾಡಿದಾರೆ, ಅಡಿಕೆ ಬಿಡ್ ಮಾಡುವವರು ಈಗ ಸಹಕಾರ ಸಂಸ್ಥೆಗಳಿಗೆ ಕಮ್ಮಿಯಾಗಿದೆ, ಎಪಿಎಂಸಿ ಯಾರ್ಡ್‌ನಲ್ಲೇ ಅಡಿಕೆಗೆ ಬಣ್ಣ ಬಳಿದು ಗುಣಮಟ್ಟ ಕುಸಿಯುತ್ತಿರುವುದು, ಹೆಚ್ಚುತ್ತಿರುವ ವಿದೇಶಿ ಅಕ್ರಮ ಆಮದು ಅಡಿಕೆ…ಹೀಗೆ ಅನೇಕ ಕಾರಣಗಳು ಎಪಿಎಂಸಿ ಯಾರ್ಡ್‌ನಿಂದ ಒಂದೊಂದಾಗಿ…
ಸೇವಾಭಾರತಿಯಲ್ಲಿ ಬೊಂಬೆ ಉತ್ಸವ: ನೋಡ ಬನ್ನಿ ಗೊಂಬೆ! – ಪ್ರದರ್ಶನ ಇಂದು ಕೊನೆ ದಿನ: ಗೊಂಬೆ ಉತ್ಸವ ಸೂಪರ್ – ಸೇವಾಭಾರತಿ ವಿದ್ಯಾಕೇಂದ್ರದಲ್ಲಿ ಮಾತೃಭಾರತಿ ಆಯೋಜನೆ NAMMUR EXPRESS NEWS ತೀರ್ಥಹಳ್ಳಿ: ಪ್ರತೀ ವರ್ಷದಂತೆ ಈ ವರ್ಷವೂ ಸೇವಾಭಾರತಿ ವಿದ್ಯಾಕೇಂದ್ರದಲ್ಲಿ ಮಾತೃಭಾರತಿ ವತಿಯಿಂದ ನವರಾತ್ರಿಯ ಪ್ರಯುಕ್ತ 43ನೇ ವರ್ಷದ ಬೊಂಬೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವರ್ಷದ ವಿಶೇಷ ಆಕರ್ಷಣೆಯಾಗಿ ‘ಶ್ರೀದೇವಿ ಮಹಾತ್ಮೆ’ ಕಥೆಗೆ ಬೊಂಬೆಗಳಿಗೆ ಅಲಂಕಾರ ಮಾಡಿ ಜೋಡಿಸಲಾಗಿದೆ. 09-10-2024 ಬುಧವಾರದಿಂದ 12-10-2024ರ ಶನಿವಾರದವರೆಗೆ ಸಂಜೆ 5:00 ರಿಂದ 7:30 ರವರೆಗೆ ಭಾರತೀ ಶಿಶುಮಂದಿರ, ಕೆ.ಸಿ.ರಸ್ತೆ ಇಲ್ಲಿ ನಡೆಯುವ ಈ ಬೊಂಬೆ ಪ್ರದರ್ಶನಕ್ಕೆ ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಪ್ರತೀ ದಿನ ನೂರಾರು ಮಂದಿ ವೀಕ್ಷಣೆ ಮಾಡುತ್ತಿದ್ದಾರೆ. ಗೊಂಬೆಗಳ ಪ್ರದರ್ಶನ ಗಮನ ಸೆಳೆದಿದೆ.
ನಾಡಿನೆಲ್ಲೆಡೆ ವಿಜಯ ದಶಮಿ ಹಬ್ಬ..! * ವಿಜಯ ದಶಮಿ ಆಚರಣೆ ಹೇಗೆ? * ಪ್ರತೀ ತಾಲೂಕು, ಹಳ್ಳಿ ಹಳ್ಳಿಗಳಲ್ಲೂ ಹಬ್ಬ NAMMUR EXPRESS NEWS ಅಶ್ವಿನಿ ಮಾಸದಲ್ಲಿ ಆಚರಿಸಲಾಗುವ ಅತ್ಯಂತ ಮಹತ್ತರವಾದ ಹಬ್ಬಗಳಲ್ಲಿ ದಸರಾ ಮತ್ತು ವಿಜಯದಶಮಿಯು ವಿಜೃಂಭಣೆಯಿಂದ ಆಚರಿಸಲಾಗುವುದು. ದಸರಾ ಮತ್ತು ವಿಜಯದಶಮಿಯು ನವರಾತ್ರಿ ಹಬ್ಬದ ಮುಕ್ತಾಯವನ್ನು ಸೂಚಿಸುವ ದಿನವಾಗಿದೆ. ಶ್ರೀರಾಮನಿಂದ ರಾವಣ ಸಂಹಾರಕ್ಕೂ ಮುನ್ನವೇ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ. ವಿಜಯದಶಮಿಯ ದಿನ ಮಾತ್ರ ರಾವಣ ದಹನ ನಡೆಯುತ್ತದೆ. ಶಾರದೀಯ ನವರಾತ್ರಿ ಮುಗಿದ ನಂತರ, ದುರ್ಗಾ ಮೂರ್ತಿಯ ನಿಮಜ್ಜನವೂ ಈ ದಿನದಂದು ನಡೆಯುತ್ತದೆ ಮತ್ತು ವಿಜಯೋತ್ಸವವನ್ನು ಆಚರಿಸಲಾಗುವುದು. ಮೈಸೂರು ದಸರಾ ಮೆರವಣಿಗೆ, ಜಂಬೂ ಸವಾರಿ ದೇಶದ ಪ್ರಮುಖ ದಸರಾದಲ್ಲಿ ಒಂದಾಗಿದೆ. ಇನ್ನು ಪ್ರತೀ ಜಿಲ್ಲೆ, ಪ್ರತೀ ತಾಲೂಕಲ್ಲಿ ದಸರಾ ಮೆರವಣಿಗೆ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದೆ. ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.ಸಂಜೆ ಬನ್ನಿ ಮುಡಿಯುವ ಮೂಲಕ ಪರಸ್ಪರ ಸ್ನೇಹ ವಿಶ್ವಾಸ ಹೆಚ್ಚಾಗಲು ಬಯಸಲಾಗುತ್ತದೆ. ಎಲ್ಲೆಡೆ ವಿಜಯ ದಶಮಿ ಸಂಭ್ರಮ…