Author: Nammur Express Admin

ವಿಜಯದಶಮಿಯಂದು ರಾಶಿ ಭವಿಷ್ಯ ಹೇಗಿದೆ? – ಇಂದು ವಿಜಯದಶಮಿ, ದುರ್ಗಾದೇವಿ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ತಾಳ್ಮೆ ಕಡಿಮೆಯಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಮಕ್ಕಳ ಆರೋಗ್ಯ ಸುಧಾರಿಸಲಿದೆ. ಜೀವನದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಕಟ್ಟಡದ ನಿರ್ವಹಣೆ ಮತ್ತು ಅಲಂಕಾರದ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಭರವಸೆ ಮತ್ತು ಹತಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿ ಉಳಿಯುತ್ತವೆ. ** ವೃಷಭ ರಾಶಿ : ಇಂದು ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ತೊಂದರೆಗಳಿರಬಹುದು. ಬಟ್ಟೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಅಧಿಕ ಖರ್ಚು ಇರುತ್ತದೆ. ಮಕ್ಕಳು ಬಳಲಬಹುದು. ಖರ್ಚು ಕೂಡ ಹೆಚ್ಚಾಗಲಿದೆ. ಪ್ರವಾಸಕ್ಕೆ ಹೋಗಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಸಹೋದರ…

Read More

ಟಾಪ್ ನ್ಯೂಸ್ ಮಲ್ನಾಡ್ – ಚಿಕ್ಕಮಗಳೂರು: 250 ಅಡಿ ಕೆಳಗೆ ಬಿದ್ದ ಕಾರು! – ತೀರ್ಥಹಳ್ಳಿ: ಖಾಸಗಿ ಲಾಡ್ಜಲ್ಲಿ ನೇಣಿಗೆ ಶರಣಾದ ವ್ಯಕ್ತಿ! – ಹೊಸನಗರ : ಸರ್ವೆ ಅರ್ಜಿ, ನೋಟೀಸ್ ಗಳಿಗೆ ನಕಲಿ ಸಹಿ ಮಾಡಿ ವಂಚನೆ – ಹೊಸನಗರ: ಮನೆ ಹಿಂಬದಿ ಬಾಗಿಲು ಮುರಿದು ಕಳವು NAMMUR EXPRESS NEWS ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ 250 ಅಡಿ ಪ್ರಪಾತಕ್ಕೆ ಪ್ರವಾಸಿಗರ ಕಾರೊಂದು ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್ ಗಂಡಿ ಬಳಿ ನಡೆದಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಸುಮಾರು 250 ಅಡಿ ಪ್ರಪಾತಕ್ಕೆ ಕಾರು ಉರುಳಿದೆ. 250 ಅಡಿ ಎತ್ತರದಿಂದ ಬೀಳುವಾಗ ಮರ, ರೆಂಬೆ-ಕೊಂಬೆಗಳಿಗೆ ಸಿಲುಕಿದೆ. ಹೀಗಾಗಿ ಕಾರು ಬೀಳುವ ವೇಗ ಕಡಿಮೆಯಾಗಿದೆ. ತೆಲಂಗಾಣ ಮೂಲದ ಪ್ರವಾಸಿಗರ ಕಾರು ಇದಾಗಿದ್ದು, ಕಾರಿನಲ್ಲಿದ್ದ ಐವರಿಗೂ ಗಂಭೀರ ಗಾಯವಾಗಿದೆ. ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರ…

Read More

ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ? * ಬೆಟ್ಟೆ ಎಷ್ಟು?  ರಾಶಿ ಎಷ್ಟು? NAMMUR EXPRESS NEWS ಬೆಟ್ಟೆ 41552- 55269 ಸರಕು 46600- 81810 ಗೊರಬಲು 17019- 36069 ರಾಶಿ 30009- 48949 ನ್ಯೂ ವೆರೈಟಿ 45899- 48899

Read More

ತೀರ್ಥಹಳ್ಳಿಯಲ್ಲಿ ಆಯುಧ ಪೂಜಾ ಸಡಗರ – ಆಟೋ ನಿಲ್ದಾಣ ಝೆಡ್ ಕಾರು ನಿಲ್ದಾಣ, ಬಸ್ ಅಲಂಕಾರ – ಕಚೇರಿ, ಅಂಗಡಿಗಳು, ಶೋ ರೂಂಗಳಲ್ಲಿ ಅಲಂಕಾರ 1. ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಆಟೋ ಸ್ಟಾಂಡ್ 2. ಕೊಪ್ಪ ಸರ್ಕಲ್ ಆಟೋ ಸ್ಟಾಂಡ್ 3. ಗಾಂಧಿ ಚೌಕ ಆಟೋ ಸ್ಟ್ಯಾಂಡ್ 4. ಆಗುಂಬೆ ರಸ್ತೆ ಆಟೋ ನಿಲ್ದಾಣ 5. ಸಾಗರ ಆಟೋ ನಿಲ್ದಾಣ 6. ತಾಲೂಕು ಆಫೀಸ್ ಆಟೋ ನಿಲ್ದಾಣ 7. ಆಸ್ಪತ್ರೆ ಎದುರು ಆಟೋ ನಿಲ್ದಾಣ ಮುಖ್ಯ ಬಸ್ ನಿಲ್ದಾಣದಲ್ಲಿ ಬಸ್ಸುಗಳಿಗೆ ಅಲಂಕಾರ ಮೇಲಿನಕುರುವಳ್ಳಿಯಲ್ಲಿ ಲಾರಿಗಳಿಗೆ ಪೂಜೆ ತಾಲೂಕು ಆಫೀಸ್. ಜಿಲ್ಲಾ ಪಂಚಾಯತ್ ಕಚೇರಿ ಲೋಕೋಪಯೋಗಿ ಇಲಾಖೆ ಅಚ್ಚೂರ್ ಆಗ್ರೋ ಸೇಲ್ಸ್ ವಿಶೇಷ ಪೂಜೆ

Read More

ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಆಯುಧ ಪೂಜೆ ಸಂಭ್ರಮ! * ಶ್ರೀಮಠದಲ್ಲಿ ಗಜಾಶ್ವ ಪೂಜೆ,ವಾಹನ ಪೂಜೆ: ಸಿಂಹವಾಹಿನಿ ಅಲಂಕಾರದಲ್ಲಿ ಶ್ರೀಶಾರದೆ * ಶತಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಜಗದ್ಗುರುಗಳು ಭಾಗಿ * ಶಾರದಾಂಬೆ ನೋಡಲು ಸಾವಿರಾರು ಪ್ರವಾಸಿಗರ ಆಗಮನ * ಹರಿಹರಪುರ, ಹೊರನಾಡಿನಲ್ಲೂ ವಿಜೃಂಭಣೆಯ ದಸರಾ ಆಚರಣೆ NAMMUR EXPRESS NEWS ಶೃಂಗೇರಿ: ಶ್ರೀಶಾರದಾ ಪೀಠದಲ್ಲಿ ಶರನ್ನವರಾತ್ರಿಯ ಒಂಭತ್ತನೇ ದಿನದಂದು ಸಿಂಹವಾಹಿನಿ ಚಾಮುಂಡಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀಶಾರದೆಯ ದರ್ಶನ ಪಡೆಲು ಲಕ್ಷಾಂತರ ಜನ ಭಕ್ತರು ಆಗಮಿಸುತ್ತಿದ್ದು ಶೃಂಗೇರಿಯಲ್ಲಿ ನವರಾತ್ರಿಯ ಸಂಭ್ರಮ ಮನೆಮಾಡಿದೆ. ಆಯುಧ ಪೂಜೆ ಸಂಭ್ರಮ! ಆಯುಧ ಪೂಜೆಯ ನಿಮಿತ್ತ ಶ್ರೀಮಠದ ಆನೆಗಳಾದ ಶ್ರೀಲಕ್ಷ್ಮಿ,ಜಯಲಕ್ಷೀ ಸೇರಿದಂತೆ ಉತ್ಸವ ಕುದುರೆಗಳಿಗೆ ಶ್ರೀಜಗದ್ಗುರುಗಳು ಗಜಾಶ್ವ ಪೂಜೆ ನೆರವೇರಿಸಿದರು. ನಂತರ ಶ್ರೀಮಠದ ಯಾಗಮಂಟಪದಲ್ಲಿ ನಡೆಯುತ್ತಿದ್ದ ಶತಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ರಾತ್ರಿ ಬೀದಿ ಉತ್ಸವದ ನಂತರ ಶ್ರೀಮಠದೊಳಗೆ ನಡೆಯುವ ಜಗದ್ಗುರಗಳ ದರ್ಬಾರ್‌ ವಿಶೇಷವಾಗಿದ್ದು ನೂರಾರು ಭಕ್ತರು ಪಾಲ್ಗೊಳ್ಳುವರು. ವಿಜಯದಶಮಿ ವಿಶೇಷ ಪೂಜೆ ವಿಜಯದಶಮಿ ಅಂಗವಾಗಿ ತಾಯಿ ಶಾರದೆಗೆ ಗಜಲಕ್ಷ್ಮಿ ಅಲಂಕಾರ ಇರಲಿದ್ದು,ಬೆಳಿಗ್ಗೆ…

Read More

ತೀರ್ಥಹಳ್ಳಿಯಲ್ಲಿ ಅ.12ರ ಸಂಜೆ ಹುಲಿ ವೇಷ ಸ್ಪರ್ಧೆ! – ಹೆಣ್ಣು ಹುಲಿಗಳ ನರ್ತನ, ಗಂಡು ಹುಲಿಗಳ ಘರ್ಜನೆ – ರಾಜ್ಯ ಮಟ್ಟದ ಹುಲಿವೇಷ ಸ್ಪರ್ಧೆ: ಆಕರ್ಷಕ ಬಹುಮಾನ – ಸರ್ವರಿಗೂ ಸ್ವಾಗತ: ಹುಲಿವೇಷ ವಿಶೇಷ ಆಕರ್ಷಣೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅ.12ರ ಸಂಜೆ ರಾಜ್ಯ ಮಟ್ಟದ ಹುಲಿ ವೇಷ ಸ್ಪರ್ಧೆ ನಡೆಯಲಿದ್ದು, ಹೆಣ್ಣು ಹುಲಿಗಳ ನರ್ತನ, ಗಂಡು ಹುಲಿಗಳ ಘರ್ಜನೆ ಗಮನ ಸೆಳೆಯಲಿದೆ. ರಾಜ್ಯ ಹುಲಿವೇಷ ಸ್ಪರ್ಧೆ ತೀರ್ಥಹಳ್ಳಿಗೆ ವಿಶೇಷ ಆಕರ್ಷಣೆಯಾಗಲಿದೆ. ಅಕ್ಟೋಬರ್ 12ರ ಶನಿವಾರ ಸಂಜೆ ತೀರ್ಥಹಳ್ಳಿ ಸಂಸ್ಕೃತಿ ಮಂದಿರದ ಆವರಣದಲ್ಲಿ ಹುಲಿ ನರ್ತನದ ರೋಮಾಂಚನ ಅನುಭವ ಹಂಚಿಕೊಳ್ಳುವ ಅವಕಾಶವನ್ನು ಗೆಳೆಯರ ಬಳಗ ಒದಗಿಸಿಕೊಟ್ಟಿದೆ. ತೀರ್ಥಹಳ್ಳಿ ದಸರಾದ ವಿಶೇಷ ಆಕರ್ಷಣೆಯಾಗಿ ಮಲೆನಾಡಿನ ಪರಂಪರೆ ವೀರ ಕಲೆ ಹುಲಿ ಕುಣಿತ ರಾಜ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಆಯ್ದ 20 ಪುರುಷ ಹುಲಿ ತಂಡಗಳು ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದು ಗಂಡು ಕಲೆ ಹುಲಿ ಕುಣಿತದಿಂದ ಜನರನ್ನು…

Read More

ತೀರ್ಥಹಳ್ಳಿಯಲ್ಲಿ ಇಂದು – ನಾಳೆ ವೈವಿಧ್ಯಮಯ ದಸರಾ! – ಇಂದು ಕುಶಾವತಿ ಪಾರ್ಕಲ್ಲಿ ಕಾರ್ಯಕ್ರಮ: ಎಲ್ಲೆಡೆ ವಿದ್ಯುತ್ ಅಲಂಕಾರ – ಸಾಧನೆಗೈದ ಗಣ್ಯರಿಗೆ ದಸರಾದಲ್ಲಿ ಗೌರವ ಸಮರ್ಪಣೆ – ನಾಳೆ ಜಾನಪದ ತಂಡಗಳ ಜತೆ ವಿಶೇಷ ಮೆರವಣಿಗೆ: ಸಂಜೆ ಕೊಡುವ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಉತ್ಸವ ಸಮಿತಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ಈಗಾಗಲೇ 7 ದಿನ ದಸರಾ ನಡೆದಿದೆ. ತೀರ್ಥಹಳ್ಳಿ ಪಟ್ಟಣ ದಸರಾಕ್ಕೆ ಸಿಂಗಾರಗೊಂಡಿದೆ. ಕುಶಾವತಿ ಪಾರ್ಕಿನಲ್ಲಿ ಇಂದು ಮತ್ತು ನಾಳೆ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗುರುವಾರ ಯುವ ದಸರಾದಲ್ಲಿ ತೀರ್ಥಹಳ್ಳಿ ಕಲಾವಿದರು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಇಂದು ಹಾಗೂ ನಾಳೆ ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ರಾಮೇಶ್ವರ ದೇವಸ್ಥಾನದ ಧಾರ್ಮಿಕ ಪೂಜೆಗಳಲ್ಲಿ ಹಾಗೂ ದಸರಾ ಮೆರವಣಿಗೆಯಲ್ಲಿ ತಾಲ್ಲೂಕಿನ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿಕೊಡುವಂತೆ ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ ವಿನಂತಿಸಿದ್ದಾರೆ. -…

Read More

ಕರಾವಳಿಯಲ್ಲಿ ವಿಶೇಷ ದಸರಾ ಆಚರಣೆ ರಂಗು! * ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವ ಸಂಭ್ರಮ * ಉಚ್ಚಿಲ ದಸರಾ 2024, ಸಾಂಸ್ಕೃತಿಕ ವೈವಿಧ್ಯ * ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಜನವೋ ಜನ NAMMUR EXPRESS NEWS ಮಂಗಳೂರು: ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ.1991ರಿಂದ ಆರಂಭಗೊಂಡ ‘ಮಂಗಳೂರು ದಸರಾ ವೈಭವ’ ಕುದ್ರೋಳಿ ಗೋಕರ್ಣನಾಥನ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ದಸರಾಕ್ಕೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು,ಹುಲಿ ಕುಣಿತ, ಶಾರ್ದುಲ ಕುಣಿತ ಕರಡಿ, ಹೀಗೆ ಹತ್ತು ಹಲವು ವೇಷಭೂಷಣದ ವೈಭವವು ಭರ್ಜರಿಯಾಗಿದೆ. ಉಚ್ಚಿಲ ದಸರಾ 2024, ಸಾಂಸ್ಕೃತಿಕ ವೈವಿಧ್ಯ! ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ 2024ರ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ಟಾಪ್ 3 ನ್ಯೂಸ್ ಕರ್ನಾಟಕ – ಓಣಂ ಬಂಪರ್‌, 25 ಕೋಟಿ ಗೆದ್ದ ಕನ್ನಡಿಗ! – ಅದೃಷ್ಟ ಖುಲಾಯಿಸಿ ರಾತ್ರೋರಾತ್ರಿ ಕೋಟ್ಯಧಿಪತಿ ಆದ ಮೆಕಾನಿಕ್! – ಇತಿಹಾಸದಲ್ಲೇ 400 ರೂ.ಗಡಿ ದಾಟಿದ ಗುಲಾಬಿ! – ರಾಜವಂಶಸ್ಥ ಯದುವೀರ್ ಒಡೆಯರ್ ದಂಪತಿಗೆ ಗಂಡು ಮಗು ಜನ್ಮ NAMMUR EXPRESS NEWS ಮಂಡ್ಯ: ಲಕ್ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಮಂಡ್ಯದ ಮೆಕ್ಯಾನಿಕ್‌ ಒಬ್ಬರಿಗೆ ಇದೀಗ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ. ಮಂಡ್ಯದ ಅಲ್ತಾಫ್ ಪಾಷಾ ಎಂಬವರು ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್‌ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ‌ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ ಟಿಕೆಟ್‌ ಖರೀದಿಸಿದ್ದರು. ಇದೀಗ ಅಲ್ತಾಫ್ ಪಾಷಾ 25 ಕೋಟಿ ರೂ. ‌ಗೆದ್ದಿದ್ದಾರೆ. ತಾನು ಖರೀದಿ ಮಾಡಿದ…

Read More