ಅಡಕೆಗೆ ಕ್ಯಾನ್ಸರ್ ಕಾರಕ ಪಟ್ಟ: ಛೇ.. ಏನಿದು ದುರಂತ! – ರೈತರಿಗೆ ಬಿಗ್ ಶಾಕ್ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ ವರದಿ – ಅಡಕೆ ಬಳಕೆಯ ಮೇಲೆ ನಿಯಂತ್ರಣ ಹೇರಲೂ ಶಿಫಾರಸು?! – ರಾಜ್ಯ, ಕೇಂದ್ರ ಸರ್ಕಾರ, ಶಾಸಕರು, ಸಂಸದರು ಏನ್ ಮಾಡ್ತಾ ಇದ್ದೀರಿ ಸ್ವಾಮಿ?! NAMMUR EXPRESS NEWS ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಮತ್ತೆ ಕ್ಯಾನ್ಸರ್‌ಕಾರಕ ಪಟ್ಟ ದಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಅಂಗಸಂಸ್ಥೆಯೊಂದು ಅಡಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿಯು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ತಂಬಾಕು ಮಾದರಿಯಲ್ಲೇ ಅಡಕೆ ಬೆಳೆ ನಿಯಂತ್ರಣ ಉಪಕ್ರಮಗಳಿಗೂ ಕಾರಣವಾಗುವ ಆತಂಕ ಬೆಳೆಗಾರರಲ್ಲಿ ಮೂಡಿದೆ. ಇದು ಕರ್ನಾಟಕ ಸೇರಿ ವಿವಿಧ ರಾಜ್ಯದ ಕೋಟಿ ಕೋಟಿ ರೈತರ ಬದುಕನ್ನೇ ಬಲಿ ಪಡೆಯುವ ಸಾಧ್ಯತೆ ಇದೆ.ರಾಜ್ಯ, ಕೇಂದ್ರ ಸರ್ಕಾರ, ಶಾಸಕರು, ಸಂಸದರು…
Author: Nammur Express Admin
ಬಿಲ್ಲವ ಸಮಾಜದ ರತ್ನ ಡಿ.ಆರ್.ರಾಜು ನೆನಪು ಮಾತ್ರ! – ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ – ಎಲ್ಲಾ ಪಕ್ಷ, ಜನರಿಂದ ಸಂತಾಪ: ಇಂದು ಬೆಳಗ್ಗೆ ಅಂತ್ಯಕ್ರಿಯೆ NAMMUR EXPRESS NEWS ಕಾರ್ಕಳ: ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಹಾಗೂ ರಶ್ಮಿ ಕನ್ಸಕ್ಷನ್ಸ್ ಮಾಲೀಕ ಡಿ. ಆರ್. ರಾಜು ಪೂಜಾರಿ (64) ಹೃದಯಾಘಾತಕ್ಕೆ ಒಳಗಾಗಿ ನ.17ರಂದು ರಾತ್ರಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಎಲ್ಲೆಡೆ ಕಂಬನಿ ವ್ಯಕ್ತವಾಗಿದೆ. ಸಮಾಜ ಸೇವೆ, ದಾನ ಧರ್ಮದ ಮೂಲಕ ಅವರು ಇಡೀ ಕರಾವಳಿಯಲ್ಲಿ ಹೆಸರು ಮಾಡಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲ್ಲೆಯಲ್ಲಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದು ಅಪಾರ ಸ್ನೇಹಿತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನ.17ರಂದು ಬೆಳಿಗ್ಗೆನಿಂದಲೇ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ರಶ್ಮಿ ಚಾರಿಟಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು. ರಾಜಕೀಯ ಕ್ಷೇತ್ರ, ಸಾಮಾಜಿಕ, ಧಾರ್ಮಿಕ…
ತುಳು ರಂಗಭೂಮಿಯಲ್ಲಿ ಮಿಂಚಿದ “ಶನಿ ಮಹಾತ್ಮೆ”! * ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ದೃಶ್ಯ! * ಅಜಾನುಬಾಹು ದೇಹದ ಶನಿಯ ಅಟ್ಟಹಾಸ! NAMMUR EXPRESS NEWS ಮಂಗಳೂರು: ಲ। ಕಿಶೋರ್ ಡಿ. ಶೆಟ್ಟಿ ನೇತೃತ್ವದ ಶ್ರೀಲಲಿತೆ ತಂಡದವರು ಕದ್ರಿ ನವನೀತ ಶೆಟ್ಟಿ ರಚನೆಯಲ್ಲಿ ಜೀವನ್ ಉಳ್ಳಾಲ್ ನಿರ್ದೇಶನದಲ್ಲಿ ನ.10ರಂದು ಸುರತ್ಕಲ್‌ನಲ್ಲಿ ಚೊಚ್ಚಲ ಪ್ರದರ್ಶನ ನೀಡಿರುವ ಶನಿ ಮಹಾತ್ಮೆ ತುಳು ನಾಟಕವು ಈ ಹಿಂದಿನ ಶನಿ ಕಥೆಯಾಧಾರಿತ ಎಲ್ಲ ಕಥೆಗಳಿಗಿಂತ ಭಿನ್ನವಾಗಿದೆ. ರಂಗಚಾವಡಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿದ್ದ ಸುರತ್ಕಲ್‌ನ ಬಂಟರ ಭವನದಲ್ಲಿ ನ. 10ರಂದು ಪ್ರದರ್ಶನಗೊಂಡ ಈ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿರುವ ಹರಿಶ್ಚಂದ್ರ – ಚಂದ್ರಮತಿಯ ದೃಶ್ಯವಂತೂ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಅಂಥ ಅಭಿನಯ ನೀಡಿರುವ ಚಂದ್ರಮತಿ ಮತ್ತು ಹರಿಶ್ಚಂದ್ರ ಪಾತ್ರಧಾರಿಗಳಿಗೆ ದೊಡ್ಡ ಶಹಬ್ಬಾಸ್ ಹೇಳಲೇಬೇಕಾಗಿದೆ. ಈ ನಾಟಕದಲ್ಲಿ ಶನಿ ಕಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ಪುರಾಣ ಪುರುಷರ ಕಥೆಗಳನ್ನು ಒಪ್ಪ ಓರಣವಾಗಿ ಪ್ರೇಕ್ಷಕರ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಏನೇನ್ ಆಯ್ತು? ಚಿಕ್ಕಮಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದವರು ಅರೆಸ್ಟ್! – ಕಡೂರು: ದಲಿತ ಕುಟುಂಬಗಳ ಗುಡಿಸಲು ನೆಲಸಮ: ಆಕ್ರೋಶ – ಆಲ್ದೂರು: ಬೀಟೆ ಮರ ಕಡಿದು ಸಾಗಿಸುತ್ತಿದ್ದ ಇಬ್ಬರ ಬಂಧನ NAMMUR EXPRESS NEWS ಚಿಕ್ಕಮಗಳೂರು: ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆಸಿರುವ ಚಿಕ್ಕಮಗಳೂರು ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ಕೊಂಬುಗತ್ತಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸಿ.ಇ.ಎನ್. ಅಪರಾಧ ಪೊಲೀಸರು 1.26 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಫಿನಾಡಿನಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸರು ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐಸ್.ಐ ರಘುನಾಥ ಎಸ್. ವಿ ಮತ್ತು ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಖಾನ್, ಹರೀಶ ಟಿ. ಕೆ, ಧರ್ಮರಾಜ, ಹರಿಪ್ರಸಾದ, ರಮೇಶ ಎನ್. ಆರ್ ಮತ್ತು ಮಹಾದೇವಸ್ವಾಮಿ ಇದ್ದರು. – ಕಡೂರು: ದಲಿತ ಕುಟುಂಬಗಳ ಗುಡಿಸಲು ನೆಲಸಮ: ಆಕ್ರೋಶ ಕಡೂರು: ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲನ್ನು…
‘ಕುಲ ಕುಲ ಕುಲವೆಂದು ಹೊಡೆದಾಡದಿರಿ’..! *ನಾಡಿನ ಸಮಸ್ತ ಜನತೆಗೆ ಸಂತ ಕನಕದಾಸ ಜಯಂತಿಯ ಶುಭಾಶಯಗಳು* * ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ* ವಿಶೇಷ ವರದಿ: ಸುರಕ್ಷಾ ಕೊಯಿಲಾ NAMMUR EXPRESS NEWS ಕರುನಾಡ ದಾಸವರೇಣ್ಯ ಶ್ರೇಷ್ಠ ದಾರ್ಶನಿಕ ಕನಕದಾಸರ ಜಯಂತಿ. ಕತ್ತಿ ಗುರಾಣಿ ಹಿಡಿದು ರಣಾಂಗಣದಲ್ಲಿ ಹೋರಾಡಿ ಶಸ್ತ್ರ ತ್ಯಜಿಸಿ ಕೈಯಲ್ಲಿ ತಂಬೂರಿ ಹಿಡಿದು ಕೀರ್ತನಕಾರನಾಗಿ, ಲೇಖನಿ ಹಿಡಿದು ಕವಿಯಾಗಿ, ಅಧ್ಯಾತ್ಮ ತತ್ವ ಹೇಳಿದ ದಾರ್ಶನಿಕನಾಗಿ ಬದಲಾದ ಸೋಜಿಗವೇ ಕನಕದಾಸರೆಂಬ ದಾಸವರೇಣ್ಯನ ಜೀವನ ವೃತ್ತಾಂತ. ಕನಕ ದಾಸರ ಲೋಕದೃಷ್ಟಿಯ ವಿಸ್ತಾರ ಬಹಳ ದೊಡ್ಡದು. ಕನಕದಾಸರು ತಮ್ಮ ವಿಡಂಬನಾತ್ಮಕ ವೈಚಾರಿಕ ಚಿಂತನೆಯಿಂದಾಗಿ ಇತರ ಸಮಕಾಲೀನ ಭಕ್ತಿಪಂಥದ ಕೀರ್ತನಕಾರರಿಂದ ವಿಶಿಷ್ಟವಾಗುಳಿಯುತ್ತಾರೆ. ಜನಸಾಮಾನ್ಯರ ಸಾಮಾಜಿಕ ಬದುಕಿನ ನೋಟದೊಳಗೆಯೇ ಘನವಾದ ಅಧ್ಯಾತ್ಮ ತತ್ವಗಳ ಕಾಣ್ಕೆಯೊಂದನ್ನು ಸೃಷ್ಟಿಸುವ, ಅದರೊಳಗೆ ದಾರ್ಶನಿಕತೆ ತುಂಬುವ ಕನಕದಾಸರ ಶೈಲಿ ಅದ್ಭುತ. ತನ್ನನ್ನು ತಾನೇ ‘ಕುರುಬ’ ಅಂತ ಕರೆದುಕೊಳ್ಳುತ್ತಾ, ತಾವು ಕಾಯುವ ಕುರಿಮಂದೆಯೊಳಗೆಯೇ ತಾತ್ವಿಕ ಉಪಮೆಗಳನ್ನು ಸೃಷ್ಟಿಸಿ ಆಧ್ಯಾತ್ಮಿಕತೆಯ ಆಳ ನೋಟವನ್ನೊದಗಿಸುವ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – 3ನೇ ಕಾರ್ತಿಕ ಸೋಮವಾರ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಹೆಚ್ಚು ಹಣ ಖರ್ಚು ಮಾಡುವಾಗ ಜಾಗರೂಕರಾಗಿರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಉದ್ಯೋಗಸ್ಥರಿಗೆ ಇದು ಶುಭ ದಿನವಾಗಿದೆ. ಬಡ್ತಿಯ ಅವಕಾಶಗಳು ಹೆಚ್ಚಾಗುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ, ಆದರೆ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸುಲಭವಾಗಿ ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ. ಹೊಸ ಆಸ್ತಿಯನ್ನು ಖರೀದಿಸುವ ನಿಮ್ಮ ಆಸೆ ಈಡೇರುತ್ತದೆ. ** ವೃಷಭ ರಾಶಿ : ಇಂದು ನೀವು ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಹೂಡಿಕೆ ಮಾಡುವ ಮೊದಲು ಸಂಪೂರ್ಣವಾಗಿ ಯೋಚಿಸಿ ಮಾಡಿ. ಕೆಲವು…
ಮಂಗಳೂರು ವಿವಿ ವಿರುದ್ದ ಹೆಚ್ಚಿದ ವಿದ್ಯಾರ್ಥಿಗಳ ಸಿಟ್ಟು! * ವಿವಿ ವ್ಯಾಪ್ತಿಯ ಕಾಲೇಜಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕ ಏಕಾಏಕಿ ಏರಿಕೆ * ವಿದ್ಯಾರ್ಥಿಗಳ ಶುಲ್ಕದಿಂದಲೇ ಎಲ್ಲವನ್ನು ಭರಿಸುವ ಅನಿವಾರ್ಯತೆ NAMMUR EXPRESS NEWS ಮಂಗಳೂರು: ಮಂಗಳೂರು ವಿವಿ ವಿರುದ್ದ ಇದೀಗ ವಿದ್ಯಾರ್ಥಿಗಳು ರೊಚ್ಚಿಗೆ ಎದ್ದಿದ್ದಾರೆ. ವಿವಿ ವ್ಯಾಪ್ತಿಯ ಕಾಲೇಜಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕ ಏಕಾಏಕಿ ಏರಿಕೆಮಾಡಿದ್ದು ವಿದ್ಯಾರ್ಥಿಗಳ ಶುಲ್ಕದಿಂದಲೇ ಎಲ್ಲವನ್ನು ಭರಿಸುವ ಅನಿವಾರ್ಯತೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಶುಲ್ಕ ಕಡಿಮೆ ಮಾಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಎಬಿವಿಪಿ ವಿಧ್ಯಾರ್ಥಿಗಳು ನ.15 ಪ್ರತಿಭಟನೆ ಮಾಡಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ನುಗ್ಗಲು ಯತ್ನಿಸಿದ ಘಟನೆ ವಿಶ್ವವಿದ್ಯಾಲಯದ ಬಳಿ ನಡೆಯಿತು. ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ 60-80 ಪರ್ಸೆಂಟ್ ಏರಿಸಿದ್ದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ,…
ಸ್ವಾಮಿಯೇ ಶರಣಂ ಅಯ್ಯಪ್ಪ..! – ಅಯ್ಯಪ್ಪ ಮಾಲೆ ಧಾರಣೆ ಶುರು: ಪ್ರತೀ ದಿನ 70 ಸಾವಿರ ಭಕ್ತರಿಗೆ ಅವಕಾಶ – ಜ.14ಕ್ಕೆ ಮಕರ ಸಂಕ್ರಾಂತಿ: ಏನಿದು ಅಯ್ಯಪ್ಪ ಮಾಲೆ? NAMMUR EXPRESS NEWS ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಶುಭ ಕಾರ್ತಿಕ ಮಾಸ ಆರಂಭವಾಗಿದ್ದು, ಈಗಾಗಲೇ ಕೆಲವು ಅಯ್ಯಪ್ಪ ಸ್ವಾಮಿಗಳು ದೀಕ್ಷೆಯನ್ನು ಆರಂಭಿಸಿದ್ದಾರೆ. ಆದರೆ ಕೆಲವರು ಶಬರಿಮಲೆಗೆ ತೆರಳಿ ದೀಕ್ಷೆ ತೆಗೆದುಕೊಂಡರೆ, ಇನ್ನು ಕೆಲವರು ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗುರು ಸ್ವಾಮಿಗಳ ಸನ್ನಿಧಿಯಲ್ಲಿ ಮಾಲೆ ಧರಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ದೀಕ್ಷೆಯನ್ನು ಕೈಗೊಳ್ಳುವವರಲ್ಲಿ ಹೆಚ್ಚಿನವರು ಮಂಡಲ ಕಲಾ ದೀಕ್ಷೆಯನ್ನು ಮಾಡುತ್ತಾರೆ. ಈ ಮಂಡಲ ಪೂಜೆಗಳು ನವೆಂಬರ್ 15 ರಂದು ಇಂದು ಪ್ರಾರಂಭಗೊಂಡಿದ್ದು,ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70,000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ.…
ರಂಗ ಕಲಾವಿದರಿದ್ದ ಮಿನಿ ಬಸ್ ಅಪಘಾತ! – ಗೂಗಲ್ ಮ್ಯಾಪ್ ಎಡವಟ್ಟಿಗೆ ಇಬ್ಬರ ಬಲಿ? – ಕಣ್ಣೂರಿನ ಆಸ್ಪತ್ರೆಗೆ ದಾಖಲು NAMMUR EXPRESS NEWS ಕಣ್ಣೂರು: ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್‌ವೊಂದು ಕಣ್ಣೂರಿನ ಸಮೀಪದ ಕೆಲಕಮ್ ಬಳಿ ಅಪಘಾತಕ್ಕೆ ಒಳಗಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾವನ್ನಪ್ಪಿರುವ ದುರ್ದೈವಿಗಳು. ಈ ಇಬ್ಬರು ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಶಬ್ದ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅನಾಹುತ ನಡೆದಿದೆ. ನ. 15ರಂದು ಬೆಳಗ್ಗೆ 4 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕಯಂಕುಮಂ ದೇವ ಕಮ್ಯೂನಿಕೇಷನ್ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್ ಬತ್ತೇರಿ ಕಡೆ ಸಾಗುತ್ತಿತ್ತು.…
ಕಿಮ್ಮನೆ ರತ್ನಾಕರ್ ಗೆ ಬಿಜೆಪಿ ಶಾಸಕರ ತಿರುಗೇಟು! – ಕಾರ್ಯಕರ್ತರಿಗೆ ಅನ್ಯಾಯವಾದಾಗ ಶಾಸಕರು ಧ್ವನಿ ಎತ್ತುತ್ತಾರೆ! – ಕಿಮ್ಮನೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾತನಾಡುತ್ತಾರೆ – ನವೀನ್ ಹೆದ್ದೂರ್ NAMMUR EXPRESS NEWS ತೀರ್ಥಹಳ್ಳಿ: ಮಾಜಿ ಶಾಸಕರು ಕಿಮ್ಮನೆ ರತ್ನಾಕರ್ ವಿರುದ್ಧ ಭಾರತೀಯ ಜನತಾ ಪಾರ್ಟಿ ತೀರ್ಥಹಳ್ಳಿ ಮಂಡಲ ಮಯೂರ ಹೋಟೆಲ್ ಸಭಾಂಗಣದಲ್ಲಿ, ನ. 16ರಂದು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಅರೇಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ,ಸದಸ್ಯರು ಹಾಗೂ ಬಿಜೆಪಿ ನಾಯಕರಾಗಿರುವ ಸಿದ್ದಾರ್ಥ್ ಇವರ ಮೇಲೆ ಅರಣ್ಯ ಇಲಾಖೆಯವರು ಯಾವುದೇ ಸಾಕ್ಷಾಧಾರಗಳಿಲ್ಲದೆ ಇತರ ಒತ್ತಡಗಳಿಂದ ಎಫ್ ಐ ಆರ್ ದಾಖಲಿಸಿದ್ದಾರೆ. ಅರಣ್ಯ ಇಲಾಖೆಯ ತಪ್ಪನ್ನು ವಿರೋಧಿಸಬೇಕೆಂಬ ಕಾರಣಕ್ಕೆ ಮೇಗರವಳ್ಳಿಯ ಅರಣ್ಯ ಇಲಾಖೆಯ ಜಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು, ಅದರ ವಿರುದ್ಧ ಮಾಜಿ ಗೃಹ ಸಚಿವರು ಶಾಸಕರು ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದನ್ನು ಬಲವಾಗಿ ಹಿಡಿದುಕೊಂಡು ಮಾಜಿ ಶಾಸಕರು ಕಿಮ್ಮನೆ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಯಾವುದೇ ಪಕ್ಷಪಾತ ಮಾಡದೆ ಪ್ರತಿಭಟನೆಯನ್ನು ನಡೆಸಿದ್ದು, ಕೇವಲ ಪಕ್ಷಕ್ಕೆ…