Author: Nammur Express Admin

ನಕ್ಸಲ್ ವಿಕ್ರಂ ಗೌಡ ಶೂಟ್ ಮಾಡಿದ್ದು ಹೇಗೆ? – ರಾಜ್ಯದಲ್ಲಿ 20 ವರ್ಷದ ಬಳಿಕ ಮತ್ತೊಂದು ಎನ್ಕೌಂಟರ್ – ಶರಣಾಗಲು ಹೇಳಿದ್ದೆವು ಆದ್ರೆ ಆಗಲಿಲ್ಲ ಎಂದ ಸಿಎಂ NAMMUR EXPRESS NEWS ಉಡುಪಿ/ಬೆಂಗಳೂರು: ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎಎನ್​ಎಫ್​ ಪೊಲೀಸರರಿಗೆ ಕೇರಳ ಮತ್ತು ಕರ್ನಾಟಕ ಸರ್ಕಾರ 30 ಲಕ್ಷ ಬಹುಮಾನ ಘೋಷಣೆ ಮಾಡಿದೆ. ನ.18 ರಂದು ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ಎನ್​​ಕೌಂಟರ್​ ಮಾಡಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಇನ್ನು ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಿಕ್ರಂ ಗೌಡ ಸಿಕ್ಕಿ ಬಿದ್ದಿದ್ದು ಹೇಗೆ? ನ.18ರ ಸಂಜೆ 6.30ರ ವೇಳೆಗೆ ಕಬ್ಬಿನಾಲೆಯ ಪಿತ್ತಬೈಲ್​​​ನಲ್ಲಿರುವ ಮನೆಗೆ ವಿಕ್ರಂ ಹಾಗೂ ತಂಡ ಬಂದಿತ್ತು. ಪಿತ್ತಬೈಲ್​​ನಲ್ಲಿ ಮೂರು ಕುಟುಂಬಗಳು ವಾಸವಾಗಿವೆ. ಈ ಪೈಕಿ ಸುಧಾಕರ್ ಗೌಡ ಎಂಬುವವರ ಮನೆಗೆ ವಿಕ್ರಂ ಗೌಡ ಹಾಗೂ ತಂಡ ಬಂದಿತ್ತು. ದಿನಸಿ ಸಾಮಗ್ರಿ ಪಡೆಯುವುದಕ್ಕೆಂದು ಅವರು ಬಂದಿದ್ದರು. ಮೂರು ದಿನಗಳ…

Read More

ಪ್ರೀಮಿಯರ್ ಲೀಗ್ ಸೀಸನ್-2 ಚಿಡುವ ಮಡಿಲಿಗೆ! * 3 ದಿನಗಳ ಲೀಗ್ ಮಾದರಿಯ ಅದ್ದೂರಿ ಪಂದ್ಯಾಟ * ಚಿಡುವ ಸತೀಶ ನೇತೃತ್ವದ ಚಿಡುವ ಲಯನ್ಸ್ ಭರ್ಜರಿ ಗೆಲುವು * ಉತ್ತಮ ಆಯೋಜನೆ ಮೂಲಕ ಗಮನ ಸೆಳೆದ ಪಂದ್ಯಾವಳಿ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಕನ್ನಂಗಿ ಪೀಮಿಯರ್ ಲೀಗ್ ಸೀಸನ್ 2 ಸಂತೋಷ ಪುಡಿ ಅವರ ಆಯೋಜನೆಯಲ್ಲಿ 3 ದಿನಗಳ ಲೀಗ್ ಮಾದರಿಯ ಪಂದ್ಯಾಟ ಅತಿ ಅದ್ದೂರಿಯಾಗಿ ನಡೆಯಿತು. ಪಂದ್ಯಾಟದಲ್ಲಿ ಚಿಡುವ ಸತೀಶ ಅವರ ನೇತೃತ್ವದ ,ಚಿಡುವ ಲಯನ್ಸ್, ತಂಡವು ಕೊನೆಯಲ್ಲಿ 45 ರನ್ ಗಳ ಮೂಲಕ ಬಿಯರ್ ಬ್ಲಾಸ್ಟರ್ ತಂಡವನ್ನು ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸಿದೆ. ಮಂಡಗದ್ದೆ ಹೋಬಳಿಯ 20 ತಂಡದ 3 ದಿನಗಳ ಲೀಗ್ ಮಾದರಿಯ ಪಂದ್ಯಾಟ ನ.16,17 ಹಾಗೂ 18 ರಂದು ನಡೆದಿದ್ದು, ಕೊನೆಯ ಫೈನಲ್ ಹಂತಕ್ಕೆ ತಲುಪಿದ ಚಿಡುವ ಲಯನ್ಸ್ ಮತ್ತು ಬಿಯರ್ ಬ್ಲಾಸ್ಟರು ತಂಡಗಳು ಅತಿ ರೋಚಕವಾಗಿ ಮುಕ್ತಾಯವನ್ನು ನೀಡಿತು. ಲಯನ್ಸ್,ತಂಡ ಮೊದಲು…

Read More

ಬೆಂಗಳೂರು ಕೃಷಿ ಮೇಳದಲ್ಲಿ 34 ಲಕ್ಷ ಜನರ ದಾಖಲೆ – ರೈತರಲ್ಲಿ ಚೈತನ್ಯ ತುಂಬಿದ ಕೃಷಿ ಹಬ್ಬ: ಅನಾವರಣಗೊಂಡ ಕೃಷಿ ಜಗತ್ತು – 4 ದಿನಗಳಲ್ಲಿ 6 ಕೋಟಿ ರೂಪಾಯಿ ವಹಿವಾಟು – ಗಮನ ಸೆಳೆದ ಗೋವುಗಳು: ಕೃಷಿ ಮೇಳ ಸೂಪರ್ NAMMUR EXPRESS NEWS ಬೆಂಗಳೂರು: ಜಿಕೆವಿಕೆ ಆವರಣದಲ್ಲಿ 4 ದಿನ ನಡೆದ ಕೃಷಿ ಮೇಳ ಭಾನುವಾರ ತೆರೆ ಕಂಡಿದ್ದು ಸರ್ವಕಾಲಿಕ ದಾಖಲೆ ಬರೆಯಿತು. ಈ ಬಾರಿ ದಾಖಲೆಯ 34 ಲಕ್ಷ ಜನ ಭೇಟಿ ನೀಡಿದ್ದು ವಿಶೇಷವಾಗಿದೆ. ಕೃಷಿ ಸಮಸ್ಯೆಗಳ ಪರಿಹಾರ ಕುರಿತು ಮಾಹಿತಿ, ಹೊಸ ಯಂತ್ರ, ತಳಿಗಳ ಪರಿಚಯ, ಭರವಸೆ ಮೂಡಿಸುವ ಕಾರ್ಯಕ್ರಮಗಳು ರೈತರಲ್ಲಿ ಚೈತನ್ಯ ತುಂಬಿದವು. ನೂರಾರು ಮಳಿಗೆಗಳು, ಸಾವಿರಾರು ಕೃಷಿ ವಸ್ತುಗಳು ಗಮನ ಸೆಳೆದವು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ರಿಮೋಟ್‌ ಕಂಟ್ರೋಲ್‌ ಕೃಷಿಬಾಟ್‌ ಯಂತ್ರಗಳನ್ನು ಪರಿಶೀಲಿಸಿದರು. ನಂತರ ಟ್ರ್ಯಾಕ್ಟರ್‌ ಚಲಾಯಿಸಿ ಸಂಭ್ರಮಿಸಿದರು. ಹವಾಮಾನ ಚತುರ ಡಿಜಿಟಲ್‌ ಕೃಷಿ’ ಘೋಷವಾಕ್ಯದಡಿ…

Read More

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ – ಪ್ರತಿ ಶಾಲಾ ಕಾಲೇಜಿನಿಂದ 2 ವಿದ್ಯಾರ್ಥಿಗಳಿಗೆ ಅವಕಾಶ – ತೀರ್ಥಹಳ್ಳಿಯಲ್ಲಿ ನ.28ರಂದು ಸ್ಪರ್ಧೆ ಸರ್ವರಿಗೂ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ವೇದಿಕೆ, ತೀರ್ಥಹಳ್ಳಿ ಹಾಗೂ ಶಾಲಾ ಶಿಕ್ಷಣ ಇಲಾಖೆ, ತೀರ್ಥಹಳ್ಳಿ ವತಿಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ನ.28ರಂದು ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದೆ. ಪ್ರತೀ ಶಾಲೆ ಮತ್ತು ಕಾಲೇಜುಗಳಿಂದ ೨ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಈ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನೆರವೇರಲಿದ್ದು, ನ. ೨೮-೧೧-೨೦೨೪ ನೇ ಗುರುವಾರ, ಬೆಳಿಗ್ಗೆ ೧೦-೦೦ ಗಂಟೆಗೆ, ಶಾಂತವೇರಿ ಗೋಪಾಲಗೌಡ ರಂಗಮಂದಿರ, ಸೊಪ್ಪುಗುಡ್ಡೆ-ತೀರ್ಥಹಳ್ಳಿ ಇಲ್ಲಿ ನಡೆಯಲ್ಲಿದೆ. ವಿಷಯ : ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಸಪ್ರಶ್ನೆ 1) ಹಿರಿಯ ಪ್ರಾಥಮಿಕ ವಿಭಾಗ : ೫ ರಿಂದ ೭ ನೇ ತರಗತಿ 2)…

Read More

ಇವಿ ಶೋರೂಂನಲ್ಲಿ ಬೆಂಕಿ: ಯುವತಿ ದುರ್ಮರಣ! * ರಾಜಧಾನಿಯಲ್ಲಿ ಘಟನೆ: 25 ವಾಹನಗಳು ಬೆಂಕಿಗಾಹುತಿ * ಇವಿ ವಾಹನಗಳ ಬಗ್ಗೆ ಅನುಮಾನ ಹುಟ್ಟಿಸಿದ ಘಟನೆ! NAMMUR EXPRESS NEWS. ಬೆಂಗಳೂರು: ಬೆಂಗಳೂರಿನಲ್ಲಿ ಎಲೆಕ್ಟಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಾಜ್‌ಕುಮಾ‌ರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟಿಕ್ ಸ್ಕೂಟ‌ರ್ ಶೋರೂಂನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಎಲೆಕ್ಟಿಕ್ ಸ್ಕೂಟರ್‌ಗಳು ಹಾಗೂ ಶೋರೂಂ ಹೊತ್ತಿ ಉರಿದು ಶೋರೂಂನ ಒಳಗೆ ಸಿಲುಕಿಕೊಂಡಿದ್ದ ಓರ್ವ ಯುವತಿ ಸುಟ್ಟು ಕರಕಲಾಗಿದ್ದಾಳೆ. ಶೋರೂಂನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತಿದ್ದ ಪ್ರಿಯಾ (20) ಎನ್ನುವ ಯುವತಿ ಭೀಕರ ಅಗ್ನಿ ಜ್ವಾಲೆಯಲ್ಲಿ ಆಹುತಿಯಾಗಿದ್ದು, ಸದ್ಯ ಅಗ್ನಿಶಾಮ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ನವೆಂಬರ್ 19ರ ಸಂಜೆ 5.30ರ ಸುಮಾರಿಗೆ ಸ್ಕೂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಶೋರೂಮ್‌ಗೆ ಅಗ್ನಿ ಅವಘಡ ಸಂಭವಿಸಿದ್ದು, ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಶೋರೂಂಗೆ ಆವರಿಸಿಕೊಂಡು ಧಗಧಗನೇ ಉರಿದಿದೆ. ಹೊತ್ತಿ ಭೀಕರ ಬೆಂಕಿಗೆ ಶೋರೂಮ್ ಹಾಗೂ…

Read More

ಹುಲಿಕಲ್ ಘಾಟಿ ರಸ್ತೆ ಹಾಳಾಗಿದೆ ಸ್ವಾಮಿ..! – ಪ್ರತಿನಿತ್ಯ ಸಾವಿರಾರು ಪ್ರಯಾಣಿಕರ ಪರದಾಟ – ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ರಸ್ತೆ ಅವ್ಯವಸ್ಥೆ – ಮಾಸ್ತಿಕಟ್ಟೆಯಿಂದ ಕೈಮರದವರೆಗೆ ಭಾರೀ ಹೊಂಡ ಗುಂಡಿ NAMMUR EXPRESS NEWS ತೀರ್ಥಹಳ್ಳಿ/ಹೊಸನಗರ: ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ಹುಲಿಕಲ್ ಘಾಟಿಯಲ್ಲಿ ಪ್ರತೀ ದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಪ್ರವಾಸಿಗರು ಕೂಡ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಈ ರಸ್ತೆ ಇದೀಗ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಮಂಗಳೂರು, ಉಡುಪಿ, ಕುಂದಾಪುರ,ಸಿದ್ದಾಪುರ,ಮಾಸ್ತಿಕಟ್ಟೆ ಯಡೂರು, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗ,ಬೆಂಗಳೂರು ದಾವಣಗೆರೆ,ಮಂತ್ರಾಲಯ, ರಾಯಚೂರು, ಕೂಡ್ಲಗಿ ಮುಂತಾದ ಊರುಗಳಿಗೆ ಸುಗಮ ಸಂಚಾರ ಮಾರ್ಗವಾಗಿರುವ ಹುಲಿಕಲ್ ಘಾಟಿ ರಸ್ತೆ ಅವ್ಯವಸ್ಥೆ ಇದೀಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಬಸ್ ಓಡಾಡೋದು ಇಲ್ಲೇ…! ಈ ರಸ್ತೆಯಲ್ಲಿ ಪ್ರತಿದಿನ ಐವತ್ತಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ ಗಳು 30ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಹಾಗೂ ಸರಕು ಸಾಗಾಣಿಕೆ ವಾಹನಗಳು, ಪ್ರವಾಸಿ ವಾಹನ ಹೆಚ್ಚಾಗಿ…

Read More

ಮದ್ಯಪ್ರಿಯರಿಗೆ ಗುಡ್ ನ್ಯೂಸ್ * ನವೆಂಬರ್ 20ರಂದು ಬಾರ್ ಬಂದ್ ಆಗಲ್ಲ * ಸಿಎಂ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿ * ಮುಷ್ಕರ ಹಿಂಪಡೆದ ಬಾರ್ ಮಾಲೀಕರು ನಿರ್ಧಾರ NAMMUR EXPRESS NEWS ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾರ್ ಮಾಲೀಕರ ಸಂಘ ನ.20ರಂದು ರಾಜ್ಯಾದ್ಯಂತ ಬಾರ್ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಾರ್ ಮಾಲೀಕರ ಸಂಘದ ಪದಾಧಿಕಾರಿಗಳ ಸಂಧಾನ ಸಭೆ ಕರೆಯಲಾಗಿತ್ತು ಈಗ ಸಭೆಯು ಯಶಸ್ವಿಯಾಗಿದ್ದು, ಬಂದ್ ಮಾಡುವ ವಿಚಾರ ಹಿಂಪಡೆಯಲಾಗಿದೆ. ಮಂಗಳವಾರ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿತ್ತು. ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನವೆಂಬರ್‌ 20ರ ಬುಧವಾರ ಕರೆ ನೀಡಲಾಗಿದ್ದ ಬಾರ್ ಬಂದ್ ಕರೆ ವಾಪಸ್ ಪಡೆಯಲಾಗಿದೆ. ಇದರಿಂದ ಮದ್ಯಪ್ರಿಯರು ಸಂತಸಗೊಂಡಿದ್ದಾರೆ.

Read More

ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತ ತರಬೇತಿ – ಇಂದು ವಿಧಾನ ಸೌಧದಲ್ಲಿ ಸಚಿವ ಮಧು ಬಂಗಾರಪ್ಪ ಚಾಲನೆ – ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ NAMMUR EXPRESS NEWS ಬೆಂಗಳೂರು: ಪ್ರಸಕ್ತ ಬಜೆಟ್ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ನೀಡಲಿದ್ದು, ಇಂದು ಚಾಲನೆ ನೀಡಲಾಗುತ್ತದೆ. ಉಚಿತ ಆನೈನ್ ತರಗತಿಗಳ ಮೂಲಕ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಚಾಲನೆ ನೀಡಲಾಗುವುದು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬುಧವಾರ ಬೆಳಗ್ಗೆ 10.30ಕ್ಕೆ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆನೈನ್ ತರಗತಿಗಳಿಗೆ ಚಾಲನೆ ನೀಡಲಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್, ಆಯುಷ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ರಾಜ್ಯದ ಸಿಇಟಿ, ಕೇಂದ್ರದ ನೀಟ್, ಐಐಟಿಗಳ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಗೌರಿ ಯೋಗ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಮಕ್ಕಳಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಮನೆಯ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವಿರಿ. ವ್ಯಾಪಾರ ಪರಿಸ್ಥಿತಿ ಬಲವಾಗಿರುತ್ತದೆ. ** ವೃಷಭ ರಾಶಿ : ವೃಷಭ ರಾಶಿಯ ಜನರು ಇಂದು ಉತ್ಸುಕರಾಗಿರುತ್ತಾರೆ. ಇಂದು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಪ್ರೇಮಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನಿಮ್ಮ ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವ್ಯಾಪಾರಿಗಳಿಗೆ ಲಾಭದ ಸೂಚನೆಗಳಿವೆ. ನಿಮ್ಮ ಸಂಗಾತಿಯೊಂದಿಗೆ ಘರ್ಷಣೆಯನ್ನು…

Read More

ರಾಮಕೃಷ್ಣಪುರದಲ್ಲಿ ನ.22 ಕನ್ನಡ ರಾಜ್ಯೋತ್ಸವ – ಸಮರ್ಪಣ ತಂಡ ಮತ್ತು ಗೆಳೆಯರ ಬಳಗದಿಂದ ಆಯೋಜನೆ – ಖ್ಯಾತ ಗಾಯಕರಿಂದ ಸಂಜೆ 7ಕ್ಕೆ ಸಂಗೀತ ಗಾನ ಸುಧೆ: ಸಾಧಕರಿಗೆ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ಸಮರ್ಪಣ ತಂಡ ಮತ್ತು ಗೆಳೆಯರ ಬಳಗ ರಾಮಕೃಷ್ಣಪುರ ಇವರ ಸಹಯೋಗದಲ್ಲಿ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವ ನ. 22 ಶುಕ್ರವಾರದಂದು ಕುವೆಂಪು ರಂಗ ಮಂದಿರ ರಾಮಕೃಷ್ಣಪುರದಲ್ಲಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಶಾಲಾ ಮಕ್ಕಳೊಂದಿಗೆ ನೆರವೇರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರು ಆದಂತಹ ಅಂಬರೀಶ್ ಭಾರದ್ವಾಜ್ ಅವರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ತಂಡಗಳಿಗೆ ವಾಲಿಬಾಲ್ ಕ್ರೀಡಾಕೂಟ, ಸಂಜೆ 6 ಗಂಟೆಗೆ ಸಾಧಕರಿಗೊಂದು ಸನ್ಮಾನ ಕಾರ್ಯಕ್ರಮ ಹಾಗೂ ಏಳು ಗಂಟೆಗೆ ಸಂಗೀತ ಗಾನ ಸುಧೆ ಕಾರ್ಯಕ್ರಮ ನಡೆಯಲಿದೆ. ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಾಕರಾದ ಶ್ರೀ ಕಂಬದ ರಂಗಯ್ಯ ಹಾಗೂ ಶಶಿಕುಮಾರ್ ಕಾರಂತ್, ಉಷಾ ಬಾಳೆಬೈಲು, ನಿಧಿ ಸುರೇಶ್ ಇವರಿಂದ ಈ…

Read More