Author: Nammur Express Admin

ರಂಜದಕಟ್ಟೆಯಲ್ಲಿ ಮನೆ ನುಗ್ಗಿ ಚಿನ್ನ, ಹಣ ಕದ್ದರುಚಿಲ್ಲರೆ ಕೇಳುವ ನೆಪದಲ್ಲಿ 3000 ರೂ.ಯಾಮಾರಿಸಿದರು! ನ್ಯೂಸ್ ಡೆಸ್ಕ್: ನಮ್ಮೂರ್ ಎಕ್ಸ್‍ಪ್ರೆಸ್ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೆ ಕಳ್ಳರ ಸದ್ದು ಶುರುವಾಗಿದೆ. ಪಟ್ಟಣಕ್ಕೆ ಸಮೀಪದ ರಂಜದಕಟ್ಟೆಯಲ್ಲಿ ತೀರ್ಥಹಳ್ಳಿ ಪಿಡಬ್ಲ್ಯು ಎಇಇ ಆಗಿದ್ದ ರಾಜೇಶ್ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ. ಸುಮಾರು 40 ಗ್ರಾಂ ಚಿನ್ನ ಮತ್ತು 80,000 ರೂ. ಹಣ ಕಳ್ಳತನ ಮಾಡಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ರಾಜೇಶ್ ಅವರ ತಂದೆ ಮತ್ತು ತಾಯಿ ಚಿಕ್ಕಮಗಳೂರಿಗೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಯಾರೂ ಮನೆಯಲ್ಲಿರದ ವೇಳೆ ಮನೆಗೆ ನುಗ್ಗಿ ಬಾಗಿಲು ಒಡೆದು ಚಿನ್ನ ಮತ್ತು ಹಣ ಲೂಟಿ ಮಾಡಿದ್ದಾರೆ. ಅಕ್ಕಪಕ್ಕದ ಮನೆಯಲ್ಲಿ ಬಾಗಿಲು ಮೀಟಲು ಕಬ್ಬಣದ ಸಲಾಕೆ ತೆಗೆದುಕೊಂಡು ಹೋಗಿದ್ದಾರೆ. ಸ್ಥಳೀಯರ ಮೇಲೆ ಶಂಕೆ ವ್ಯಕ್ತವಾಗಿದ್ದು ಇದೀಗ ಪೆÇೀಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಜೇಶ್ ಅವರು ತೀರ್ಥಹಳ್ಳಿಯಲ್ಲಿ ಎಡಬ್ಲ್ಯುಇ ಆಗಿದ್ದು, ಈಗ ಚಿಕ್ಕಮಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಂದೆ ಹಾಗೂ ತಾಯಿ ರಂಜದಕಟ್ಟೆ ಮನೆಯಲ್ಲಿದ್ದರು…

Read More

ಕಸ್ತೂರಿರಂಗನ್ ವರದಿ ಆತಂಕ ಬೇಡತೀರ್ಥಹಳ್ಳಿಯಲ್ಲಿ ಕಟೀಲ್ ಮಾತುಕತೆ ತೀರ್ಥಹಳ್ಳಿ; ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಅವರ ಬಗ್ಗೆ ಪಕ್ಷದಲ್ಲಿ ವಿಶೇಷ ಗೌರವ ಇದೆ. ಬೌಗೋಳಿಕ, ಸಾಮಾಜಿಕ ನ್ಯಾಯದಡಿ ಮುಂದಿನ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಬಿಜೆಪಿ ವತಿಯಿಂದ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿಸಿದ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದರು.ಬಳಿಕ ಮಯೂರ ಹೋಟೆಲ್‍ನಲ್ಲಿ ಉಪಾಹಾರ ಸ್ವೀಕರಿಸಿ ಪತ್ರಕರ್ತರ ಜತೆ ಮಾತನಾಡಿ, ಅನಿವಾರ್ಯ ಕಾರಣದಿಂದ ಸರ್ಕಾರ ಬಂದಿದೆ. ಆರಗ ಅವರ ಬಗ್ಗೆ ನಮಗೆ ಗೌರವವಿದೆ. ಬೌಗೋಳಿಕ ನ್ಯಾಯ, ಸಾಮಾಜಿಕದಡಿಯಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಹಿರಿಯರು, ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ಹಾದಿಬೀದಿಯಲ್ಲಿ ಚರ್ಚೆ ಆದರೆ ಪಕ್ಷದೊಳಗೆ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ 2 ವರ್ಷ ಮುಂದುವರಿಯುತ್ತಾರೆ ಎಂದು…

Read More

ತಮ್ಮ ಹಳೆಯ ಪ್ರವೃತಿ ಮುಂದುವರೆಸಿದ ಭಾರತದ ಹೆಮ್ಮೆಯ ಆಟಗಾರಸೈಯದ್ ಮುಷ್ತಾಕ್ ಆಲಿ ಟ್ರೋಫಿ ಆಡಲಿರುವ ಎಸ್. ಶ್ರೀಶಾಂತ್ ಸರಿ ಸುಮಾರು 8 ವರ್ಷಗಳ ಕಾಲ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತದ ಹೆಮ್ಮೆಯ ಹಿರಿಯ ಆಟಗಾರ ಶ್ರೀಶಾಂತ್ ರವರು ಮುಷಾಕ್ ಆಲಿ ಟ್ರೋಫಿ ಟೂರ್ನಿ ಕೇರಳ ತಂಡದಲ್ಲಿ ಹಿರಿಯ ವೇಗಿ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಹೊಸದಿಲ್ಲಿ: ಟಿ20 ಟೂರ್ನಿಯ ನಿಮಿತ್ತ ಶ್ರೀಶಾಂತ್ ಅಭ್ಯಾಸ ಪಂದ್ಯಗಳಲ್ಲಿ ತೊಡಗಿದ್ದಾರೆ. ಹಿಂದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತೋರಿದ್ದ ಅದೇ ಆಕ್ರಮಣಕಾರಿ ಮನೋಭಾವವನ್ನು ಮುಂದುವರಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಆರಂಭಿಸಿದ ಶ್ರೀಶಾಂತ್, ಬ್ಯಾಟ್ಸ್ಮನ್ಗಳನ್ನು ಸ್ಲೆಡ್ಜ್ ಮಾಡುವ ಮೂಲಕ ತಮ್ಮ ಹಳೆಯ ಪ್ರವೃತ್ತಿಯನ್ನು ಪುನರಾವರ್ತಿಸಿದ್ದಾರೆ. ಕೇರಳ ಕ್ರಿಕೆಟ್ ಅಸೋಸಿಯೇಷನ್(ಕೆಸಿಎ) ಶ್ರೀಶಾಂತ್ ಅವರ ಬೌಲಿಂಗ್ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿದೆ..ಜನವರಿ 10 ರಿಂದ ಆರಂಭವಾಗುವ ಟಿ20 ಚಾಂಪಿಯನ್ಶಿಪ್ ನಿಮಿತ್ತಾ ಕೇರಳ ಟೀಮ್ ಮ್ಯಾನೇಜ್ಮೆಂಟ್ನಿಂದ ತಂಡದ ಕ್ಯಾಪ್ ಸ್ವೀಕರಿಸುತ್ತಿದ್ದ ವಿಡಿಯೋವನ್ನು ಸ್ವತಃ 37ರ ಪ್ರಾಯದ ವೇಗಿಯೇ ತಮ್ಮ ಟ್ವಿಟರ್ನಲ್ಲಿ…

Read More

-ಧೂಮಪಾನಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಸರ್ಕಾರ -ನಿಯಮ ಉಲ್ಲಂಘಿದಿದ್ರೆ ಕಠಿಣ ಕ್ರಮ ನವದೆಹಲಿ: ಯುವ ಧೂಮಪಾನಿಗಳಿಗೆ ಇದು ಶಾಕಿಂಗ್ ಸುದ್ದಿ ಎಂದರೆ ತಪ್ಪಾಗಲಾರದು. ಏಕೆಂದರೆ ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರ ಯುವ ಧೂಮಪಾನಿಗಳನ್ನು ಪ್ರಮುಖ ಗುರಿ ಆಗಿಸಿಕೊಂಡಿದೆ. ಅಂದರೆ ಧೂಮಪಾನ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನನ್ನು ಸಿದ್ಧಪಡಿಸಿದೆ. ಧೂಮಪಾನಿಗಳಿಗೆ ಚುರುಕು ಮುಟ್ಟಿಸಲು ಮುಂದಾಗಿರುವ ಸರ್ಕಾರ, ಅದರ ಸಲುವಾಗಿ ಹೊಸ ಮಸೂದೆಯೊಂದನ್ನು ಸಿದ್ಧಪಡಿಸಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ತಡೆ ಮತ್ತು ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಸರಬರಾಜು ಹಾಗೂ ವಿತರಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ, 2020ರ ಮೂಲಕ ಈ ಕ್ರಮಕ್ಕೆ ಮುನ್ನುಡಿ ಹಾಕಿದೆ. ಹೊಸ ಕಾನೂನಿನ ಪ್ರಕಾರ ಸಿಗರೇಟ್ ಸೇವನೆ ಮತ್ತು ಮಾರಾಟಗಳ ನಡುವೆ ಇರುವ ವಯಸ್ಸಿನ ಮಿತಿ ಹೆಚ್ಚಾಗಲಿದ್ದು, ಈ ಹಿಂದೆ 18 ವರ್ಷದ ಒಳಗಿನವರಿಗೆ ಸಿಗರೇಟ್ ಮಾರಾಟ ಮಾಡುವುದು ಹಾಗೂ ಧೂಮಪಾನ ಮಾಡುವುದಕ್ಕೆ ನಿರ್ಬಂಧ ಹೇರಿತ್ತು. ಆದರೆ ಈಗ ಸರ್ಕಾರದ ನಿಲುವು ಬದಲಾಗಿದ್ದು,…

Read More

-ಜಾತಿ ಸೂಚಕ ಸ್ಟೀಕರ್ ಇದ್ದರೆ ಬಿಳುತ್ತೆ ಫೈನ್-ಉತ್ತರಪ್ರದೇಶ ಸಾರಿಗೆ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಆದೇಶ ಜಾರಿಗೆ ತಮಿಳುನಾಡು ಪೋಲಿಸರು ಕಳೆದ ಹಲವು ದಿನಗಳಿಂದ ಕಾರುಗಳಲ್ಲಿ ಅಳವಡಿಸಿರುವ ಹೆಚ್ಚುವರಿ ಬಂಪರ್ ಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿತ್ತು. ಇದೀಗ ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಸಹ ವಿಶೇಷವಾದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ದ್ವಿಚಕ್ರ ವಾಹನ ಹಾಗೂ ಕಾರುಗಳ ಮಾಲೀಕರು ನಂಬರ್ ಪ್ಲೇಟ್ಹಾಗೂ ವಿಂಡ್ಸ್ಕ್ರೀನ್ಗಳಲ್ಲಿ ಜಾತಿ ಸೂಚಕ ಸ್ಟಿಕ್ಕರ್ಗಳನ್ನು ಅಂಟಿಸಿಕೊಳ್ಳುವುದು ಸಾಮಾನ್ಯವಾದದ್ದು, ಆದರೆ ದೇಶಾದ್ಯಂತ ಇದು ಕಂಡು ಬಂದರೂ ಉತ್ತರ ಪ್ರದೇಶದಲ್ಲಿ ತುಸು ಜಾಸ್ತಿಯೇ ಆಗಿದೆ. ಈ ಬಗ್ಗೆ ಮಹಾರಾಷ್ಟ್ರದ ಶಿಕ್ಷಕರೊಬ್ಬರು ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರ ಬರೆದು ಜಾತಿ ಸೂಚಕ ಸ್ಟಿಕ್ಕರ್ ಅಳವಡಿಕೆ ವ್ಯವಸ್ಥೆಗೆ ಕೊನೆ ಹಾಡಬೇಕು ಎಂದು ಮನವಿ ಮಾಡಿದ್ದರು. ದೂರನ್ನು ಪರಿಶೀಲಿಸಿದ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ವಾಹನಗಳ ಮೇಲೆ ಜಾತಿ ಸೂಚಕ ಸ್ಟಿಕ್ಕರ್ ಗಳನ್ನು ಪ್ರದರ್ಶಿಸುವ ವ್ಯಕ್ತಿಗಳ ವಿರುದ್ಧ ಕ್ರಮ…

Read More

-ಇಲ್ಲಿದೆ ಸೂಕ್ತ ಸಲಹೆಗಳು ಕೀಟೋ ಎನ್ನುವುದು ಇಂದು ಬೊಜ್ಜು ದೇಹದವರಿಗೆ ತೂಕ ಇಳಿಸಲು ಇರುವ ಒಂದು ಆಹಾರ ಪದ್ಧತಿ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ದೇಹದಲ್ಲೂ ಬೊಜ್ಜು ಆವರಿಸಿಕೊಂಡು ಬಿಟ್ಟಿದೆ. ಇದಕ್ಕಾಗಿ ಅವರು ಹಲವಾರು ರೀತಿಯ ಪಥ್ಯ, ಆಹಾರ ಕ್ರಮ ಹಾಗೂ ವ್ಯಾಯಾಮ ಮಾಡುವರು. ಆದರೆ ಎಲ್ಲರಿಗೂ ತಾವು ನಿರೀಕ್ಷೆ ಮಾಡಿದಂತಹ ಫಲ ಸಿಗುವುದಿಲ್ಲ. ಹೀಗಾಗಿ ಒಂದನ್ನು ಬಿಟ್ಟು, ಮತ್ತೊಂದನ್ನು ಪ್ರಯತ್ನಿಸುತ್ತಿರುವರು. ಅದರಲ್ಲೂ ಹೆಚ್ಚಿನ ಜನರು ಬೊಜ್ಜು ಕರಗಿಸಲು ಕೀಟೋ ಆಹಾರ ಕ್ರಮದ ಮೊರೆ ಹೋಗಿರುವರು. ಇದರಿಂದ ಹಲವಾರು ಲಾಭಗಳು ಇದ್ದರೂ ಕೆಲವರು ಇದನ್ನು ಪಾಲಿಸಿದರೆ, ಅವರಿಗೆ ದೇಹದಲ್ಲಿ ವ್ಯತಿರಿಕ್ತ ಪರಿಣಾಮಗಳು ಕಂಡುಬರುತ್ತಿವೆ. ಕಡಿಮೆ ಕಾರ್ಬ್ಸ್ ಮತ್ತು ಅಧಿಕ ಕೊಬ್ಬು ಇರುವಂತಹ ಈ ಆಹಾರ ಕ್ರಮವು ತೂಕ ಇಳಿಸಲು ಸಹಕಾರಿ ಆಗಿರುವುದು ಮಾತ್ರವಲ್ಲದೆ ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು. ಆದರೆ ದೀರ್ಘ ಸಮಯ ಅಧಿಕ ಕೊಬ್ಬು ಇರುವಂತಹ ಆಹಾರ ಸೇವನೆ ಮಾಡಿದರೆ ಅದು ದೇಹಕ್ಕೆ ಬೇರೆ ಅಡ್ಡ ಪರಿಣಾಮಗಳನ್ನು…

Read More

-ದಿನ ನಿತ್ಯಾ ಮಕ್ಕಳಬಳಿ ಇದೆಯಾ ಮೊಬೈಲ್ -ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಇರಲಿ ನಿಗಾ ಮಕ್ಕಳು ಮಿತಿಮೀರಿ ಮೊಬೈಲ್ ಬಳಸುವುದರಿಂದ ಕಣ್ಣಿನ ಸಮಸ್ಯೆ, ಮೈಗ್ರೇನ್ ಇದ್ದವರಿಗೆ ತಲೆನೋವು ಹೆಚ್ಚಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಕ್ಯಾನ್ಸರ್ ನಂತಹ ಖಾಯಿಲೆಗಳು ಬರುತ್ತದೆ ಎಂಬ ಹೇಳಿಕೆಗಳಿಗೆ ಯಾವುದೇ ಪುರಾವೆಗಳಿಲ್ಲ. ಇದು ಭಯ ಸೃಷ್ಟಿಸುವ ಪ್ರಯತ್ನ ಎಂದು ಮಕ್ಕಳ ಮನೋವೈದ್ಯೆ ಡಾ.ದಿವ್ಯಾ ಹೇಳುತ್ತಾರೆ. ಮೊಬೈಲ್ನ ಅತಿ ಬಳಕೆಯಿಂದ ಖಿನ್ನತೆ, ಆತಂಕ, ನಿದ್ರೆಯ ಸಮಸ್ಯೆ, ಹಸಿವಿನ ಸಮಸ್ಯೆಗಳು ತಲೆದೋರುತ್ತವೆ ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಮಕ್ಕಳಿಗೆ ದಿನಕ್ಕೆ ಎರಡು ಗಂಟೆಗಿಂತ ಹೆಚ್ಚು ಮೊಬೈಲ್ ನೀಡಬಾರದು. ಮನೆಯಲ್ಲಿ ಅವರಿಗೆ ವೈವಿಧ್ಯಮಯ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಮಾಡುವ ಚಟುವಟಿಕೆ ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿ ಮಾಡುವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಸಂಗೀತ ಕಲಿಯುವುದು, ಕಥೆ ಕೇಳುವುದು,,ಕುಟುಂಬ ಸದಸ್ಯರೊಂದಿಗೆ ಸೇರಿ ಮಾಡುವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಚಿತ್ರಕಲೆ, ಅಜ್ಜ, ಅಜ್ಜಿ ಜೊತೆ ಸೇರಿ ಆಡುವ ಬೋರ್ಡ್ ಆಟಗಳು, ಆಡುಗೆ ಮಾಡುವುದು…

Read More

ಮಕ್ಕಳ ಮೆದುಳು ಡೌನ್ ಮಾಡುತ್ತೆ ಮೊಬೈಲ್! -ಪೋಷಕರೇ ಎಚ್ಚರಬೆಂಗಳೂರು : ಮಕ್ಕಳು ಮೊಬೈಲನ್ನು ಅತಿ ಹೆಚ್ಚು ಬಳಸುವುದರಿಂದ ಅವರ ಮೆದುಳು ನಿಷ್ಕ್ರಿಯಗೊಳ್ಳುತ್ತದೆ ಎಂಬ ಆತಂಕ ಹುಟ್ಟಿಸುವ ಮೆಸೇಜ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈಗ ಆನ್ಲೈನ್ ಶಿಕ್ಷಣವು ಸರ್ವವ್ಯಾಪಿ ಆಗಿರುವ ಸಂದರ್ಭದಲ್ಲಿ ಈ ಸಂದೇಶ ಅನೇಕ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಮೊಬೈಲ್ನ ಅತಿ ಬಳಕೆಯಿಂದ ಮಕ್ಕಳ ಮೇಲೆ ಕೆಲ ಅಡ್ಡ ಪರಿಣಾಮ ಉಂಟಾಗಬಹುದಾಗಿದ್ದರೂ ಮೆದುಳು ನಿಷ್ಕ್ರಿಯಗೊಳ್ಳುವಂತಹ ಗಂಭೀರ ಸಮಸ್ಯೆ ತಲೆದೋರುವ ಸಾಧ್ಯತೆಗಳಿಲ್ಲ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.ಮೆದುಳಿಗೆ ಆಮ್ಲಜನಕ ಅಥವಾ ರಕ್ತದ ಪೂರೈಕೆ ಸ್ಥಗಿತಗೊಂಡ ಸಂದರ್ಭದಲ್ಲಿ ಮೆದುಳು ನಿಷ್ಕ್ರೀಯಗೊಳ್ಳುತ್ತದೆ. ಆದರೆ ಮೊಬೈಲ್ ಬಳಕೆಯಿಂದ ಇಷ್ಟೊಂದು ಗಂಭೀರ ಸಮಸ್ಯೆ ತಲೆದೋರುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ವೈದ್ಯಕೀಯ ವಿಜ್ಞಾನ ಇದನ್ನು ಪುಷ್ಟೀಕರಿಸುವುದಿಲ್ಲ. ಆದರೆ ಯಾವುದನ್ನೇ ಅತಿಯಾಗಿ ಮಾಡಿದರೂ ಅಡ್ಡ ಪರಿಣಾಮಗಳಿರುವುದು ಸಹಜ. ಅದೇ ನಿಯಮ ಮೊಬೈಲ್ಗೂ ಅನ್ವಯಿಸುತ್ತದೆ ಎಂದು ಮನೋವೈದ್ಯರು ಮತ್ತು ಮಕ್ಕಳ ತಜ್ಞರು ಹೇಳುತ್ತಾರೆ.

Read More

ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಮನೆ ಮನೆಗಳಲ್ಲೂ ಹಸಿರಿನ ವಾತಾವರಣ ನಿರ್ಮಿಸುವಲ್ಲಿ ಶ್ರಮಿಸುತ್ತಿರುವ ‘ಮೈ ಡ್ರೀಮ್ಗಾರ್ಡನ್’ ಈಗ ದೇಶಾದ್ಯಂತ ವಹಿವಾಟು ವಿಸ್ತರಣೆಗೆ ಮುಂದಾಗಿದೆ. 7 ಮೆಟ್ರೊ ನಗರಗಳು, 90 ಎರಡನೇ ಹಂತದ ನಗರಗಳು ಸೇರಿದಂತೆ ದೇಶಾದ್ಯಂತ 137 ನಗರಗಳಲ್ಲಿ ವಹಿವಾಟು ವಿಸ್ತರಿಸುತ್ತಿದ್ದು, ವಿತರಕರನ್ನು ಆಹ್ವಾನಿಸಿದೆ.ಆ ಮೂಲಕ ದೇಶಾದ್ಯಂತ ನಿರ್ಮಾಣಕ್ಕೆ ಪಣ ತೊಟ್ಟಿದೆ. ವಿತರಕರ ಮೂಲಕ ಸಸಿ, ಕೃಷಿ ಪರಿಕರಗಳನ್ನು ಒದಗಿಸುವ ಜತೆಗೆ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.ನಗರಗಳಲ್ಲಿ ಉತ್ತಮ ಗಾಳಿ ಸಿಗುತ್ತಿಲ್ಲ, ಪ್ರಾಣಿ-ಪಕ್ಷಿಗಳು ನೆಲೆ ಕಳೆದುಕೊಳ್ಳುವಂತಾಗಿದೆ. ಜೀವ ವೈವಿಧ್ಯತೆ ಕಾಪಾಡಿಕೊಂಡು, ಉತ್ತಮ ವಾತಾವರಣ ಉಳಿಸಿಕೊಳ್ಳಲು ಹಸಿರು ಹೆಚ್ಚಿಸುವುದೇ ಮಾರ್ಗ ಎಂಬುದು ‘ಮೈ ಡ್ರೀಮ್ಗಾರ್ಡನ್’ ಸಂಸ್ಥಾಪಕ ಅಶೋಕ್ಕುಮಾರ್ಕೆ.ಸಿ. ಅವರ ನಂಬಿಕೆ. ಈ ನಿಟ್ಟಿನಲ್ಲಿ ಹಸಿರು ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. https://www.mydreamgarden.in/

Read More

ಮೈಲ್ಯಾಂಗ್ ಮೊಬೈಲ್ ಆಪ್‍ನಲ್ಲಿ ಪುಸ್ತಕಗಳ ಪಿಡಿಎಫ್ ಲಭ್ಯ ಬೆಂಗಳೂರು: ರಾಷ್ಟಕವಿ ಕುವೆಂಪು ಜನ್ಮ ದಿನದ ಅಂಗವಾಗಿ ಅವರ 56 ಪುಸ್ತಕಗಳನ್ನು ಇ-ಪುಸ್ತಕಗಳ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್‍ನಲ್ಲಿ ಮಂಗಳವಾರ ಬಿಡುಗಡೆಗೊಳಿಲಾಯಿತು. ಈ ಮೂಲಕ ಇನ್ನು ಕುವೆಂಪು ಅವರ ಪುಸ್ತಕ ಆನ್‍ಲೈನ್‍ನಲ್ಲಿ ಸಿಗಲಿದೆ. ಕುವೆಂಪು ಅವರು ಪ್ರಕಾಶನದ ಹೊಸ ಸಾಧ್ಯತೆಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಆಪ್ ಮೂಲಕ ಪ್ರಪಂಚದೆಲ್ಲೆಡೆ ವೊಬೈಲ್‍ನಲ್ಲೇ ಅವರ ಪುಸ್ತಕಗಳನ್ನು ಓದುವ ದಿನ ನೋಡಿದ್ದರೆ ಕುವೆಂಪು ಬಹಳ ಸಂತೋಷ ಪಡುತ್ತಿದ್ದರು ಎಂದು ಅವರ ಪುತ್ರಿ ತಾರಿಣಿ ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು. ಪ್ರೊ.ಕೆಚಿದಾನಂದ ಗೌಡ ಮಾತನಾಡಿ, ತಂತ್ರಜ್ಞಾನದ ಸಾಧ್ಯತೆಗಳಿಗೆ ತಕ್ಕಂತೆ ನಾವು ಬದಲಾಗಬೇಕು. ಅಂದೊಂದೇ ಭಾಷೆಯನ್ನು ಬೆಳೆಸುವ ದಾರಿ ಕುವೆಂಪು ಅವರ ಪುಸ್ತಕಗಳನ್ನು ಹೊಸಕಾಲದ ಸಾಧ್ಯತೆಗಳೊಂದಿಗೆ ಹೊಸ ಓದುಗರಿಗೆ ತರಲು ಸಾಧ್ಯವಾಗಿರುವುದು ಸಂತಸ ತಂದಿದೆ. ಎಂದರು.

Read More