ಫಲಿತಾಂಶ ಕುತೂಹಲ ಬೆಂಗಳೂರು: ಗ್ರಾಮ ಪಂಚಾಯತಿಗಳ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತ ಎಣಿಕೆಯು ಬುಧವಾರ ಬುಧವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಎಣಿಕೆ ಪ್ರಾರಂಭವಾದ ತಕ್ಷಣ ಆರಂಭಿಕ ಮುನ್ನಡೆಗಳು ಬರಲಾರಂಭಿಸುತ್ತವೆ. ಆದರೆ ಅಂತಿಮ ಫಲಿತಾಂಶ ದಿನದ ಅಂತ್ಯದ ವೇಳೆಗೆ ಸ್ಪಷ್ಟವಾಗುತ್ತವೆ ಎಂದು ಹೇಳಲಾಗಿದೆ. ಡಿ.22 ರಂದು ಪ್ರಾರಂಭವಾದ ಮೊದಲ ಹಂತದ ಮತದಾನ, ಭಾನುವಾರ ನಡೆದ ಎರಡನೆ ಹಂತದ ಮತದಾನದೊಂದಿಗೆ ಚುನಾವಣೆ ಮುಕ್ತಾಯಗೊಂಡಿದೆ. ಮೊದಲ ಹಂತದಲ್ಲಿ ಶೇ.80 ರಷ್ಟು ಮತದಾನ ದಾಖಲಾಗಿದ್ದರೆ, ಭಾನುವಾರ ನಡೆದ ಎರಡನೇ ಹಂತದಲ್ಲಿ ಈ ಸಂಖ್ಯೆ 80.71 ಕ್ಕೆ ಏರಿದೆ. ಮೊದಲ ಹಂತದ ಮತದಾನದಲ್ಲಿ 117 ತಾಲ್ಲೂಕುಗಳಲ್ಲಿ 3,000 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಮತದಾನ ಮಾಡಿದ್ದವು. ಎರಡನೇ ಹಂತದಲ್ಲಿ 109 ತಾಲ್ಲೂಕುಗಳಲ್ಲಿ 2,709 ಪಂಚಾಯಿತಿಗಳಿಗೆ ಮತದಾನ ನಡೆದಿತ್ತು. ಎರಡೂ ಹಂತಗಳಲ್ಲಿ 72,616 ಸ್ಥಾನಗಳಿಗೆ 2,22,814 ಅಭ್ಯರ್ಥಿಗಳು ಕಣದಲ್ಲಿದ್ದರು. ಈಗಾಗಲೇ 8,074 ಅಭ್ಯರ್ಥಿಗಳು ಅವಿರೋಧವಾಗಿ ನ.30 ರಂದು ಗ್ರಾ.ಪಂ ಚುನಾವಣೆಯನ್ನು ಘೋಷಿಸಲಾಗಿತ್ತು. 6,004 ಗ್ರಾಮ ಪಂಚಾಯಿತಿಗಳಲ್ಲಿ 5,762…
Author: Nammur Express Admin
ಹುದ್ದೆ, ಗೌರವ, ಅಧಿಕಾರ ಶಾಶ್ವತವಲ್ಲ..ಸ್ನೇಹ, ಬಾಂಧವ್ಯ, ವಿಶ್ವಾಸ ಹಾಳು ಮಾಡಿಕೊಳ್ಳಬೇಡಿ! ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಬುಧವಾರ(ನಾಳೆ) ಪ್ರಕಟಗೊಳ್ಳಲಿದೆ. ಇಡೀ ರಾಜ್ಯದಲ್ಲಿ ಗ್ರಾಮ ಸಮರ ಮುಕ್ತಾಯವಾಗಿ ಕೊನೆ ಹಂತಕ್ಕೆ ಬಂದಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಬದುಕಿನ ಸೋಲು ಗೆಲುವಿದ್ದಂತೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲುವವರು, ಗೆಲ್ಲುವವರು ನಮ್ಮವರೇ. ಆದರೆ ಯಾವುದೇ ಕಾರಣಕ್ಕೂ ದ್ವೇಷ ಬೇಡ, ಗ್ರಾಮದ, ಜನರ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಕೆಲಸ ಮಾಡೋಣ. ಇದು ನಮ್ಮೂರ್ ಎಕ್ಸ್‍ಪ್ರೆಸ್ ಕಳಕಳಿ. ಸೋಲು ಮುಂದಿನ ಚುನಾವಣೆಯ ಗೆಲುವಿನ ಮೆಟ್ಟಿಲಾಗಬಹುದು. ಯಾರೂ, ಯಾವುದೂ ಶಾಶ್ವತವಲ್ಲ. ಹುದ್ದೆ, ಗೌರವ, ಅಧಿಕಾರವೂ ಅಷ್ಟೆ. ಚುನಾವಣೆಯ ಫಲಿತಾಂಶ ಏನೇ ಬಂದರೂ ಸ್ವೀಕರಿಸಲು ಸಿದ್ಧರಾಗಿ. ವೈಯಕ್ತಿಕ ದ್ವೇಷ, ಹಗೆ ಸಾಧನೆ ಬೇಡ. ಎಲ್ಲರೂ ಒಟ್ಟಾಗಿ ಬಾಳೋಣ, ಸೌಹಾರ್ದತೆಯಿಂದ ಜೀವಿಸೋಣ, ನಿಮ್ಮ ನಡೆ, ನುಡಿ ಇತರರಿಗೆ ಮಾದರಿಯಾಗಲಿ. ಗೆದ್ದವರನ್ನು ನಮ್ಮವರೆಂದು ಭಾವಿಸೋಣ. ಪಕ್ಷ, ಜಾತಿ, ಧರ್ಮದ ಹೆಸರಲ್ಲಿ ಬಾಂಧವ್ಯ, ಸ್ನೇಹ ಹಾಳು ಮಾಡಿಕೊಳ್ಳಬೇಡಿ. ನಮ್ಮೂರ್ ಎಕ್ಸ್‍ಪ್ರೆಸ್ ಮಾಧ್ಯಮ ಫಲಿತಾಂಶವನ್ನು…
ಗ್ರಾಮ ಪಂಚಾಯತ್ ಚುನಾವಣೆಯ ಕ್ಲೈಮಾಕ್ಸ್ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜಲ್ಲಿ ಮತ ಎಣಿಕೆ ತೀರ್ಥಹಳ್ಳಿ: ಗ್ರಾಮ ಪಂಚಾಯತ್ ಚುನಾವಣೆ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಬುಧವಾರ ಬೆಳಗ್ಗೆಯಿಂದಲೇ ಫಲಿತಾಂಶ ಪ್ರಕಟವಾಗಲಿದೆ.ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯತ್‍ಗಳ 322 ಮಂದಿಯ ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ. 14 ಮಂದಿ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ. ಪೊಲೀಸರು ಸೇರಿ 500ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಈ ಮತ ಎಣಿಕೆ ಕಾರ್ಯದಲ್ಲಿ ತೊಡಗಲಿದ್ದಾರೆ. ಬಹುತೇಕ ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಸುಮಾರು 57 ರೌಂಡ್ಸ್‍ನ ಎಣಿಕೆ ನಡೆಯಲಿದೆ.ಮತ ಎಣಿಕೆ ಕೇಂದ್ರಕ್ಕೆ ಕ್ಯಾಂಡಿಟೇಡ್ ಅಥವಾ ಅವರ ಪರ ಏಜೆಂಟ್‍ಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಸಂಜೆ 5ರೊಳಗೆ ಬಹುತೇಕ ಮತ ಎಣಿಕೆ ಮುಕ್ತಾಯವಾಗಲಿದೆ. ಈಗಾಗಲೇ ಪ್ರತಿ ಹಳ್ಳಿಯಲ್ಲೂ ಅಭ್ಯರ್ಥಿಗಳು ಮತ ಎಣಿಕೆಯನ್ನು ಕುತೂಹಲದಿಂದ ಕಾಯುತ್ತಿದ್ದಾರೆ.ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದರಿಂದ ಈ ಎಣಿಕೆ ಮಹತ್ವ ಪಡೆದಿದೆ. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜೆಡಿಎಸ್…
ರಾಜಕೀಯದಲ್ಲೇ ದುರಂತ ಘಟನೆಪರಿಷತ್ ಗಲಾಟೆಯಿಂದ ನೊಂದು ಸಾವು? ಚಿಕ್ಕಮಗಳೂರು: ರೈಲಿಗೆ ತಲೆಕೊಟ್ಟು ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಅವರು ಚಿಕ್ಕಮಗಳೂರು ಜಿಲ್ಲೆ ಗುಣಸಾಗರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶವ ಪರೀಕ್ಷೆಗೆ ಬಂದಿದೆ. ಸಖರಾಯಪಟ್ಟಣದಲ್ಲಿ ಸಂಜೆ 5 ಗಂಟೆಗೆ ಶವ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ. 2 ಗಂಟೆ ವೇಳೆಗೆ ಚಿಕ್ಕಮಗಳೂರಿಗೆ ಶವ ಬರಲಿದೆ.ಇತ್ತೀಚೆಗೆ ವಿಧಾನ ಪರಿಷತ್ನಲ್ಲಿ ನಡೆದ ಘಟನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೆತ್ನೋಟ್ ಈ ಬಗ್ಗೆ ತಿಳಿದು ಬಂದಿದೆ. ರಾತ್ರಿ 11:30 ರ ಸುಮಾರಿಗೆ ಘಟನೆ ನಡೆದಿದೆ. 11:30ರ ವೇಳೆಗೆ ಶವ ಪತ್ತೆಯಾಗಿದೆ.ಏನಾಗಿತ್ತು? : ರಾತ್ರಿ 10 ಗಂಟೆಗೆ ಒಬ್ಬರೇ ಮನೆಯಿಂದ ಕಾರಿನಲ್ಲಿ ತೆರಳಿದ್ದ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಧರ್ಮೇಗೌಡರು ಆಪ್ತರಾಗಿದ್ದರು.ಘಟನಾಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.1955 ಡಿಸೆಂಬರ್ 16 ರಂದು ಚಿಕ್ಕಮಗಳೂರು ತಾಲೂಕಿನ ಸರಪನಹಳ್ಳಿಯಲ್ಲಿ ಎಸ್.ಆರ್.…
ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗಿಲ್ಲ ಅಡ್ಡಿ ಬೆಂಗಳೂರು: ಹೊಸ ವರ್ಷದ ಮೊದಲ ದಿನ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಾಲಯಗಳಿಗೆ ಆಗಮಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ಈ ರೀತಿ ಹೆಚ್ಚಿನ ಸಂಖ್ಯೆಯ ಜನರ ನಿರ್ವಹಣೆ ಆಡಳಿತ ಮಂಡಳಿಗೆ ಸವಾಲು ಆಗಲಿದೆ. ಅಲ್ಲದೇ, ಸೋಂಕಿಗೆ ಆಹ್ವಾನ ನೀಡುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಹೀಗಾಗಿ ಹಲವು ದೇಗುಲಗಳಲ್ಲಿ ಅವಕಾಶ ಇಲ್ಲ.ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗೆ ಅವಕಾಶ ನೀಡಲಾಗಿದೆ.
ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮ ಇಲ್ಲಪ್ರವಾಸಿ ತಾಣಗಳಲ್ಲಿ ಹದ್ದಿನಗಣ್ಣು ಬೆಂಗಳೂರು: ಹೊಸ ರೂಪಾಂತರದ ಕರೋನಾ ಇದೀಗ ಹೊಸ ವರ್ಷದ ಸಂಭ್ರಮವನ್ನು ಮಂಕು ಮಾಡಿದೆ.ಬೆಂಗಳೂರಲ್ಲಿ ಡಿಸೆಂಬರ್ 31ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ. ರಾಜಧಾನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಬೆಂಗಳೂರಿನಲ್ಲಿ ನಾಕಾಬಂದಿ ಇರಲಿದ್ದು, ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಇರಲಿದ್ದು, ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆದರೆ, ಖಾಸಗಿ ಸ್ಥಳಗಳಲ್ಲಿ ಆಚರಣೆಗೆ ಅವಕಾಶ ನೀಡಲಾಗಿದೆ. ಪಬ್ಗಳಲ್ಲಿ ಈವೆಂಟ್, ಶೋ ನಡೆಸುವಂತಿಲ್ಲ ಹಾಗೂ ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ. ಹೊಟೇಲ್ಗಳಲ್ಲಿ ಮಾರ್ಗಸೂಚಿ ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ಹೇಳಿದೆ.ನಗರದ ಕೆಲವೆಡೆ ವಿಶೇಷ ನಿಗಾ ಇಡಲಾಗಿದ್ದು, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್,…
ಆಪ್ ಮೂಲಕ ಸಾಲ ಮೋಸ: ಮೂವರು ಅರೆಸ್ಟ್..!ಸಾಲದ ಹೆಸ್ರಲ್ಲಿ ಅಧಿಕ ಬಡ್ಡಿ: ಜನರೇ ಹುಷಾರ್..! ಬೆಂಗಳೂರು: ದೇಶದಲ್ಲಿ ಕರೋನಾ ಮುಂದಿಟ್ಟುಕೊಂಡು ಆ್ಯಪ್ ಮೂಲಕ ಸಾಲ ನೀಡಿ ಅಧಿಕ ಬಡ್ಡಿ ವಿಧಿಸಿ ತೊಂದರೆ ಕೊಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬೆಂಗಳೂರಲ್ಲಿ ಮೂವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚೀನಾ ದೇಶದ ಪ್ರಜೆಗಳು ಭಾಗಿಯಾಗಿರುವುದು ತಿಳಿದು ಬಂದಿದೆ. ಶೀಘ್ರವೇ ಅವರನ್ನು ಬಂಧಿಸುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಅಚ್ಚರಿ ಎಂದರೆ ರಾಜ್ಯದಲ್ಲಿ ಸಾವಿರಾರು ಜನ ಈ ಜಾಲಕ್ಕೆ ಬಲಿಯಾಗಿ ಬದುಕು ಕಳೆದುಕೊಂಡಿದ್ದಾರೆ. ಸಾಲ ನೀಡುವುದಾಗಿ ಆಮಿಷ ಒಡ್ಡುವ ಕೆಲವು ಅನಧಿಕೃತ ಮೊಬೈಲ್ ಆ್ಯಪ್‌ಗಳ ಜಾಲಕ್ಕೆ ಬಲಿಯಾಗಬಾರದು ಎಂದು ಆರ್‌ಬಿಐ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಈಗಾಗಲೇ 158ಕ್ಕೂ ಹೆಚ್ಚು ಆಪ್ಗಳನ್ನು ತೆಲಂಗಾಣ ಸರ್ಕಾರ ಬಂದ್ ಮಾಡಲು ಗೂಗಲ್ ಜತೆ ಮಾತುಕತೆ ನಡೆಸಿದೆ.
ನಲಪಾಡ್, ಮಂಜುನಾಥ್ ಇತರರು ಕಣಕ್ಕೆಆನ್ಲೈನ್ ಅಥವಾ ನೇರ ನೇಮಕ..? ಬೆಂಗಳೂರು: ರಾಜ್ಯ ಯುವ ಘಟಕದ ಅಧ್ಯಕ್ಷರು ಮತ್ತಿತರ ಪದಾಧಿಕಾರಿಗಳ ಚುನಾವಣೆ ಈ ಬಾರಿ ಆನ್ ಲೈನ್ ನಲ್ಲಿ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.ಸಂಕ್ರಾಂತಿ ವೇಳೆಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ.ಈಗ ಹಾಲಿ ಅಧ್ಯಕ್ಷರಾಗಿರುವ ಬಸವನ ಗೌಡ ಬಾದರ್ಲಿ ಅಧಿಕಾರವಧಿ ಪೂರ್ಣಗೊಂಡ ಬಳಿಕ ಮಾರ್ಚ್ 2020ರಿಂದಲೂ ಈ ಹುದ್ದೆ ಖಾಲಿಯಿದೆ. ಒಂಬತ್ತು ತಿಂಗಳ ನಂತರ, ಈ ಹುದ್ದೆಗೆ ಚುನಾವಣೆ ನಡೆಸಬೇಕೆ ಅಥವಾ ಯುವ ವಿಭಾಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕೆ ಎಂಬ ಸಂದಿಗ್ಧ ಸ್ಥಿತಿಯಲ್ಲಿದೆ ಎಐಸಿಸಿ ಇದೆ. ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರನ್ನು ಎಐಸಿಸಿ ನೇಮಕ ಮಾಡಿತ್ತು. ಆದರೆ, ಇತರ ಪದಾಧಿಕಾರಿಗಳನ್ನು ನೇಮಕ ಮಾಡಿರಲಿಲ್ಲ.ರಾಜ್ಯದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು 6.5 ಲಕ್ಷ ಮತದಾರರು ಅರ್ಹರಿದ್ದಾರೆ. ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್, ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಳಪಾಡ್, ಮಾಜಿ ಸಚಿವ ಎಂಆರ್ ಸೀತಾರಾಮ್…
ಆಸ್ಪತ್ರೆಗೆ ದಾಖಲಾಗಿದ್ದ ರಜನೀಕಾಂತ್15 ದಿನ ವಿಶ್ರಾಂತಿ ಸೂಚಿಸಿದ ವೈದ್ಯರು! ಹೈದರಾಬಾದ್: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಅವರ ಹೊಸ ಪಕ್ಷ ಘೋಷಣೆ ಕಾತುರ ಹೆಚ್ಚಾಗಿದೆ. ಆದರೆ ವೈದ್ಯರು ವಿಶ್ರಾಂತಿ ಹೇಳಿದ್ದಾರೆ. ಅಧಿಕ ರಕ್ತದೊತ್ತಡದಿಂದ ರಜನಿಕಾಂತ್ ಅವರನ್ನು ಶುಕ್ರವಾರ (ಡಿ.25) ಬೆಳಗ್ಗೆ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ, ಆರೋಗ್ಯ ಸುಧಾರಿಸಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿದೆ. ಇನ್ನೂ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ. ಯಾವುದೇ ಒತ್ತಡ ಇರಬಾರದು ಹೀಗಾಗಿ 1 ವಾರ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸತತ ಚಿತ್ರೀಕರಣದಿಂದ ರಜನಿಕಾಂತ್ ಅವರ ರಕ್ತದ ಒತ್ತಡದಲ್ಲಿ ಏರಿಳಿತ ಕಂಡು ಬಂದಿದೆ ಎಂದು ಆಸ್ಪತ್ರೆ ಮಂಡಳಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.ರಜನಿಕಾಂತ್ ಡಿಸೆಂಬರ್ 13ರಿಂದ ಹೈದರಾಬಾದ್ ನಲ್ಲಿದ್ದು, ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.…
ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಘಟನೆ ಮೈಸೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡು ನರಳುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.ಮೈಸೂರಿನ ಚಾಮುಂಡಿಬೆಟ್ಟದ ದೇವಿ ಕೆರೆ ಬಳಿ ಘಟನೆ ನಡೆದಿದ್ದು ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆಯನ್ನು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆನೆ ವೈದ್ಯ ಡಾ.ನಾಗರಾಜ್ ನೇತೃತ್ವದಲ್ಲಿ ಚಿರತೆ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿದಿದ್ದಾರೆ. ರಾತ್ರಿ ಅಥವಾ ಮುಂಜಾನೆ ವೇಳೆ ಘಟನೆ ಉಂಟಾಗಿರಬಹುದು. ಚಿರತೆಯ ಮೇಲೆ ಯಾವುದೇ ಗಾಯಗಳು ಆಗಿಲ್ಲ. ವಾಹನಗಳ ಡಿಕ್ಕಿಯು ಆಗಿರಬಹುದು ಅಥವಾ ಪ್ರಾಣಿಗಳಿಗೆ ಕೆಲವೊಮ್ಮೆ ಪಾರ್ಶ್ವವಾಯು ಆಗಿರುವ ಸಾಧ್ಯತೆಗಳಿದೆ. ಎಕ್ಸ್ ರೇ ನಂತರವಷ್ಟೇ ಕಾರಣ ತಿಳಿಯಬಹುದು. ಮುಂದಿನ ಹಂತದಲ್ಲಿ ನಿಖರ ಕಾರಣ ಗೊತ್ತಾಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.