Author: Nammur Express Admin

ದೇಶದ ಇತಿಹಾಸದಲ್ಲೇ ಅತೀ ಕಡಿಮೆ ದಾಖಲು ಮುಂಬೈ: 2020ನೇ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯ ಜಿಡಿಪಿ ಶೇ.7.5ರಷ್ಟು ಕುಸಿತ ಕಂಡಿದೆ. ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಆರ್ಥಿಕತೆ ಚೇತರಿಕೆ ಕಂಡಿದೆ.ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‍ಎಸ್‍ಒ), ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನ.27ರಂದು 2020-21 ನೇ ಸಾಲಿನ ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್) ಅವಧಿಯ ಜಿಡಿಪಿಯನ್ನು ಸ್ಥಿರ (2011-12) ಮತ್ತು ಪ್ರಸ್ತುತ ಬೆಲೆಗಳ ಲೆಕ್ಕದಲ್ಲಿ ಪ್ರಕಟಿಸಿದ್ದು, ಎರಡನೇ ತ್ರೈಮಾಸಿಕದಲ್ಲಿ ಸ್ಥಿರ ಬೆಲೆಯಲ್ಲಿ ಜಿಡಿಪಿ 33.14 ಲಕ್ಷ ಕೋಟಿಯಷ್ಟಿದೆ. 2019-20 ರ ಎರಡನೇ ತ್ರೈಮಾಸಿಕದಲ್ಲಿ ಇದು 35.84 ಲಕ್ಷ ಕೋಟಿಯಷ್ಟಿತ್ತು. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.4.4 ರಷ್ಟು ಬೆಳವಣಿಗೆಯಲ್ಲಿದ್ದದ್ದು ಈ ಬಾರಿ ಶೇ.7.5 ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ. 32.78 ಲಕ್ಷ ಕೋಟಿಯಷ್ಟಿದ್ದ 2019-20 ರ ಎರಡನೇ ತ್ರೈಮಾಸಿಕದ ಒಟ್ಟು ಮೌಲ್ಯವರ್ಧನೆ(ಜಿವಿಎ) 2020-21 ರಲ್ಲಿ 30.49 ಲಕ್ಷ ಕೋಟಿಗೆ ಕುಸಿದಿದ್ದು ಶೇ.7.0 ರಷ್ಟು ಇಳಿಕೆಯಾಗಿದೆ. ಸ್ಥಿರ ಬೆಲೆ ಲೆಕ್ಕದಲ್ಲಿ 2020-21 ರ ಎರಡನೇ…

Read More

ನಿರ್ದೇಶಕ ರವಿ ಶ್ರೀವತ್ಸ ಆಕ್ಷನ್ ಕಟ್: ಚಿತ್ರೀಕರಣ ಜನವರಿಯಿಂದ ಶುರು ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಜೀವನಾಧಾರಿತ ಚಿತ್ರ ಇದೀಗ ತೆರೆ ಮೇಲೆ ಬರಲು ಸಿದ್ಧವಾಗಿದೆ.ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾಗೆ ನಿರ್ದೇಶಕ ರವಿ ಶ್ರೀವತ್ಸ ಚಾಲನೆ ನೀಡಿದ್ದಾರೆ. ಚಿತ್ರಕ್ಕೆ ಎಂಆರ್ ಟೈಟಲ್ ಫಿಕ್ಸ್ ಆಗಿದ್ದು, ಸೌಭಾಗ್ಯ ಲಕ್ಷ್ಮೀ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಡೆಡ್ಲಿಸೋಮ ಚಿತ್ರದ ನಿರ್ಮಾಪಕ ಶುಭ ರಾಜಣ್ಣ ಬಂಡವಾಳ ಹೂಡುತ್ತಿದ್ದಾರೆ. ನಿರ್ಮಾಪಕರ ಮಗ ದೀಕ್ಷಿತ್, ಮುತ್ತಪ್ಪ ರೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗಲಿದ್ದು, ಆಗಸ್ಟ್ ಅಥವಾ ಸೆಪ್ಟಂಬರ್‍ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಮುತ್ತಪ್ಪ ರೈ ಬಯೋಪಿಕ್ ಮಾಡಬೇಕು ಎನ್ನುವ ಪ್ರಯತ್ನ ಹಲವು ವರ್ಷಗಳ ಹಿಂದೆಯೇ ನಡೆದಿತ್ತು. ಸುದೀಪ್ ನಟನೆಯಲ್ಲಿ ಅಪ್ಪ ಎನ್ನುವ ಹೆಸರಿನಲ್ಲಿ ಸಿನಿಮಾ ಅನೌನ್ಸ್ ಆಗಿತ್ತು. ಬಳಿಕ ಸುದೀಪ್ ಬದಲಿಗೆ ವಿವೇಕ್ ಒಬೆರಾಯ್ ಆಯ್ಕೆಯಾಗಿ ಸಿನಿಮಾ ಪ್ರಾರಂಭದಲ್ಲೇ ನಿಂತು ಹೋಗಿತ್ತು. ಈ ವರ್ಷ…

Read More

164 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಸಂಪುಟ ಒಪ್ಪಿಗೆ ಶಿವಮೊಗ್ಗ: ಸಿಎಂ ತವರು ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನೆ ಹೆಚ್ಚುವರಿ ಹಣ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನಾ ವೆಚ್ಚ 384 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಯೋಜನೆ ವೇಗ ಹೆಚ್ಚಿದೆ.ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ. ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿ, ಕರ್ನಾಟಕ ಸರ್ಕಾರ ಈ ಹಿಂದೆ 220 ಕೋಟಿ ರೂ.ಗಳ ಅನುದಾನದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಆರಂಭಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ 164 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ನೀಡಲು ಅನುಮೋದನೆ ನೀಡಲಾಯಿತು.ಶಿವಮೊಗ್ಗ ವಿಮಾನ ನಿಲ್ದಾಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸು. ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗಳು ನಡೆಯುತ್ತಿವೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ಕೈಗೊಳ್ಳಲಿದ್ದು, ಒಂದು ವರ್ಷದಲ್ಲಿ…

Read More

ಗುಜರಾತ್ ಹೈಕೋರ್ಟಿನಿಂದ ಮಹತ್ವದ ತೀರ್ಪು ಅಹಮದಾಬಾದ್: ಕರೋನಾ ಕಾನೂನು ಉಲ್ಲಂಘಿಸಿದವರಿಗೆ ಗುಜರಾತ್ ಕೋರ್ಟ್ ಇದೀಗ ಅಚ್ಚರಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.ಕರೋನಾ ನಿಬರ್ಂಧಗಳನ್ನು ಉಲ್ಲಂಘಿಸಿದವರನ್ನು ಕೋವಿಡ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಕಳುಹಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕರೋನಾ ಮಾರ್ಗಸೂಚಿ ಕಡೆಗಣಿಸಿದರೆ ಅದನ್ನು ಪುನರಾವರ್ತಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ.”ನಾವು ಮಾಸ್ಕ್ ಧರಿಸದ ವ್ಯಕ್ತಿಗಳಿಂದ ದಂಡವನ್ನು ವಸೂಲಿ ಮಾಡುತ್ತೇವೆ. ಇದು ಅಷ್ಟಕ್ಕೆ ಮಾತ್ರ ಸೀಮಿತವಾಗಿರದೇ ತೀರಾ ಗಂಭೀರ ವಿಚಾರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಗುಜರಾತ್‍ನಲ್ಲಿ ಕರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ ಎಂದು ವಕೀಲ ವಿಶಾಲ್ ಅಂತ್ವಾನಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಒಂದು ಬಾರಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಎಚ್ಚರಿಕೆಯನ್ನು ನೀಡಬೇಕು. ಅದೇ ತಪ್ಪನ್ನು ಪುನರಾವರ್ತಿಸಿದರೆ ಅಂಥವರನ್ನು ಕೊವಿಡ್-19 ಕೇಂದ್ರದಲ್ಲಿ ಕೆಲಸ ಮಾಡುವುದಕ್ಕೆ ಕಳುಹಿಸಬೇಕು. ಹಾಗಾದಲ್ಲಿ ಮತ್ತೊಮ್ಮೆ ಅಂಥವರು ಎಂದಿಗೂ…

Read More

ಪ್ರಾರಂಭದಲ್ಲಿ “0” ಇನ್ಮುಂದೆ ಕಡ್ಡಾಯ. ನವ ದೆಹಲಿ: ನೀವು ಲ್ಯಾಂಡ್‍ಲೈನ್ ಫೆÇೀನ್‍ನಿಂದ ಯಾವುದೇ ಮೊಬೈಲ್‍ಗೆ ಕರೆ ಮಾಡಬೇಕಾದರೆ ಪ್ರಾರಂಭದಲ್ಲಿ “0” ಒತ್ತುವುದು ಇನ್ಮುಂದೆ ಕಡ್ಡಾಯ. ಈ ಹೊಸ ನಿಯಮ ಜನವರಿ 1ರಿಂದಲೇ ಜಾರಿಗೆ ಬರಲಿದೆ.ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ಲ್ಯಾಂಡ್‍ಲೈನ್‍ನಿಂದ ಮೊಬೈಲ್‍ಗೆ ಕರೆ ಮಾಡುವ ಮುನ್ನ “0” ಅನ್ನು ಡಯಲ್ ಮಾಡಬೇಕು ಎಂದು ಮೇ.29ರಂದು ದೂರಸಂಪರ್ಕ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ನ.20ರಂದು ಸುತ್ತೋಲೆ ಹೊರಡಿಸಿದ ಟ್ರಾಯ್ ಈ ಶಿಫಾರಸ್ಸನ್ನು ಜಾರಿಗೆ ತರುವುದಾಗಿ ತಿಳಿಸಿದೆ.ಗ್ರಾಹಕರು ಪ್ರಾರಂಭದಲ್ಲಿ “0” ಸಂಖ್ಯೆಯನ್ನು ಒತ್ತದೇ ಕರೆ ಮಾಡಿದ್ದಲ್ಲಿ ರೆಕಾರ್ಡ್ ಮೂಲಕ “0” ಅನ್ನು ಒತ್ತುವಂತೆ ಮಾಹಿತಿ ನೀಡಬೇಕು ಎಂದು ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ.ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸದ್ಯಕ್ಕೆ 11 ಅಂಕೆಗಳಿಗೆ ಮೊಬೈಲ್ ಸಂಖ್ಯೆಯನ್ನು ಏರಿಸುವಂತ ಯಾವುದೇ ರೀತಿಯಾದ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿತ್ತು.

Read More

ಮಂಗಳೂರಲ್ಲೊಂದು ವಿಭಿನ್ನ ಮಾನವೀಯ ಸೇವೆ ಮಂಗಳೂರು: ಕ್ಯಾನ್ಸರ್‍ನಿಂದ ಬಳಲುತ್ತಿರುವವರಿಗೆ ಸಹಾಯ ನೀಡುವ ಸಲುವಾಗಿ ಇಬ್ಬರು ಮಕ್ಕಳು ಸೇರಿದಂತೆ 27 ಮಂದಿ ಕೂದಲು ದಾನ ಮಾಡುವ ಮೂಲಕ ಸೇವೆಯ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮಂಗಳೂರಿನ ಲೇಡಿಸ್ ಸರ್ಕಲ್ 82, ಮೇರಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸೆಲೂನ್ ಬಂಟ್ಸ್ ಹಾಸ್ಟೆಲ್ ಆಯೋಜಿಸಿದ “ಹೇರ್ ಫಾರ್ ಹೋಪ್” ಕೇಶ ದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರು, ಮಕ್ಕಳು, ಯುವತಿಯರು ತಮ್ಮ ಅಂದದ ಕೂದಲನ್ನು ಕ್ಯಾನ್ಸರ್ ಪೀಡಿತರ ನಿಧಿಗಾಗಿ ದಾನ ಮಾಡಿದರು. ಒಂದು ವಾರದಿಂದ ಕೇಶ ದಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾನವೀಯ ನೆಲೆಯಲ್ಲಿ 27 ಮಂದಿ ಮಹಿಳೆಯರು ಕೇಶ ನೀಡಿದರು. ಈ ಪೈಕಿ ಎಂಟು ವರ್ಷದ ಮಗು ಹಾಗೂ ಒಂಬತ್ತು ವರ್ಷದ ಮತ್ತೊಬ್ಬ ಮಗು ಕೂದಲನ್ನು ನೀಡಿ ಸೈ ಎನಿಸಿಕೊಂಡರು.

Read More

ಸ್ಟಾರ್ ಏರ್ ಕಂಪನಿಯಿಂದ ಜ.1ಕ್ಕೆ ಆರಂಭಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶ ಹುಬ್ಬಳ್ಳಿ: ತಿರುಪತಿ ದೇವರ ದರ್ಶನ ಪಡೆಯಲು ವಿಮಾನದಲ್ಲಿ ಹೋಗುವ ಉತ್ತರ ಕರ್ನಾಟಕ ಭಾಗದ ಜನರ ಕನಸು ನನಸಾಗಲಿದ್ದು, ಜನವರಿ 1ರಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಸೇವೆ ಆರಂಭವಾಗಲಿದೆ. ಸ್ಟಾರ್ ಏರ್ ಕಂಪನಿ ಹುಬ್ಬಳ್ಳಿ-ತಿರುಪತಿ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಗುರುವಾರ ಹೊರತುಪಡಿಸಿ ವಾರದ ಉಳಿದ ದಿನ ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಹಾರಾಟ ನಡೆಸಲಿದೆ. ಬೆಳಗ್ಗೆ 11.55ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 1 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿಯಿಂದ 1.25ಕ್ಕೆ ಹೊರಡುವ ವಿಮಾನ 2.30ಕ್ಕೆ ತಿರುಪತಿಗೆ ತಲುಪಲಿದೆ. ಸ್ಟಾರ್ ಏರ್ ಹುಬ್ಬಳ್ಳಿ-ತಿರುಪತಿ ವಿಮಾನ ಸಂಚಾರ ಆರಂಭಿಸುವುದಾಗಿ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ವಿಳಂಬವಾಗಿ ಸೇವೆ ಆರಂಭವಾಗಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿನ ದೊಡ್ಡ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿಗೆ ಮೂರನೇ ಸ್ಥಾನವಿದೆ. 2020ರ ಏಪ್ರಿಲ್‍ನಿಂದ ಅಕ್ಟೋಬರ್ ತನಕ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ…

Read More

ಪಂಚಲಿಂಗ ದರ್ಶನ 1000 ಜನರಿಗೆ ಮಾತ್ರ! ಚಾಮರಾಜನಗರ/ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಮಲೈಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರು ಮಾದಪ್ಪನ ದರ್ಶನ ಪಡೆದಿದ್ದಾರೆ. ಚಾ.ನಗರಕ್ಕೆ ಭೇಟಿ ನೀಡಿದರೆ ಖುರ್ಚಿ ಹೋಗುತ್ತೆ ಎಂಬ ಅಪಶಕುನದ ವಿರುದ್ಧ ಈ ಭೇಟಿ ಮಹತ್ವ ಪಡೆದಿದೆ. ಆದರೇ ದೇವಸ್ಥಾನದ ಪ್ರಸಾದ ಸ್ವೀಕರಿಸಲಿಲ್ಲ ಎನ್ನಲಾಗಿದೆ. ಮಾದಪ್ಪನ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು,ಪಕ್ಷದ ಹೈಕಮಾಂಡ್ ಆದೇಶ ಬಂದ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಸಂಸದ ಶ್ರೀನಿವಾಸ್ ಪ್ರಸಾದ್ ಬೇಸರದ ಬಗ್ಗೆ ಅವರನ್ನ ಕರೆದು ಮಾತನಾಡಿದ್ದೇನೆ. ಯಾವುದೇ ಸಮಸ್ಯೆ ಇಲ್ಲ ಎಂದರು. ಪಂಚಲಿಂಗ ದರ್ಶನ 1000 ಜನರಿಗೆ ಮಾತ್ರ!: ಒಂದು ಸಾವಿರ ಜನಕ್ಕೆ ಸೀಮಿತಗೊಳಿಸಿ, ಸರಳವಾಗಿ ಪಂಚಲಿಂಗ ದರ್ಶನ ಮಹೋತ್ಸವ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದ ಪಂಚಲಿಂಗ ದರ್ಶನ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಲಿಂಗ ದರ್ಶನದ ಹಿನ್ನೆಲೆ ಅಗತ್ಯವಿರುವ ಕೆಲಸಗಳನ್ನು ಈಗ ತುರ್ತಾಗಿ ಕೈಗೊಳ್ಳಬೇಕು. ಪಂಚಲಿಂಗ…

Read More

ನ.26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಬೆಂಗಳೂರು: ಕೇಂದ್ರ ಕಾರ್ಮಿಕ ಸಂಘ ಗುರುವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ನ.26ರಂದು ಹಲವು ಖಾಸಗಿ ಬ್ಯಾಂಕ್‍ಗಳ ವ್ಯವಹಾರ ಸ್ಥಗಿತಗೊಳ್ಳಲಿದೆ.ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬ್ಯಾಂಕ್ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಗುರುವಾರ ಬ್ಯಾಂಕ್‍ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಬಂದ್ ಬೆಂಬಲಿಸಿಲ್ಲ.ಖಾಸಗಿ ವಲಯದ ಹಲವು ಬ್ಯಾಂಕ್, ವಿದೇಶಿ ಬ್ಯಾಂಕ್‍ಗಳ ಉದ್ಯೋಗಿಗಳು ಮುಷ್ಕರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣದ ಮೂಲಕ ಹಲವಾರು ಬ್ಯಾಂಕ್ ಗುರುವಾರ ವ್ಯವಹಾರ ಇರುವುದಿಲ್ಲ ಎಂದು ಈಗಾಗಲೇ ಗ್ರಾಹಕರಿಗೆ ಮಾಹಿತಿ ನೀಡಿವೆ.ಕಾರಣ ಏನು?: ಬ್ಯಾಂಕ್‍ಗಳ ಖಾಸಗೀಕರಣಕ್ಕೆ ವಿರೋಧ, ಹೊರಗುತ್ತಿಗೆ ವ್ಯವಸ್ಥೆಗೆ ವಿರೋಧ, ಬ್ಯಾಂಕ್…

Read More

ಟೋಲ್ ಫ್ರೀ ಸಂಖ್ಯೆ 080-26409689ಕ್ಕೆ ಕರೆ ಮಾಡಿ ಮಾಹಿತಿ ಪಡೆಯಿರಿ ಬೆಂಗಳೂರು: ಕೇರಳದ ಶಬರಿಮಲೈನಲ್ಲಿ ಜರುಗುವ 2020-21ನೇ ಸಾಲಿನ ಮಂಡಲ-ಮಕರವಿಳಕ್ಕು( ಮಕರ ಸಂಕ್ರಾಂತಿ) ವರ್ಷದ ಕಾರ್ಯಕ್ರಮಕ್ಕೆ ತೆರಳುವ ಕರ್ನಾಟಕ ರಾಜ್ಯದ ಭಕ್ತಾದಿಗಳು, ಯಾತ್ರಾರ್ಥಿಗಳಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕರೋನಾ ಹಿನ್ನೆಲೆ ಈ ನಿಯಮ ಜಾರಿ ಮಾಡಲಾಗಿದೆ.ಕರ್ನಾಟಕದಿಂದ ತೆರಳುವ ಭಕ್ತಾದಿಗಳಿಗೆ ರಾಜ್ಯ ಧಾರ್ಮಿಕ ದತ್ತಿ ಆಯುಕ್ತ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಯಾತ್ರಾರ್ಥಿಗಳು ಅಗತ್ಯ ಮಾಹಿತಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 080-26409689 ನ್ನು ಸಂಪರ್ಕಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.ಕೇರಳದ ಗಡಿ ಹಾಗೂ ಶಬರಿಮಲೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ಸಹಾಯವಾಣಿಗೆ ಕರೆ ಮಾಡಿದರೆ ಸರ್ಕಾರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಿದೆ.

Read More