ಚಿಕ್ಕಮಗಳೂರಲ್ಲಿ ನಡೆದ ದುರ್ಘಟನೆಅಣ್ಣ, ತಮ್ಮ ಸೇರಿ ಐವರ ದುರಂತ ಅಂತ್ಯ ಚಿಕ್ಕಮಗಳೂರು: ಮೂಡಬಿದರೆಯಲ್ಲಿ ನಾಲ್ವರು ನೀರುಪಾಲಾಗಿರುವ ಘಟನೆ ಮಾಸುವ ಮುನ್ನ ಚಿಕ್ಕಮಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಸೇರಿ ಐವರು ನೀರುಪಾಲಾಗಿದ್ದಾರೆ.ಚಿಕ್ಕಮಗಳೂರು ತಾಲೂಕಿನ ವಸ್ತಾರೆಯ ಹರಕೆರೆ ಎಂಬಲ್ಲಿ ಈ ಘಟನೆ ನಡೆದಿದ್ದು, ಅಣ್ಣನನ್ನು ಕಾಪಾಡಲು ತಮ್ಮ, ತಮ್ಮನನ್ನು ಕಾಪಾಡಲು ಅಣ್ಣ ಸೇರಿದಂತೆ ಐವರು ಸಾವನ್ನಪ್ಪಿದ್ದು, ಇಡೀ ಊರು ಶೋಕದಲ್ಲಿ ಮುಳುಗಿದೆ.ಮೃತರನ್ನು ಸುದೀಪ್(22), ಸಂದೀಪ್(23), ರಘು(22), ದಿಲೀಪ್(24)ದೀಪಕ್(24) ಎಂದು ಗುರುತಿಸಲಾಗಿದೆ.ನ.20ರಂದು ಸಂದೀಪ್ ಎಂಬುವರ ಸಹೋದರಿ ಮದುವೆ ನಡೆದಿದ್ದು, ಬೀಗರ ಊಟವೂ ಆಗಿತ್ತು. ಬಳಿಕ ಕೆರೆಯಲ್ಲಿ ಮೀನು ಹಿಡಿದು ಊಟ ಮಾಡಲು ಹೋದವರು ವಾಪಾಸ್ ಬರಲಿಲ್ಲ. ಐವರು ಅಣ್ಣ ತಮ್ಮಂದಿರು ಮೀನಿಗೆ ಗಾಳ ಹಾಕುವ ಮುನ್ನ ನೀರಿಗೆ ಇಳಿದಿದ್ದಾರೆ. ಓರ್ವ ನೀರಲ್ಲಿ ಮುಳುಗಿದ್ದು, ಒಬ್ಬರ ನಂತರ ಒಬ್ಬರು ಆತನನ್ನು ರಕ್ಷಿಸಲು 6 ಮಂದಿ ಇಳಿದಿದ್ದಾರೆ. ಬಾನು ಎಂಬಾತ ಈಜಿ ದಡ ಸೇರಿದ್ದಾನೆ.ಚಿಕ್ಕಮಗಳೂರು ತಾಲೂಕಿನ ಹಂಚರವಳ್ಳಿ ಕೃಷ್ಣಮೂರ್ತಿ ಕುಸುಮ ದಂಪತಿಯ ಮಕ್ಕಳು ಸಾವಿನ ಕದ ತಟ್ಟಿದ್ದಾರೆ. ಪೊಲೀಸರು…
Author: Nammur Express Admin
ಹೃದಯಾಘಾತದಿಂದ ವಿಧಿವಶ: ಕೋಟ್ಯಂತರ ಅಭಿಮಾನಿಗಳ ಕಣ್ಣೀರು ಬ್ಯೂನಸ್ ಐರಿಸ್: ಅಜೆರ್ಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ, ಪುಟ್ಬಾಲ್ ದಂತಕಥೆ ಎಂದೇ ಕರೆಯಲಾಗುತ್ತಿದ್ದ ಡಿಗೊ ಮರಾಡೋನ ಅವರು ಹೃದಯಾಘಾತದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ. ಈ ಮೂಲಕ ಪುಟ್ಬಾಲ್ ಆಟದ ಒಂದು ಅಧ್ಯಾಯ ಮುಗಿದಂತಾಗಿದೆ. ಕೆಲವೇ ವಾರಗಳ ಹಿಂದಷ್ಟೇ ಮರಡೋನ (60) ಅವರು, ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಎರಡು ವಾರಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನ.25ರಂದು ಸಂಜೆ ಬ್ಯೂನಸ್ ಐರಿಸ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅಜೆರ್ಂಟೀನಾದ ಅಧ್ಯಕ್ಷರು ಫುಟ್ಬಾಲ್ ದಂತಕಥೆ ನಿಧನಕ್ಕೆ ಸಂತಾಪ ಸೂಚಿಸಿದ್ದು ರಾಷ್ಟ್ರೀಯ ಶೋಕ ಘೋಷಿಸಿದ್ದಾರೆ. 1986ರಲ್ಲಿ ಮರಡೋನಾ ನೇತೃತ್ವದ ತಂಡ ಪಶ್ಚಿಮ ಜರ್ಮನಿಯನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು. ಮರಡೋನ ಅವರ ದಿ ಹ್ಯಾಂಡ್ ಆಫ್ ಗಾಡ್ ಎಂದೇ ಕರೆಯಲ್ಪಡುವ ಗೋಲು ಪ್ರಸಿದ್ಧವಾಗಿದೆ. ಕೋಟ್ಯಂತರ ಪುಟ್ಬಾಲ್ ಅಭಿಮಾನಿಗಳ ಆರಾಧ್ಯ ದೈವರಾಗಿದ್ದ ಮರಡೋನ ಇದೀಗ ಬಾರದ ಲೋಕಕ್ಕೆ ಜಾರಿದ್ದಾರೆ.
2 ದಿನ ಮಳೆ ಆಟ: ಜನತೆಗೆ ಪ್ರಾಣ ಸಂಕಟತಮಿಳುನಾಡಲ್ಲಿ ಸರ್ಕಾರಿ ರಜೆ ಘೋಷಣೆ ಬೆಂಗಳೂರು: ತಮಿಳುನಾಡು ಮೂಲಕ ನಿವಾರ್ ಚಂಡಮಾರುತ ಆರ್ಭಟಿಸುತ್ತಿದೆ. ಈಗಾಗಲೇ ತಮಿಳುನಾಡಿನಲ್ಲಿ ಆಪಾಯದ ಸೂಚನೆ ನೀಡುರುವ ಜಂಡಮಾರುತ ರಾಜ್ಯಕ್ಕೂ ಅಬ್ಬರಿಸಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸುತ್ತಿದ್ದು, ಇದರ ಪರಿಣಾಮ ಬೆಂಗಳೂರು ಸೇರಿದಂತೆ ಹಲವೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ನಿವಾರ್ ಚಂಡಮಾರುತ ಈಗಾಗಲೇ ತಮಿಳುನಾಡು-ಪುದುಚೇರಿ ಕಡಲ ತೀರಕ್ಕೆ ಬಂದಪ್ಪಳಿಸಿದೆ. ಇಂದು ಸಂಜೆ ವೇಳೆಗೆ ನಿವಾರ್ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಸಂಜೆ ವೇಳೆಗೆ 120 ಕಿಲೋಮೀಟರ್ ವೇಗದಲ್ಲಿ ನಿವಾರ್ ಅಪ್ಪಳಿಸುವ ಮುನ್ಸೂಚನೆ ಇದೆ. ಮುಂದಿನ 6 ಗಂಟೆಗಳಲ್ಲಿ ನಿವಾರ್ ಅಬ್ಬರ ಗೊತ್ತಾಗಲಿದೆ. ಮುಂಜಾಗ್ರತಾ ಕ್ರಮವಾಗಿ 1,200 ಮಂದಿಯ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಧಾನಿ ಮೋದಿ ಕೂಡ ನೆರವಿನ…
ಈಜಲು ಹೋದ ನಾಲ್ವರು ನೀರುಪಾಲು ಮೂಡುಬಿದಿರೆ: ಮದುವೆಗೆ ಬಂದು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ಶಾಂಭವಿ ನದಿಯಲ್ಲಿ ಈಜಲು ಹೋಗಿ ನಾಲ್ವರು ನೀರು ಪಾಲಾದ ದಾರುಣ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಬಳಿ ಮಂಗಳವಾರ ಸಂಭವಿಸಿದೆ.ಮೃತರನ್ನು ಮಾಮಂಜೂರಿನ ಮೂಡುಶೆಡ್ಡೆ ನಿಖಿಲ್(18), ಅರ್ಶಿತಾ(20), ವೇಣೂರಿನ ಸುಬಾಸ್(19) ಹಾಗೂ ಬಜ್ಪೆ ಪೆರಾರದ ರವಿ(30) ಎಂದು ಗುರುತಿಸಲಾಗಿದೆ. ಸ್ಥಾಲದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.ಮೂಡುಬಿದಿರೆಯ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದರು. ಮದುವೆಗೆ ಬಂದಿದ್ದ ಇವರು ಶಾಂಭವಿ ನದಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದಿರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಾದರೂ ಎಚ್ಚರ. ನದಿ, ಕೆರೆ ನೀರಲ್ಲಿ ಈಜಲು ಹೋಗಿ ಜೀವ ಕಳೆದುಕೊಳ್ಳಬೇಡಿ.
33 ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೂ ಮುನ್ನವೆ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಕಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮೊದಲ ಹಂತದ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲ್ ಭೇಟಿಯಾಗಿ ಚರ್ಚೆ ನಡೆಸಿದ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ 33 ನಿಗಮ ಮಂಡಳಿಗಳಿಗೆ ಅಧ್ಯಕ್ಷರು, 2 ಆಯೋಗಕ್ಕೆ ಹಾಗೂ 2 ಪ್ರಾಧಿಕಾರಗಳಿಗೆ ನೇಮಕ ಅಧ್ಯಕ್ಷರನ್ನು ನೇಮಕ ಗೊಳಿಸಿದ್ದಾರೆ. ಇಬ್ಬರು ಹಾಲಿ ಶಾಸಕರಿಗೆ ಅಧ್ಯಕ್ಷಗಿರಿ ನೀಡಲಾಗಿದ್ದು, ಇನ್ನುಳಿದಂತೆ ಮಾಜಿ ಶಾಸಕರು, ಪಕ್ಷದ ಮುಖಂಡರು ಸೇರಿದ್ದಾರೆ. ಕೆಲ ತಿಂಗಳುಗಳ ಹಿಂದೆ ಕೇವಲ ಶಾಸಕರಿಗೆ ಮಾತ್ರ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡಲಾಗಿತ್ತು. ಮುಂದಿನ ಹಂತದಲ್ಲಿ ಪಕ್ಷದ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಯಡಿಯೂರಪ್ಪ ಹಾಗೂ ನಳಿನ್…
ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಅಹ್ಮದ್ ಪಟೇಲ್ ವಿಧಿವಶಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ನಾಯಕ ನವ ದೆಹಲಿ: ರಾಜ್ಯ ಸಭಾ ಸದಸ್ಯ, ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ನಾಯಕ, ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್(71) ಬುಧವಾರ ವಿಧಿವಶರಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹ್ಮದ್ ಪಟೇಲ್ ಅವರು ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಸೋನಿಯಾ ಗಾಂಧಿ ಆಪ್ತರಲ್ಲಿ ಅಹ್ಮದ್ ಪಟೇಲ್ ಅವರೂ ಕೂಡ ಒಬ್ಬರಾಗಿದ್ದರು. ಕರೋನಾ ಸೋಂಕು ಕಾರಣ ಗುರುಗ್ರಾಮದ ಮೆಡಂತಾ ಆಸ್ಪತ್ರೆಗೆ ದಾಖಲಾಗಿ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕು ತಗುಲಿದ ಕುರಿತು ಅಕ್ಟೋಬರ್ 1ರಂದು ಸ್ವತಃ ಅಹ್ಮದ್ ಪಟೇಲ್ ಅವರೇ ಖಚಿತಪಡಿಸಿದ್ದರು. ಅಲ್ಲದೆ ಹೋಮ್ ಐಸೋಲೇಟ್ ಆಗುತ್ತಿರುವುದಾಗಿ ಮಾಹಿತಿ ನೀಡಿದ್ದರು. ಪಟೇಲ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಖಜಾಂಚಿಯಾಗಿದ್ದ ಪಟೇಲ್ ಹಿರಿಯ ನಾಯಕರು ಮತ್ತು ಸೋನಿಯಾ ಗಾಂಧಿ ಕುಟುಂಬದ ಆಪ್ತರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಸಂತಾಪ ಸೂಚಿಸಿದೆ. ಮೋದಿ ಸಂತಾಪ: ಪ್ರಧಾನಮಂತ್ರಿ…
ಆರೋಗ್ಯ ಸೇವೆಗೆ “ಕಿರಣ್ ಹೆಲ್ತ್ ಕೇರ್” ಸಿದ್ಧಡಾ.ಗಣೇಶ ನಾಯಕ್ ಮಾಲಿಕತ್ವದ ಆಸ್ಪತ್ರೆ ತೀರ್ಥಹಳ್ಳಿ: ಆರೋಗ್ಯ ಮತ್ತು ಚಿಕಿತ್ಸೆ ಸೇವೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಮುಂಚೂಣಿಯಲ್ಲಿದೆ. ಈ ನಡುವೆ ಕರಾವಳಿ ಮ್ತು ಮಲೆನಾಡಿನ ಸಂಪರ್ಕ ಕೊಂಡಿಯಾಗಿರುವ ತೀರ್ಥಹಳ್ಳಿಯಲ್ಲಿ ಇದೀಗ ಕಿರಣ್ ಹೆಲ್ತ್ ಕೇರ್ ಎಂಬ ಹೈಟೆಕ್ ಆಸ್ಪತ್ರೆ ಶುಭಾರಂಭ ಮಾಡಿದೆ. ದಶಕಗಳ ಕಾಲ ಆರೋಗ್ಯ ಸೇವೆಯನ್ನು ಮಲೆನಾಡಿನ ಜನತೆಗೆ ನೀಡಿರುವ ಕಿರಣ್ ಕ್ಲಿನಿಕ್‍ನ ಡಾ.ಗಣೇಶ್ ನಾಯಕ್ ಮಾಲಿಕತ್ವದ ಈ ಆಸ್ಪತ್ರೆ ಅತ್ಯಾಧುನಿಕ ಹಾಗೂ ಹೈಟೆಕ್ ಸೌಲಭ್ಯ ಹೊಂದಿದೆ. ಜೊತೆಗೆ ಶಾಂತ ಪ್ರದೇಶದಲ್ಲಿದ್ದು, ನ.20ರಂದು ಉದ್ಘಾಟನೆಗೊಂಡಿದೆ. ಆಸ್ಪತ್ರೆಯ ಉದ್ಘಾಟಕರಾಗಿ ಡಾ.ವೆಂಕಟೇಶ್ (FMMC,Manipal) ಹಾಗೂ ಮುಖ್ಯ ಅತಿಥಿಗಳಾಗಿ ಟಿ.ವಿ.ಗಜೇಂದ್ರನಾಥ್ ಮತ್ತು ಹೇಮಲತಾ ಕೊರಣ್ಣನವರ್ ಆಗಮಿಸಿದ್ದರು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಗಣ್ಯಾತಿಗಣ್ಯರು ಹೊಸ ಆಸ್ಪತ್ರೆ ಯಶಸ್ಸಿಗೆ ಶುಭ ಕೋರಿದ್ದಾರೆ. ತೀರ್ಥಹಳ್ಳಿಯ ಕೊಪ್ಪ ಸರ್ಕಲ್‍ನಿಂದ ಹಳೇ ಕೋರ್ಟ್ ಮಾರ್ಗದಲ್ಲಿ ಆರಂಭವಾಗಿರುವ ಕಿರಣ್ ಹೆಲ್ತ್‍ಕೇರ್ ಆರೋಗ್ಯ ಸೇವೆಗಳನ್ನು…
ಯುವ ಜನತೆ, ಮಕ್ಕಳಿಗೆ ಅಪಾಯ ಈ ಆಟಚೀನಾ ಅಲ್ಲ ಭಾರತದಲ್ಲಿ ಮಾಡಿದ್ರು ನಷ್ಟ! ನವ ದೆಹಲಿ: ಯುವ ಜನತೆ ಮತ್ತು ಮಕ್ಕಳನ್ನು ಚಟಕ್ಕೆ ಬೀಳಿಸಿದ್ದ ಪಬ್ ಜಿ ಗೇಮಿಂಗ್ ಆಟ ಮತ್ತೆ ಶುರುವಾಗಲಿದೆ. ಆದರೆ ಚೀನಾ ಮೂಲದ ಸರ್ವರ್ ನಿರ್ವಹಣೆ ಹೊಂದಿದ್ದ ಕಾರಣಕ್ಕೆ ಬ್ಯಾನ್ ಆಗಿದ್ದ ಆಟ ಮತ್ತೆ ಭಾರತಕ್ಕೆ ಎಂಟ್ರಿಯಾಗಿದ್ದು ಬೆಂಗಳೂರಿಂದ ನಿರ್ವಹಣೆಯಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಮೊದಲೇ ಉದ್ಯೋಗ, ಕೆಲಸ ಇಲ್ಲದ ಯುವ ಜನತೆ, ಶಿಕ್ಷಣ ಇಲ್ಲದ ಮಕ್ಕಳ ಮೊಬೈಲ್ ವ್ಯಾಮೋಹಕ್ಕೆ ಈ ಆನ್‍ಲೈನ್ ಆಟ ಮ್ತಷ್ಟು ಹುಚ್ಚು ಹಿಡಿಸಲಿದೆ. ಜೊತೆಗೆ ದೇಶದದ ಯುವ ಜನತೆಯ ಕ್ರಿಯಾಶೀಲತೆ, ಹವ್ಯಾಸ, ದುಡಿಯುವ ಆಸಕ್ತಿಗೆ ಎಳ್ಳುನೀರು ಬಿಡಲಿದೆ. ಇನ್ನು ಈ ಆಟದ ಹುಚ್ಚಲ್ಲಿ ನೂರಾರು ಆತ್ಮಹತ್ಯೆಗಳು, ಸಾವಿರಾರು ಮಾನಸಿಕ ರೋಗಿಗಳು, ಡೈವೋರ್ಸ್‍ಗಳು ನಡೆದಿದ್ದವು. ಈ ಆಟದ ಬ್ಯಾನ್‍ಗಾಗಿ ಸಾಮಾಜಿಕ ತಾಣದಲ್ಲಿ ಭಾರೀ ಹೋರಾಟ ನಡೆದಿತು. ಇದೀಗ ಪಬ್‍ಜಿ ಗೇಮ್ ಮತ್ತೆ ದೇಶದಲ್ಲಿ ಹೊಸರೂಪದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಪಬ್‍ಜಿ ಇಂಡಿಯಾ ಪ್ರೈ.…
ಮೈಸೂರಿನ ನಂಜನಗೂಡಿನಲ್ಲಿ ಪ್ರಕರಣ25 ಮಂದಿ ರೈತರಿಗೆ ವಂಚನೆ ಆರೋಪ ಮೈಸೂರು: ಪೌಷ್ಟಿಕಾಂಶವುಳ್ಳ ವಿಶೇಷ ತಳಿ ಕೋಳಿ ಕೊಡುವುದಾಗಿ ನಂಬಿಸಿ ರೈತರಿಗೆ ಸುಮಾರು 4 ಕೋಟಿ ವಂಚಿಸಿದ್ದ ಆಸಾಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಳಿ ಸಾಕಣೆ ಮೂಲಕ ಹೆಚ್ಚು ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿ ರೈತರಿಗೆ ಕೋಟ್ಯಂತರ ರೂ. ಹಣ ವಂಚಿಸಿ ಪರಾರಿಯಾಗಿದ್ದ ಕೇರಳ ಮೂಲದ ಪ್ರಮೋದ್(60) ಎಂಬಾತನನ್ನು ನಂಜನಗೂಡು ಪೆÇಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಓಮೇಗಾ ಬಿವಿ 380 ಕೋಳಿ ಪೂರೈಕೆ ಹೆಸರಿನಲ್ಲಿ 4 ಕೋಟಿ ರೂ. ಗೂ ಹೆಚ್ಚು ಹಣವನ್ನು ರೈತರಿಂದ ಪಡೆದು ವಂಚಿಸಿದ್ದ ಪ್ರಮೋದ್, ಕೇರಳದ ತಿರುವನಂತಪುರಂ ಸಮೀಪದ ಹಳ್ಳಿಯೊಂದರಲ್ಲಿ ವಾಸವಾಗಿದ್ದ. ನಂಜನಗೂಡು ತಾಲೂಕಿನ ದೇವಿರಮ್ಮನ ಹಳ್ಳಿಯಲ್ಲಿ’ಓಮೇಗಾ ಬಿವಿ 380′ ಪೌಷ್ಟಿಕಾಂಶವುಳ್ಳ ಕೋಳಿ ತಳಿ ಪೂರೈಕೆ ಕೇಂದ್ರವನ್ನು ಆರಂಭಿಸಿದ್ದ ಆರೋಪಿ, ಕಳೆದ ಜನವರಿಯಲ್ಲಿ ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಕಾಳಯ್ಯ ಹಾಗೂ ನಂಜನಗೂಡಿನ ಸಂಪತ್ ಎಂಬುವವರಿಗೆ ಕೋಳಿ ಫಾರಂ ನಡೆಸುವಂತೆ ಪುಸಲಾಯಿಸಿ 1.25 ಲಕ್ಷ ರೂ. ಪಡೆದುಕೊಂಡು ಕೋಳಿಗಳನ್ನು…
ತೀರ್ಥಹಳ್ಳಿಯ ರಂಜದಕಟ್ಟೆ ಬಳಿ ಘಟನೆಅನಾಮಧೆಯ ಕಾರಿನ ಸುಳಿವು ನೀಡಿ..! ತೀರ್ಥಹಳ್ಳಿ: ತೀರ್ಥಹಳ್ಳಿಯ ರಂಜದಕಟ್ಟೆ ಬಳಿ ಮಂಗಳವಾರ ಸಂಜೆ ಹಿಟ್ ಅಂಡ್ ರನ್ ಘಟನೆ ನಡೆದಿದ್ದು, ಓರ್ವ ಮಹಿಳೆ ಬಲಿಯಾಗಿದ್ದಾಳೆ.ತೀರ್ಥಹಳ್ಳಿ ತಾಲೂಕು ಗಂಟೆಹಕ್ಕಲು ನಿವಾಸಿ ರಮೇಶ್ ಎಂಬುವರ ಪತ್ನಿ ಶಾರದಾ(45) ಹಾಲು ಕೊಡಲು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತೀ ವೇಗದಿಂದ ತೀರ್ಥಹಳ್ಳಿ ಕಡೆಯಿಂದ ಬಂದ ಮಾರುತಿ ಓಮಿನಿ ಕಾರೊಂದು ಬಂದು ಡಿಕ್ಕಿ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಶರೀರವನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಇಡಲಾಗಿದ್ದು ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಓಮ್ನಿ ಕಾರು ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ.